ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೭೫

ಭಾರತೀಯ ಮಹಾಕಾವ್ಯಗಳು ಮತ್ತು ಪುರಾಣಗಳ ಸಂಗ್ರಹಿತ ಗ್ರಂಥಗಳಿವೆ. ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥಗಳಿಂದ ಸಹ ಕೆಲವು ವಿಷಯನಿರೂಪಣ ದೊರೆತಿವೆ. ಇದೆಲ್ಲಕ್ಕೂ ಮಿಗಿಲಾಗಿ ಪ್ರಾಚೀನ ಸ್ಮಾರಕಗಳ ಅದ್ಭುತ ಅವಶೇಷಗಳು ಮುಖ್ಯವಾಗಿ ಆಂಗ್ಕೋರ್ ಬೋರೆಬುದೂರ್ ಬಳಿ ಅನೇಕ ಇವೆ.
ಕ್ರಿಸ್ತಶಕ ಒಂದನೆಯ ಶತಮಾನದಿಂದ ಮೊದಲುಗೊಂಡು ಭಾರತೀಯ ವಲಸೆಗಾರರು ದಕ್ಷಿಣಕ್ಕೆ ಮತ್ತು ಆಂಗ್ಲಯದೇಶಗಳಾದ ಸಿಂಹಳ, ಬ್ರಹ್ಮದೇಶ, ಮಲಯ, ಜಾವ, ಸುಮಾತ್ರ, ಬೋ ಯೋ, ಸೈಯಾಮ್, ಕಾಂಬೋಡಿಯ ಮತ್ತು ಇಂಡೋ ಚೀನದೇಶಗಳಿಗೆ ತಂಡೋಪತಂಡವಾಗಿ ಅಲೆ ಅಲೆ ಯಾಗಿ ಪಸರಿಸಿದರು. ಕೆಲವರು ಫಾರೋಸ, ಫಿಲಿಪೈನ್ಸ್ ಮತ್ತು ಸೆಲಿಬಿಸ್ ದ್ವೀಪಗಳಿಗೆ ಸಹ ಹೋದರು. ಮಡಗಾಸ್ಕರ್‌ವರೆಗೆ ಬಳಕೆಯಲ್ಲಿರುವ ಭಾಷೆಯು ಸಂಸ್ಕೃತಮಿಶ್ರವಾದ ಇಂಡೋನೇರ್ಷ್ಯ ಭಾಷೆ. ಈ ರೀತಿ ಹರಡಿಹಬ್ಬಲು ಅವರಿಗೆ ಅನೇಕ ಶತಮಾನಗಳುಹಿಡಿದಿರಬೇಕು. ಪ್ರಾಯಶಃ ಈ ಎಲ್ಲ ಕಡೆಗಳಿಗೂ ಭಾರತದಿಂದಲೇ ಹೋಗಿರಲಾರರು, ಯಾವುದೋ ಒಂದು ಮಧ್ಯವರ್ತಿಯಾದ ಪಾಳೆಯ ದಿಂದ ಹೋಗಿರಬೇಕು, ಕ್ರಿಸ್ತಶಕ ಒಂದನೆಯ ಶತಮಾನದಿಂದ ಒಂಬತ್ತನೆಯ ಶತಮಾನದವರೆಗೆ ಮುಖ್ಯವಾಗಿ ನಾಲ್ಕು ಬಾರಿ ಈ ಯಾತ್ರಾವಾಹಿನಿ ಹರಿದಂತೆ ತೋರುತ್ತದೆ. ಈ ಮಧ್ಯೆ ಕೆಲವು ಜನರು ಪೂರ್ವಕ್ಕೂ ಹೋದಂತೆ ತೋರುತ್ತದೆ. ಸಾಹಸಕಾರದಲ್ಲಿ ವಿಶೇಷಗಮನಾರ್ಹ ಸಂಗತಿ ಎಂದರೆ ಈ ಯಾತ್ರೆಗಳನ್ನೆಲ್ಲ ರಾಷ್ಟ್ರವೇ ಏರ್ಪಾಡುಮಾಡುತ್ತಿತ್ತು. ಒಂದೇಸಮಯಕ್ಕೆ ದೂರ ದೂರ ಅಲ್ಲಲ್ಲಿ ವಲಸೆ ಪಾಳಯಗಳನ್ನು ಸ್ಥಾಪಿಸುತ್ತಿದ್ದರು. ಈ ಪಾಳಯಗಳನ್ನೆಲ್ಲ ವ್ಯೂಹಕೌಶಲ್ಯದಿಂದ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸುತ್ತಿದ್ದರು. ಅವುಗಳೆಲ್ಲ ಮುಖ್ಯ ವ್ಯಾಪಾರಮಾರ್ಗಗಳಲ್ಲಿ ಇರುತ್ತಿದ್ದು ವು. ಈ ಪಾಳಯಗಳಲ್ಲಿ ಪುರಾತನ ಭಾರತೀಯ ಹೆಸರುಗಳನ್ನೇ ಇಡುತ್ತಿದ್ದರು. ಈಗ ಕಾಂಬೋಡಿಯ ಎನ್ನು ವುದನ್ನು ಕಾಂಭೋಜ ಎಂದು ಕರೆದರು. ಕಾಂಭೋಜ ಪ್ರಾಚೀನ ಭಾರತದಲ್ಲಿ ಗಾಂಧಾರ ದೇಶದಲ್ಲಿ ಒಂದು ಪ್ರಸಿದ್ದ ಪಟ್ಟಣವಾಗಿತ್ತು. ಈ ವಲಸೆ ರಾಜ್ಯಗಳ ಸ್ಥಾಪನೆಯ ಕಾಲವು ಹೆಸರಿನಿಂದಲೇ ಸ್ಕೂಲವಾಗಿ ಗೊತ್ತಾಗುತ್ತದೆ; ಏಕೆಂದರೆ ಆಗ ಗಾಂಧಾರ ಆರದೇಶದ ಒಂದು ಪ್ರಮುಖ ಭಾಗ ವಾಗಿತ್ತು.
ಸಮುದ್ರಯಾನದ ಗಂಡಾಂತರಗಳನ್ನೆಲ್ಲ ಎದುರಿಸಿ ದೂರತೀರಗಳ ಆಶ್ಚರ್ಯಕಾರಕ ವಿಜಯ ಯಾತ್ರೆಗಳಿಗೆ ಕಾರಣವು ಏನು ? ಈ ಅದ್ಭುತ ಉತ್ಸಾಹವು ಹುಟ್ಟಿದ್ದು ಹೇಗೆ ? ಅನೇಕ ತಲೆಮಾರು ಗಳಿಂದ ಅಥವ ಶತಮಾನಗಳಿಂದ ವ್ಯಾಪಾರೋದ್ಯಮಗಳಲ್ಲಿ ಆಸಕ್ತರಾದ ವ್ಯಕ್ತಿಗಳು ಅಧಿಕ ಪಂಗಡ ಗಳಲ್ಲಲ್ಲದೆ ಈ ಯೋಚನೆಗಳನ್ನು ನಿರೂಪಿಸಲು ಅಥವ ಸಾಧಿಸಲು ಖಂಡಿತ ಸಾಧ್ಯವಿಲ್ಲ. ಅನೇಕ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಪೌರ್ವಾತ್ಯ ದೇಶಗಳ ಉಲ್ಲೇಖನವಿದೆ. ಎಲ್ಲ ಸಂದರ್ಭಗಳಲ್ಲೂ ಆ ಹೆಸರುಗಳನ್ನು ಗುರ್ತಿಸುವುದು ಸುಲಭವಲ್ಲ. ಕೆಲವು ಸಂದರ್ಭಗಳಲ್ಲಿ ಕಷ್ಟವೇನೂ ಆಗುವುದಿಲ್ಲ. ಜಾವ ಎಂದರೆ 'ಯವದ್ವೀಪ' ಎನ್ನು ವುದು ಸ್ಪಷ್ಟವಿದೆ ಈಗಲೂ ಯವ ಎಂದರೆ ಭಾರತದಲ್ಲಿ ರಾಗಿ ಅಥವ ಜೋಳ, ಪ್ರಾಚೀನ ಗ್ರಂಥಗಳಲ್ಲಿ ಹೇಳಿರುವ ಇತರ ಹೆಸರುಗಳು ಸಹ ಯಾವುದಾದರೂ ಅದಿರು, ಲೋಹ ಅಥವ ಔದ್ಯೋಗಿಕ ಅಥವ ಕೃಷಿಕ ವಸ್ತುವಿನ ಹೆಸರನ್ನೇ ಹೋಲುತ್ತದೆ. ಈ ಹೊಸ ರನ್ನು ಕೇಳಿದೊಡನೆ ವ್ಯಾಪಾರವು ಎದ್ದು ನಿಲ್ಲುತ್ತದೆ. ಡಾಕ್ಟರ್ ಆರ್. ಸಿ. ಮಜುಮದಾರರು “ಸಾಹಿತ್ಯ ಜನ ಜೀವನವನ್ನು ಪ್ರತಿಬಿಂಬಿಸುತ್ತದೆ ಎಂದು ಸಾಮಾನ್ಯವಾಗಿ ಹೇಳಬಹುದಾದರೆ ಕ್ರಿಸ್ತಶಕ ಆರಂಭದ ಮತ್ತು ಹಿಂದಿನ ಕೆಲವು ಶತಮಾನಗಳಲ್ಲಿ ವ್ಯಾಪಾರ ಮತ್ತು ಉದ್ಯಮಗಳು ಭಾರತದಲ್ಲಿ ಒಂದು ಅಂತಿಮ ಆಸಕ್ತಿಯಾಗಿರಬೇಕು.” ಎಂದು ಹೇಳುತ್ತಾರೆ. ಇದೆಲ್ಲವೂ ವಿಶಾಲ ಆರ್ಥಿಕ ನೀತಿ ಯನ್ನೂ, ಮಾರಾಟಕ್ಕೆ ದೂರತೀರದ ಪೇಟೆಗಳನ್ನು ಹುಡುಕುವ ಸಾಧನವನ್ನೂ ಸಾರುತ್ತವೆ.
ಈ ವ್ಯಾಪಾರವು ಕ್ರಿಸ್ತ ಪೂರ್ವ ಮೂರು ಮತ್ತು ಎರಡನೆಯ ಶತಮಾನಗಳಲ್ಲಿ ಹೆಚ್ಚು ಅಭಿವೃದ್ಧಿ ಯಾಯಿತು. ಈ ಸಾಹಸಿಗ ವಣಿಕ್ ಶ್ರೇಷ್ಠರ ಮತ್ತು ವರ್ತಕರ ಹಿಂದೆಯೇ ಮತ ಪ್ರಚಾರಕರೂ