ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೮೧


ಕಾಂಬೋಡಿಯ ವರ್ಣಮಾಲೆ ದಕ್ಷಿಣ ಭಾರತದಿಂದ ಬಂದದ್ದು, ರೂಪಾಂತರ ಹೊಂದಿದ ಅನೇಕ ಸಂಸ್ಕೃತ ಶಬ್ದಗಳನ್ನೂ ಉಪಯೋಗಿಸಿಕೊಂಡಿದಾರೆ. ಅಲ್ಲಿನ ವ್ಯವಹಾರ ಧರ್ಮ ಮತ್ತು ದಂಡನೀತಿ ಪ್ರಾಚೀನ ಭಾರತದ ಶಾಸನಕರ್ತನಾದ ಮನುವಿನ ಧರ್ಮಶಾಸ್ತ್ರವನ್ನನುಸರಿಸಿದೆ. ಇಂದಿನ ಕಾಂಬೋಡಿಯಾದ ಅದೇ ಧರ್ಮ ಶಾಸನವನ್ನು ಬೌದ್ಧ ಮತದ ಪ್ರಭಾವದಿಂದ, ಆದ ಕೆಲವು ವ್ಯತ್ಯಾಸಗಳೊಂದಿಗೆ ಶಾಸನವನ್ನಾಗಿ ವಿಧಾಯಕ ಮಾಡಲಾಗಿದೆ.
ಆದರೆ ಭಾರತೀಯ ವರ್ಚಸ್ಸು ಎಲ್ಲಕ್ಕಿಂತಲೂ ಹೆಚ್ಚಾಗಿ ಎದ್ದು ಕಾಣುವುದು. ಈ ಭಾರತೀಯ ವಲಸೆ ರಾಷ್ಟ್ರಗಳಲ್ಲಿನ ಭವ್ಯ ಸುಂದರ ಕಲಾಕೃತಿಯಲ್ಲಿ ಮತ್ತು ಶಿಲ್ಪ ಕಲೆಯಲ್ಲಿ. ಮೂಲ ಕಲಾದೃಷ್ಟಿ ಮಾರ್ಪಾಟಾಗಿ, ತಾದಾತ್ಮ ಹೊಂದಿ, ಪ್ರಾದೇಶಿಕ ಸ್ಫೂರ್ತಿಯೊಂದಿಗೆ ಸಾಮರಸ್ಯ ಪಡೆಯಿತು. ಈ ಸಮರಸ ಕಲಾಕಲ್ಪನೆಯಿಂದ ಆ೦ಗ್ ಕೋರ್ ಮತ್ತು ಬೋರೋಬುದೂರ್ ಶಿಲಾಸ್ಮಾರಕಗಳು ಮತ್ತು ಭವ್ಯ ದೇವಾಲಯಗಳು ಹುಟ್ಟಿದವು. ಜಾವಾದ ಬೋರೋಬುದೂರಿನಲ್ಲಿ ಬುದ್ಧ ಚರಿತ್ರೆ ಯನ್ನೆಲ್ಲ ಶಿಲೆಯಲ್ಲಿ ಕೆತ್ತಲಾಗಿದೆ. ಉಳಿದ ಸ್ಥಳಗಳಲ್ಲಿ ವಿಷ್ಣು ಪುರಾಣ, ರಾಮಾಯಣ ಮತ್ತು ಕೃಷ್ಣ ಚರಿತೆಯ ಕಥೆಗಳನ್ನು ಕೆತ್ತಲಾಗಿದೆ. ಆ೦ಗ್ ಕೋರ್ ವಿಷಯವಾಗಿ ಆಸ್ಪರ್ಟ್ ಸಿಟೈಲ್ “ಆ೦ಗ್ ಕೋರ್ ಈಗಲೂ ಪ್ರಪಂಚದ ಮುಖ್ಯ ವೈಚಿತ್ರವಾಗಿದೆ. ಮಾನವನ ಕಲ್ಪನಾಶಕ್ತಿಯು ಶಿಲ್ಪ ಕಲೆಯಲ್ಲಿ ಎಷ್ಟು ಔನ್ನತ್ಯವನ್ನು ಮುಟ್ಟ ಬಹುದೋ ಅಷ್ಟು ಎತ್ತರವನ್ನೂ ಇಲ್ಲಿ ಮುಟ್ಟಿದೆ ; ಚೀನಾ ಕಲೆಗಿಂತ ಅತ್ಯಂತ ಗಂಭೀರವೂ, ಸುಂದರವೂ, ಭಾವೋದ್ದಿಪಕವೂ ಇದೆ ” ಎಂದಿದ್ದಾನೆ. “ ಸುಮಾರು ಆರು ಶತಮಾನ ಗಳ ಕಾಲ ಅವಿಚ್ಛಿನ್ನ ವಾಗಿ ಸ್ವಚ್ಛೆಯಿಂದ ವಿಹರಿಸಿ, ಕೊನೆಯಲ್ಲಿ ಹೆಸರು ಕೇಳದಂತ ಪೂರ್ಣ ನಿರ್ನಾಮವಾದ ಒಂದು ನಾಗರಿಕತೆಯ ಅವಶೇಷಗಳು ” ಎಂದು ಹೇಳಿದ್ದಾನೆ. '
ಆಂಗ್ಕೋರ್‌ವತ್‌ ದೇವಸ್ಥಾನದ ಹೊರವಳಯದ ವಿಶಾಲ ಪ್ರದೇಶದಲ್ಲಿ ಕೃತಕ ಮಹಾ ಸರೋವರಗಳೂ ಮತ್ತು ಕೊಳಗಳೂ, ನೀರಿನ ನಾಲೆಗಳೂ, ಅವುಗಳ ಮೇಲೆ ಸೇತುವೆಗಳೂ ಮತ್ತು ಒಂದು ದೊಡ್ಡ ಹೆಬ್ಬಾಗಿಲೂ ಇವೆ. “ ಈ ಹೆಬ್ಬಾಗಿಲಿನ ಮೇಲೆ ಒಂದು ಸುಂದರ ಹಸನ್ಮುಖಿಯಾದ ಶಿಲಾ ಶಿರಸ್ಸು ಇದೆ. ಆದರೆ ದೇವತೆಯ ಶಕ್ತಿ ಮತ್ತು ಸೌಂದರವನ್ನು ಅದಕ್ಕೆ ಕಲ್ಪಿಸಿದ್ದರೂ ಅದು ಗೂಢ ಭಾವನೆಯ ಕಾಂಬೋಡಿಯದ ಮುಖ”, ಅದರ ವಿಚಿತ್ರ ಚಿತ್ತಾಕರ್ಷಕ ಮತ್ತು ಚಿತ್ರ ವೇಧಕ ನಗು ಆಂಗ್ಕೋರ್ ನಗು-ಉಳ್ಳ ಈ ಮುಖವು ಪದೇ ಪದೇ ಎಲ್ಲೆಲ್ಲೂ ಕಾಣು ತದೆ. ಈ ಹೆಬ್ಬಾಗಿಲ ಮೂಲಕ ದೇವಾಲಯಕ್ಕೆ ಹೋಗಬೇಕು. ” ಪಕ್ಕದ ಬೇಯಾನ್ ದೇವಾಲಯ ಆಂಗ್ಕೋರ್‌ವತ್‌ಗಿಂತ ಅತಿ ಸುಂದರವಿದೆ. ಪ್ರಪಂಚದಲ್ಲೆಲ್ಲ ಕಲ್ಪನಾ ಶಕ್ತಿಯಲ್ಲಿ, ಸೌಂದರದಲ್ಲಿ ಇದನ್ನು ಮೀರಿಸುವುದು ಮತ್ತೊಂದಿಲ್ಲ. ಏಕೆಂದರೆ ಮೂಲಕಲ್ಪನೆಯಲ್ಲಿ ಅದು ಬೇರೊಂದು ಪ್ರಪಂಚದ್ದು, ಬೇರೊಂದು ಗ್ರಹದ ನಗರ ದೇವಾಲಯದಂತೆ; ಒಂದು ಮಹಾ ಕಾವ್ಯದ ಶ್ಲೋಕಗಳಲ್ಲಿ ಅಡಗಿರುವ ಅವ್ಯಕ್ತ ಸೌಂದಯ್ಯದಿಂದ ಕೂಡಿದೆ.”
ಆಂಗ್ಕೋರ್ ನಿರ್ಮಾಣಕ್ಕೆ ಸ್ಫೂರ್ತಿ ಬಂದದ್ದು ಭಾರತದಿಂದ ; ಆದರೆ ಅದನ್ನು ಸಾಧಿಸಿದ್ದು ಖೇರ್ ಜನರ ಅಂತಃಸ್ಫೂರ್ತಿ ಅಥವ ಎರಡೂ ಒಟ್ಟುಗೂಡಿ ಈ ಅದ್ಭುತ ಕಲಾಕೃತಿಯನ್ನು ಸೃಷ್ಟಿಸಿ ದವು. ಈ ಭವ್ಯ ದೇವಾಲಯವನ್ನು ಕಟ್ಟಿಸಿದ ಕಾಂಭೋಜರಾಜ ಪೂರ್ಣ ಭಾರತೀಯ ಹೆಸರಿನ ಏಳನೆಯ ಜಯವರ್ಮ, ಡಾ||ಕ್ಯಾರಿಚ್ ವೇಲ್ಸ್ “ ಭಾರತೀಯರ ಮಾರ್ಗದರ್ಶಿತ್ವವು ಹೋದ ಮೇಲೆ ಭಾರತ ಸ್ಫೂರ್ತಿಯು ಮರೆತು ಹೋಗಲಿಲ್ಲ. ಆ ಸ್ಫೂರ್ತಿಯಿಂದ ಭವ್ಯವೂ ನೂತನವೂ ಆದ ಭಾವನೆಗಳಿಂದ ಅದ್ಭುತ ಜೀವಕಳೆಯುಳ್ಳ ಹೊಸ ಕಲಾಕೃತಿಯನ್ನು ರಚಿಸಲು ಸ್ಕೇರ್‌ ಜನರ ಆತ್ಮಶಕ್ತಿಗೆ ಒಂದು ಅವಕಾಶ ದೊರೆಯಿತು. ಈ ಹೊಸ ಕೃತಿಯನ್ನು ಕೇವಲ ಭಾರತೀಯ ಸನ್ನಿವೇಶಗಳಿಂದ ರೂಪುಗೊಂಡ ಕೃತಿಗಳಿಗೆ ಹೋಲಿಸಲು ಸಾಧ್ಯವಿರಲಿಲ್ಲ; ಅವುಗಳಿಂದ ತೀರ ಭಿನ್ನವಿತ್ತು. ಬೋರ್ ಸಂಸ್ಕೃತಿಗೆ ಭಾರತೀಯ ಸ್ಫೂರ್ತಿಯೇ ಮೂಲ ಎಂಬುದು ನಿಜ. ಅದಿಲ್ಲದೆ ಸ್ಮರ್ ಜನರು ಪ್ರಾಯಶಃ ಮಧ್ಯೆ ಅಮರಿಕದ ಮಾಯಾ ಜನರ ಅನಾಗರಿಕ ವೈಭವಕ್ಕಿಂತ ಹೆಚ್ಚು ಏನನ್ನೂ ಸಾಧಿಸುತ್ತಿರಲಿಲ್ಲ. ಆದರೆ ಆ ಸ್ಫೂರ್ತಿಗೆ ವಿಶಾಲ ಭಾರತದ ಇತರ ಕಡೆಗಳಿಗಿಂತ ಇಲ್ಲಿ ಒಳ್ಳೆಯ ಕ್ಷೇತ್ರ ದೊರೆಯಿತು.