ಪುಟ:ಭಾರತ ದರ್ಶನ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೭೭

ಅಲ್ಲಿನ ಜನರೊಂದಿಗೆ ಬಾಂಧವ್ಯ ಬೆಳೆಸಿದರು ; ಒಂದು ವಿಶ್ರ ಸಂಸ್ಕೃತಿಯು ಹೊರಹೊಮ್ಮಿತು. ಪ್ರಚಲಿ ತವಾಯಿತು. ಪ್ರಾಯಶಃ ಆಮೇಲೆ ಭಾರತದಿಂದ ಹಲವು ರಾಜಕಾರಣಿಗಳೂ ಕ್ಷತ್ರಿಯ ರಾಜಕುಮಾರರೂ ಶ್ರೀಮಂತ ಮನೆತನದ ಯೋಧರೂ ಬೇಟೆಯ ವಿನೋದಕ್ಕಾಗಿ, ರಾಜ್ಯಾಭಿಲಾಷೆಗಾಗಿ ಬಂದಿರಬಹುದು. ಹೆಸರಿನ ಸಾಮರಸ್ಯದಿಂದ ಅಲ್ಲಿಗೆ ಹೋದವರಲ್ಲಿ ಬಹು ಜನರು ಮಾಲವ ದೇಶದವರಿರಬಹುದು. ಆದ್ದರಿಂದ ಇಂಡೋನೇಷ್ಯದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಜನರಿಗೆ ಮಲಯ ಜನಾಂಗ ವೆಂಬ ಹೆಸರು ಬಂದಿರಬೇಕೆಂದು ಅನೇಕರ ಅಭಿಪ್ರಾಯ. ವಲಸೆ ಹೋದವರಲ್ಲಿ ಮೊದಲಿಗರೆಂದರೆ ಪೂರ್ವ ತೀರದ ಕಳಿಂಗರು, ಆದರೆ ಒಂದು ವಿಶಿಷ್ಟ ಪ್ರಯತ್ನದಿಂದ ಸುಸಂಘಟಿತವಾಗಿ ವಲಸೆ ಹೋದ ವರೆಂದರೆ ದಕ್ಷಿಣ ಭಾರತದ ಹಿಂದೂ ರಾಜರಾದ ಪಲ್ಲವರು. ಆಗೇಯ ಏಷ್ಯದಲ್ಲಿ ಪ್ರಸಿದ್ದವಾದ ಶೈಲೇಂದ್ರ ಮನೆತನದವರು ಒರಿಸ್ಸದವರೆಂದು ನಂಬಲಾಗಿದೆ. ಆಗಿನ ಕಾಲದಲ್ಲಿ ಒರಿಸ್ಸಾದಲ್ಲಿ ಬೌದ್ಧ ಮತವು ಬಹಳ ಪ್ರಾಬಲ್ಯದಲ್ಲಿತ್ತು. ಆದರೆ ರಾಜಮನೆತನದವರು ಬ್ರಾಹ್ಮಣಮತದವರು,
ಈ ವಲಸೆ ರಾಜ್ಯಗಳೆಲ್ಲ ಇಂಡಿಯ ಮತ್ತು ಚೀನಾ ಈ ಎರಡು ಮಹಾರಾಷ್ಟ್ರಗಳ ಮಧ್ಯೆ, ಎರಡ ಉನ್ನತ ಸಂಸ್ಕೃತಿಗಳ ಮಧ್ಯೆ ನೆಲಸಿದ್ದವು. ಕೆಲವು ರಾಜ್ಯಗಳು ಏಷ್ಯಾ ಖಂಡದ ವಿಸ್ತಾರವಾದ ಭೂಭಾಗದ ಮೇಲೆ ಚೀನಾ ರಾಜ್ಯದ ಗಡಿಯಲ್ಲಿದ್ದವು ; ಇನ್ನು ಳಿದವು ಇಂಡಿಯ ಮತ್ತು ಚೀನಾ ದೇಶಗಳ ನೇರವಾದ ವ್ಯಾಪಾರ ಮಾರ್ಗದಲ್ಲಿದ್ದವು. ಈ ರೀತಿ ಅವುಗಳು ಎರಡು ದೇಶಗಳ ಪ್ರಭಾವಕ್ಕೂ ಸಿಕ್ಕಿ ಒಂದು ಮಿಶ್ರ ಇ೦ಡೋಚೀನಾ ಸಂಸ್ಕೃತಿ ಬೆಳೆಯಿತು. ಆದರೆ ಎರಡೂ ಸಂಸ್ಕೃತಿಗಳ ಸ್ವಭಾವ ಸಹಜ ಸಾತ್ವಿಕ ಗುಣವಾದ್ದರಿಂದ ಪರಸ್ಪರ ಘರ್ಷಣೆ ಹುಟ್ಟಲಿಲ್ಲ, ಬಗೆ ಬಗೆಯ ಮಿಶ್ರಣವಾಗಿ ಬಗೆ ಬಗೆಯ ಸಂಸ್ಕೃತಿ ಭೇದದ ವಿವಿಧ ರೂಪಗಳು ಉದ್ಭವಿಸಿದವು. ಏಷ್ಯದ ಬ್ರಹ್ಮದೇಶ, ಸಯಾಂ, ಇಂಡೋ ಚೀನಾಗಳಲ್ಲಿ ಚೀನಾ ಸಂಸ್ಕೃತಿಯ ಪ್ರಭಾವವು ಹೆಚ್ಚು ಬೀರಿತ್ತು; ಮಲಯ ಪಾಯ ದ್ವೀಪಗಳ ಮೇಲೆ ಭಾರತೀಯ ಸಂಸ್ಕೃತಿ ಪ್ರಭಾವ ಹೆಚ್ಚು ಬಿತ್ತು. ಸಾಮಾನ್ಯವಾಗಿ ರಾಜ್ಯಾಡಳಿತ ಪದ್ಧತಿಯೂ ಜೀವನದ ಆದರ್ಶವೂ ಚೀನಾ ದೇಶದ್ದಾಗಿತ್ತು. ಆದರೆ ಧರ್ಮ ಮತ್ತು ಕಲೆಗಳು ಭಾರತೀಯವಾಗಿ ದ್ದವು. ಏಷ್ಯಾಖಂಡದ ರಾಜ್ಯಗಳ ವ್ಯಾಪಾರವು ಚೀನಾ ದೇಶದೊಂದಿಗೆ ಹೆಚ್ಚು ನಡೆಯುತ್ತಿತ್ತು. ಅನೇಕ ವೇಳೆ ರಾಯಭಾರಿಗಳ ವಿನಿಮಯವೂ ನಡೆಯುತ್ತಿತ್ತು. ಆದರೆ ಕಾಂಬೋಡಿಯ ಮತ್ತು ಆಂಗ್ಕೋರನ ಮಹಾ ಅವಶೇಷಗಳಲ್ಲಿ ಕಾಣಬರುವ ಕಲೆ ಎಲ್ಲ ಪೂರ್ಣ ಭಾರತೀಯ ಕಲೆ, ಭಾರತೀಯ ಕಲೆಯು ಬಹಳ ನಯವೂ ಸುಂದರವು ಇತ್ತು. ಪ್ರತಿ ಒಂದು ದೇಶದಲ್ಲೂ ಅದರ ನವವಿಕಸನವಾಯಿತು, ಮೂಲ ಭಾರತೀಯ ಸ್ವಭಾವವನ್ನು ಬಿಡದೆ ಹೊಸ ಹೊಸ ರೂಪವನ್ನು ತಾಳಿತು. “ ಭಾರತೀಯ ಕಲೆಯ ಜೀವಂತ ಶಕ್ತಿಯು ವಿಸ್ಮಯಕಾರಕವಿದೆ. ಅದರ ಮೃದು ಸ್ವಭಾವ ಅದ್ಭುತವಿದೆ” ಎಂದು ಸರ್ ಜಾನ್ ಮಾರ್ಷಲ್ ಹೊಗಳಿದ್ದಾನೆ : ಮತ್ತು ಗ್ರೀಕ್ ಮತ್ತು ಭಾರತೀಯ ಕಲೆಗಳ ಸಾಮಾನ ಗುಣವೆಂದರೆ “ ಯಾವ ದೇಶದೊಡನೆ ಸಂಪರ್ಕ ಬೆಳೆಸಲಿ ಆ ದೇಶ, ಜನ ಮತ್ತು ಧರ್ಮದೊಂದಿಗೆ ಸಮರಸಹೊಂದಿ, ಅವಶ್ಯಕತೆಗನುಗುಣವಾಗಿ ಮಿಲನವಾಗುತ್ತವೆ” ಎಂದಿದ್ದಾನೆ.
ಭಾರತೀಯ ಕಲೆಯ ಮೂಲಗುಣವು ಭಾರತದ ಧಾರ್ಮಿಕ ಮತ್ತು ದಾರ್ಶನಿಕ ದೃಷ್ಟಿಯ ಕೆಲವು ಆದರ್ಶಗಳನ್ನವಲಂಬಿಸಿದೆ. ಈ ಪೌರ್ವಾತ್ಯ ದೇಶಗಳ ಜನರು ಭಾರತೀಯ ಧರ್ಮವನ್ನು ಅವಲಂಬಿಸಿದಂತ ಅವರ ಕಲೆಯ ಕಲ್ಪನೆಯ ಮೂಲವೂ ಭಾರತೀಯವಾಯಿತು. ಪ್ರಾಯಶಃ ಮೊಟ್ಟ ಮೊದಲನೆಯ ಪಾಳೆಯಗಳೆಲ್ಲ ಬ್ರಾಹ್ಮಣ ಮತದವರಾಗಿರಬೇಕು. ಬೌದ್ಧ ಧರ್ಮವು ಅನಂತರ ಪ್ರವೇಶಮಾಡಿರಬೇಕು. ಎರಡು ಧರ್ಮಗಳೂ ಸ್ನೇಹದಿಂದ ಬೆಳೆದವು. ಎರಡು ಧರ್ಮಗಳ ಪೂಜಾ ವಿಧಿಯೂ ಜನರಲ್ಲಿ ಪ್ರಚಾರವಾಗಿ ಮಿಶ್ರ ಪೂಜಾ ಪದ್ಧತಿಗಳು ಆಚರಣೆಗೆ ಬಂದವು. ಯಾವ ಸನ್ನಿವೇಶಕ್ಕಾದರೂ ಹೊಂದಿಕೊಳ್ಳುವ ಮಹಾಯಾನ ಪಂಥವು ಅಲ್ಲಿ ಆಚರಣೆಯಲ್ಲಿತ್ತು. ಬ್ರಾಹ್ಮಣ ಮತ ಮತ್ತು ಬೌದ್ಧ ಮತಗಳೆರಡೂ ಸ್ಥಳೀಯ ಸನ್ನಿವೇಶಗಳ ಪ್ರಭಾವದಿಂದ ತಮ್ಮ ತಮ್ಮ ಮೂಲ ಧರ್ಮಗಳ ಪಾರಿಶುದ್ಧತೆಯನ್ನು ಕಳೆದುಕೊಂಡು ತೀರ ಭಿನ್ನವಾದವು. ಕೊನೆಯ ದಿನಗಳಲ್ಲಿ ಬೌದ್ಧ