ಪುಟ:ಭಾರತ ದರ್ಶನ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೦

ಭಾರತ ವರ್ತನ

ಸರಳ ಬೀಜಗಣಿತವಿದ್ದಂತೆ ತೋರುತ್ತದೆ. ಒಂದು ಚತುರ್ಭುಜವನ್ನೂ ax=c ಎಂಬ ಬಾಹು ಉಳ್ಳ ಧೀರ್ಘ ಚತುರಸ್ರವನ್ನೂ ಹೇಗೆ ಮಾಡಬಹುದೆಂಬುದನ್ನು ಅನೇಕ ಪ್ರಾಚೀನ ಗ್ರಂಥಗಳಲ್ಲಿ ತಿಳಿಸಿದ್ದಾರೆ. ಈಗಲೂ ಅನೇಕ ಹಿಂದೂ ಶುಭಕಾರಗಳಲ್ಲಿ ರೇಖಾ ಚಿತ್ರಗಳನ್ನು ಉಪಯೋಗಿಸು ವುದು ಸಾಮಾನ್ಯ ಪದ್ಧತಿಯಾಗಿದೆ. ರೇಖಾಗಣಿತವು ಇಂಡಿಯದಲ್ಲಿ ಅಭಿವೃದ್ಧಿ ಹೊಂದಿ ಗ್ರೀಸ್ ಮತ್ತು ಅಲೆಕ್ಸಾಂಡ್ರಿಯದಲ್ಲಿ ಮುಂದುವರಿಯಿತು. ಇ೦ಡಿಯ ತನ್ನ ಮುಂದಾಳುತನವನ್ನು ಕಾಪಾಡಿ ಕೊಂಡು ಬಂದದ್ದು ಗಣಿತ ಮತ್ತು ಬೀಜಗಣಿತದಲ್ಲಿ, ದಶಮಾಂಶ ಸ್ಥಾನ ಮೌಲ್ಯ ಮತ್ತು ಸೊನ್ನೆಯ ಚಿಹ್ನೆ ಯನ್ನು ಕಂಡು ಹಿಡಿದವರ ಹೆಸರುಗಳು ತಿಳಿದಿಲ್ಲ. ಸುಮಾರು ಕ್ರಿಸ್ತಪೂರ್ವ ಎರಡನೆಯ ಶತ “ಮಾನದ ಗ್ರಂಥ ಒಂದರಲ್ಲಿ ಸೊನ್ನೆ ಯನ್ನು ಉಪಯೋಗಿಸಿರುವುದು ಈಗ ನಮಗೆ ಗೊತ್ತಾಗಿದೆ. ಈಗ ತಿಳಿದ ಶಾಸ್ತ್ರೀಯ ಗ್ರಂಥಗಳಲ್ಲಿ ಅದೇ ಮೊಟ್ಟ ಮೊದಲನೆಯದು. ಸ್ಥಾನ ನಿರ್ದೆಶದಿಂದ ಸಂಖ್ಯೆಯ ಬೆಲೆಯನ್ನು ಕಂಡುಹಿಡಿದದ್ದು ಕ್ರಿಸ್ತಶಕೆಯ ಆರಂಭಕಾಲದಲ್ಲಿ ಎಂದು ಊಹಿಸಲಾಗಿದೆ, ಸೊನ್ನೆ ಅಥವ ಶೂನ್ಯಕ್ಕೆ ಮೊದಲು ಅದನ್ನು ಒಂದು ಚುಕ್ಕೆಯಿಂದ ಗುರ್ತಿಸುತ್ತಿದ್ದರು, ಅನಂತರ ಅದು ಒಂದು ಸಣ್ಣ ವರ್ತುಲವಾಯಿತು. ಇತರ ಸಂಖ್ಯೆಗಳಂತೆ ಅದೂ ಒಂದು ಸಂಖ್ಯೆಯಾಯಿತು. ಈ ಸಂಶೋಧನೆಯ ಮುಖ್ಯ ಫಲಿತಾಂಶವನ್ನು, “ಸೊನ್ನೆ ಯ ಗುರ್ತನ್ನು ಕಂಡುಹಿಡಿದುದರ ಪ್ರಾಮುಖ್ಯತೆ ಯನ್ನು ಎಷ್ಟು ಹೊಗಳಿದರೂ ಸಾಲದು. ಒಂದು ಬಯಲು ಶೂನ್ಯಕ್ಕೆ ಒಂದು ಸ್ಥಾನಮಾತ್ರವಲ್ಲದೆ ಹೆಸರು, ರೂಪು, ಸಂಕೇತ ಮತ್ತು ಒಂದು ಶಕ್ತಿಯನ್ನು ಕೊಟ್ಟು ಅದಕ್ಕೆ ಜನ್ಮಕೊಟ್ಟಿದ್ದು ಹಿಂದೂ ಜನಾಂಗದ ಒಂದು ವೈಶಿಷ್ಟ್ಯ, ನಿರ್ವಾಣದಿಂದ ವಿದ್ಯುತ್ ಯಂತ್ರಗಳನ್ನು ಸೃಜಿಸಿದಂತೆ, ಬುದ್ದಿ ಚಾತುರದ ಮತ್ತು ಮೇಧಾಶಕ್ತಿಯ ಸಾರ್ವತ್ರಿಕ ಬೆಳವಣಿಗೆಗೆ ಈ ಒಂದು ಸಂಶೋಧನದಿಂದ ದೊರೆತ ಪುಷ್ಟಿಯು ಬೇರಾವ ಗಣಿತಶಾಸ್ತ್ರ ಸಂಶೋಧನೆಯಿಂದಲೂ ದೊರೆತಿಲ್ಲ” ಎಂದು ಪ್ರೊಫೆಸರ್ ಹಾಲ್ ಸೈಡ್ ಹೇಳಿದ್ದಾನೆ.
ಇನ್ನೊಬ್ಬ ಆಧುನಿಕ ಗಣಿತ ಶಾಸ್ತ್ರಜ್ಞನು ಇದೇ ಐತಿಹಾಸಿಕ ವಿಷಯವನ್ನು ಅದೇ ರೀತಿ ಮುಕ್ತ ಕಂಠದಿಂದ ಹೊಗಳಿರುತ್ತಾನೆ. ಡ್ಯಾಗ್ ತನ್ನ 'ಸಂಖ್ಯೆ' ಎಂಬಗ್ರಂಥದಲ್ಲಿ” ಈ “ಐದು ಸಾವಿರ ವರ್ಷ ಗಳಲ್ಲಿ ಅನೇಕ ನಾಗರಿಕತೆಗಳು ಉದಿಸಿ ಬೆಳಗಿ ಸಾಹಿತ್ಯ, ಕಲೆ, ತತ್ತ್ವಶಾಸ್ತ್ರ ಮತ್ತು ಧರ್ಮಗಳಲ್ಲಿ ತಮ್ಮ ಅಸ್ತಿತ್ವವನ್ನು ಬಿಟ್ಟು ಹೋಗಿವೆ. ಆದರೆ ಮನುಷ್ಯನು ಮೊಟ್ಟ ಮೊದಲು ಆರಂಭಿಸಿದ ಎಣಿಕೆಯ ಕಲೆಯಲ್ಲಿ ಒಟ್ಟು ಸಾಧಿಸಿ ಇರುವುದೇನು ? ಯಾವ ಪ್ರಗತಿಯನ್ನೂ ಸಾಧಿಸಲು ಸಾಧ್ಯವಾಗದ ಒಂದು ಅನಾಗರಿಕ ಅನವ ಸಂಖ್ಯಾಕ್ರಮ. ಸುಲಭ ಲೆಕ್ಕಗಳನ್ನು ಮಾಡುವದಕ್ಕೂ ಒಬ್ಬ ಪ್ರಾಜ್ಞನ ಸಹಾ ಯವನ್ನೇ ಪಡೆದಲ್ಲದೆ ಸಾಧ್ಯವಿಲ್ಲದ ಒಂದು ಲೆಕ್ಕ ಮಾಡುವ ಕ್ರಮ. ಈ ಲೆಕ್ಕ ಪದ್ದತಿಯಲ್ಲಿ ಯಾವ ಒಂದು ಮುಖ್ಯ ವ್ಯತ್ಯಾಸವನ್ನೂ ಮಾಡಲು ಸಾಧ್ಯವಿಲ್ಲದೆ, ಆ ಲಸಕರಣೆಯನ್ನು ಯಾವ ರೀತಿಯಲ್ಲೂ ಉತ್ತಮ ಪಡಿಸಲಾರದೆ ಸಾವಿರಾರು ವರ್ಷಗಳ ಕಾಲ ಅದನ್ನೇ ಮಾನವನು ಉಪಯೋಗಿಸಿದನು. ಅಂಧಕಾರ ಯುಗದ ನಿಧಾನ ಪ್ರಗತಿಯೊಂದಿಗೆ ಹೋಲಿಸಿದರೂ ಗಣಿತಶಾಸ್ತ್ರದ ಈ ಇತಿಹಾಸವು ಕೊಳೆತು ನಾರುವ ತಿಪ್ಪೆಗುಂಡಿಯಂತಿದೆ. ಈ ದೃಷ್ಟಿಯಿಂದ ನೋಡಿದರೆ ನಮ್ಮ ಕ್ರಿಸ್ತ ಯುಗದ ಆರಂಭದಲ್ಲಿ ಸ್ನಾನದ ಬೆಲೆಯನ್ನು ಗೊತ್ತು ಮಾಡಿದ ಒಬ್ಬ ಹಿಂದೂ ಅನಾಮಧೇಯನ ಸಂಶೋಧ ನೆಯು ಪ್ರಪಂಚದ ಪ್ರಮುಖ ಘಟನೆಗಳಲ್ಲಿ ಅತ್ಯಂತ ಮಹತ್ವದ್ದಿದೆ” ಎಂದಿದ್ದಾನೆ.
ಈ ಸಂಶೋಧನೆಯು ಗ್ರೀಸ್ ಗಣಿತ ಶಾಸ್ತ್ರಜ್ಞರಿಗೆ ಹೇಗೆ ಹೊಳೆಯಲಿಲ್ಲವೆಂದು ಡ್ಯಾನಿ ಗ್ ಬಹಳ ಆಶ್ಚರ್ಯ ಪಡುತ್ತಾನೆ. “ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಸಹ ಗುಲಾಮರಿಗೆ ಬಿಟ್ಟು ಕೊಟ್ಟು ಗ್ರೀಕರು ಪ್ರಾಯೋಗಿಕ ವಿಜ್ಞಾನ ಶಾಸ್ತ್ರವನ್ನು ಅಷ್ಟು ತುಚೀಕರಿಸಿ ಇರಬಹುದೆ ? ಇಲ್ಲ ವಾದರೆ ರೇಖಾಗಣಿತವನ್ನು ನಮಗೆ ಕೊಟ್ಟು ವಿಜ್ಞಾನ ಶಾಸ್ತ್ರವನ್ನು ಅಷ್ಟು ಅಭಿವೃದ್ಧಿಗೆ ತಂದ ಜನಾಂಗವು ಬೀಜಗಣಿತದ ಓನಾಮವನ್ನು ಸಹ ಕಂಡು ಹಿಡಿಯದಿರಲು ಕಾರಣವೇನು? ಸಂಖ್ಯೆಗೆ ಸ್ಥಾನಗಳನ್ನು ಕಂಡು ಹಿಡಿದ ಸಮಯದಲ್ಲೇ ಆಧುನಿಕ ಗಣಿತ ಶಾಸ್ತ್ರದ ಮೂಲೆಗಲ್ಲಿನಂತಿರುವ ಬೀಜ