ಪುಟ:ಭಾರತ ದರ್ಶನ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೪

ಭಾರತ ದರ್ಶನ

ಹುಟ್ಟಿತು. ಆಹಾರ ಉಡಿಗೆತೊಡಿಗೆಗಳು ವ್ಯತ್ಯಾಸಗೊಂಡವು. ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳಾದವು. ಈ ಸಂಕೀರ್ಣ ಪದ್ಧತಿಯು ಸಂಗೀತದಲ್ಲಿ ಸ್ಪಷ್ಟ ಎದ್ದು ಕಾಣುತ್ತಿತ್ತು. ಪ್ರಾಚೀನ ಸಾಂಪ್ರದಾಯಿಕ ಪದ್ಧತಿಯೇ ಅನೇಕ ಮಾರ್ಗಗಳಲ್ಲಿ ಮುಂದುವರಿಯಿತು. ಪಾರ್ಸಿ ಭಾಷೆಯು ರಾಜಭಾಷೆಯಾಯಿತು. ಅನೇಕ ಪಾರಸಿ ಶಬ್ದಗಳು ಲೋಕರೂಢಿಯಾದವು. ಇದರ ಜೊತೆಗೆ ದೇಶೀ ಭಾಷೆಗಳೂ ಉನ್ನತಿಗೊಂಡವು.

ಆದರೆ ಇಂಡಿಯದಲ್ಲಿ ಹುಟ್ಟಿದ ಒಂದು ದುಷ್ಪರಿಣಾಮವೆಂದರೆ ಸ್ತ್ರೀಯರನ್ನು ಪ್ರತ್ಯೇಕಿಸುವ ಪರ್ದಾ ಪದ್ಧತಿ ; ಏಕೆ ಇದು ಬಂದಿತು ಎನ್ನು ವುದು ಅರ್ಥವಾಗುವುದಿಲ್ಲ. ಹೊಸದು ಹಳತರ ಪರಸ್ಪರ ಘರ್ಷಣೆಯಲ್ಲಿ ಹೇಗೋ ಇದು ಆಚರಣೆಗೆ ಬಂದಿತು. ಇತರ ದೇಶಗಳಲ್ಲಿ ಅದರಲ್ಲೂ ಮುಖ್ಯ ವಾಗಿ ಗ್ರೀಸಿನಲ್ಲಿದ್ದಂತೆ ಇಂಡಿಯದಲ್ಲಿ ಸಹ ಶ್ರೀಮಂತ ಮನೆತನಗಳಲ್ಲಿ ಸ್ತ್ರೀಯರು ಪ್ರತ್ಯೇಕವಿರುವ ಪದ್ದತಿಯು ಪೂರ್ವದಿಂದಲೂ ಆಚರಣೆಯಲ್ಲಿತ್ತು. ಇದು ಪುರಾತನ ಇರಾಣಿಗಳಲ್ಲಿ, ಪಶ್ಚಿಮ ಏಷ್ಯದ ಲೆಲ್ಲ ಆಚರಣೆಯಲ್ಲಿತ್ತು. ಆದರೆ ಎಲ್ಲಿಯೂ ಸ್ತ್ರೀಯರು ಸಂಪೂರ್ಣವಾಗಿ ಘೋಷಾದಲ್ಲಿ ಇರುತ್ತಿರ ಲಿಲ್ಲ. ಬೈಜಾಂಟೈನ್ ಅರಮನೆಗಳಲ್ಲಿ ರಾಣೀವಾಸಗಳನ್ನು ಕಾಯಲು ನಪುಂಸಕರನ್ನು ನೇಮಿಸುತ್ತಿ ದ್ದರು. ಪ್ರಾಯಶಃ ಈ ಪದ್ದತಿಯು ಅಲ್ಲಿಂದ ಆರಂಭವಾಗಿರಬೇಕು. ಬೈಜಾಂಟೈನ್ ಪದ್ಧತಿಯ ಪ್ರಭಾವವು ರಷ್ಯಕ್ಕೆ ಹರಡಿತು. ಮಹಾ ಪೀಟರನ ಕಾಲದವರೆಗೂ ಸ್ತ್ರೀಯರು ಪ್ರತ್ಯೇಕ ನಿವಾಸಗಳಲ್ಲಿ ವಾಸಮಾಡಬೇಕೆಂಬ, ಕಠಿಣ ನಿಯಮವಿತ್ತು. ಆದರೆ ಚಾರ್ಟರುಗಳಲ್ಲಿ ಈ ಪದ್ಧತಿಯು ಇರಲಿಲ್ಲ. ಅವರು ತಮ್ಮ ಸ್ತ್ರೀಯರಿಗೆ ಪ್ರತ್ಯೇಕ ವಾಸಸ್ಥಾನಗಳನ್ನು ಏರ್ಪಡಿಸುತ್ತಿರಲಿಲ್ಲ. ಮಿಶ್ರ ಅರಬ್ಬಿ ಪಾರಸಿ ನಾಗರಿಕತೆಯಲ್ಲಿ ಬೈಜಾಂಟೈನ್ ಪದ್ದತಿಗಳು ಅನೇಕ ಬಂದವು. ಶ್ರೀಮಂತ ಮನೆತನಗಳ ವಿದ್ಯಾ ಪದ್ಧತಿಯೂ ಪ್ರಾಯಶಃ ಸ್ವಲ್ಪ ಬೆಳೆದು ಬಂದಿರಬೇಕು. ಆದರೂ ಅರೇಬಿಯಾದಲ್ಲಿ ಮತ್ತು ಪಶ್ಚಿಮ ಮತ್ತು ಮಧ್ಯ ಏಷ್ಯದಲ್ಲಿ ಸ್ತ್ರೀಯರನ್ನು ಪ್ರತ್ಯೇಕಿಸಿರಲಿಲ್ಲ. ದೆಹಲಿಯನ್ನು ಹಿಡಿದಾಗಲೂ ಉತರ ಹಿಂದೂಸಾ ನಕೆ ಅಧಿಕ ಸಂಖ್ಯೆಯಲ್ಲಿ ಬಂದ ಆಫ್ಘನರಲ್ಲಿ ಈ ಪರದ ಪದ ತಿಯೂ ಇರಲಿಲ್ಲ ತುರ್ಕಿ ಮತ್ತು ಆಫ್ಘನ್ ರಾಜಕುಮಾರಿಯರು ಮತ್ತು ರಾಣಿವಾಸದ ಸ್ತ್ರೀಯರು ಕುದುರೆಸವಾರಿಗೆ, ಬೇಟೆಗೆ ಹೋಗುತ್ತಿದ್ದರು, ಮತ್ತು ಹೊರಗೆ ಹೋಗಿ ಭೇಟಿಕೊಡುತ್ತಿದ್ದರು, ಮಕ್ಕಾಕ್ಕೆ ಹಾಜ್ ಯಾತ್ರೆಗೆ ಹೋಗುವಾಗ ಸ್ತ್ರೀಯರು ಪರದ ತೆಗೆದು ಮುಖ ತೋರಿಸಬೇಕೆಂಬುದು ಈಗಲೂ ಆಚರಣೆ ಯಲ್ಲಿರುವ ಇಸ್ಲಾ೦ ಪದ್ದತಿ, ಮೊಗಲರ ಕಾಲದಲ್ಲಿ ಈ ಪರ್ದಾ ಪದ್ಧತಿಯ ಆಚರಣೆಯು ಹೆಚ್ಚಿದಂತಿದೆ. ಹಿಂದೂಗಳಲ್ಲ ಮುಸ್ಲಿಮರಲ್ಲ ಅದೊಂದು ಅಂತಸ್ತಿನ ಮತ್ತು ಗೌರವದ ಚಿಹ್ನೆ ಯಾಯಿತು. ಸ್ತ್ರೀಯರನ್ನು ಪ್ರತ್ಯೇಕಿಸುವ ಈ ಪದ್ದತಿಯ ಮುಸ್ಲಿ೦ ಪ್ರಭಾವವು ಹೆಚ್ಚಾಗಿದ್ದ ಪ್ರದೇಶಗಳಲ್ಲಿ ಮುಖ್ಯ ವಾಗಿ ದೆಹಲಿ, ಸಂಯುಕ್ತ ಪ್ರಾಂತ್ಯಗಳು, ರಾಜಪುತಾನ, ಬಿಹಾರ್ ಮತ್ತು ಬಂಗಾಳ ದೇಶಗಳಲ್ಲಿ ಮಧ್ಯ ಮತ್ತು ಪೂರ್ವ ಭಾಗಗಳ ಶ್ರೀಮಂತ ಮನೆತನಗಳಲ್ಲಿ ಬಹಳವಾಗಿ ಹರಡಿತು. ಆದರೂ ಬಹು ಸಂಖ್ಯಾತ ಮುಸ್ಲಿಂ ಪ್ರಾಂತ್ಯಗಳಾದ ಪಂಜಾಬ್ ಮತ್ತು ಗಡಿನಾಡಿನ ಪ್ರಾಂತ್ಯಗಳಲ್ಲಿ ಕಟ್ಟುನಿಟ್ಟಾದ ಪರದ ಪದ್ದತಿ ಇಲ್ಲದಿರುವುದು ಆಶ್ಚರ್ಯ, ದಕ್ಷಿಣ ಮತ್ತು ಪಶ್ಚಿಮ ಇ೦ಡಿಯದಲ್ಲಿ ಮುಸ್ಲಿಮರಲ್ಲಿ ಸ್ವಲ್ಪ ಬಿಟ್ಟರೆ ಬೇರೆ ಯಾರಲ್ಲ ಪರದ ಪದ್ಧತಿಯು ಆಚರಣೆಯಲ್ಲಿ ಇಲ್ಲ.

ಭಾರತದ ಇತ್ತೀಚಿನ ಶತಮಾನಗಳ ಅವನತಿಗೆ ಸ್ತ್ರೀಯರನ್ನು ಪ್ರತ್ಯೇಕಿಸುವ ಈ ಪರದ ಪದ್ದ ತಿಯು ಒಂದು ಮುಖ್ಯ ಕಾರಣ. ಇಂಡಿಯದ ಸಮಾಜ ಜೀವನದ ಪ್ರಗತಿಯಾಗಬೇಕಾದರೆ ಈ ಪಾಶವೀ ಪದ್ದತಿಯು ನಿರ್ಮೂಲವಾಗದ ಹೊರತು ಗತ್ಯಂತರವಿಲ್ಲ. ಸ್ತ್ರೀಯರಿಗೆ ಕೇಡನ್ನುಂಟು ಮಾಡುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ತನ್ನ ತಾಯಿಯ ಬಳಿ ಪರದದಲ್ಲಿ ಕಾಲ ಕಳೆಯಬೇಕಾದ ಮಗುವಿಗೆ, ಮನುಷ್ಯನಿಗೆ, ಸಮಾಜ ಜೀವನಕ್ಕೆ ಆಗುವ ಹಾನಿಯು ಅಪಾರ. ಹಿಂದೂಗಳಲ್ಲಿ ಅತಿ ಜಾಗ್ರತೆಯಾಗಿಯೂ ಮುಸ್ಲಿಮರಲ್ಲಿ ನಿಧಾನವಾಗಿಯೂ ಈ ದುಷ್ಟ ಪದ್ಧತಿಯು ಹೋಗುತ್ತಿರುವುದು ಸಂತೋಷದ ಸಂಗತಿ. ಈ ಪರ್ಧಾ ಪದ್ದತಿಯನ್ನು ನಿರ್ಮೂಲಮಾಡಲು ಮುಖ್ಯ