ಪುಟ:ಭಾರತ ದರ್ಶನ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೮

ಭಾರತ ದರ್ಶನ

ಜಾತಿ ಪದ್ಧತಿಯಲ್ಲಿ ಒಂದು ವೈಶಿಷ್ಟವಿಲ್ಲ. ಅದು ದೊಡ್ಡದೊಂದು ಸಮಾಜರಚನೆಯಲ್ಲಿ ಒಂದು ಅಂಗ ಮಾತ್ರ. ಆದರೆ ಒಂದು ಮುಖ್ಯವಾದ ಅಂಗ. ಅದರ ಕೆಲವು ದುಷ್ಕಲಂಕಗಳನ್ನು ಕಿತ್ತೊಗೆದು, ಅದರ ಕಠಿಣತೆಯನ್ನು ಕಡಮೆಮಾಡಿ ಉಳಿಸಿಕೊಳ್ಳುವುದು ಸಾಧ್ಯ. ಆದರೆ ಇಂದಿನ ಸಾಮಾಜಿಕ ಆರ್ಥಿಕ ಘರ್ಷಣೆಯಲ್ಲಿ ಜಾತಿ ಪದ್ದತಿಯ ಬಾಹ್ಯರಚನೆಗೆ ಸ್ಥಾನವೇ ಇಲ್ಲ. ಮೂಲಕ್ಕೇ ಪಟ್ಟು ಹಾಕಿ ಅಗಾಧ ಸ್ಥಂಭಗಳನ್ನೇ ಉರುಳಿಸುತ್ತಿವೆ. ಮೂಲ ಅಸ್ತಿತ್ವವು ಬಹುಮಟ್ಟಿಗೆ ನಾಶ ವಾಗಿದೆ ಅಥವ ನಾಶಹೊಂದುತ್ತಲಿದೆ. ಜಾತಿ ಪದ್ಧತಿಯೇ ಇಕ್ಕಟ್ಟಿನಲ್ಲಿದೆ. ನಮಗೆ ಇಷ್ಟವೇ ಅನಿಷ್ಟವೇ ಎಂಬ ಪ್ರಶ್ನೆಯೇ ಇಲ್ಲ. ನಮ್ಮ ಇಷ್ಟಾನಿಷ್ಟಗಳೇನೇ ಇರಲಿ, ಪರಿವರ್ತನೆಗಳಾಗುತ್ತಲಿವೆ. ಆದರೆ ಭಾರತೀಯರು ಕಟ್ಟಿದ ಸಮಾಜದಲ್ಲಿ ಎದ್ದು ಕಾಣುವ ಸಂಘಟನ ಶಕ್ತಿ ಮತ್ತು ನಿತ್ಯತೆ ಭಾರತೀಯರ ಸಹಜ ಅಂತಃಶಕ್ತಿ ಮತ್ತು ಶೀಲಗಳ ಫಲ. ಈ ಅಂತಃಶಕ್ತಿ ಮತ್ತು ಶೀಲದ ಸಹಾಯದಿಂದ ಆ ಪರಿವರ್ತನೆಗಳನ್ನು ಸರಿಯಾದ ಮಾರ್ಗದಲ್ಲಿ ತಿರುಗಿಸಿ ರೂಪಗೊಳಿಸಿ ಪೂರ್ಣ ಪ್ರಯೋಜನ ಪಡೆಯುವುದು ನಮ್ಮ ಕೈಯಲ್ಲಿ ದೆ.

“ ಎಂದಿನವರೆಗೆ ಹಿಂದೂಗಳು ಜಾತಿ ಪದ್ದತಿಯನ್ನು ತ್ಯಜಿಸುವುದಿಲ್ಲವೋ ಅಂದಿನವರೆಗೆ ಭಾರತವು ಭಾರತವಾಗಿ ಉಳಿಯುತ್ತದೆ. ಜಾತಿ ಪದ್ಧತಿಯು ನಾಶವಾದೊಡನೆ ಭಾರತವು ಭಾರತವಾಗಿ ಉಳಿಯು ವುದಿಲ್ಲ. ಆ ಪ್ರತಿಭಾಯುಕ್ತ ಪಠ್ಯಾಯದ್ವೀಪವು ಅಂದೇ ಆಂಗ್ಲೋಸ್ಯಾಕ್ಷನ್ ಚಕ್ರಾಧಿಪತ್ಯದ ಹೊಲಗೇರಿಯಾಗುತ್ತದೆ” ಎಂದು ಸರ್ ಜಾರ್ಜ್ ಬನ್ಸ್ ವುಡ್ ಒ೦ದೆಡೆ ಎಲ್ಲೋ ಹೇಳಿದ್ದಾನೆ. ಜಾತಿ ಪದ್ಧತಿ ಇರಲಿ ಇಲ್ಲದಿರಲಿ ಈಗಾಗಲೇ ನಾವು ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ಆ ಅಂತಸ್ತಿಗೆ ಇಳಿದಿದ್ದೇವೆ. ಮುಂದೆ ನಮ್ಮ ಸ್ಥಾನವೇನೆ ಇರಲಿ ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ರುವುದಂತೂ ಸಾಧ್ಯ ವಿಲ್ಲ. ಆ ದೃಷ್ಟಿಯಿಂದ ಸರ್ ಜಾರ್ಜ್ ಬನ್ಸ್ ವುಡ್ ನೋಡದಿದ್ದರೂ, ಆತನು ಹೇಳಿರುವುದರಲ್ಲಿ ಸ್ವಲ್ಪ ಸತ್ಯವಿದೆ. ಕಾಲಧರ್ಮ ಮತ್ತು ಜನತೆಯ ಸಹಜ ಮನೋಧರ್ಮಕ್ಕನುಗುಣವಾದ ಬೇರೊಂದು ಸಮಾಜರಚನೆಯು ರೂಪುಗೊಳ್ಳದೆ ಹೋದರೆ, ಅನಾದಿಕಾಲದಿಂದ ಅವ್ಯಾಹತವಾಗಿ ನಡೆದು ಬಂದ ಒಂದು ದೊಡ್ಡ ಸಮಾಜವನ್ನು ಛಿದ್ರಗೊಳಿಸಿದರೆ, ಸಾಮಾಜಿಕ ಜೀವನ ಪೂರ್ಣ ನಾಶವಾಗಿ ಅನೈಕ್ಯತೆ, ಜನಕೋಟೆ, ವ್ಯಕ್ತಿಚರ್ಯೆಯ ವೈಪರೀತ್ಯ ಬಹು ದೊಡ್ಡ ಪ್ರಮಾಣದಲ್ಲಿ ತಲೆದೋರಿ ದೇಶದಲ್ಲಿ ಅನಾಹುತವಾಗಬಹುದು. ಪ್ರಾಯಶಃ ಪರ್ವಕಾಲದಲ್ಲಿ ಈ ಅನಾಹುತಗಳು ಅನಿವಾರ್ಯವೋ ಏನೋ? ಇಂದಿನ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಅನಾಹುತಗಳೇ, ಪ್ರಾಯಶಃ ಅನಾಹುತದ ಹಿಂದೆ ಜನತೆಯು ಅನುಭವಿಸಬೇಕಾದ ಸಂಕಟ ಮತ್ತು ನೋವಿನಿಂದಲೇ ಪಾಠಕಲಿತು, ಬೆಳೆದುಬಂದು, ನೂತನ ಪರಿಸ್ಥಿತಿಗನುಗುಣವಾಗಿ ಹೊಸಜೀವನವನ್ನು ಆರಂಭಿಸಬೇಕಾಗುತ್ತದೆ.

ಆದರೂ ನಮ್ಮ ಕಲ್ಪನೆ ಎಷ್ಟೇ ಮಬ್ಬಿರಲಿ, ನಮ್ಮ ಭವಿಷ್ಯದ ಗುರಿ ಏನು, ಏತಕ್ಕಾಗಿ ಶ್ರಮಿಸು ತಿದ್ದೇವೆ ಎಂಬ ಕಲ್ಪನೆ ಇಲ್ಲದೆ, ಇದ್ದುದನ್ನು ಒಡೆದು, ಇಲ್ಲದುದನ್ನು ಬೇಡಲು ಸಾಧ್ಯವಿಲ್ಲ, ಶೂನ್ಯತೆ ಯನ್ನು ಸೃಜಿಸಲು ಸಾಧ್ಯವಿಲ್ಲ ; ಏಕೆಂದರೆ ಆ ಶೂನ್ಯತೆಯೇ ನಮಗೆ ಅನಿಷ್ಟವಾದುದನ್ನು ನಿರ್ಮಿಸಿ ಕೊಳ್ಳಬಹುದು. ನಾವು ರೂಪುಗೊಳಿಸುವ ರಚನಾತ್ಮಕ ಯೋಜನೆಗಳಲ್ಲಿ ನಮಗೆ ಇರುವ ಜನ ಸಂಪ ನ ಯೋಗ್ಯತೆ, ಅದರ ಭಾವನೆ ಮತ್ತು ಆಕಾಂಕ್ಷೆಗಳ ಹಿನ್ನೆಲೆ ಮತ್ತು ನಮ್ಮ ಕಾರ್ಯಕ್ಷೇತ್ರದ ಸನ್ನಿವೇಶಗಳು ಇವನ್ನೆಲ್ಲ ಗಮನಿಸಬೇಕಾಗುತ್ತದೆ. ಇದನ್ನೆಲ್ಲ ಅಲಕ್ಷ್ಯಮಾಡಿ ಗಾಳಿಗೋಪುರ ಕಟ್ಟ ಬಯಸಿದರೆ, ಅಥವ ಇತರರನ್ನು ಅನುಕರಿಸಹೋದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಆದ್ದರಿಂದ ನಮ್ಮ ಜನಜೀವನದ ಮೇಲೆ ಅತ್ಯಂತ ಪರಿಣಾಮಕಾರಿಯಾದ ಭಾರತೀಯ ಸಮಾಜದ ರಚನೆಯನ್ನು ಅರ್ಥಮಾಡಿಕೊಂಡು ವಿಚಾರಮಾಡುವುದು ಅತ್ಯಾವಶ್ಯಕ.

ಈ ಸಮಾಜರಚನೆಯ ಆಧಾರಸ್ಥಂಭಗಳು ಮೂರು, ಗ್ರಾಮ ಜೀವನ, ಜಾತಿ ಪದ್ಧತಿ, ಮತ್ತು ಒಟ್ಟು ಕುಟುಂಬ. ಇವೆಲ್ಲಕ್ಕೂ ಗ್ರಾಮಜೀವನವೆ ಮುಖ್ಯ. ವ್ಯಕ್ತಿಗೆ ಎರಡನೆಯ ಸ್ಥಾನ, ಒಂದೊಂದನ್ನೇ ವಿಚಾರಮಾಡಿದರೆ ಇದರಲ್ಲಿ ವೈಶಿಷ್ಟ್ಯವೇನೂ ಇಲ್ಲ. ಇತರ ದೇಶಗಳಲ್ಲಿ ಅದರಲ್ಲೂ ಮಧ್ಯಯುಗದಲ್ಲಿ