ಪುಟ:ಭಾರತ ದರ್ಶನ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೦

ಭಾರತ ವರ್ತನ

ರಾಜ್ಯಗಳು ಜನ್ಮತಾಳಿದವು. ಇದುವರೆಗೆ ದಕ್ಷಿಣ ಭಾರತೀಯರ ಕೈಯಲ್ಲಿದ್ದ ಪೌರ್ವಾತ್ಯ ಸಮುದ್ರ ಗಳ ಒಡೆತನವು ಅರಬ್ಬಿ ಜನರ ಕೈಗೆ ಹೋಯಿತು. ಮಲಕ್ಕ ಒಂದು ಪ್ರಮುಖ ವ್ಯಾಪಾರ ಕೇಂದ್ರ ವಾಗಿ, ರಾಜಕೀಯ ಶಕ್ತಿಯ ಆಗರವಾಯಿತು. ಇಸ್ಲಾ೦ಧರ್ಮವು ಮಲಯ ಪರ್ಯಾಯದ್ವೀಪ ಮತ್ತು ಇತರ ದ್ವೀಪಗಳಲ್ಲಿ ಹರಡಿತು. ಈ ಹೊಸ ರಾಜ್ಯವು ಹದಿನೈದನೆಯ ಶತಮಾನದ ಕೊನೆಯಲ್ಲಿ ಮಜಪಹಿತ ವಂಶವನ್ನು ನಾಶಮಾಡಿತು. ಅಲ್ಲಿಂದ ಸ್ವಲ್ಪ ದಿನಗಳಲ್ಲಿ ೧೫೧೧ ರಲ್ಲಿ ಆಲ್ಬುಕರ್ಕ್ನ ನೇತೃತ್ವದಲ್ಲಿ ಪೋರ್ಚುಗೀಸರು ಬಂದು ಮಲಕ್ಕ ಆಕ್ರಮಿಸಿದರು ; ಯೂರೋಪು ತನ್ನ ನೂತನ ಸಮುದ್ರಯಾನ ಶಕ್ತಿಯಿಂದ ಪೌರ್ವಾತ್ಯವನ್ನು ಮುಟ್ಟಿತು.

೧೭. ಹೊರರಾಜ್ಯಗಳಲ್ಲಿ ಭಾರತೀಯ ಕಲೆಯ ಪ್ರಭಾವ

ಗತ ಚಕ್ರಾಧಿಪತ್ಯಗಳ ಮತ್ತು ರಾಜಮನೆತನಗಳ ಲೇಖನಗಳಲ್ಲಿ ಪ್ರಾಕ್ತನ ವಿಮರ್ಶಕರಿಗೆ ಆಸಕ್ತಿ ಇರಬಹುದು ; ಆದರೆ ನಾಗರಿಕತೆ ಮತ್ತು ಕಲೆಯ ವಿಕಸನದ ಇತಿಹಾಸದ ಬೆಲೆ ಇನ್ನೂ ಅಧಿಕ. ಭಾರತದ ದೃಷ್ಟಿಯಲ್ಲಿ ಇದಕ್ಕೆ ಅತಿ ಮಹತ್ವವಿದೆ ; ಏಕೆಂದರೆ ಭಾರತವೇ ಅಲ್ಲಿ ಮೂರ್ತಿ ಗೊಂಡಿತ್ತು ಮತ್ತು ಅನೇಕ ವಿಧದಲ್ಲಿ ತನ್ನ ಅಂತಸ್ಸತ್ವವನ್ನು ಅದ್ಭುತ ಕಾರ್ಯಶಕ್ತಿಯನ್ನು ವ್ಯಕ್ತ ಗೊಳಿಸಿತ್ತು. ಈ ಅದ್ಭುತಶಕ್ತಿಯು ಉಕ್ಕಿ ಬಂದು ವಿಶಾಲವಾದ ಪ್ರದೇಶದಲ್ಲಿ ಹರಿದು ಹಬ್ಬಿದೆ. ಅದು ತನ್ನ ದರ್ಶನದ ಜೊತೆಯಲ್ಲಿ ತನ್ನ ಇತರ ಆದರ್ಶಗಳನ್ನೂ, ಕಲೆ, ವ್ಯಾಪಾರ, ಭಾಷೆ, ಸಾಹಿತ್ಯ ಮತ್ತು ರಾಜ್ಯ ಪದ್ಧತಿಗಳನ್ನೂ ಹರಡಿತು. ಭಾರತವು ಆಗ ನಿಂತು ನಾರುತ್ತಿರಲಿಲ್ಲ ; ಒಂಟಿಯಾಗಿರ ಬೇಕೆಂಬ ಏಕಾಂತ ಮನೋಭಾವವಿರಲಿಲ್ಲ; ಪರ್ವತ ಪಂಕ್ತಿಗಳು, ಸಪ್ತ ಸಮುದ್ರಗಳು ಯಾವುದೂ ಅದರ ಸೀಮೋಲ್ಲಂಘನಕ್ಕೆ ಅಡ್ಡಿ ಬರಲಿಲ್ಲ. ಭಾರತೀಯರು ಉನ್ನತ ಅಗಮ್ಯ ಪರ್ವತಶ್ರೇಣಿಗಳನ್ನು, ಅಪಾಯಕರವಾದ ಸಮುದ್ರಗಳನ್ನು ದಾಟಿ ರೇನೆಗೂಸೆ ಹೇಳುವಂತೆ “ ವಿಶಾಲಗ್ರೀಸಿನಂತೆ ಸಮರ್ಪಕ ರಾಜಕೀಯ ವ್ಯವಸ್ಥೆ ಇರದಿದ್ದರೂ ಶ್ರೇಷ್ಠ ನೈತಿಕ ವ್ಯವಸ್ಥೆ ಇದ್ದ ವಿಶಾಲಭಾರತವನ್ನು ಕಟ್ಟಿದರು. ” ನಿಜವಾಗಿ ನೋಡಿದರೆ ಭಾರತದ ಒಂದು ಭಾಗವಾಗಿರದಿದ್ದರೂ ಮಲಯ ರಾಜ್ಯಗಳ ರಾಜಕೀಯ ಸ್ಥಿತಿಯು ಉತ್ತಮ ಮಟ್ಟದ್ದಾಗಿತ್ತು. ಆದರೆ ಗ್ರೂಸೆ ಭಾರತೀಯ ಕಲೆಯು ಹರಡಿದ್ದ ವಿಶಾಲ ಪ್ರದೇಶ ಗಳ ವಿಷಯ ಬರೆಯುತ್ತ “ ಪೂರ್ವ ಇರಾಣದ ಪ್ರಸ್ತಭೂಮಿಯಲ್ಲಿ ಸೆರಿಂಡಿಯಾ ಮರುಭೂಮಿ ಯಲ್ಲಿ, ತಿಬೆಟ್, ಮಂಗೋಲಿಯ ಮತ್ತು ಮಂಚೂರಿಯಗಳ ನಿರ್ಜನ ಬಂಜರು ಭೂಪ್ರದೇಶದಲ್ಲಿ, ಪುರಾತನ ಸಂಸ್ಕೃತಿಯುಳ್ಳ ಚೀನ ಜಪಾನ್ ದೇಶಗಳಲ್ಲಿ, ಇಂಡೋ ಚೀನದ ಅನಾಗರಿಕ ಮಾನ್ಸ್, ಖೇರ್ ಮತ್ತು ಇತರ ಜನರ ದೇಶಗಳಲ್ಲಿ ಭಾರತವು ಧರ್ಮ ವಿಷಯದಲ್ಲಿ ಮಾತ್ರವಲ್ಲದೆ ಕಲೆ ಮತ್ತು ಸಾಹಿತ್ಯದಲ್ಲಿ ಸಹ-ಒಂದೇ ಮಾತಿನಲ್ಲಿ ಹೇಳುವುದಾದರೆ ಆ ತೋನ್ನತಿಯ ಎಲ್ಲ ಮಾರ್ಗಗಳಲ್ಲಿ ತನ್ನ ಶ್ರೇಷ್ಠ ನಾಗರಿಕತೆಯ ಶಾಶ್ವತ ಛಾಯೆಯನ್ನು ಬೀರಿದೆ ” ಎಂದಿದ್ದಾನೆ. ಮುಖ್ಯವಾಗಿ ಭಾರತೀಯ ಸಂಸ್ಕೃತಿಯು ಆಸ್ಟ್ರೇಯ ಏಷ್ಯದ ರಾಜ್ಯಗಳಲ್ಲಿ ಬೇರು ಬಿಟ್ಟಿತು. ಅದರ ಹೆಗ್ಗುರುತುಗಳನ್ನು ಈಗಲೂ ಎಲ್ಲೆಲ್ಲೂ ನೋಡಬಹುದು. ಚ೦ಪ, ಆ೦ಗ್ ಕೋರ್, ಶ್ರೀ ವಿಜಯ ಮತ್ತು ಮಜ ಪಹಿತ್‌ಗಳಲ್ಲಿ ಉನ್ನತ ಸಂಸ್ಕೃತ ಜ್ಞಾನ ಕೇಂದ್ರಗಳಿದ್ದವು. ಅಲ್ಲಿ ಆಳಿದ ರಾಜ್ಯಗಳ ಮತ್ತು ಅರಸರ ಹೆಸರುಗಳೆಲ್ಲ ಸಂಸ್ಕೃತದಲ್ಲಿದ್ದವು, ಪೂರ್ಣ ಭಾರತೀಯವಿದ್ದವು. ಅಂದರೆ ಅವರೆಲ್ಲ ಭಾರತದವರೆಂದಲ್ಲ. ಆದರೆ, ಭಾರತೀಯರಾದವರು. ಅರಸು ಮನೆತನದ ಉತ್ಸವಗಳೆಲ್ಲ ಭಾರತೀಯ ವಿದ್ದು ಸಂಸ್ಕೃತದಲ್ಲೇ ನಡೆಯುತ್ತಿದ್ದವು. ರಾಜ್ಯದ ಅಧಿಕಾರಿಗಳ ಹೆಸರುಗಳೆಲ್ಲ ಸಂಸ್ಕೃತ ದಲ್ಲಿದ್ದವು. ತಾಮ್ ದೇಶದಲ್ಲಿ ಮಾತ್ರವಲ್ಲದೆ, ಮಲಯದ ಮುಸ್ಲಿಂ ರಾಜ್ಯಗಳಲ್ಲಿ ಸಹ ಇನ್ನೂ ಅದೇ ಹೆಸರುಗಳಿವೆ. ಈ ದೇಶದ ಪ್ರಾಚೀನ ಸಾಹಿತ್ಯದಲ್ಲಿ ಭಾರತದ ಪುರಾಣ ಕಥೆಗಳು ಹೇರಳವಾಗಿ ತುಂಬಿವೆ. ಜಾವಾ ಮತ್ತು ಬಾಲಿ ನೃತ್ಯಗಳು ಭರತನಾಟ್ಯದಿಂದ ಹುಟ್ಟಿದವು. ಸಣ್ಣದಾದ ಬಾಲಿ ದ್ವೀಪದಲ್ಲಿ ಭಾರತೀಯರ ಸಂಸ್ಕೃತವು ಈಗಲೂ ಜೀವಂತವಿದೆ. ಹಿಂದೂ ಧರ್ಮವು ಸಹ ಅಲ್ಲಿ ಪ್ರಚಾರದಲ್ಲಿದೆ. ಲೇಖನ ಕಲೆ ಫಿಲಿಪ್ಪೆನ್ಸ್ ಗೆ ಹೋದದ್ದು ಇಂಡಿಯಾದಿಂದ.