ಪುಟ:ಭಾರತ ದರ್ಶನ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೨

ಭಾರತ ವರ್ತನ


ಇದನ್ನು ನೋಡಿದರೆ ಭಾರತದಲ್ಲಿ ಮನಸ್ಸಿನ ಮತ್ತು ಕ್ಷೇತ್ರದ ಅಧಿಕ ಶ್ರಮದ ಆಯಾಸದಿಂದ ಮತ್ತು ಹೊಸ ಭಾವನೆಗಳ ಚಲನ ವಲನಗಳ ಪೌಷ್ಟಿಕ ಆಹಾರದ ಅಭಾವದಿಂದ ಈ ಮೂಲ ಸ್ಫೂರ್ತಿಯು ಶುಷ್ಕವಾಗಿರಬೇಕೆಂದು ತೋರುತ್ತದೆ. ಎಲ್ಲಿಯವರೆಗೆ ಭಾರತದ ಮನಸ್ಸು ಪ್ರಪಂಚಕ್ಕೆ ತೆರೆದಿತ್ತೊ, ತನ್ನ ಜ್ಞಾನ ಸಂಪತ್ತನ್ನು ಇತರರಿಗೆ ಕೊಟ್ಟು, ತನ್ನಲ್ಲಿಲ್ಲದುದನ್ನು ಇತರರಿಂದ ತೆಗೆದು ಕೊಳ್ಳಲು ಸಿದ್ದವಿತ್ತೋ ಅಲ್ಲಿಯವರೆಗೆ ಭಾರತದಲ್ಲಿ ಒಂದು ನವ್ಯತ, ಬಲ ಮತ್ತು ಜೀವಶಕ್ತಿ ಇತ್ತು. ಆದರೆ ಆತ್ಮಸಂರಕ್ಷಣೆಗೆಂದು, ಪರಕೀಯರ ಪ್ರಭಾವದಿಂದ ಕಲುಷಿತವಾಗಬಾರದೆಂದು ತನ್ನ ಅಂಗಾಂಗಗಳನ್ನು ತನ್ನೊಳಗೆ ತಾನೆ ಎಳೆದುಕೊಂಡು ಸಂಕುಚಿತವಾಯಿತೊ ಅಂದಿನಿಂದ ಆ ಸ್ಫೂರ್ತಿಯೂ ಹೋಯಿತು, ಅದರ ಜೀವನ ನಿರ್ಜಿವ ಗತವೈಭವವನ್ನು ನೆಚ್ಚಿದ ಶುಷ್ಕ ಅರ್ಥವಿಲ್ಲದ ಶಿಷ್ಟಾಚಾರದ ಜೀವನವಾಯಿತು. ಸೌಂದರ್ಯ ಸೃಷ್ಟಿಯ ಕಲೆಯನ್ನು ಕಳೆದುಕೊಂಡು ಭಾರತೀ ಯರು ಇದ್ದ ಸೌಂದಯ್ಯವನ್ನೂ ಕಾಣಬಾರದ ಕುರುಡರಾದರು.
ಜಾವಾ, ಆಂಗ್ಕೋರ್ ಮತ್ತು ವಿಶಾಲ ಭಾರತದ ಇತರ ಕಡೆಗಳಲ್ಲಿ ಭೂಗರ್ಭಶೋಧನೆ ನಡೆಸಿ ಸಂಶೋಧನೆ ಮಾಡಿದವರು ಯೂರೋಪಿಯನ್ ವಿದ್ವಾಂಸರು ಮತ್ತು ಪ್ರಾಕ್ತನ ವಿಮರ್ಶಕರು ಅದ ರಲ್ಲೂ ಮುಖ್ಯವಾಗಿ ಫ್ರೆಂಚ್ ಮತ್ತು ಡಚ್ ವಿದ್ವಾಂಸರು, ಪ್ರಾಯಶಃ ಇನ್ನೂ ಅನೇಕ ಮಹಾ ನಗರಗಳು, ಸ್ಮಾರಕಗಳು ಸಂಶೋಧನೆಯನ್ನು ಕಾಯುತ್ತ ಭೂಗತವಾಗಿರಬೇಕು. ಈ ಮಧ್ಯೆ ಮಲಯ ಪನ್ಯಾಯ ದ್ವೀಪದಲ್ಲಿ ಪ್ರಾಚೀನ ಅವಶೇಷಗಳಿದ್ದ ಮುಖ್ಯ ಸ್ಥಳಗಳು ಯುದ್ಧದಲ್ಲಿ ರಸ್ತೆಗಳನ್ನು ಮಾಡಲು ಮದ್ದುಗುಂಡಗಳಿಂದ ಹಾಳಾದಂತ ವರದಿಯಾಗಿದೆ. ಅದರ ಜೊತೆಗೆ ಯುದ್ಧದಿಂದ ಇನ್ನೂ ಸ್ವಲ್ಪ ನಷ್ಟವಾಗುತ್ತದೆ,
ಕೆಲವು ದಿನಗಳ ಹಿಂದೆ ರವೀಂದ್ರನಾಥ ಠಾಕೂರರ ಶಾಂತಿನಿಕೇತನಕ್ಕೆ ಓದಲು ಬಂದಿದ್ದು ಹಿಂದಿ ರುಗಲಿದ್ದ ತಾಯರ್‌ದೇಶದ ವಿದ್ಯಾರ್ಥಿಯೊಬ್ಬ ನನಗೆ ಒಂದು ಕಾಗದ ಬರೆದಿದ್ದ. “ ಈ ಪ್ರಸಿದ್ದ ಪ್ರಾಚೀನ ಆರ್ಯಾವರ್ತಕ್ಕೆ ಬರಲು ನನಗೆ ಸಾಧ್ಯವಾದದ್ದು ನನ್ನ ದೊಂದು ಪುಣ್ಯ ವಿಶೇಷ. ಯಾವ ಮಹಾ ಮಾತೃಶ್ರೀಯ ಮಡಿಲಲ್ಲಿ ನನ್ನ ತಾಯ್ಯಾ ಡು ಸುಖವಾಗಿ ಹೂವಿನಂತೆ ಅರಳಿ, ಸಂಸ್ಕೃತಿ ಮತ್ತು ಧರ್ಮದ ಔನ್ನತ್ಯವನ್ನು ಸಾಧಿಸಿ ಸೌಂದಯ್ಯವನ್ನು ಪ್ರೇಮದಿಂದ ಅನುಭವಿಸಿ, ಆನಂದ ಪಡುವ ಶಕ್ತಿಯನ್ನು ಪಡೆಯಿತೋ ಆ ಮಹಾಮಾತೃಶ್ರೀ ಭಾರತಮಾತೆಯ ಅಡಿದಾವರೆಗಳಲ್ಲಿ ನನ್ನ ಅಲ್ಪ ಕಾಣಿಕೆಯನ್ನು ಅರ್ಪಿಸಲು ಅವಕಾಶ ದೊರೆತದ್ದು ನನ್ನ ಭಾಗ್ಯ ವಿಶೇಷ” ಎಂದು ಬರೆದಿದ್ದಾನೆ. ಎಲ್ಲರಲ್ಲೂ ಇದೇ ಭಾವನೆ ಇದೆ ಎಂದಲ್ಲ. ಆದರೂ ಆನ್ನೇಯ ಏಷ್ಯ ಜನರಲ್ಲಿ ಇತರ ಅನೇಕ ಪ್ರಭಾವ ಗಳಿಗೆ ಒಳಗಾಗಿದ್ದರೂ ಅವರಲ್ಲಿ ಭಾರತದ ಮೇಲೆ ಇಂತಹ ಒಂದು ಅಸ್ಪಷ್ಟ ಗೌರವ ಭಾವನೆಯು ಇನ್ನೂ ಇದೆ. ಎಲ್ಲ ಕಡೆಯಲ್ಲೂ ಸಂಕುಚಿತ ರಾಷ್ಟ್ರೀಯ ಭಾವನೆಯು ಉಗ್ರವಾಗಿ ಬೆಳೆದು ಇದೆ. ಆತ್ಮರಕ್ಷಣೋಪಾಯದಲ್ಲಿ ಆಸಕ್ತಿ, ಇತರರಲ್ಲಿ ಸಂದೇಹ, ಸಂಶಯ, ಯುರೋಪಿಯನ್ ರಾಜ್ಯಗಳ ಅಧಿ ಕಾರದ ಭಯ ಮತ್ತು ವೈರ; ಆದರೆ ಯೂರೋಪ್ ಅಮೆರಿಕಗಳನ್ನು ಅನುಕರಿಸುವ ಆಶೆ ; ಭಾರತ ದಾಸ್ಯದಲ್ಲಿರುವುದರಿಂದ ಭಾರತೀಯರೆಂದರೆ ತಾತ್ಸಾರ ಮನೋಭಾವ ; ಆದರೂ ಇಷ್ಟೆಲ್ಲ ಪ್ರಬಲ ವಿರೋಧವಿದ್ದರೂ ಭಾರತವೆಂದರೆ ಒಂದು ಗೌರವ ಮತ್ತು ಸ್ನೇಹದ ಮನೋಭಾವವಿದೆ ; ಹಳೆಯ ಸ್ಮರಣೆಗಳು ಅಳಿಸಿಲ್ಲ ; ತಮ್ಮನ್ನೆಲ್ಲ ಭಾರತವು ತಾಯಿಯೋಪಾದಿಯಲ್ಲಿ ಕಾಪಾಡಿದ ಕಾಲ ಒಂದಿತ್ತು, ಅದರ ಆತ್ಮಶ್ರೀಯಿಂದ ಅಮೃತಧಾರೆಯನ್ನೆರೆದು ತಮ್ಮನ್ನು ಪೋಷಿಸಿ ಪುಷ್ಟರನ್ನಾಗಿ ಬಲಶಾಲಿಗಳ ನ್ನಾಗಿ ಮಾಡಿದ ಕಾಲ ಒಂದಿತ್ತು ಎಂದು ಮರೆತಿಲ್ಲ. ಗ್ರೀಸ್‌ನಿಂದ ಭೂಮಧ್ಯ ಸಮುದ್ರ ಮತ್ತು ಪಶ್ಚಿಮ ಏಷ್ಯದ ರಾಜ್ಯಗಳಿಗೆ ಹೆಲೆನಿಕ್ ಸಂಸ್ಕೃತಿ ಹರಡಿದಂತೆ ಭಾರತ ಸಂಸ್ಕೃತಿಯ ಪ್ರಭಾವವೂ ಅನೇಕ ದೇಶಗಳಿಗೆ ಹರಡಿ ಶಾಶ್ವತವಾದ ಛಾಯೆಯನ್ನು ಬೀರಿತು.
"ಪರ್ಷಿಯಾದಿಂದ ಚೀನಾ ಸಮುದ್ರದವರೆಗೆ, ಹಿಮ ಆಚ್ಛಾದಿತದ ಸೈಬೀರಿಯಾ ದೇಶದಿಂದ ಜಾವಾ, ಬೋರಿಯೊ ದ್ವೀಪಗಳಿಗೆ, ಓಷಿಯೇನಿಯದಿಂದ ಸೊಕೋಟ್ರ ವರೆಗೆ ಭಾರತವು ತನ್ನ