ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೮೯

ಹೇಳಿದೆ. ಭಾರತೀಯರಲ್ಲಿ ಕೆಲವು ಉತ್ಸಾಹಿಗಳು, ಎಲ್ಲ ಬಗೆಯ ಜಟಿಲಯಂತ್ರಗಳಿದ್ದವೆಂದು ಊಹಿಸು ತ್ತಾರೆ. ಯಂತ್ರೋಪಕರಣಗಳ ನಿರ್ಮಾಣದಲ್ಲಿ ಮತ್ತು ಉಪಯೋಗದಲ್ಲಿ, ರಸಾಯನಶಾಸ್ತ್ರ ಮತ್ತು ಲೋಹ ವಿಜ್ಞಾನಶಾಸ್ತ್ರದಲ್ಲಿ ಆಗಿನ ಕಾಲದ ಯಾವ ದೇಶಕ್ಕೂ ಭಾರತವು ಹಿಂದೆ ಬಿದ್ದಿರಲಿಲ್ಲವೆಂದು ಮಾತ್ರ ಹೇಳಬಹುದು. ವ್ಯಾಪಾರದಲ್ಲಿ ಒಂದು ವಿಶೇಷ ಸೌಲಭ್ಯವನ್ನು ಕಲ್ಪಿಸಿಕೊಟ್ಟು ಅನೇಕ ಶತಮಾನಗಳ ಕಾಲ ವಿದೇಶದ ಪೇಟೆಗಳ ಹತೋಟಿಯನ್ನೆಲ್ಲ ತನ್ನ ಕೈಲಿಟ್ಟು ಕೊಳ್ಳಲು ಈ ಜ್ಞಾನವೇ ಮುಖ್ಯ ಕಾರಣ.
ಪ್ರಾಯಶಃ ಇನ್ನೊ೦ದು ಅನುಕೂಲತೆಯು ಇತ್ತೆಂದು ತೋರುತ್ತದೆ. ಗ್ರೀಕ್ ಮತ್ತು ಇತರ ನಾಗರಿಕತೆಗಳಿಗೆ ಒಂದು ತೊಡಕಾಗಿ ಅವುಗಳ ಅಭಿವೃದ್ಧಿಗೆ ಅಡ್ಡ ಬಂದ ದಾಸ್ಯ ಪದ್ಧತಿಯು ಭಾರತೀ ಯರಲ್ಲಿ ಇರಲಿಲ್ಲ. ಅನೇಕ ದುಷ್ಟ ಸಂಪ್ರದಾಯಗಳಿದ್ದು ಕ್ರಮೇಣ ಅವು ಹೆಚ್ಚಾಗಿದ್ದರೂ ಜಾತಿ ಪದ್ದತಿಯಲ್ಲಿನ ಕನಿಷ್ಠ ಜಾತಿಯವನ ಜೀವನವು ಸಹ ಗುಲಾಮ ಜೀವನಕ್ಕಿಂತ ಉತ್ತಮವಿತ್ತು. ಪ್ರತಿಯೊಂದು ಜಾತಿಗೂ ಒಂದು ಉದ್ಯೋಗವಿತ್ತು, ಆ ಜಾತಿಯು ತನ್ನ ಕೆಲಸದಲ್ಲಿ ತಾನು ನಿರತ ವಿರುತ್ತಿತ್ತು. ಇದರಿಂದ ಅತಿ ಶ್ರೇಷ್ಠ ಕೌಶಲ್ಯ ದೊರೆತು ಉದ್ಯೋಗ ಮತ್ತು ಕೈಗಾರಿಕೆಯಲ್ಲಿ ವಿಶೇಷ ಪ್ರವೀಣತೆ ದೊರೆಯಿತು.

೨೦. ಪ್ರಾಚೀನ ಭಾರತದಲ್ಲಿ ಗಣಿತಶಾಸ್ತ್ರ


ಮಹಾಮೇಧಾವಿಗಳೂ, ಭಾವನಾಜೀವಿಗಳೂ ಆಗಿದ್ದ ಭಾರತೀಯರು ಸ್ವಭಾವತಃ ಗಣಿತ ಶಾಸ್ತ್ರದಲ್ಲಿ ಉತ್ತಮ ಜ್ಞಾನವನ್ನು ಪಡೆದರು. ಯೂರೋಪಿಗೆ ಗಣಿತವೂ ಮತ್ತು ಬೀಜ ಗಣಿತವೂ ಬಂದದ್ದು ಅರಬೀ ದೇಶದಿಂದ. ಆದರೆ ಅರಬ್ಬಿ ಯರು ಮೊದಲೇ ಅದನ್ನು ಭಾರತದಿಂದ ಕಲಿತಿ ದ್ದರು. ಗಣಿತ ಶಾಸ್ತ್ರದಲ್ಲಿ ಭಾರತೀಯರು ಅದ್ಭುತ ಪರಿಶ್ರಮ ಹೊಂದಿದ್ದರೆಂದು ಈಗ ಸರ್ವವೇದ್ಯವಿದೆ. ಆಧುನಿಕ ಗಣಿತ ಮತ್ತು ಬೀಜಗಣಿತದ ತಳಹದಿಯನ್ನು ಮೊದಲು ಹಾಕಿದ್ದು ಭಾರತದಲ್ಲಿ, ಎಣಿಕೆಯ ಚೌಕಟ್ಟು ರೋಮನ್ ಅಂಕಿಗಳು ಮುಂತಾದ ಅಂಕಿಗಳ ಉಪಯೋಗದಿಂದ ಗಣಿತಶಾಸ್ತ್ರದಲ್ಲಿ ಯಾವ ಪ್ರಗತಿಯೂ ಆಗಲು ಅವಕಾಶವಿರಲಿಲ್ಲ. ಆದರೆ ಭಾರತೀಯರು ದಶ ಅಂಕಗಳನ್ನೂ ಸೊನ್ನೆಯನ್ನೂ ಕಂಡುಹಿಡಿದ ಮೇಲೆ ಮಾನವ ಮನಸ್ಸಿನ ಕಟ್ಟುಗಳೆಲ್ಲ ಕಳಚಿ ಒಂದು ನೂತನ ಮನೋ ಸ್ವಾತಂತ್ರವು ಲಭಿಸಿತು, ಅಂಕಿಗಳ ಗುಣದ ವಿಷಯದಲ್ಲಿ ಒಂದು ಹೊಸ ಬೆಳಕು ಕಂಡಿತು. ಈ ಅ೦ಕಿ ಸಂಕೇತ ಗಳಲ್ಲಿ ಒಂದು ವೈಶಿಷ್ಟವಿತ್ತು. ಉಳಿದ ದೇಶಗಳಲ್ಲಿ ಉಪಯೋಗದಲ್ಲಿದ್ದ ಇತರ ಎಲ್ಲ ಸಂಕೇತಗಳಿ ಗಿಂತ ಇವು ತೀರ ಭಿನ್ನ ವಿದ್ದವು. ಈಗ ಎಲ್ಲೆಲ್ಲೂ ಅದೇ ಅಂಕಿಗಳು ಉಪಯೋಗದಲ್ಲಿವೆ ; ಸರಿ ಎಂದು ಒಪ್ಪಿದ್ದೇವೆ. ಆದರೆ ಅವೇ ಮೊದಲು ಕ್ರಾಂತಿಯ ಕಿಡಿಗಳಾಗಿದ್ದವು. ಇಂಡಿಯಾದಿಂದ ಇವು ಬಾಗ್ದಾದ್ ಮೂಲಕ ಪಾಶ್ಚಾತ್ಯ ದೇಶಗಳಿಗೆ ಹರಡಲು ಅನೇಕ ಶತಮಾನಗಳು ಹಿಡಿದವು.
“ಹತ್ತು ಅಂಕಿಗಳಿಂದ ಎಲ್ಲ ಸಂಖ್ಯೆಗಳನ್ನು ಬರೆಯುವ ಶ್ರೇಷ್ಠ ಮಾರ್ಗವನ್ನು ನಮಗೆ ತೋರಿಸಿ ಕೊಟ್ಟದ್ದು ಇಂಡಿಯ. ಪ್ರತಿಯೊಂದು ಅಂಕಿಗೂ ಅದರದರ ವೈಯಕ್ತಿಕ ಮೌಲ್ಯವಿದೆ ಮತ್ತು ಸ್ಥಾನ ಗೌರವದಿಂದ ಬರುವ ಮೌಲ್ಯವೂ ಇದೆ. ಇದು ಅತಿ ಗಹನವೂ ಮತ್ತು ಮುಖ್ಯವೂ ಆದ ವಿಷಯ ; ಈಗ ಅದು ನಮಗೆ ಬಹು ಸುಲಭಕಂಡು, ಅದರ ಗುಣವನ್ನು ಅಲಕ್ಷ ಮಾಡಿದ್ದೇವೆ, ಆದರೆ ಅದರ ಸೌಲಭ್ಯದಿಂದ, ಯಾವ ಸಂಖ್ಯೆಯನ್ನಾದರೂ ಬರೆಯಲು ಇರುವ ಅನುಕೂಲದಿಂದ, ನಮ್ಮ ಗಣಿತ ಶಾಸ್ತ್ರಕ್ಕೆ ಅತ್ಯುತ್ತಮ ಸಂಶೋಧನೆಗಳಲ್ಲಿ ಪ್ರಥಮ ಸ್ಥಾನ ದೊರೆಯಿತು. ಪ್ರಾಚೀನಕಾಲದ ಮಹಾ ಪುರುಷರಾದ ಆರಿ ಮಿಡೀಸ್ ಮತ್ತು ಅಪೊಲೋನಿಯಸ್‌ರಿಗೆ ಸಹ ಇದು ಹೊಳೆಯಲಿಲ್ಲವೆಂದರೆ ಈ ಮಹಾಸಾಧನೆಯ ಬೆಲೆ ನಮಗೆ ಎಷ್ಟೆಂದು ಗೊತ್ತಾಗುತ್ತದೆ” ಎಂದು ೧೫೦ ವರ್ಷಗಳ ಕೆಳಗೆ ನೆಪೋಲಿರ್ಯ ಕಾಲದಲ್ಲಿ ಲಾಫೇಸ್ ಬರೆದಿದ್ದಾನೆ.
ಇಂಡಿಯದಲ್ಲಿ ಸರಳಗಣಿತ, ಗಣಿತ, ಬೀಜಗಣಿತಗಳ ಮೂಲವು ಬಹಳ ಹಿಂದಿನಕಾಲಕ್ಕೆ ಹೋಗುತ್ತವೆ. ಪ್ರಾಯಶಃ ಯಜ್ಞ ಕುಂಡಗಳನ್ನು ಸಿದ್ದ ಪಡಿಸಲು ಯಾವುದೋ ಒಂದು ಬಗೆಯ