ಪುಟ:ಭಾರತ ದರ್ಶನ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೨

ಭಾರತ ದರ್ಶನ

ಹರಿಯುವ ನೀರಿನ ಕಾಲುವೆಗಳೂ ನದಿಗಳೂ ಇದ್ದವು.” ನಗರದ ತುಂಬ ಉದ್ಯಾನವನಗಳಿದ್ದವು. ೧೪೨೦ರಲ್ಲಿ ಬಂದ ಇಟಲಿ ಪ್ರವಾಸಿ ಕನಾದ ನಿಕೊಲೊಕಾಂಚಿಯು ನಗರದ ಸುತ್ತಳತೆ ಅರುವತ್ತು ಮೈಲಿಗಳಿತ್ತು ಎಂದಿದ್ದಾನೆ. ಅವನಿಗೂ ನಂತರ ೧೫೨೨ರಲ್ಲಿ ಪುನರುಜೀವಿತ ಇಟಲಿಯ ಅನೇಕ ನಗರ ಗಳನ್ನು ನೋಡಿದ್ದ ವೈಸ್ ಎಂಬ ಪೋರ್ಚುಗೀಸ್‌ ಪ್ರವಾಸಿಕನು ವಿಜಯನಗರವನ್ನು ನೋಡಿ ರೋಮ್ ನಗರದಷ್ಟು ದೊಡ್ಡದಿದೆ, ನೋಡಲು ಬಹಳ ರಮಣೀಯವಿದೆ. ಅಸಂಖ್ಯಾತ ಸರೋವರಗಳು, ನಾಲೆಗಳು ಮತ್ತು ಹಣ್ಣಿನ ತೋಟಗಳಿಂದ ನಯನಮನೋಹರವೂ ವಿಸ್ಮಯಕಾರಕವೂ ಇದೆ. ಪ್ರಪಂಚದ ಯಾವ ನಗರದಲ್ಲೂ ಇಲ್ಲದ ಉತ್ತಮ ವಸ್ತು ಸಾಮಗ್ರಿ ಇದೆ. ಎಲ್ಲದರಲ್ಲೂ ಸಮೃದ್ಧಿ ಇದೆ. ಅರಮನೆಯ ಕೋಣೆಗಳನ್ನು ದಂತದಿಂದ ಕೆತ್ತಲಾಗಿದೆ. ಮೇಲೆ ದಂತದಲ್ಲಿಯೇ ಗುಲಾಬಿ ಮತ್ತು ಕಮಲದ ಹೂಗಳನ್ನು ಬಿಡಿಸಿದ್ದಾರೆ. ಇಷ್ಟು ಐಶ್ವರವನ್ನೂ, ಸೌಂದರವನ್ನೂ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ರಾಜನಾದ ಕೃಷ್ಣದೇವರಾಯನ ವಿಷಯವಾಗಿ “ಎಲ್ಲರೂ ಭಯಭಕ್ತಿಯಿಂದ ಆತನನ್ನು ಗೌರವಿಸುತ್ತಾರೆ. ಆದರ್ಶ ರಾಜನಾಗಿದ್ದಾನೆ. ಸದಾ ಹಸನ್ಮುಖಿಯೂ, ಸಂತೋಷಭರಿತನೂ ಆಗಿ ದ್ದಾನೆ. ವಿದೇಶೀಯರನ್ನು ಕಂಡರೆ ಗೌರವಿಸುತ್ತಾನೆ. ದಯೆಯಿಂದ ಕಂಡು ಅವರು ಹೇಳುವುದನ್ನು ಸಾವಧಾನವಾಗಿ ಕೇಳುತ್ತಾನೆ” ಎಂದು ಬಣ್ಣಿಸಿದ್ದಾನೆ.

ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯವು ಉನ್ನತಸ್ಥಿತಿಯಲ್ಲಿದ್ದಾಗ ದೆಹಲಿಯ ಸುಲ್ತಾನನು ಇನ್ನೊಬ್ಬ ಹೊಸ ಶತ್ರುವನ್ನು ಎದುರಿಸಬೇಕಾಯಿತು. ಉತ್ತರದ ಪರ್ವತಗಳಿಂದ ಇನ್ನೊಬ್ಬ ದಂಡ ಯಾತ್ರಿಕನು ಬಂದು ದೆಹಲಿಯ ಬಳಿ ಅನೇಕಸಲ ಭಾರತದ ಅದೃಷ್ಟವನ್ನು ನಿಶ್ಚಯಿಸಿದ ಪಾಣಿ ಪತ್ರ ಯುದ್ಧರಂಗದಲ್ಲಿ ಯುದ್ಧ ಮಾಡಿ ಗೆದ್ದು ೧೫೨೬ರಲ್ಲಿ ದೆಹಲಿಯ ಸಿಂಹಾಸನವನ್ನು ಏರಿದನು. ತುರ್ಕೊ ಮಂಗೋಲನೂ, ಮಧ್ಯ ಏಷ್ಯದ ತೈಮೂರ್ ವಂಶಜನಾದ ರಾಜಕುಮಾರನೂ ಆದ ಬಾಬರನೇ ಇವನು. ಭಾರತದಲ್ಲಿ ಮೊಗಲ್ ಸಾಮ್ರಾಜ್ಯವು ಇವನಿಂದಲೇ ಆರಂಭವಾಯಿತು.

ಬಾಬರನ ವಿಜಯಕ್ಕೆ ಕಾರಣ ದೆಹಲಿಯ ಸುಲ್ತಾನರ ದೌರ್ಬಲ್ಯ ಮಾತ್ರವಲ್ಲ ; ಅದುವರೆಗೂ ಇ೦ಡಿಯದಲ್ಲಿ ಬಳಕೆಯಲ್ಲಿಲ್ಲದ ಒಂದು ಹೊಸ ಉತ್ತಮ ರೀತಿಯ ಬಂದೂಕು ಪಡೆಯು ಮುಖ್ಯ ಕಾರಣ. ಈ ಕಾಲದಿಂದ ಯುದ್ಧ ವಿಜ್ಞಾನದ ಬೆಳೆವಣಿಗೆಯಲ್ಲಿ ಇಂಡಿಯ ಹಿಂದೆ ಬೀಳಲಾರಂಭಿಸಿತು. ಈ ವಿಜ್ಞಾನದಲ್ಲಿ ಇಡಿ ಯೂರೋಪುಖಂಡವೇ ಮುಂದುವರಿಯುತ್ತಿರುವಾಗ, ಏಷ್ಯ ಖಂಡವು ಸಂಪೂರ್ಣ ಹಿಂದುಳಿಯಿತು. ಮೊಗಲ್ ಚಕ್ರಾಧಿಪತ್ಯವು ಇಂಡಿಯದಲ್ಲಿ ಎರಡುನೂರು ವರ್ಷಗಳ ಕಾಲ ಬಲ ಯುತವಾಗಿದ್ದರೂ ಹದಿನೇಳನೆಯ ಶತಮಾನದ ನಂತರ ಯೂರೋಪಿರ್ಯ ಸೈನ್ಯಗಳೊಡನೆ ಸರಿಸಮ ನಾಗಿ ನಿಂತು ಕಾದಾಡುವಷ್ಟು ಶಕ್ತಿಯುತವಿರಲಿಲ್ಲ. ಆದರೆ ಸಮುದ್ರ ಮಾರ್ಗಗಳ ಸ್ವಾಮ್ಯವಿಲ್ಲದೆ ಯಾವ ಯೂರೋಪಿರ್ಯ ಸೈನ್ಯವೂ ಇಂಡಿಯಾಕ್ಕೆ ಬರುವಂತಿರಲಿಲ್ಲ. ಈ ಶತಮಾನಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ಮುಖ್ಯ ಶಕ್ತಿ ಎಂದರೆ ಯೂರೋಪಿಯನರ ಸಮುದ್ರ ಬಲ, ಹದಿಮೂರನೆಯ ಶತಮಾನದಲ್ಲಿ ಚೋಳರಾಜ್ಯವು ನಾಶವಾದೊಡನೆ ಇ೦ಡಿಯದ ಸಮುದ್ರಶಕ್ತಿಯೂ ಕುಂದಿತು. ಚಿಕ್ಕ ದಾದ ಪಾಂಡ್ಯ ರಾಜ್ಯಕ್ಕೆ ಸಮುದ್ರ ಬಲವಿದ್ದರೂ ಸಾಕಷ್ಟು ಶಕ್ತಿ ಇರಲಿಲ್ಲ. ಭಾರತೀಯ ವಲಸೆ ರಾಜ್ಯ ಗಳು ಮಾತ್ರ ಹದಿನೈದನೆಯ ಶತಮಾನದಲ್ಲಿ ಅರಬ್ಬಿ ಜನರು ಬಂದು ಸೋಲಿಸುವವರೆಗೂ ಬಲಿಷ್ಠವಾಗಿ ದ್ದವು. ಅರಬ್ಬಿಗಳ ಹಿಂದೆಯೇ ಪೋರ್ಚುಗೀಸರು ಬಂದರು.

೫, ಸಂಯೋಜನೆ ಮತ್ತು ಮಿಶ್ರ ಸಂಸ್ಕೃತಿಯ ಬೆಳೆವಣಿಗೆ : ಸರ್ದಾ : ಕಬೀರ್ :

ಗುರು ನಾನಕ್ : ಅಮಿರ್ ಖುಸ್ರೋ

ಬ್ರಿಟಿಷರು ಇಂಡಿಯಕ್ಕೆ ಬಂದುದನ್ನು ಕ್ರೈಸ್ತರ ಮುತ್ತಿಗೆ ಎಂದೂ, ಬ್ರಿಟಿಷರ ಕಾಲವನ್ನು ಕ್ರೈಸ್ತರ ಕಾಲ ಎಂದೂ ಕರೆದರೆ ಎಷ್ಟು ಅಸಮಂಜಸವೊ ಅದೇ ರೀತಿ ಭಾರತದ ಮುಸ್ಲಿಂರ ದಂಡ ಯಾತ್ರೆಯನ್ನು ಮುಸ್ಲಿಮರ ಕಾಲ ಎನ್ನುವುದೂ ಅಷ್ಟೇ ತಪ್ಪು ಮತ್ತು ಅಸಮಂಜಸ ಇಸ್ಲಾಂ ಧರ್ಮವು