ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಹೊಸ ಸಮಸ್ಯೆಗಳು
೨೦೩

ಚಂಗೀಸ್ ಖಾನನ ವಂಶೀಳನೆಂದು ಹೇಳಿಕೊಳ್ಳುತ್ತಿದ್ದ ತುರ್ಕಿಯ ತೈಮೂರನು ಚಂಗೀಸ್ ಖಾನನ ದಂಡಯಾತ್ರೆಗಳನ್ನು ಅನುಕರಣಮಾಡಲು ಹೊರಟನು. ಅತ್ಯಲ್ಪ ಕಾಲ ಮೆರೆದರೂ ಆತನ ರಾಜಧಾನಿಯಾದ ಸಮರ್‌ಖಂಡ್ ಒಂದು ದೊಡ್ಡ ಸಾಮ್ರಾಜ್ಯದ ಕೇಂದ್ರವಾಯಿತು. ತೈಮೂರ್ ಕಾಲವಾದನಂತರ ಆತನ ವಂಶೀಕರು ದಂಡಯಾತ್ರೆಗಳನ್ನು ಬಿಟ್ಟು ಕಲಾಭಿವೃದ್ಧಿಯಲ್ಲಿ ಆಸಕ್ತರಾಗಿ ಶಾಂತಜೀವನವನ್ನು ನಡೆಸುವುದರಲ್ಲಿ ಉದ್ಯುಕ್ತರಾದರು. ಮಧ್ಯ ಏಷ್ಯದಲ್ಲಿ ತೈಮೂರಿನ ಪುನರುಜ್ಜಿವನವೊಂದು ನಡೆಯಿತು, ತೈಮೂರ್ ವಂಶೀಕನಾದ ಬಾಬರ್ ಹುಟ್ಟಿ ಬೆಳೆದದ್ದು ಈ ಸನ್ನಿವೇಶದಲ್ಲಿ, ಭಾರತದಲ್ಲಿ ಮೊಗಲ ಸಂತತಿಯ ಮೂಲಪುರುಷ ಬಾಬರ್, ಆತನೇ ಮಹಾ ಮೊಗಲರಲ್ಲಿ ಮೊದಲಿಗನು, ೧೫೨೬ರಲ್ಲಿ ದೆಹಲಿಯನ್ನು ಆತನು ಹಿಡಿದನು.

ಹೆಸರು ಇಸ್ಲಾ೦ ಹೆಸರಿನಂತಿದ್ದರೂ, ಅನೇಕರು ಭಾವಿಸಿರುವಂತೆ ಚಂಗೀಸ್ ಖಾನ್ ಮುಸಲ್ಮಾನ ನಲ್ಲ. ಅಂತರಿಕ್ಷ ಪೂಜೆಯನ್ನು ಮಾಡುವ “ಶಾವಾಧರ್ಮ” ಅವನ ಮತವಾಗಿತ್ತು. ಅದೇನೆಂಬುದು ನನಗೆ ಗೊತ್ತಿಲ್ಲ. ಆದರೆ ಆ ಪದವನ್ನು ನೋಡಿದರೆ ಅರಬ್ಬಿಗಳು ಬೌದ್ಧರನ್ನು ಕರೆಯುತ್ತಿದ್ದ ಪದವು ಜ್ಞಾಪಕಕ್ಕೆ ಬರುತ್ತದೆ- “ ಶಮಣ” ಎಂಬುದು ಸಂಸ್ಕೃತ “ಶ್ರವಣ” ದಿಂದ ಬಂದದ್ದು. ಮಂಗೋಲಿಯ ಸಹ ಸೇರಿ ಏಷ್ಯದ ಅನೇಕ ಭಾಗಗಳಲ್ಲಿ ಬೌದ್ಧ ಮತದ ಅಪಭ್ರಂಶಗಳು ಆಚರಣೆಯಲ್ಲಿ ಇದ್ದುವು. ಪ್ರಾಯಶಃ ಚಂಗೀಸ್ ಖಾನ್ ಅವುಗಳಲ್ಲೊ೦ದರ ಹಿನ್ನೆಲೆಯಲ್ಲಿ ಬೆಳೆದಿರಬಹುದು. ಚರಿತ್ರೆಯಲ್ಲಿ ಅತಿ ಶ್ರೇಷ್ಠ ದಂಡನಾಯಕನು ಯಾವುದೇ ಬಗೆಯ ಬೌದ್ದನೆಂಬುದು ಒಂದು ದೊಡ್ಡ ಆಶ್ಚರ್ಯ.

ಮಧ್ಯ ಏಷ್ಯದ ಜನರಲ್ಲಿ ಈಗಲೂ ನಾಲ್ಕು ಜನ ದಂಡನಾಯಕರ ಹೆಸರುಗಳು ಬಳಕೆಯಲ್ಲಿವೆ. ಸಿಕಂದರ್ (ಅಲೆಕ್ಸಾಂಡರ್), ಸುಲ್ತಾನ್ ಮಹಮ್ಮದ್, ಚಂಗೀಸ್ ರ್ಖಾ ಮತ್ತು ತೈಮೂರ್. ಈ ನಾಲ್ವರ ಜೊತೆಗೆ ಇನ್ನೊಂದು ರೀತಿಯಲ್ಲಿ ಪ್ರಸಿದ್ಧನಾದ ಐದನೆಯ ಹೆಸರನ್ನು ಸೇರಿಸಬೇಕು. ಆತನು ಯೋಧನಲ್ಲದಿದ್ದರೂ ಇನ್ನೊಂದು ಬಗೆಯಿಂದ ಆತನೂ ಒಬ್ಬ ವಿಜಯಶಾಲಿ ; ಆತನ ಹೆಸರನ್ನು ಹೇಳಿದರೆ ಅನೇಕ ಕತೆಗಳನ್ನು ಹೇಳುತ್ತಾರೆ. ಆತನೇ ಲೆನಿನ್,

೨. ಅರಬ್ಬಿ ಸಂಸ್ಕೃತಿಯ ವಿಕಾಸ ಮತ್ತು ಭಾರತದ ಸಂಬಂಧ

ಏಷ್ಯ ಆಫ್ರಿಕಗಳಲ್ಲಿ ವಿಶಾಲ ಪ್ರದೇಶವನ್ನೂ ಮತ್ತು ಯೂರೋಪಿನಲ್ಲಿ ಸ್ವಲ್ಪ ಭಾಗವನ್ನೂ ಬಹುಬೇಗ ಅಧೀನಮಾಡಿಕೊಂಡ ಅರಬ್ಬಿ ಜನರು ಇತರ ಮಾರ್ಗಗಳಲ್ಲಿ ಜಯಶಾಲಿಗಳಾಗಲು ಮನಸ್ಸು ಮಾಡಿದರು. ತಮ್ಮ ಸಾಮ್ರಾಜ್ಯವನ್ನು ಭದ್ರಗೊಳಿಸಿದರು. ತಮ್ಮ ದೃಷ್ಟಿಗೆ ಪರಿಚಯವಾದ ಅನೇಕ ಜನಾಂಗಗಳಿಂದ ಅವರ ಜೀವನ ಚರೈ ಯನ್ನು ಅರಿತು ಪ್ರಪಂಚವನ್ನು ತಿಳಿದುಕೊಳ್ಳಲು ಉದ್ಯುಕ್ತರಾದರು. ಎಂಟು ಮತ್ತು ಒಂಭತ್ತನೆಯ ಶತಮಾನದ ಅರಬ್ಬಿ ಜನರ ಜ್ಞಾನದಾಹ, ತರ್ಕ ಬದ್ದ ಮಾನಸಿಕ ಸಾಹಸ, ವಿಜ್ಞಾನವಿಷಯ, ಚರ್ಚಾದೃಷ್ಟಿಗಳು ಅತಿ ವಿಸ್ಮಯವನ್ನು೦ಟುಮಾಡು ಇವೆ. ನಿರ್ದಿಷ್ಟ ಅಭಿಪ್ರಾಯಗಳ ಮತ್ತು ನಂಬಿಕೆಗಳ ಆಧಾರದ ಮೇಲೆ ನಿಂತ ಒಂದು ಧರ್ಮದ ಆರಂಭದಿನಗಳಲ್ಲಿ ಶ್ರದ್ಧೆ ಪ್ರಾಧಾನ್ಯ, ಮತ್ತು ಇತರ ಯಾವ ಭಿನ್ನಾಭಿಪ್ರಾಯಕ್ಕೂ ಪ್ರೋತ್ಸಾಹವಾಗಲಿ, ಮನ್ನಣೆಯಾಗಲಿ ದೊರೆಯುವುದಿಲ್ಲ. ಅರಬ್ಬಿ ಜನರು ಅಷ್ಟು ಮುಂದುವರಿಯಲು ಈ ಶ್ರದ್ದೆ ಯೇ ಮುಖ್ಯ ಕಾರಣ ; ಮತ್ತು ಈ ವಿಜಯ ಪರಂಪರೆಯಿಂದ ಅವರ ಶ್ರದ್ದೆಯೂ ಗಾಢವಾಯಿತು. ಆದರೂ ಅವರು ತಮ್ಮ ಮತ ಮತ್ತು ಆಚಾರದ ಮೇರೆಯನ್ನು ದಾಟ, ನಿರೀಶ್ವರವಾದ ವಿಷಯವನ್ನು ಚರ್ಚೆ ಮಾಡಿದ್ದಾರೆ; ತಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮನೋಸಾಹಸದೆಡೆಗೆ ತಿರುಗಿಸಿದ್ದಾರೆ. ಪ್ರವಾಸಿ ಗರಲ್ಲಿ ಮಹಾಸಾಹಸಿಗಳಾದ ಅರಬ್ಬಿ ಯಾತ್ರಿಕರು ದೂರದೇಶಗಳಿಗೆ ಹೋಗಿ ಇತರರು ಏನುಮಾಡುತ್ತಿ ದಾರೆ, ಏನು ಯೋಚಿಸುತ್ತಾರೆ, ಅವರ ತತ್ವಗಳೇನು, ವಿಜ್ಞಾನಗಳಾವುವು, ಅವರ ಜೀವನ ಪದ್ಧತಿ ಏನು ಎಂಬುದನ್ನು ಕಂಡು ಹಿಡಿದು ತಮ್ಮ ಜ್ಞಾನ ಶ್ರೀಯನ್ನೂ ಪುಷ್ಟಿಗೊಳಿಸಿದ್ದಾರೆ. ಬಾಗ್ದಾದಿಗೆ ವಿದೇಶ ಗಳಿಂದ ಅನೇಕ ವಿದ್ವಾಂಸರನ್ನೂ, ಗ್ರಂಥಗಳನ್ನೂ ಕರೆಸುತ್ತಿದ್ದರು. ಎಂಟನೆಯ ಶತಮಾನದ ಮಧ್ಯಕಾಲದಲ್ಲಿದ್ದ ಖಲೀಫ್ ಆಲ್ ಮನ್ಸೂರ್‌ನು ಒಂದು ಸಂಶೋಧನಾಲಯವನ್ನೂ, ಭಾಷಾಂತರ