ಪುಟ:ಭಾರತ ದರ್ಶನ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೪

ಭಾರತ ದರ್ಶನ

ಅವರು ಆಕ್ರಮಿಸಿದ ರಾಜ್ಯಗಳು ಸಣ್ಣವಾದರೂ ವಿಶೇಷ ದೂರದಲ್ಲಿವೆ. ಆದರೆ ಭಾರತೀಯ ದರ್ಶನ ದಿಗ್ವಿಜಯ ಸಣ್ಣವಾದರೂ ವಿಶೇಷ ದೂರದಲ್ಲಿವೆ. ಆದರೆ ಭಾರತೀಯ ದರ್ಶನ ದಿಗ್ವಿಜಯದೊಡನೆ ಆ ಸೈನಿಕ ಮತ್ತು ಔದ್ಯೋಗಿಕ ದಿಗ್ವಿಜಯಗಳನ್ನು ಹೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾನೆ.
ಈ ರೀತಿ ಇಲಿಯಟ್ ಬರೆದಾಗ ಇಂಡಿಯ ಮತ್ತು ಏಷ್ಯದ ಗತವೈಭವದ ಭಾವನೆಯಲ್ಲಿ ಕ್ರಾಂತಿಯನ್ನುಂಟುಮಾಡಿರುವ ಆಸ್ಟ್ರೇಯ ಏಷ್ಯದ ಇತ್ತೀಚಿನ ಸಂಶೋಧನೆಗಳು ಆತನಿಗೆ ತಿಳಿದಿರ ಲಿಲ್ಲ, ಆ ಸಂಶೋಧನೆಗಳ ಪರಿಚಯದಿಂದ ಆತನ ವಾದಕ್ಕೆ ಇನ್ನಷ್ಟು ಸಮರ್ಥನೆ ದೊರೆಯು ಕಿತ್ತು ಮತ್ತು ಭಾರತೀಯ ದರ್ಶನ ದಿಗ್ವಿಜಯದಂತೆ ವಿದೇಶಗಳಲ್ಲಿನ ಭಾರತೀಯರ ಅದ್ಭುತ ಕಾರ್ಯತತ್ಪರತೆಯು ಸಹ ಅಲಕ್ಷ ಮಾಡುವಂತಿಲ್ಲ ಎಂದು ಸಹ ಗೊತ್ತಾಗುತ್ತಿತ್ತು. ಈಗ ಹದಿನೈದು ವರ್ಷಗಳ ಹಿಂದೆ ನಾನು ಮೊದಲನೆಯ ಬಾರಿ ಆನ್ನೇಯ ಏಷ್ಯದ ಚರಿತ್ರೆಯನ್ನು ಓದಿ ದಾಗ ನನಗೆ ಉಂಟಾದ ಆಶ್ಚರ್ಯ ಮತ್ತು ಭಾವೋದ್ರೇಕ, ಇನ್ನೂ ನೆನಪಿದೆ. ಹೊಸ ದೃಶ್ಯ ಪರಂಪರೆಗಳು ನನ್ನೆದುರು ಸುಳಿದುವು, ಪ್ರಾಚೀನ ಭಾರತದ ಹೊಸ ಭಾವನೆಗಳುಂಟಾದವು. ಹೊಸ ಇತಿಹಾಸ ದೃಶ್ಯ ಸಮಾಚೀನ ದೃಷ್ಟಿ ಯೊಂದು ಮೂಡಿತು, ಮತ್ತು ನನ್ನ ಹಿಂದಿನ ಆಲೋಚನೆ ಮತ್ತು ಭಾವನೆಗಳನ್ನೆಲ್ಲ ಈ ಹೊಸ ದೃಷ್ಟಿಗೆ ಅಳವಡಿಸಿಕೊಳ್ಳಬೇಕಾಯಿತು. ಚಂಪ, ಕಾಂಭೋಜ, ಆಂಗ್ಕೋರ್, ಶ್ರೀವಿಜಯ ಮತ್ತು ಮಜಸಹಿತ ಒಮ್ಮಿಂದೊಮ್ಮೆ ಎಲ್ಲಿಂದಲೋ ಉದ್ಭವಿಸಿ ಗತ ಕಾಲಕ್ಕೂ ಪ್ರಸ್ತುತ ಕಾಲಕ್ಕೂ ಸ್ವಾಭಾವಿಕ ಸಂಬಂಧ ಕಲ್ಪಿಸುವ ಒಂದು ಚೈತನ್ಯಪೂರ್ಣಭಾವನೆ ಯನ್ನುಂಟುಮಾಡುವ ಜೀವಂತ ರೂಪತಾಳಿ ನನ್ನ ಕಣ್ಮುಂದೆ ನಿಂತವು. ರಣರಂಗದಲ್ಲಿ, ರಾಜ್ಯ ವಿಸ್ತರಣೆಯಲ್ಲಿ, ಮತ್ತು ಇತರ ಮಹತ್ಸಾಧನೆಗಳಲ್ಲಿ ಅಪ್ರತಿಮ ವೀರಾಗ್ರಣಿಯಾದ ಶೈಲೇಂದ್ರನ ವಿಷಯವಾಗಿ ಡಾಕ್ಟರ್ ಹೆಚ್. ಜಿ. ಕ್ಯಾರಿಚ್ ವೇಲ್ಸ್ “ ಪಾಶ್ಚಾತ್ಯ ಇತಿಹಾಸದ ಮಹಾಯೋಧರ ದಿಗ್ವಿಜಯಗಳೊಡನೆ ಮಾತ್ರ ಹೋಲಿಸಬಹುದಾದ ಮತ್ತು ಪರ್ಷಿಯದಿಂದ ಚೀನಾವರೆಗೆ ದಿಗಂತ ವಿಶ್ರಾಂತಕೀರ್ತಿಯನ್ನು ಪಡೆದ ಈ ವೀರಾಗ್ರಣಿಯು ಕೇವಲ ಹತ್ತಿಪ್ಪತ್ತು ವರ್ಷಗಳಲ್ಲಿ ಐದು ಶತಮಾನಗಳ ಕಾಲ ಅವಿಚ್ಛಿನ್ನವಾಗಿ ಶಕ್ತಿಯುತವಾಗಿ ಬಾಳಿದ ಒಂದು ನೌಕಾ ಪಡೆಯನ್ನು ಕಟ್ಟಿದ ; ಮತ್ತು ಜಾವ ಮತ್ತು ಕಾಂಭೋಜ ದೇಶಗಳಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯು ಅದ್ಭುತ ವಾಗಿ ವಿಕಾಸವಾಗಲು ಸಹಾಯಕನಾದ. ಆದರೂ ನಮ್ಮ ವಿಶ್ವಕೋಶಗಳಲ್ಲಿ, ಇತಿಹಾಸಗಳಲ್ಲಿ ಈ ವಿಶಾಲ ಚಕ್ರಾಧಿಪತ್ಯದ ಹೆಸರಾಗಲಿ ಅದನ್ನು ಸ್ಥಾಪಿಸಿದ ಮಹಾನುಭಾವನ ಹೆಸರಾಗಲಿ ಅಂಜನ ಹಾಕಿಕೊಂಡು ಹುಡುಕಿದರೂ ದೊರೆಯುವುದಿಲ್ಲ. ಕೆಲವು ಪೌರ್ವಾತ್ಯ ವಿದ್ವಾಂಸರುಗಳನ್ನು ಬಿಟ್ಟರೆ ಅಂತಹ ಒಂದು ಚಕ್ರಾಧಿಪತ್ಯವಿತ್ತೆಂದು ಸಹ ಅನೇಕರಿಗೆ ತಿಳಿದಿಲ್ಲ. ಈ ಪ್ರಾಚೀನ ಭಾರತೀಯ ವಲಸೆಗಾರರ ಸೈನಿಕ ಸಾಹಸಗಳು ಮುಖ್ಯವಾಗಿ ಇದುವರೆಗೆ ಕಂಡು ಕೇಳದ ಭಾರತೀಯರ ಶ್ರೇಷ್ಠ ಗುಣವನ್ನೂ ಅಂತಃ ಶಕ್ತಿಯ ಕೆಲವು ಹೊಸ ನೋಟಗಳನ್ನೂ ಬೆಳಕಿಗೆ ತರುತ್ತವೆ. ಆದರೆ ಎಲ್ಲಕ್ಕೂ ಮಿಗಿಲಾದುದು ಅವರು ಅಲ್ಲಿ ಕಟ್ಟಿದ ವಲಸೆ ರಾಜ್ಯಗಳು ಮತ್ತು ಆ ಪಾಳೆಯಗಳಲ್ಲಿ ಸಾವಿರಾರು ವರ್ಷಗಳು ಬಾಳಿದ ಶ್ರೇಷ್ಠ ಸಂಸ್ಕೃತಿ,
ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಆಸ್ಟ್ರೇಯ ಏಷ್ಯದ ಈ ವಿಶಾಲ ಪ್ರದೇಶದ ಚರಿತ್ರೆಯು ಹೆಚ್ಚು ಬೆಳಕಿಗೆ ಬಂದಿದೆ. ಆ ಪ್ರದೇಶವನ್ನು ವಿಶಾಲಭಾರತವೆಂದು ಸಹ ಕರೆದಿದ್ದಾರೆ. ಮಧ್ಯೆ ಅನೇಕ ತೊಡಕುಗಳಿವೆ, ವಿರೋಧ ಸನ್ನಿವೇಶಗಳಿವೆ, ಚರಿತ್ರಕಾರರು ಒಬ್ಬೊಬ್ಬರು ಒಂದೊಂದು ಸಿದ್ಧಾಂತ ವನ್ನು ಪ್ರತಿಪಾದಿಸುತ್ತಾರೆ. ಆದರೆ ಒಟ್ಟಿನಲ್ಲಿ ಸಾಮಾನ್ಯ ರೇಖಾಚಿತ್ರವು ಸ್ಪಷ್ಟವಿದೆ ಮತ್ತು ಎಷ್ಟೋ ವಿಷಯ ವಿವರಣೆಯ ವಿಪುಲತೆಯೂ ಇದೆ. ಭಾರತೀಯ ಸಾಹಿತ್ಯ ಗ್ರಂಥಗಳ ಉಲ್ಲೇಖನಗಳೂ, ಅರಬ್ಬಿ ಪ್ರವಾಸಿಗಳ ಲೇಖನಗಳೂ, ಚೀನೀ ಇತಿಹಾಸಗ್ರಂಥಗಳೂ ಅನೇಕವಿರುವುದರಿಂದ ವಿಷಯ ಬಾಹುಳ್ಯದ ಕೊರತೆ ಇಲ್ಲ. ಅನೇಕ ಹಳೆಯ ಶಿಲಾಶಾಸನಗಳೂ, ತಾಮ್ರ ಶಾಸನಗಳೂ ಇವೆ. ಜಾವ ಮತ್ತು ಬರಿದ್ವೀಪಗಳಲ್ಲಿ ಭಾರತೀಯ ಗ್ರಂಥಗಳ ಆಧಾರದಿಂದ ಹುಟ್ಟಿದ ಉತ್ತಮ ಸಾಹಿತ್ಯವಿದೆ.