ಪುಟ:ಭಾರತ ದರ್ಶನ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೬

ಭಾರತ ವರ್ತನ

ಹೋಗಿರಬೇಕು. ಏಕೆಂದರೆ ಅದು ಅಶೋಕನ ನಂತರದಕಾಲ, ಪುರಾತನ ಸಂಸ್ಕೃತ ಕಥೆಗಳಲ್ಲಿ ಸಮುದ್ರಯಾನದ, ಮತ್ತು ಹಡಗುಗಳು ಮುಳುಗಿದ ಹೃದಯ ವಿದ್ರಾವಕ ಚಿತ್ರಗಳು ಅನೇಕ ಇವೆ. ಕ್ರಿಸ್ತಶಕ ಒಂದನೆಯ ಶತಮಾನದ ಹೊತ್ತಿಗೆ ಇಂಡಿಯ ಮತ್ತು ಪೌರ್ವಾತ್ಯ ದೇಶಗಳ ಮಧ್ಯೆ ನಿರಂತರ ಸಮುದ್ರ ವ್ಯಾಪಾರವಿತ್ತೆಂದು ಗ್ರೀಕ್ ಮತ್ತು ಅರಬ್ಬಿ ಪ್ರವಾಸ ಸಾಹಿತ್ಯದಿಂದ ಸ್ಪಷ್ಟವಾಗು ಇದೆ, ಮಲಯ ಪಠ್ಯಾಯದ್ವೀಪ, ಮತ್ತು ಇಂಡೋನೇಷ್ಯ ದ್ವೀಪಗಳು ಚೀನ, ಇಂಡಿಯ, ಪರ್ಷಿಯ, ಅರೇಬಿಯ ಮತ್ತು ಭೂಮಧ್ಯ ಸಮುದ್ರದ ದೇಶಗಳಿಗೆ ನೇರವಾದ ವ್ಯಾಪಾರ ಮಾರ್ಗದಲ್ಲಿ ದ್ದವು. ಭೂಗೋಲಿಕ ಪ್ರಾಮುಖ್ಯತೆ ಮಾತ್ರವಲ್ಲದೆ ಅಲ್ಲಿ ಅನೇಕ ಬೆಲೆ ಬಾಳುವ ಖನಿಜಗಳೂ, ಲೋಹ ಗಳೂ, ಮತ್ತು ಚೌಬೀನೆ ಮರಗಳೂ ಹೇರಳವಾಗಿ ದೊರೆಯುತ್ತಿದ್ದು ವು. ಈಗಿನಂತೆ ಆಗಲೂ ಮಸಾಲೆ ವಸ್ತುಗಳು ಮಲಯ ಪಠ್ಯಾಯದ್ವೀಪವು ತವರಕ್ಕೆ ತೌರುಮನೆಯಾಗಿತ್ತು. ಪ್ರಾಯಶಃ ಮೊಟ್ಟ ಮೊದಲು ಸಮುದ್ರಯಾನ ಮಾರ್ಗವು ಭಾರತದ ಪೂರ್ವ ತೀರದ ಮಾರ್ಗವಾಗಿ ಹೋಗಿರಬೇಕು. ಕಳಿಂಗ (ಒರಿಸ್ಸ), ಬ್ರಹ್ಮದೇಶ, ಅನಂತರ ಮಲಯ ಪರಾಯದ್ವೀಪ, ಆಮೇಲೆ ಪೂರ್ವ ತೀರದಿಂದ ಮತ್ತು ದಕ್ಷಿಣಭಾರತದಿಂದ ನೇರವಾದ ಸಮುದ್ರ ಮಾರ್ಗ ಏರ್ಪಟ್ಟಿರಬಹುದು. ಈ ಮಾರ್ಗದಿಂದಲೇ ಅನೇಕ ಚೀನೀಯಾತ್ರಿಕರು ಇಂಡಿಯಕ್ಕೆ ಬಂದರು. ಐದನೆಯ ಶತಮಾನದಲ್ಲಿ ಫಾಸೀನ್ ಜಾವ ಮಾರ್ಗ ವಾಗಿ ಇಂಡಿಯಕ್ಕೆ ಬಂದನು. ಅಲ್ಲಿ ಅನೇಕ ವಿಧರ್ಮಿಗಳು-ಬೌದ್ಧ ಮತಕ್ಕೆ ಸೇರದ ಬ್ರಾಹ್ಮಣ ಮತ ಪಂಥದವರು ಇದ್ದಾರೆಂದು ಹೇಳುತ್ತಾನೆ.
ಪ್ರಾಚೀನ ಭಾರತದಲ್ಲಿ ಹಡಗು ಕಟ್ಟುವ ಕೈಗಾರಿಕೆಯು ಬಹಳ ಮುಂದುವರಿದು ರಾಷ್ಟ್ರದ ಒಂದು ದೊಡ್ಡ ಉದ್ಯಮವಾಗಿತ್ತು. ಆ ಕಾಲದಲ್ಲಿ ಕಟ್ಟಿದ ಹಡಗುಗಳ ಕೆಲವು ವಿವರಗಳು, ವರ್ಣನೆ ಗಳು ನಮಗೆ ದೊರೆತಿವೆ. ಅನೇಕ ಭಾರತೀಯ ಬಂದರುಗಳ ಹೆಸರುಗಳಿವೆ. ಕ್ರಿಸ್ತಶಕ ಎರಡು ಮತ್ತು ಮೂರನೆಯ ಶತಮಾನದ ಕೆಲವು ದಕ್ಷಿಣಭಾರತದ (ಆಂಧ್ರ)ನಾಣ್ಯಗಳಲ್ಲಿ ಎರಡು ಪಟಸ್ತಂಭ ಗಳ ಹಡಗಿನ ಚಿತ್ರವಿದೆ. ಅಜಂತಗುಹಾಂತರ್ದೇವಾಲಯಗಳ ಚಿತ್ರಗಳಲ್ಲಿ ಸಿಂಹಳ ದ್ವೀಪದ ಮೇಲೆ ದಂಡೆತ್ತಿ ಹೋದ ದಿಗ್ವಿಜಯ ಯಾತ್ರೆಯ ಚಿತ್ರವಿದೆ. ಹಡಗುಗಳಲ್ಲಿ ಆನೆಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಚಿತ್ರಿಸಿದ್ದಾರೆ. ಮೂಲ ಭಾರತೀಯ ವಲಸೆಗಾರರು ಕಟ್ಟಿದ ದೊಡ್ಡ ರಾಜ್ಯಗಳು, ಸಾಮ್ರಾಜ್ಯಗಳು ಮುಖ್ಯವಾಗಿ ತಮ್ಮ ನೌಕಾ ಬಲದ ಶಕ್ತಿಯನ್ನೇ ಅವಲಂಬಿಸಿದ್ದವು ; ವ್ಯಾಪಾ ರೋದ್ಯಮದಲ್ಲಿ ವಿಷೇಶ ಆಸಕ್ತಿ ತೋರಿಸಿದವು ಮತ್ತು ವ್ಯಾಪಾರ ಮಾರ್ಗಗಳನ್ನು ತಮ್ಮ ಆಧೀನದಲ್ಲಿ ಟ್ಟು ಕೊಂಡಿದ್ದವು. ಸಮುದ್ರದ ಮೇಲೆ ಪರಸ್ಪರ ಘರ್ಷಣೆಗಳಾಗುತ್ತಿದ್ದವು. ಅದರಲ್ಲಿ ಒಬ್ಬನು ದಕ್ಷಿಣ ಭಾರತದ ಚೋಳ ರಾಜನನ್ನು ಯುದ್ಧಕ್ಕೆ ಕರೆದವನು. ಚೋಳರ ನೌಕಾ ಬಲವೂ ಅದ್ಭುತ ವಿತ್ತು. ನಾವಿಕ ಪಡೆಯನ್ನು ಕಳುಹಿಸಿ ಚೋಳರು ಸ್ವಲ್ಪ ಕಾಲ ಶೈಲೇಂದ್ರ ಚಕ್ರಾಧಿಪತ್ಯವನ್ನು ಅಡಗಿಸಿದ್ದರು,
ಕ್ರಿಸ್ತಶಕ ೧೦೮೮ರ ತಮಿಳು ಶಿಲಾಲೇಖನ ಒಂದರಲ್ಲಿ “ ಹದಿನೈದು ಸಾವಿರ ಸಂಘ ” ಎಂದು ಒಂದು ಉಲ್ಲೇಖವಿದೆ. ಆ ವರ್ತಕ ಸಂಘವನ್ನು ವರ್ಣನೆಮಾಡುತ್ತ “ ಕೃತಯುಗದ ಕಾಲದಿಂದ ಪಟ್ಟಂಡಗಳಲ್ಲಿ ಭೂಮಾರ್ಗ ಸಮುದ್ರ ಮಾರ್ಗದಿಂದ ಪ್ರಯಾಣ ಮಾಡುತ್ತ ಅಶ್ವ, ಗಜ, ರತ್ನ ಪರಿ, ಸುಗಂಧದ್ರವ್ಯ, ಔಷದ ವಸ್ತುಗಳ ಚಿಲ್ಲರೆ ವ್ಯಾಪಾರ, ಬಟ್ಟೆ ವ್ಯಾಪಾರವನ್ನು ತಮ್ಮ ಕೈಲಿಟ್ಟು ಕೊಂಡಿದ್ದ ಹುಟ್ಟು ಧೈರ್ಯ ಶಾಲಿಗಳು” ಎಂದು ಬರೆದಿದ್ದಾನೆ.
ಭಾರತೀಯರ ವಲಸೆಯತ್ನದ ಆರಂಭದ ಮಹಾಸಾಹಸಗಳಿಗೆ ಇದೇ ಮೂಲಕಾರಣ ಮತ್ತು ಹಿನ್ನಲೆ, ವ್ಯಾಪಾರ, ಸಾಹಸ ಮತ್ತು ಸೀಮೋಲ್ಲಂಘನದ ಹಿರಿ ಆಸೆಯು ಭಾರತೀಯರನ್ನು ಪೌರ್ವಾತ್ಯ ದೇಶಗಳಿಗೆ ಕರೆದೊಯ್ಯತು, ಪುರಾತನ ಸಂಸ್ಕೃತ ಗ್ರಂಥಗಳಲ್ಲಿ ಈ ದೇಶಗಳನ್ನು ಸ್ವರ್ಗ ಭೂಮಿ ಅಥವ ಸ್ವರ್ಗ ದ್ವೀಪ ಎಂದು ಬಣ್ಣಿಸಿದಾರೆ. ಮೊದಲು ಹೋದವರು ಅಲ್ಲಿಯೇ ಬೀಡು ಬಿಟ್ಟರು. ಅವರ ಹಿಂದೆ ಇನ್ನೂ ಕೆಲವರು ಹಿಂಬಾಲಿಸಿದರು, ಈ ರೀತಿ ಶಾಂತರೀತಿಯಿಂದ ರಾಜ್ಯವನ್ನು ಗೆದ್ದರು.