ಪುಟ:ಭಾರತ ದರ್ಶನ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೮೩

ತತ್ತ್ವಗಳನ್ನು, ಇತಿಹಾಸ ಕಥೆಗಳನ್ನು ಸಂಸ್ಕೃತಿಯನ್ನು ಪಸರಿಸಿದೆ. ಅನೇಕ ಶತಮಾನ ಪರಂಪರೆ ಗಳ ಕಾಲದಲ್ಲಿ ಮಾನವ ಕುಲದ ಕಾಲುಭಾಗದ ಜನರ ಮೇಲೆ ತನ್ನ ಶಾಶ್ವತ ಮುದ್ರೆಯನ್ನು ಒತ್ತಿದೆ. ಅನೇಕ ಕಾಲ ನಮ್ಮ ಅಜ್ಞಾನದಿಂದ ಪ್ರಪಂಚದ ಇತಿಹಾಸದಲ್ಲಿ ನಾವು ನಿರಾಕರಿಸಿದ ಸ್ಥಾನವನ್ನು ಪುನಃ ಪಡೆಯಲು ಭಾರತಕ್ಕೆ ಸಂಪೂರ್ಣ ಅಧಿಕಾರವಿದೆ. ಮಾನವ ವ್ಯಕ್ತಿತ್ವಕ್ಕೊಂದು ರೂಪು ಕೊಟ್ಟು ಸಮದೃಷ್ಟಿಯನ್ನು ಕೊಟ್ಟ ಮಹಾಜನಾಂಗಗಳಲ್ಲಿ ತನ್ನ ಸ್ಥಾನವನ್ನು ತಾನು ಪಡೆಯಲು ಭಾರತಕ್ಕೆ ಅಧಿಕಾರವಿದೆ” ಎಂದು ಸಿಲ್ವೆಸ್ಲೆವಿ ಹೇಳಿದ್ದಾನೆ.

೧೮. ಪ್ರಾಚೀನ ಭಾರತ ಕಲೆ


ಭಾರತೀಯ ಸಂಸ್ಕೃತಿ ಮತ್ತು ಕಲೆಯು ಹೊರ ದೇಶಗಳಲ್ಲಿ ಅದ್ಭುತವಾಗಿ ಪಸರಿಸಿದ್ದರಿಂದ ಈ ಕಲೆಯ ಕೆಲವು ಅತ್ಯುತ್ತಮ ಕೃತಿಗಳು ಭಾರತದ ಹೊರಗೆ ಇವೆ. ನಮ್ಮ ಅನೇಕ ಪುರಾತನ ಸ್ಮಾರಕಗಳು ಮತ್ತು ಶಿಲ್ಪ ಕಲಾಕೃತಿಗಳು, ಅದರಲ್ಲೂ ಮುಖ್ಯವಾಗಿ ಉತ್ತರ ಹಿಂದೂಸ್ಥಾನದಲ್ಲಿ ಕಾಲ ಗತಿಯಿಂದ ನಾಶವಾಗಿ ಹೋಗಿರುವುದು ಒಂದು ದುರದೃಷ್ಟ. “ ಭಾರತೀಯ ಕಲೆಯನ್ನು ಭಾರತದಲ್ಲಿ ಮಾತ್ರ ನೋಡಿದರೆ ಅದರ ಅರ್ಧ ಕತೆಯನ್ನು ತಿಳಿದಂತೆ ” ಎಂದು ಸರ್ ಜಾನ್ ಮಾರ್ಷಲ್ ಹೇಳು ತ್ತಾರೆ. ಅದರ ಪೂರ್ಣ ಚಿತ್ರವನ್ನು ಗ್ರಹಿಸಬೇಕಾದರೆ ಬೌದ್ಧ ಮತದ ಹಿಂದೆಯೇ ಮಧ್ಯ ಏಷ್ಯ, ಚೀನಾ, ಜಪಾನ್ ರಾಜ್ಯಗಳಿಗೆ ಹೋಗಬೇಕು. ಅದು ತಿಬೆಟ್, ಬ್ರಹ್ಮದೇಶ ಮತ್ತು ಸೈಯಾಮ್ ಗಳಿಗೆ ಹರಡಿದಾಗ ಹೊಸರೂಪ ತಾಳಿ ಹೊಸ ಸೌಂದರ್ಯದಿಂದ ವಿಕಾಸಗೊಂಡುದನ್ನು ನೋಡ ಬೇಕು. ಕಾಂಬೋಡಿಯ ಮತ್ತು ಜಾವಾಗಳಲ್ಲಿ ಅದರ ಹೊಸ ಸೃಷ್ಟಿಯ ಅಸದೃಶ ಸೊಬಗನ್ನು ಎವೆಯಿಕ್ಕದೆ ಮುಗ್ಗರಾಗಿ ನೋಡಬೇಕು. ಈ ಪ್ರತಿಯೊಂದು ದೇಶದಲ್ಲಿ ಭಾರತೀಯ ' ಕಲೆಗೊಂದ ಹೊಸ ಜೀವಕಳೆ ಬಂದಿದೆ, ಹೊಸ ಪ್ರಾದೇಶಿಕ ಸನ್ನಿವೇಶ ದೊರೆತಿದೆ ಮತ್ತು ಅವೆರಡರ ಪ್ರಭಾವಕ್ಕೊಳ ಗಾಗಿ ತಾನೇ ಬೇರೊಂದು ಉಡುಗೆಯನ್ನು ತೊಟ್ಟಿದೆ.
ಭಾರತೀಯ ಕಲೆಗೂ ಭಾರತೀಯ ಧರ್ಮ ಮತ್ತು ತತ್ತ್ವ ಶಾಸ್ತ್ರಕ್ಕೂ ನಿಕಟ ಬಾಂಧವ್ಯವಿರು ವುದರಿಂದ ಭಾರತೀಯ ಮನಸ್ಸನ್ನು ಸೆಳೆದಿದ್ದ ಭಾರತೀಯರ ಆದರ್ಶಗಳ ಪರಿಚಯವಿಲ್ಲದೆ ಭಾರ ತೀಯ ಕಲೆಯ ಸೊಬಗನ್ನು ಆಸ್ವಾದಿಸುವುದು ಕಷ್ಟ. ಸಂಗೀತದಂತೆ ಕಲೆಯಲ್ಲಿ ಸಹ ಪೌರ್ವಾತ್ಯ ಭಾವನೆಗಳಿಗೂ ಪಾಶ್ಚಿಮಾತ್ಯ ಭಾವನೆಗಳಿಗೂ ಅಜಗಜಾಂತರವಿದೆ. ಪ್ರಾಯಶಃ ಪುನರುಜ್ಜಿವನ ಕಾಲ ಮತ್ತು ಅಲ್ಲಿಂದೀಚಿನ ಕಾಲದಿಂದ ಸ್ಫೂರ್ತಿ ಪಡೆದ ಆಧುನಿಕ ಯೂರೋಪಿಯನ್ ಕಲಾವಿದರಿ ಗಿ೦ತ ಯೂರೋಪಿನ ಮಧ್ಯ ಯುಗದ ಕಲಾವಿದರಿಗೆ ಶಿಲ್ಪಶಾಸ್ತ್ರಜ್ಞರಿಗೆ ಈ ಕಲೆಯು ಅರ್ಥವಾಗುತ್ತಿ ದ್ಧಿ ತಂದು ತೋರುತ್ತದೆ. ಯೂರೋಪಿನ ಮಹಾ ಕ್ರೈಸ್ತ ದೇವಾಲಯಗಳನ್ನು ಕಟ್ಟಿದ ಶಿಲ್ಪ ಕೋವಿ ದರಿಗೆ ಪ್ರಾಯಶಃ ಸ್ಫೂರ್ತಿಕೊಟ್ಟ ಧಾರ್ಮಿಕ ದೃಷ್ಟಿ ಯಂತೆ ಭಾರತೀಯ ಕಲೆಯಲ್ಲಿ ಸಹ ಒಂದು ಧಾರ್ಮಿಕ ನಿಷ್ಠೆ, ಪರಲೋಕಸಾಧನೆಯ ದೃಷ್ಟಿ ಇದೆ. ಸೌಂದರ್ಯವು ಬಾಹ್ಯವಸ್ತುಗಳಿಂದ ಬಂದು ದಲ್ಲ, ಸ್ವಾನುಭವದಿಂದ ಬಂದುದು. ರೂಪದಲ್ಲಿ, ವಸ್ತುವಿನಲ್ಲಿ ಸುಂದರವಿದ್ದರೂ ಅದು ಆತ್ಮಾನುಭವ ದಿಂದ ಹೊರ ಹೊಮ್ಮಿದುದು, ಗ್ರೀಕರು ಸೌಂದರ್ಯಕ್ಕಾಗಿ ಸೌಂದರ್ಯೋಪಾಸಕರಾಗಿದ್ದರು. ಅದರಲ್ಲಿ ಆನಂದವನ್ನೂ, ಸತ್ಯವನ್ನೂ ಕಂಡರು. ಪ್ರಾಚೀನ ಭಾರತೀಯರು ಸಹ ಸೌಂದರ್ಯ ಪ್ರೇಮಿಗಳು. ಆದರೆ ಅವರು ಕೃತಿಯಲ್ಲಿ ಒಂದು ಆಳವಾದ ಅರ್ಥವನ್ನೂ ತಾವು ಕಂಡ ಸತ್ಯದ ಒಳ ನೋಟವನ್ನೂ ಇಡಲು ಪ್ರಯತ್ನಿಸಿದರು. ಅವರ ಗುರಿ ಏನು, ಆ ಭಾವನೆಗಳ ಹಿಂದಿನ ಮನೋ ಧರ್ನುವೇನು ಎಂದು ಅರ್ಥವಾಗದಿದ್ದರೂ ಅವರ ಉತ್ತಮ ಕಲಾಕೃತಿಗಳು ಯಾರನ್ನಾದರೂ ವಿಸ್ಮಯಗೊಳಿಸುತ್ತವೆ. ಸ್ವಲ್ಪ ಕೆಳಮಟ್ಟದ ಕೃತಿಗಳಲ್ಲಿ ಕಲಾವಿದನ ಮನಸ್ಸಿನ ಮನೋಭಾವವು ಅರ್ಥವಾಗದೆ ಆ ಕೃತಿಯ ಸೊಬಗನ್ನು ತಿಳಿಯುವುದಕ್ಕೂ ಕಷ್ಟವಾಗುತ್ತದೆ. ನಮಗೆ ಅರ್ಥವಾಗದ ವಸ್ತುವನ್ನು ನೋಡಿದರೆ ಒಂದು ವಿಧವಾದ ಅಸಮಾಧಾನವೂ ಕೋಪವೂ ಮೂಡುತ್ತದೆ. ಇದರಿಂದ