ಪುಟ:ಭಾರತ ದರ್ಶನ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹೊಸ ಸಮಸ್ಯೆಗಳು

೨೧೩

ಇ೦ಡಿಯಕ್ಕೆ ಎಂದೂ ಮುತ್ತಿಗೆ ಹಾಕಲಿಲ್ಲ. ಇಂಡಿಯಕ್ಕೆ ಅನೇಕ ಶತಮಾನಗಳ ಹಿಂದೆಯೇ ಬಂದಿತ್ತು. ತುರ್ಕಿಯ ಮಹಮ್ಮದನ ಮುತ್ತಿಗೆಯಾಯಿತು, ಆಫ್ಘನರ ಮುತ್ತಿಗೆಯಾಯಿತು ; ಆಮೇಲೆ ತುರ್ಕಿ ಮಂಗೋಲ್ ಅಥವ ಮೊಗಲರ ಮುತ್ತಿಗೆಯಾಯಿತು. ಇವುಗಳಲ್ಲಿ ಕೊನೆಯ ಎರಡೇ ಮುಖ್ಯ ವಾದವು. ಆಫ್ಘನರು ಇಂಡಿಯದ ನೆರೆ ನಾಡಿನವರು, ಪರಿಚಿತರು. ಅವರ ರಾಜಕೀಯ ಉನ್ನತಿಯ ಕಾಲವನ್ನು ಇಂಡೋ-ಆಫ್ಘನ್ ಕಾಲ ಎಂದು ಕರೆಯಬೇಕು. ಮೊಗಲರು ಹೊರಗಿನವರು ಮತ್ತು ಇ೦ಡಿಯಕ್ಕೆ ಅಪರಿಚಿತರು. ಆದರೂ ಬಹಳ ಜಾಗ್ರತೆಯಾಗಿ ಭಾರತೀಯ ರಚನೆಯ ಚೌಕಟ್ಟಿನಲ್ಲಿ ಹೊಂದಿಕೊಂಡರು. ಇಂಡೊ- ಮೊಗಲ್ ಕಾಲ ಆರಂಭವಾಯಿತು.

ಇಚ್ಛೆಪಟ್ಟೋ, ಆಕಸ್ಮಿಕವಾಗಿಯೊ ಅಥವ ಎರಡೂ ಕಾರಣದಿಂದಲೂ ಆಪ್ಘನ್ ರಾಜರೂ ಅವರ ಜೊತೆಗೆ ಬಂದವರೂ ಇ೦ಡಿಯದಲ್ಲಿ ಬೆರೆತುಹೋದರು. ಅವರ ಸಂತತಿಯವರು ಪೂರ್ಣ ಭಾರ ತೀಯರಾಗಿ ಇಲ್ಲಿ ನೆಲೆಸಿ ಭಾರತವನ್ನು ತಮ್ಮ ತಾಯ್ಯಾ ಡಾಗಿ ಮಾಡಿಕೊಂಡರು; ಮತ್ತು ಉಳಿದ ಪ್ರಪಂಚವೆಲ್ಲ ಅವರಿಗೆ ಪರದೇಶವಾಯಿತು. ರಾಜಕೀಯ ಘರ್ಷಣೆಗಳಿದ್ದರೂ ಅವರನ್ನು ಭಾರತೀಯ ರೆಂದೇ ಪರಿಗಣಿಸಲಾಗುತ್ತಿತ್ತು. ಅನೇಕ ರಾಜಪುತ್ರ ರಾಜರು ಸಹ ಅವರ ಸ್ವಾಮ್ಯವನ್ನು ಒಪ್ಪಿ ಕೊಂಡರು. ಇನ್ನು ಕೆಲವು ರಾಜಪುತ್ರ ರಾಜರು ಅವರ ಅಧೀನರಾಗಲು ಒಪ್ಪಲಿಲ್ಲ. ಘೋರ ಯುದ್ಧಗಳು ಆದವು. ದೆಹಲಿಯ ಸುಲ್ತಾನರಲ್ಲಿ ಪ್ರಸಿದ್ಧನಾದ ಫಿರೋಜ್ ಷಹಾನ ತಾಯಿಯೂ ಘಯಾ ಸುದ್ದೀನನ ತಾಯಿಯೂ ಹಿಂದುಗಳಾಗಿದ್ದರು. ಈ ರೀತಿ ಆ ಫೈನ್, ತುರ್ಕಿ, ಮತ್ತು ಹಿಂದೂ ಶ್ರೀಮಂತರಲ್ಲಿ ವಿವಾಹಗಳು ಸಾಮಾನ್ಯವಲ್ಲದಿದ್ದರೂ, ನಡೆಯುತ್ತಿದ್ದವು. ದಕ್ಷಿಣದಲ್ಲಿ ಗುಲ್ಬರ್ಗದ ಮುಸ್ಲಿಂ ರಾಜ ವಿಜಯನಗರದ ಹಿಂದೂ ರಾಜಕುಮಾರಿಯನ್ನು ಬಹಳ ವೈಭವದಿಂದ ಮದುವೆ ಯಾದನು.

ಮಧ್ಯ ಮತ್ತು ಪೂರ್ವ ಏಷ್ಯಾದ ಮುಸ್ಲಿಂ ರಾಜ್ಯಗಳಲ್ಲಿ ಭಾರತೀಯರಿಗೆ ಒಳ್ಳೆಯ ಮರ್ಯಾದೆ ಇತ್ತು. ಆಫ್ಘನರ ವಿಜಯಯಾತ್ರೆಗೂ ಮುಂಚೆ ಹನ್ನೊಂದನೆಯ ಶತಮಾನದಲ್ಲಿ ಮುಸ್ಲಿ೦ ಭೂಗೋಳ ಶಾಸ್ತ್ರಜ್ಞನಾದ ಇದ್ರೀಸಿಯು “ ಭಾರತೀಯರು ಸ್ವಭಾವತಃ ನ್ಯಾಯಪರರು, ಎಂದಿಗೂ ನ್ಯಾಯ ವಿರುದ್ಧ ಆಚರಿಸುವುದಿಲ್ಲ. ಅವರ ಒಳ್ಳೆಯ ಭರವಸೆ, ಪ್ರಾಮಾಣಿಕತೆ, ಕೊಟ್ಟ ಮಾತಿನಂತೆ ನಡೆ ಯುವ ಗುಣಗಳು ಜಗತ್ಪಸಿದ್ದ. ಈ ಗುಣಗಳಲ್ಲಿ ಎಷ್ಟು ವಿಖ್ಯಾತರೆಂದರೆ ಪ್ರಪಂಚದ ಎಲ್ಲ ಕಡೆ ಯಿಂದ ಜನರು ಅವರ ದೇಶಕ್ಕೆ ಹೋಗುತ್ತಾರೆ” ಎಂದು ಬರೆದಿದ್ದಾನೆ.

ಒಂದು ದಕ್ಷಪೂರ್ಣವಾದ ಆಡಳಿತ ಪದ್ಧತಿಯು ಬೆಳೆಯಿತು. ಮುಖ್ಯವಾಗಿ ಸೈನ್ಯದ ಉಪಯೋಗ ಕ್ಯಾಗಿ ಒಳ್ಳೆಯ ರಾಜಮಾರ್ಗಗಳೇರ್ಪಟ್ಟವು. ಸ್ಥಳೀಯ ಪದ್ಧತಿಗಳಲ್ಲಿ ಯಾವ ರೀತಿಯಿಂದಲೂ ಕೈ ಹಾಕದಿದ್ದರೂ ಸರ್ಕಾರದ ಆಡಳಿತವು ಕೇಂದ್ರೀಕೃತವಾಯಿತು. ಮೊಗಲರ ಕಾಲದ ಆರಂಭದಲ್ಲಿದ್ದ ಷೇರ್ ಷಹ ಆಫ್ಘನ್ ರಾಜರಲ್ಲೆಲ್ಲ ಬಹಳ ದಕ್ಷನು, ಆತನು ಹಾಕಿದ ಕಂದಾಯ ಪದ್ದತಿಯ ತಳಹದಿಯ ಮೇಲೆಯೇ ಅಕೃರನು ಉತ್ತಮ ಪದ್ದತಿಯನ್ನು ರೂಪಿಸಿದನು. ಅಕ್ಷರನ ಪ್ರಸಿದ್ದ ಹಣಕಾಸಿನ ಮಂತ್ರಿಯಾದ ರಾಜ ತೋದರಮಲ್ನನ್ನು ಮೊದಲು ಷೇರ್ ಷಹನೇ ನೇಮಿಸಿದ್ದನು. ಆಫ್ಘನ್ ರಾಜರು ಹಿಂದೂಗಳ ಬುದ್ದಿ ಶಕ್ತಿಯಿಂದ ಬಹಳ ಉಪಯೋಗ ಪಡೆದರು.

ಆಫ್ಘನರು ದೇಶವನ್ನು ಅಧೀನ ಪಡಿಸಿಕೊಂಡಿದ್ದರಿಂದ ಇ೦ಡಿಯ ಮತ್ತು ಹಿಂದೂ ಧರ್ಮದ ಮೇಲೆ ಎರಡು ಪರಸ್ಪರ ವಿರುದ್ದ ಪರಿಣಾಮಗಳಾದವು. ಮೊದಲನೆಯದಾಗಿ ಜನರು ಆಫ್ಘನ್ ರಾಜ ರಿಂದ ದೂರವಾಗಿ ದಕ್ಷಿಣ ಭಾರತಕ್ಕೆ ನೆಲಸಲು ಹೋದರು. ಅವರು ಬಹಳ ಆಚಾರಶೀಲರೂ, ಮಡಿವಂತರೂ ಆಗಿ ಸಂಕುಚಿತ ಸ್ವಭಾವದವರಾದರು. ಜಾತಿಯ ಕಟ್ಟುಗಳನ್ನು ಬಿಗಿಮಾಡಿ ಪರದೇಶದ ಪದ್ದತಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯತ್ನ ಮಾಡಿದರು. ಎರಡನೆಯದಾಗಿ ಕ್ರಮೇಣ, ಕಂಡೂ ಕಾಣದಂತೆ ಆ ಪರಕೀಯರ ಜೀವನ ಮತ್ತು ಭಾವನೆಗಳ ಕಡೆಗೆ ಒಲುಮೆ ತೋರುತ್ತ ಬಂದರು. ತಾನಾಗಿಯೇ ಒಂದು ಸಂಕೀರ್ಣ ಮಾರ್ಗವು ಹುಟ್ಟಿತು. ಶಿಲ್ಪ ಕಲೆಯಲ್ಲಿ ಹೊಸಮಾದರಿಯು