ಪುಟ:ಭಾರತ ದರ್ಶನ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೬೯

ಹುಯನ್ ತ್ಸಾಂಗನೇ ಇಂಡಿಯದೊಂದಿಗೆ ವ್ಯವಹಾರವನ್ನು ಇಟ್ಟು ಕೊಂಡಿದ್ದನು. ಅಲ್ಲಿನ ಸ್ನೇಹಿತ ರಿಗೆ ಪತ್ರ ಬರೆದು ಹಸ್ತ ಪ್ರತಿಗಳನ್ನು ತರಿಸಿಕೊಳ್ಳುತ್ತ ಇದ್ದನು. ಭಾರತೀಯ ಬೌದ್ದ ವಿದ್ವಾಂಸ ನಾದ ಸ್ಥವಿರ ಪ್ರಜ್ಞದೇವನು ಕ್ರಿಸ್ತಶಕ ೬೫೪ರಲ್ಲಿ ಹುಯನ್ ತ್ಸಾಂಗನಿಗೆ ಬರೆದ ಕಾಗದ ಅವುಗಳ ಲ್ಲೊಂದು. ಪರಸ್ಪರ ಅಭಿನಂದನೆ, ಕ್ಷೇಮಸಮಾಚಾರಗಳಾದ ಮೇಲೆ “ ನಿಮ್ಮನ್ನು ಮರೆತಿಲ್ಲ ಎಂಬು ದನ್ನು ತೋರಿಸಲು ಒಂದು ಜೊತೆ ಶ್ವೇತವಸ್ತ್ರವನ್ನು ಕಳುಹಿಸಿರುತ್ತೇವೆ. ದಾರಿ ಬಹುದೂರ, ಆದ್ದರಿಂದ ಈ ಕಾಣಿಕೆ ಅಲ್ಪ ವೆಂದು ಅಲಕ್ಷ್ಯಮಾಡಬೇಡಿ. ಸ್ವೀಕರಿಸುವಿರೆಂದು ನಂಬಿದ್ದೇನೆ. ನಿಮಗೆ ಬೇಕಾದ ಸೂತ್ರಗಳು ಮತ್ತು ಶಾಸ್ತ್ರಗಳಿಗೆ ಒಂದು ಪಟ್ಟಿ ಯನ್ನು ಕಳುಹಿಸಿ, ಸಂಗ್ರಹಿಸಿ ನಿಮಗೆ ಕಳುಹಿಸುತ್ತೇವೆ.” ಎಂದು ಬರೆದಿದೆ. ಹುಯನ್ ತ್ಸಾಂಗ್ ಉತ್ತರ ಬರೆಯುತ್ತ “ ಇತ್ತೀಚೆಗೆ ಇಂಡಿಯದಿಂದ ಬಂದ ರಾಯಭಾರಿಯಿಂದ ಮಹಾಗುರುವಾದ ಶೀಲಭದ್ರ ಗತಿಸಿದರೆಂದು ತಿಳಿಯಿತು. ಈ ವರ್ತಮಾನ ಕೇಳಿ ನನಗಾಗಿರುವ ದುಃಖವು ಮಿತಿ ಇಲ್ಲದಾಗಿದೆ ; ಸಹಿಸುವುದೂ ಕಷ್ಟವಾಗಿದೆ. ನಾನು ನನ್ನ ಜೊತೆಯಲ್ಲಿ ತಂದ ಸೂತ್ರಗಳು ಮತ್ತು ಶಾಸ್ತ್ರಗಳಲ್ಲಿ ಯೋಗಾಚಾರನ ಭೂಮಿಶಾಸ್ತ್ರ ಮತ್ತು ಇನ್ನೂ ಇತರ ಒಟ್ಟು ಮೂವತ್ತು ಗ್ರಂಥಗಳನ್ನು ಅನುವಾದ ಮಾಡಿರುತ್ತೇನೆ. ಸಿಂಧು ನದಿ ಯನ್ನು ದಾಟುವಾಗ ಗ್ರಂಥಗಳ ಒಂದು ಕಟ್ಟು ಕಳೆದು ಹೋಯಿತೆಂದು ವಿನೀತನಾಗಿ ಹೇಳಬೇಕಾ ಗಿದೆ. ನನಗೆ ಬೇಕಾದ ಗ್ರಂಥಗಳ ಪಟ್ಟಿಯೊಂದನ್ನು ಇದರೊಂದಿಗೆ ಇಟ್ಟಿದ್ದೇನೆ. ಅವಕಾಶ ಸಿಕ್ಕಿದರೆ ಅವುಗಳನ್ನು ಕಳುಹಿಸಿ, ನನ್ನ ಕೆಲವು ಅಲ್ಪ ಕಾಣಿಕೆಗಳನ್ನು ತಮಗೆ ಕಳುಹಿಸಿರುತ್ತೇನೆ. ದಯವಿಟ್ಟು ಅವುಗಳನ್ನು ಸ್ವೀಕರಿಸಿ, ”
ನಲಂದ ವಿಶ್ವವಿದ್ಯಾನಿಲಯದ ವಿಷಯವಾಗಿ ಹುಯನ್ ತ್ಸಾಂಗ್ ತುಂಬ ವರ್ಣಿಸಿದ್ದಾನೆ, ಇತರರೂ ವರ್ಣಿಸಿದ್ದಾರೆ. ಆದರೂ ಕೆಲವು ದಿನಗಳ ಹಿಂದೆ ನಾನು ನಲಂದಕ್ಕೆ ಹೋಗಿ ಅದರ ವೈಶಾಲ್ಯ ಮತು ಆ ಅಗಾಧ ಪ್ರಮಾಣದ ಯೋಜನೆಯನ್ನು ನೋಡಿ ಆಶ್ಚರ್ಯ ಚಕಿತನಾದೆ. ಒಂದು ಭಾಗವನ್ನು ಮಾತ್ರ ಭೂಗರ್ಭದಿಂದ ಅಗೆದಿದ್ದಾರೆ. ಉಳಿದ ಪ್ರದೇಶದ ಮೇಲೆ ಜನವಸತಿಗಳಿವೆ. ಆದರೆ ಆಗದ ಸ್ವಲ್ಪ ಭಾಗದಲ್ಲಿ ಸಹ ಅದ್ಭುತಾಕಾರದ ಕಟ್ಟಡಗಳೂ, ಆವುಗಳ ಮಧ್ಯೆ ವಿಶಾಲವಾದ ಒಳಾಂಗಣಗಳೂ ಇವೆ.
ಚೀನಾ ದೇಶದಲ್ಲಿ ಹುಯನ್ ತ್ಸಾಂಗ್ ಮರಣ ಹೊಂದಿದ ಸ್ವಲ್ಪ ದಿನಗಳಲ್ಲಿಯೇ ಇಂಗ್ ಎಂಬ ಇನ್ನೊಬ್ಬ ಪ್ರಸಿದ್ದ ಚೀನೀಯಾತ್ರಿಕನು ಭಾರತಕ್ಕೆ ಪ್ರವಾಸ ಹೊರಟನು. ಕ್ರಿಸ್ತಶಕ ೬೭೧ ರಲ್ಲಿ ಹೊರಟರೂ ಹೂಗ್ಲಿ ನದೀಮುಖದಲ್ಲಿರುವ ತಾಮ್ರ ಲಿಪ್ತಿ ರೇವಿಗೆ ತಲಪುವ ಹೊತ್ತಿಗೆ ಎರಡು ವರ್ಷ `ಗಳಾದವು. ಆತನು ಸಮುದ್ರ ಮಾರ್ಗವಾಗಿ ಬಂದನು ಮತ್ತು ಸಂಸ್ಕೃತ ಕಲಿಯಲು ಶ್ರೀಭೋಗ ದಲ್ಲಿ (ಈಗಿನ ಸುಮಾತ್ರ ದ್ವೀಪದ ಪಾಲೆಂಬಾಂಗ್) ಅನೇಕ ತಿಂಗಳುಗಳಿದ್ದವು. ಪ್ರಾಯಶಃ ಸಮುದ್ರ ಮಾರ್ಗದ ಈ ಪ್ರವಾಸವು ಸ್ವಲ್ಪ ಅರ್ಥಪೂರ್ಣವಿದೆ, ಆಗ ಮಧ್ಯ ಏಷ್ಯದಲ್ಲಿ ರಾಜಕೀಯ ಪರಿಸ್ಥಿತಿ ಪ್ರಕ್ಷುಬ್ದ ವಿತ್ತು, ರಾಜಕೀಯ ವಿಪ್ಲವಗಳಾಗುತ್ತಿದ್ದವು. ದಾರಿಯಲ್ಲಿನ ಅನೇಕ ಬೌದ್ಧ ಮಠಗಳು ನಾಶವಾಗಿರಬಹುದು ; ಅಲ್ಲದೆ ಇಂಡೊನೇಷ್ಯದಲ್ಲಿ ಅನೇಕ ಭಾರತೀಯ ಪಾಳೆಯಗಳಿದುದ್ದ ರಿಂದ ಸಮುದ್ರ ಮಾರ್ಗವು ಪ್ರಾಯಶಃ ಹೆಚ್ಚು ಅನುಕೂಲವಿದ್ದಿರಬಹುದು, ಮತ್ತು ಭಾರತಕ್ಕೂ ಇದೇಶ ಗಳಿಗೂ ಸದಾ ಸಮುದ್ರ ವ್ಯಾಪಾರ ಮತ್ತು ಇತರ ವ್ಯವಹಾರಗಳಿದ್ದವು. ಈತನ ಮತ್ತು ಇನ್ನೂ ಅನೇಕ ವರದಿಗಳಿಂದ ಪರ್ಷಿಯ, ಇಂಡಿಯ, ಮಲಯ, ಸುಮಾತ್ರ ಚೀನಗಳ ಮಧ್ಯೆ ಕ್ರಮವಾದ ನಾವೆಗಳು ಓಡಾಡುತ್ತಿದ್ದಂತೆ ತೋರುತ್ತದೆ. ಇ೦ಗ್ ಪರ್ಷಿಯಾ ದೇಶದ ಹಡಗಿನಲ್ಲಿ ಕ್ವಾಂಟಂಗ್ ನಿಂದ ಹೊರಟು ಮೊದಲು ಸುಮಾತ್ರಕ್ಕೆ ಹೋದನು,
ಇತ್ಸಿಂಗ್ ಸಹ ಅನೇಕ ವರ್ಷಗಳ ಕಾಲ ನಲಂದ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸಮಾಡಿದನು ಮತ್ತು ಹಿಂದಕ್ಕೆ ಹೊರಟಾಗ ನೂರುಗಟ್ಟಲೆ ಸಂಸ್ಕೃತ ಗ್ರಂಥಗಳನ್ನು ತೆಗೆದುಕೊಂಡು ಹೋದನು. ಬೌದ್ದ ವಿಧಿ ಸೂತ್ರಗಳ ನಿರ್ಣಯ ವಿಚಾರದಲ್ಲಿ ಆತನಿಗೆ ಬಹಳ ಆಸಕ್ತಿ, ಅವುಗಳ ವಿಷಯವಾಗಿ