ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೮
ಭಾರತ ವರ್ತನ

ಧರ್ಮದ ರಾಷ್ಟ್ರಕ್ಕೂ ಬ್ರಾಹ್ಮಣ ಧರ್ಮದ ರಾಷ್ಟ್ರಕ್ಕೂ ಘೋರ ಘರ್ಷಣೆಗಳಾದವು; ಆದರೆ ಅದಕ್ಕೆ ಮುಖ್ಯ ಕಾರಣವು ವ್ಯಾಪಾರ ಮತ್ತು ಸಮುದ್ರ ಮಾರ್ಗಗಳ ಸ್ವಾಮ್ಯಕ್ಕಾಗಿ ಹುಟ್ಟಿದ ರಾಜಕೀಯ ಮತ್ತು ಆರ್ಥಿಕ ಕಾರಣಗಳಾಗಿದ್ದವು,
ಈ ವಲಸೆ ರಾಷ್ಟ್ರಗಳ ಇತಿಹಾಸವೆಂದರೆ ಕ್ರಿಸ್ತಶಕ ಒಂದು ಅಥವ ಎರಡನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೆ ಸುಮಾರು ಹದಿಮೂರನೂರು ವರ್ಷಗಳ ಇತಿಹಾಸ, ಆರಂಭದ ಶತಮಾನಗಳ ಚರಿತ್ರೆಯು ಹೆಚ್ಚು ತಿಳಿಯದು. ಕೆಲವು ಸಣ್ಣ ರಾಜ್ಯಗಳಿದ್ದವೆಂದು ಮಾತ್ರ ತಿಳಿದಿದೆ ಕ್ರಮೇಣ ಅವುಗಳೆಲ್ಲ ಒಂದುಗೂಡಿ ಐದನೆಯ ಶತಮಾನದ ಹೊತ್ತಿಗೆ ದೊಡ್ಡ ಮಹಾನಗರಗಳು ಹುಟ್ಟಿದವು. ಎಂಟನೆಯ ಶತಮಾನದ ಹೊತ್ತಿಗೆ ಸಮುದ್ರ ವ್ಯಾಪಾರ ಮಾಡುತ್ತಿದ್ದ ಚಕ್ರಾಧಿಪತ್ಯ ಗಳು ಹುಟ್ಟಿದವು. ಸ್ವಲ್ಪ ಮಟ್ಟಿಗೆ ಒಂದೇ ಕೇಂದ್ರ ಆಡಳಿತಕ್ಕೆ ಅಧೀನವಿದ್ದರೂ, ಬೇರೆ ಕೆಲವು ರಾಜ್ಯಗಳ ಮೇಲೆ ಒಂದು ಬಗೆಯ ಸ್ವಾಮಿತ್ವ ನಡೆಸುತ್ತಿದ್ದವು. ಕೆಲವು ವೇಳೆ ಈ ಅಧೀನ ರಾಜ್ಯಗಳು ಸ್ವತಂತ್ರವಾಗಿ, ಕೇಂದ್ರ ಸರ್ಕಾರದ ಮೇಲೆ ಎದುರು ಬೀಳುತ್ತಿದ್ದವು. ಆದ್ದರಿಂದ ಈ ಕಾಲದ ಇತಿ ಹಾಸವು ಅರ್ಥವಾಗುವುದು ಸ್ವಲ್ಪ ಕಷ್ಟ,
ಇವುಗಳಲ್ಲೆಲ್ಲ ಬಹಳ ಪ್ರಸಿದ್ದ ರಾಜ್ಯವೆಂದರೆ ಶ್ರೀ ವಿಜಯನ ಶೈಲೇಂದ್ರ ಚಕ್ರಾಧಿಪತ್ಯ. ಎಂಟ ನೆಯ ಶತಮಾನದಲ್ಲಿ ಮಲೇಷ್ಯದಲ್ಲೆಲ್ಲ ಭೂಜಲ ಬಲದಲ್ಲಿ ಅತ್ಯಂತ ಪ್ರಬಲವಾದ ರಾಜ್ಯವಾಯಿತು. ಇದರ ಮೂಲವೂ, ರಾಜಧಾನಿಯೂ ಸುಮಾತ್ರದಲ್ಲಿ ಎಂದು ಮೊನ್ನೆ ಮೊನ್ನಿನವರೆಗೆ ಭಾವಿಸಲಾ ಗಿತ್ತು; ಆದರೆ ಈಚಿನ ಸಂಶೋಧನೆಗಳಿಂದ ಮಲಯ ಪರ್ಯಾಯದ್ವೀಪದಲ್ಲಿಯೇ ಹುಟ್ಟಿದ್ದು, ಅದರ ರಾಜಧಾನಿಯೂ ಅಲ್ಲಿಯೇ ಇತ್ತು ಎಂದು ತಿಳಿದು ಬಂದಿದೆ, ಅದರ ಅತ್ಯುನ್ನತ ಕಾಲದಲ್ಲಿ ಮಲಯ, ಸಿಂಹಳ, ಸುಮಾತ್ರ, ಜಾವಾದ ಒಂದು ಭಾಗ, ಬೋರ್ನಿಯೋ, ಸೆಲಿಬಿಸ್‌, ಫಿಲಿಪೈನ್ಸ್, ಫಾರೋಸ ಒಂದು ಭಾಗ, ಆ ರಾಜ್ಯದ ಎಲ್ಲೆಯಲ್ಲಿದ್ದವು. ಪ್ರಾಯಶಃ ಕಾಂಬೋಡಿಯ ಮತ್ತು ಚಂಪಾ (ಅನ್ನಾ ಮ್) ರಾಜ್ಯಗಳೂ ಅದಕ್ಕೆ ಅಧೀನವಿದ್ದವು.
ಆದರೆ ಶೈಲೇಂದ್ರ ಸಂತತಿಯು ಬಲಗೊಂಡು ಸಾಮ್ರಾಜ್ಯ ಸ್ಥಾಪಿಸುವ ಮುಂಚೆಯೇ ಮಲಯ, ಕಾಂಬೋಡಿಯ ಮತ್ತು ಜಾವಗಳಲ್ಲಿ ಬಲಿಷ್ಠ ರಾಷ್ಟ್ರಗಳು ತಲೆ ಎತ್ತಿದವು. ಸೈಯಾಮ್ ಗಡಿಯ ಸಮಿಾಪದ ಮಲಯ ಪರ್ಯಾಯದ್ವೀಪದ ಉತ್ತರ ಭಾಗದಲ್ಲಿ ವಿಶಾಲವಾಗಿ ಹರಡಿರುವ ಪ್ರಾಚೀನ ಅವಶೇಷಗಳನ್ನೇ ನೋಡಿದರೆ “ ಕೆಲವು ಬಲಿಷ್ಠ ರಾಜ್ಯಗಳಿದ್ದವೆಂದೂ, ಅವು ಸಂಪತ್ಸಮೃದ್ಧಿ ಯಿಂದ, ಸೌಖ್ಯದಿಂದ ಮೆರೆಯುತ್ತಿದ್ದನೆಂದೂ ತೋರುತ್ತದೆ” ಎಂದು ಆರ್. ಜೆ. ವಿರ್ಲ್ಕಿಸನ್ ಹೇಳುತ್ತಾನೆ. ಚಂಪಾ (ಅನ್ನಾ ಮ್) ದಲ್ಲಿ ಮೂರನೆಯ ಶತಮಾನದಲ್ಲಿ ಪಾಂಡುರಂಗಮ್ ಎಂಬ ಮಹಾನಗರ ವಿತ್ತು; ಐದನೆಯ ಶತಮಾನದಲ್ಲಿ ಕಾಂಭೋಜ ದೊಡ್ಡ ನಗರವಾಯಿತು. ಒಂಭತ್ತನೆಯ ಶತಮಾನ ದಲ್ಲಿ ಜಯವರ್ಮನೆಂಬ ಮಹಾರಾಜನು ಸಣ್ಣ ಸಣ್ಣ ರಾಜ್ಯಗಳನ್ನೆಲ್ಲ ಒಂದುಗೂಡಿಸಿ ಕಾಂಭೋಜ ಚಕ್ರಾಧಿಪತ್ಯವನ್ನು ಕಟ್ಟಿ ಆ೦ಗ್ ಕೋರ್‌ದಲ್ಲಿ ರಾಜಧಾನಿಯನ್ನು ಸ್ಥಾಪಿಸಿದನು. ಕಾಂಬೋಡಿಯ ಆಗಾಗ ಶೈಲೇಂದ್ರರ ಅಧೀನಕ್ಕೆ ಒಳಪಟ್ಟಿರಬೇಕು ; ಆದರೆ ನೆಪಮಾತ್ರ ಅಧೀನವಿದ್ದು ಕಟ್ಟ ಕಡೆಗೆ ಒಂಭತ್ತನೆಯ ಶತಮಾನದಲ್ಲಿ ಪುನಃ ಸ್ವತಂತ್ರವಾಯಿತು. ಈ ಕಾಂಭೋಜ ರಾಜ್ಯವು ಸುಪ್ರಸಿದ್ದ ರಾಜರುಗಳೂ ರಾಷ್ಟ್ರ ನಿರ್ಮಾಪಕರೂ ಆದ ಜಯವರ್ಮ, ಯಶೋವರ್ಮ, ಇಂದ್ರವರ್ಮ, ಸೂರ್ಯ ವರ್ಮ ಮುಂತಾದವರ ರಾಜ್ಯಭಾರದಿಂದ ನಾಲ್ಕು ನೂರು ವರ್ಷಗಳವರೆಗೆ ಯಶಸ್ವಿಯಾಗಿ ಬಾಳಿತು. ರಾಜಧಾನಿಯಾದ ಆಂಗ್ಕೋರ್ ಏಷ್ಯ ಖಂಡದಲ್ಲೆಲ್ಲ ಮಹಾವೈಭವಶಾಲಿಯಾದ ನಗರವೆಂದು ಪ್ರಸಿದ್ದ ವಾಯಿತು. ಹತ್ತು ಲಕ್ಷ ಜನರ ಪ್ರಜಾಸಂಖ್ಯೆಯುಳ್ಳದ್ದಾಗಿ ಸೀಜರ್‌ಗಳ ರೋಮ್ ನಗರಕ್ಕಿಂತ ವಿಶಾಲವೂ ವೈಭವಯುಕ್ತವೂ ಆಗಿ ಮೆರೆಯುತ್ತಿತ್ತು. ಆ ಮಹಾನಗರದ ಸಮೀಪದಲ್ಲಿಯೇ ಆಂಗ್ ಕೋರ್‌ವತ್‌ ಮಹಾದೇವಾಲಯವಿತ್ತು. ಕಾಂಬೋಡಿಯ ಚಕ್ರಾಧಿಪತ್ಯವು ಹದಿಮೂರನೆಯ ಶತ ಮಾನದ ಅಂತ್ಯದವರೆಗೆ ಉನ್ನತ ಸ್ಥಾನದಲ್ಲಿತ್ತು. ೧೨೭ ರಲ್ಲಿ ಅಲ್ಲಿಗೆ ಹೋದ ಚೀನೀ ರಾಯಭಾರಿ