ಪುಟ:ಭಾರತ ದರ್ಶನ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

عود ಹೊಸ ಸಮಸ್ಯೆಗಳು ಅಧಿಕಾರವೂ ಇತ್ತು, ಕರ್ತವ್ಯ ಪಾಲನೆಯೂ ಇತ್ತು. ಭಾರತದ ಕೆಲವು ಸಾಧನೆಗಳೆಲ್ಲ ಉತ್ತಮ ವರ್ಣದವರದು. ಕೀಳುವರ್ಣದವರಿಗೆ ಇದ್ದ ಅವಕಾಶವೂ, ಸನ್ನಿವೇಶಗಳೂ ಅತ್ಯಲ್ಪ. ಉತ್ತಮ ವರ್ಣದವರು ಅತ್ಯಲ್ವಸಂಖ್ಯೆಯಲ್ಲಿರಲಿಲ್ಲ. ಬಹುಸಂಖ್ಯಾತರಿದ್ದು ಅವರಲ್ಲಿ ಶಕ್ತಿಯೂ, ಅಧಿಕಾರವೂ, ವ್ಯಾಪ್ತಿಯ ಕೇಂದ್ರೀಕೃತವಾಗಿದ್ದವು. ಆದ್ದರಿಂದ ಬಹುಕಾಲ ಅಧಿಕಾರ ನಡೆಸಿದರು. ಆದರೆ ಅಸಂಖ್ಯಾತ ಜನರನ್ನು ಕೀಳುಮಟ್ಟದಲ್ಲಿಟ್ಟು ಅವರ ವಿದ್ಯೆ, ಸಂಸ್ಕೃತಿ, ಆರ್ಥಿಕ ಉನ್ನತಿಗೆ ಯಾವ ಅವಕಾಶವನ್ನು ಕೊಡದೆ ಅಂಧಕಾರದಲ್ಲಿ ತಳ್ಳಿದುದೇ ಜಾತಿ ಪದ್ದತಿಯ ಭಾರತೀಯ ಸಮಾಜರಚನೆಯ ದೊಡ್ಡ ನ್ಯೂನತೆಯಾಯಿತು. ಈ ಅವನತಿಯಿಂದ ಎಲ್ಲ ಕಡೆಯೂ ಕ್ಷೀಣದೆಶೆಯು ಪ್ರಾಪ್ತವಾಗಿ ಕೊನೆಗೆ ಉತ್ತಮವರ್ಣದವರೂ ಅದಕ್ಕೆ ತುತ್ತಾದರು. ಭಾರತದ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಒಂದು ಬಗೆಯ ಶಿಲಾಸ್ಪರ್ಶವುಂಟಾಯಿತು. ಈ ಸಮಾಜರಚನೆಗೂ, ಹಿಂದೆ ಇತರ ದೇಶಗಳಲ್ಲಿದ್ದ ಸಮಾಜರಚನೆಗೂ ಬಹಳ ವ್ಯತ್ಯಾಸವಿಲ್ಲ. ಆದರೆ ಕಳೆದ ಕೆಲವು ತಲೆಮಾರುಗಳಲ್ಲಿ ಇತರ ದೇಶಗಳಲ್ಲಿ ಆಗಿರುವ ಪರಿವರ್ತನೆಯು ಅತ್ಯದ್ಭುತ ಇದೆ. ಸಮಾಜದ ಇಂದಿನ ಪರಿಸ್ಥಿತಿಯಲ್ಲಿ ಜಾತಿ ಪದ್ಧತಿಯೂ ಅದರ ವೈಶಿಷ್ಟ್ಯಗಳೂ ಅಸಂಬದ್ಧವೂ, ಸಂಕುಚಿತವೂ, ಪ್ರತಿಗಾಮಿಯೂ ಆಗಿ ಪ್ರಗತಿವಿರುದ್ದ ವಿವೆ. ಅದರ ಚೌಕಟ್ಟಿನೊಳಗೆ ಸಮಾನಸ್ಥಾನವಾಗಲಿ ಅವಕಾಶವಾಗಲಿ ದೊರೆಯು ನಂತ ಇಲ್ಲ. ರಾಜಕೀಯದಲ್ಲಾಗಲಿ, ಆರ್ಥಿಕ ನೀತಿಯಲ್ಲಾಗಲಿ ಪ್ರಜಾಸತ್ತೆಯು ದೊರೆಯುವಂತೆ ಇಲ್ಲ. ಈ ಎರಡು ಭಾವನೆಗಳು ಪರಸ್ಪರ ವಿರುದ್ದವಿರುವುದರಿಂದ ಘರ್ಷಣೆಯು ಅನಿವಾರ ಮತ್ತು ಅದರಲ್ಲಿ ಒಂದು ಸೋಲಲೇಬೇಕು. ೯. ಬಾಬರ್ ಮತ್ತು ಅಕ್ಷರ್‌ : ಸ್ವದೇಶೀಕರಣ - ಆಫ್ಘನರೂ ಇಂಡಿಯದಲ್ಲಿ ನೆಲಸಿ ಭಾರತೀಯರೇ ಆದರು. ಮೊದಲು ಜನರ ವಿರೋಧಭಾವನೆ ಯನ್ನು ಕಡಮೆಮಾಡಿ ಅವರನ್ನು ಒಲಿಸಿಕೊಳ್ಳುವದು ಆಫ್ಘನ್ ರಾಜರುಗಳ ಮೊದಲನೆಯ ಸಮಸ್ಯೆ ಯಾಯಿತು. ಆದ್ದರಿಂದ ಉದ್ದೇಶ ಪಟ್ಟು ತಮ್ಮ ಮೊದಲಿನ ಕೌರವನ್ನು ಕಡಮೆಮಾಡಿ, ಸಹನೆ ಯನ್ನು ತೋರಿ, ಸಹಕಾರ ಬಯಸಿ ಹುಟ್ಟು ಭಾರತೀಯರಂತೆ ನಡೆದುಕೊಳ್ಳಲಾರಂಭಿಸಿದರು. ಮೊದಲು ರಾಜಕೀಯವಾಗಿ ಆರಂಭವಾದರೂ ಕ್ರಮೇಣ ಈ ವಾಯವ್ಯ ಗಡಿನಾಡಿನ ಆಫ್ಘನರು ಭಾರ ತೀಯ ಸನ್ನಿವೇಶದ ಪ್ರಭಾವಕ್ಕೊಳಗಾಗಿ ಭಾರತೀಯರೇ ಆಗಿ ಸ್ವಭಾವ ಸಹಜವಾಯಿತು. ರಾಜರು ಗಳಲ್ಲಿ ಈ ಪರಿವರ್ತನೆಯಾಗುತ್ತಿದ್ದಾಗ ಜನರ ಜೀವನದಲ್ಲಿ, ಭಾವನೆಗಳಲ್ಲಿ ಒಂದು ಪ್ರಬಲವಾದ ಸಂಯೋಜಕಶಕ್ತಿಯು ತಾನಾಗಿಯೇ ಉದ್ಭವಿಸಿತು. ಹೀಗೆ ಆರಂಭವಾದ ಮಿಶ್ರ ಸಂಸ್ಕೃತಿಯ ತಳಹದಿಯ ಮೇಲೆ ಅಕ್ಷರ್ ತನ್ನ ಕೃತಿಯನ್ನು ನಿರ್ಮಿಸಿದನು. ಮೊಗಲಸಂತತಿಯಲ್ಲಿ ಅಕ್ಷರ್ ಮೂರನೆಯವನಾದರೂ ಸಾಮ್ರಾಜ್ಯವು ಭದ್ರವಾದದ್ದು ಆತನ ಕಾಲದಲ್ಲಿ. ಆತನ ತಾತನಾದ ಬಾಬರ್ ೧೮೨೬ರಲ್ಲಿ ದೆಹಲಿಯ ಸಿಂಹಾಸನವನ್ನು ಏರಿದ್ದರೂ ಭಾರತಕ್ಕೆ ಆತನು ಪರಕೀಯನಾಗಿದ್ದನು. ಕೊನೆಯವರೆಗೂ ತಾನು ಪರಕೀಯನೆಂಬ ಭಾವನೆಯೇ ಆತನಲ್ಲಿ ಉಳಿಯಿತು. ಉತ್ತರದಲ್ಲಿ ಮಧ್ಯ ಏಷ್ಯದ ಆತನ ತಾಯ್ಯಾ ಡಿನಲ್ಲಿ ತೈಮೂರಿ ಪುನರುಜ್ಜಿವನವು ಉಚ್ಛಾಯಸ್ಥಿತಿಯಲ್ಲಿತ್ತು ; ಆದ್ದರಿಂದ ಇರಾನೀಸಂಸ್ಕೃತಿಯ ಪ್ರಭಾವವು ಆತನ ಮೇಲೆ ಬಹಳವಿತ್ತು. ಬಾಗ್ದಾದಿನಿಂದ ಇರಾಣದವರೆಗೆ ಹರಡಿ ತನಗೆ ಪರಿಚಿತವಾದ ಸ್ನೇಹಮಯ ಸಮಾಜಜೀವನ, ಸಂಭಾಷಣೆಯ ಸವಿ, ಜೀವನಸೌಕಯ್ಯ ಮತ್ತು ಸೌಂದರ್ಯ ಭಾರತದಲ್ಲಿ ದೊರೆಯದಾದವು. ಉತ್ತರದ ಪರ್ವತ ಪ್ರಾಂತ್ಯದ ಹಿಮ ಮತ್ತು ಮಂಜಿಗಾಗಿಯೂ, ಫಾಣದ ಒಳ್ಳೆಯ ಮಾಂಸ, ಹಣ್ಣು, ಹೂಗಳಿ ಗಾಗಿಯೂ ಆತನ ಮನಸ್ಸು ಹಾತೊರೆಯುತ್ತಿತ್ತು. ಇಷ್ಟೆಲ್ಲ ನಿರುತ್ಸಾಹವಾದರೂ, ಆತನು ಹಿಂದೂ ಸ್ಥಾನವನ್ನು ಅತ್ಯಂತ ಸುಂದರನಾಡು ಎಂದಿದ್ದಾನೆ. ಭಾರತಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಬಾಬರನು ಮರಣಹೊಂದಿದನು. ಅವನ ಕಾಲವೆಲ್ಲ ಯುದ್ಧ ಮಾಡುವುದರಲ್ಲೂ ಕಾನ್‌ಸ್ಟೆಂಟಿ