ಪುಟ:ಭಾರತ ದರ್ಶನ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೪

ಭಾರತ ವರ್ತನ

ಕಲಾವಿದನು ತನ್ನ ಕೆಲಸದ ಅರಿವಿಲ್ಲದೆ ಹತಾಶನಾಗಿದ್ದಾನೆಂಬ ಭಾವನೆ ಬರುತ್ತದೆ. ಒಂದೊಂದು ವೇಳೆ ಜುಗುಪ್ಪೆಯೇ ಹುಟ್ಟುತ್ತದೆ.
ಪಾಶ್ಚಿಮಾತ್ಯನಾಗಲಿ ಪೌರ್ವಾತ್ಯ ವಾಗಲಿ ಕಲೆಯ ವಿಷಯ ನನಗೆ ಏನೂ ತಿಳಿಯದು, ಮತ್ತು ಅದರ ವಿಷಯ ಮಾತನಾಡಲು ನನಗೆ ಯಾವ ಅಧಿಕಾರವೂ ಇಲ್ಲ. ಏನೂ ಅರಿಯದ ಸಾಮಾನ್ಯ ಮನುಷ್ಯನಂತ ನಾನು ಅದನ್ನು ನೋಡುತ್ತೇನೆ. ಯಾವುದೋ ಒಂದು ಚಿತ್ರವನ್ನು, ಶಿಲ್ಪ ಕಲೆ ಯನ್ನು ಅಥವ ಕಟ್ಟಡವನ್ನು ನೋಡಿದರೆ ನನಗೆ ಆನಂದವಾಗಬಹುದು ; ಮನಸ್ಸು ಮೋಹಗೊಂಡು ಮೈ ರೋಮಾಂಚನವಾಗಬಹುದು ; ಅಲ್ಪ ಸಂತೋಷವಾಗಬಹುದು ; ಏನೂ ಆನಂದವಾಗದಿರಬಹುದು; ಸುಮ್ಮನೆ ನೋಡಿಯೂ ನೋಡದಂತೆ ಮುಂದೆ ಹೋಗಬಹುದು ; ಅಥವ ಮನಸ್ಸಿಗೆ ಜಿಗುಪ್ಪೆಯೂ ಹುಟ್ಟಬಹುದು. ಈ ಪರಿಣಾಮಗಳಿಗೆ ಕಾರಣವನ್ನು ನಾನು ತಿಳಿಸಲಾರೆ. ಕಲೆಯ ಯೋಗ್ಯತೆಯ ಅಥವ ಅಯೋಗ್ಯತೆಯ ವಿಷಯದಲ್ಲಿ ಯಾವ ಪ್ರೌಢ ಉಪನ್ಯಾಸವನ್ನೂ ಮಾಡಲಾರೆ. ಸಿಂಹಳ ದ್ವೀಪದಲ್ಲಿ ಅನುರಾಧಾಪುರದ ಬುದ್ದ ವಿಗ್ರಹ ನೋಡಿ ನನ್ನ ಮೈ ರೋಮಾಂಚವಾಯಿತು. ಅದರ ಚಿತ್ರವೊಂದು ಸದಾ ನನ್ನ ಬಳಿ ಅನೇಕ ವರ್ಷಗಳಿಂದ ಇದೆ. ಆದರೆ ದಕ್ಷಿಣ ಭಾರತದ ಕೆಲವು ಮಹಾ ದೇವಾಲಯಗಳು ಕುಸರಿ ಕೆಲಸದ ಸೂಕ್ಷವಿವರಗಳ ಭಾರದಿಂದ ಬಾಗಿ ನನ್ನ ಮನಸ್ಸನ್ನು ಕದಡಿ, ಒಂದು ಬಗೆಯ ಅಸಮಾಧಾನವನ್ನುಂಟು ಮಾಡಿವೆ.
ಗ್ರೀಕ್ ಸಂಪ್ರದಾಯದಲ್ಲಿಯೇ ತಜ್ಞರಾದ ಯುರೋಪಿಯನ್ರು ಭಾರತೀಯ ಕಲೆಯನ್ನು ಮೊದಲು ಗ್ರೀಕ್ ದೃಷ್ಟಿಯಿಂದ ನೋಡಿದರು. ಗಾಂಧಾರ ಮತ್ತು ಗಡಿನಾಡಿನ ಗ್ರೀಕ್-ಬೌದ್ಧ ಕಲೆ ಯನ್ನು ಮಾತ್ರ ಕಲೆಯೆಂದು ಪರಿಗಣಿಸಿದರು. ಉಳಿದುದನ್ನೆಲ್ಲ ಅದರ ಅಪಭ್ರಂಶವೆಂದೂ, ಕೀಳ್ಮೆಟ್ಟ ದ್ದೆಂದೂ ಭಾವಿಸಿದರು. ಕ್ರಮೇಣ ಒಂದು ಹೊಸ ದೃಷ್ಟಿಯು ಬಂದು ಭಾರತೀಯ ಕಲೆಯೇ ಪ್ರತ್ಯೇಕ, ಅದರಲ್ಲೂ ಜೀವಸತ್ವವಿದೆ, ಗ್ರೀಕ್-ಬುದ್ಧ ಕಲೆಗೂ ಆದಕ್ಕೂ ಯಾವ ಸಂಬಂಧವೂ ಇಲ್ಲ, ಗ್ರೀಕ್ ಬುದ್ಧ ಕಲೆಯೇ ಭಾರತೀಯ ಕಲೆಯ ಹರುಕು ಅನುಕರಣ ಎಂಬ ಅಭಿಪ್ರಾಯ ಬಂದಿತು. ಈ ಹೊಸ ಅಭಿಪ್ರಾಯವು ಇಂಗ್ಲೆಂಡ್ ಗಿಂತ ಹೆಚ್ಚಾಗಿ ಯುರೋಪ್ ಖಂಡದ ರಾಷ್ಟ್ರಗಳಿಂದ ಬಂದಿತು. ಭಾರತೀಯ ಕಲೆ ಮತ್ತು ಸಂಸ್ಕೃತ ಸಾಹಿತ್ಯಕ್ಕೆ ಇಂಗ್ಲೆಂಡಿಗಿಂತ ಯೂರೋಪಿನಲ್ಲಿ ಹೆಚ್ಚು ಮನ್ನಣೆ ದೊರೆತಿರು ವುದು ಒಂದು ವಿಶೇಷ. ಇಂಗ್ಲೆಂಡ್ ಮತ್ತು ಇಂಡಿಯಗಳಿಗೆ ದುರದೃಷ್ಟವಶಾತ್ ಇರುವ ರಾಜಕೀಯ ಸಂಬಂಧ ಏನಾದರೂ ಈ ಮನೋಭಾವಕ್ಕೆ ಕಾರಣವೇ ಎಂದು ಎಷ್ಟೋ ಬಾರಿ ಯೋಚಿಸಿದ್ದೇನೆ, ಹಾಗೂ ಇರಬಹುದು, ಅಲ್ಲದೆ ಇತರ ಮೂಲ ವ್ಯತ್ಯಾಸಗಳು ಇದ್ದರೂ ಇರಬಹುದು. ಅನೇಕ ಇಂಗ್ಲಿಷ್ ಕಲಾವಿದರು, ವಿದ್ವಾಂಸರು, ಮತ್ತು ಇತರರು ಭಾರತೀಯರ ದೃಷ್ಟಿಯನ್ನೂ ಚೈತನ್ಯವನ್ನೂ ಅರಿತಿದ್ದಾರೆ ; ಅದರ ಪ್ರಾಚೀನ ಭಂಡಾರದಿಂದ ಅಮೂಲ್ಯ ರತ್ನಗಳನ್ನು ಶೋಧಿಸಿ ತೆಗೆದು ಪ್ರಪಂಚಕ್ಕೆ ತೋರಿಸಲು ಪ್ರಯತ್ನ ಪಟ್ಟಿದ್ದಾರೆ. ಅವರಲ್ಲಿ ಅನೇಕರ ಸ್ನೇಹ ಮತ್ತು ಸೇವೆಗಳಿಗಾಗಿ ಇoಡಿಯ ಚಿರಋಣಿಯಾಗಿದೆ. ಆದರೂ ಇಂಗ್ಲಿಷರಿಗೂ ಭಾರತೀಯರಿಗೂ ಮಧ್ಯೆ ಅಪಾರವಾದ ಅಂತರವಿದೆ. ನಮಗಂತೂ, ಭಾರತೀಯರಿಗೆ ಇದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಇತ್ತೀಚೆಗೆ ನಡೆದ ಅನೇಕ ಘಟನೆಗಳು ನಮ್ಮ ಕರುಳನ್ನು ಕತ್ತರಿಸಿವೆ. ಪ್ರಾಯಶಃ ಬೇರೆ ಕಾರಣಗಳಿಂದ ಅವರಿಗೂ ಆದೇ ಬಗೆಯ ಅಭಿಪ್ರಾಯ ಹುಟ್ಟಿರಬಹುದು ; ಅವರ ಅಭಿಪ್ರಾಯದಲ್ಲಿ, ತಪ್ಪು ತಮ್ಮದಲ್ಲದಿರುವಾಗ ಪ್ರಪಂಚದ ಎದುರಿನಲ್ಲಿ ತಪ್ಪಿಲ್ಲ ತಮ್ಮದೇ ಎಂದು ತೋರಿಸುತ್ತಿರುವುದರಿಂದ ಸಿಟ್ಟಿಗೆದ್ದಿರಬಹುದು, ಆದರೆ ಈ ಭಾವನೆಗೆ ರಾಜಕೀಯಕ್ಕಿಂತಲೂ ಆಳವಾದ ಕಾರಣವಿದೆ ; ತನಗೆ ತಾನಾಗಿ ಆ ಭಾವನೆ ಬರುತ್ತದೆ. ಎಲ್ಲಕ್ಕೂ ಮಿಗಿಲಾಗಿ ಇಂಗ್ಲಿಷ್ ವಿದ್ವಾಂಸರಲ್ಲೇ ಅದು ಹೆಚ್ಚು ಇದೆ. ಭಾರತೀಯನೆಂದರೆ ಅವರಿಗೆ ಒಂದು ವಿಶೇಷ ಪಾಪಕೂಪದ ಪ್ರದರ್ಶನ. ಆತನ ಕೃತಿಗಳೆಲ್ಲಕ್ಕೂ ಅದೇ ಬಣ್ಣ, ಇಂಗ್ಲೆಂಡಿನ ಪ್ರಸಿದ್ಧ ಲೇಖಕನೊಬ್ಬನು-ಇಂಗ್ಲಿಷ್ ಸಂಸ್ಕೃತಿ ಅಥವ ವಿದ್ವತ್ತಿನ ಪ್ರತಿನಿಧಿಯಲ್ಲದಿದ್ದರೂ-ಈಚೆಗೆ ಬರೆದ ಗ್ರಂಥ ಒಂದರಲ್ಲಿ ಭಾರತೀಯ ಎನ್ನುವದಕ್ಕೆಲ್ಲ ಕುತ ಅಸೂಯೆ ಮತ್ತು ತಾತ್ಸಾರ ತುಂಬಿ