ಪುಟ:ಭಾರತ ದರ್ಶನ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

کافه ಭಾರತ ದರ್ಶನ ನೋಪಲ್ನಿಂದ ಕರೆಸಿದ ವಾಸ್ತುಶಿಲ್ಪ ನಿಪುಣನ ಸಹಾಯದಿಂದ ಆಗ್ರಪಟ್ಟಣವನ್ನು ನಿರ್ಮಾಣ ಮಾಡುವುದರಲ್ಲಿಯೂ ಕಳೆಯಿತು. ಕಾಸ್ ಸ್ಟಂಟಿನೋಪಲ್ ನಲ್ಲಿ ಆಗ ಮಹಾವೈಭವಶಾಲಿಯಾದ ಸುಲೇಮಾನನ ಕಾಲ; ಮಹಾಸೌಧಗಳು ನಿರ್ಮಾಣವಾಗುತ್ತಿದ್ದ ಕಾಲ. ಬಾಬರನ ಸುತ್ತಲೂ ಶತ್ರುಗಳೇ ಇದ್ದುದರಿಂದ, ಭಾರತವನ್ನು ಹೆಚ್ಚು ನೋಡಲು ಸಾಧ್ಯವಾಗ ಲಿಲ್ಲ, ಆದರೂ ಆಗಿನ ಉತ್ತರ ಭಾರತದ ಸಾಂಸ್ಕೃತಿಕ ಬಡತನವನ್ನು ಪ್ರಸ್ತಾಪಿಸಿದ್ದಾನೆ. ತೈಮೂರನ ವಿನಾಶಕೃತ್ಯಗಳೂ, ಅನೇಕ ವಿದ್ವಾಂಸರೂ ಕಲಾವಿದರೂ ಕುಶಲಕರ್ಮಿಗಳೂ ದಕ್ಷಿಣ ಭಾರತಕ್ಕೆ ನೆಲಸಹೋದುದೂ ಈ ಬಡತನಕ್ಕೆ ಕಾರಣವಾಗಿರಬಹುದು. ಆದರೆ ಭಾರತೀಯನಿರ್ಮಾಣ ದೃಷ್ಟಿಯೂ ಕುಂದಿಹೋದುದು ಒಂದು ಕಾರಣವಾಗಿರಬೇಕು, ಕುಶಲಕರ್ಮಿಗಳಿಗೂ, ಉದ್ಯೋಗಿ ಗಳಿಗೂ ಕೊರತೆ ಇರಲಿಲ್ಲ. ಆದರೆ ಯಂತ್ರರಚನೆಯಲ್ಲಿ ಯಾವ ನವೀನತೆಯೂ ಕೌಶಲ್ಯವೂ ಇರಲಿಲ್ಲ ಎಂದು ಬಾಬರ್ ಹೇಳಿದ್ದಾನೆ ಮತ್ತು ಜೀವನದ ಸೌಕಯ್ಯದಲ್ಲಿ ಮತ್ತು ಭೋಗಸಾಮಗ್ರಿಗಳಲ್ಲಿ ಭಾರತವು ಇರಾನ್‌ಗಿಂತ ಬಹಳ ಹಿಂದೆ ಇತ್ತು ಎನ್ನುತ್ತಾನೆ. ಭಾರತೀಯ ಮನಸ್ಸು ಜೀವನಸೌಖ್ಯದ ಕಡೆ ಹೆಚ್ಚು ಆಸಕ್ತಿ ತೋರಿಸದಿದ್ದುದು ಇದಕ್ಕೆ ಕಾರಣವೋ ಅಥವ ಬೇರೆ ಕಾರಣದಿಂದಲೋ ನಾನರಿಯೆ. ಪ್ರಾಯಶಃ ಇರಾಣಿಗಳಂತೆ ಆಗಿನಕಾಲದ ಭಾರತೀಯರಿಗೆ ಈ ಸುಖಜೀವನ ಅಥವ ಭೋಗಸಾಮಗ್ರಿಗಳ ವ್ಯಾಮೋಹ ಅಷ್ಟಿರಲಿಲ್ಲ. ಭಾರತಕ್ಕೂ ಇರಾಣಕ್ಕೂ ಹೆಚ್ಚು ಸಂಪರ್ಕವಿದ್ದು ದ ರಿ೦ದ ಆಸಕ್ತಿ ಇದ್ದರೆ ಸುಲಭವಾಗಿ ಇರಾಣದಿಂದ ಅವೆಲ್ಲವನ್ನೂ ಪಡೆಯಬಹುದಾಗಿತ್ತು. ಪ್ರಾಯಶಃ ಈಚೆಗೆ ಉಂಟಾದ ಸಾಂಸ್ಕೃತಿಕ ಜಡತ್ವವೂ, ಭಾರತದ ಅವನತಿಯೂ ಅದಕ್ಕೆ ಕಾರಣವಾಗಿರಬಹುದು. ಪ್ರಾಚೀನಸಾಹಿತ್ಯ ಮತ್ತು ಚಿತ್ರ ಕಲೆಯನ್ನು ನೋಡಿದರೆ ಪ್ರಾಚೀನಕಾಲದಲ್ಲಿ ತಕ್ಕಷ್ಟು ಭೋಗ ಜೀವನವಿತ್ತು ; ಜೀವನಮಟ್ಟವು ಉನ್ನ ತವೂ ಸುಂದರವೂ ಇತ್ತು. ಉತ್ತರ ಇ೦ಡಿಯಕ್ಕೆ ಬಾಬರ್ ಬಂದ ಕಾಲದಲ್ಲೂ ದಕ್ಷಿಣದಲ್ಲಿ ವಿಜಯನಗರದಲ್ಲಿ ಕಲೆ, ಸಂಸ್ಕೃತಿ ಜೀವನದ ನಯ ಮತ್ತು ಭೋಗ ಸಾಮಗ್ರಿಗಳಲ್ಲಿ ಉನ್ನತಮಟ್ಟ ವಿತ್ತೆಂದು ಪ್ರವಾಸಸಾಹಿತ್ಯದಿಂದ ತಿಳಿಯುತ್ತದೆ. ಆದರೆ ಉತ್ತರ ಹಿಂದೂಸ್ಥಾನದಲ್ಲಿ ಸಾಂಸ್ಕೃತಿಕ ಅವನತಿಯು ಸ್ಪಷ್ಟ ಕಾಣುತ್ತದೆ. ನಿರ್ದಿಷ್ಟ ನಂಬಿಕೆಗಳೂ, ಕಟ್ಟು ನಿಟ್ಟಾದ ಸಮಾಜರಚನೆಯೂ ಸಾಮಾಜಿಕ ವ್ಯವಹಾರ ಮತ್ತು ಪ್ರಗತಿಗೆ ಅಡ್ಡ ಬಂದವು. ಇಸ್ಲಾ೦ಧರ್ಮದ ಮತ್ತು ಭಿನ್ನ ಭಾವನೆಗಳ ಭಿನ್ನ ಜೀವನರೀತಿಯ ಅನೇಕ ಪರಕೀಯರ ಆಗಮನದಿಂದ ಉತ್ತರ ಹಿಂದೂಸ್ಥಾನದ ಸಮಾಜರಚನೆಯ ಮೇಲೂ ಜನರ ನಂಬಿಕೆಗಳ ಮೇಲೂ ಬಹಳ ಪರಿಣಾಮವಾಯಿತು. ದುಷ್ಪರಿಣಾಮ ಬಹಳವಾದರೂ ಪರಕೀಯರ ದಂಡಯಾತ್ರೆಯಿಂದ ಒಂದು ಅನುಕೂಲವಿದೆ. ಕೂಪಮಂಡೂಕಭಾವನೆಯನ್ನು ನಾಶಮಾಡಿ ಜನರ ಮಾನಸಿಕ ದಿಗಂತ ವನ್ನು ವಿಶಾಲಗೊಳಿಸುತ್ತದೆ. ತಮ್ಮ ಕಲ್ಪನೆಗಿಂತ ಪ್ರಪಂಚವು ಬಹಳ ದೊಡ್ಡದು ಮತ್ತು ವಿಶ್ವಮುಖ ವುಳ್ಳದ್ದು ಎಂಬ ಅರಿವು ಉಂಟಾಗುತ್ತದೆ. ಇದೇ ರೀತಿ ಆಫ್ಘನರ ದಂಡಯಾತ್ರೆಯಿಂದಲೂ ಭಾರತದ ಮೇಲೆ ಪರಿಣಾಮವಾಗಿ ಅನೇಕ ಬದಲಾವಣೆಗಳಾದವು. ಆಫೈನರಿಗಿಂತ ಮೊಗಲರು ಇನ್ನೂ ಸುಸಂಸ್ಕೃತರೂ ಮತ್ತು ಸುಖಜೀವಿಗಳೂ ಆದ್ದರಿಂದ ಇನ್ನೂ ಹೆಚ್ಚು ಪರಿಣಾಮವಾಡಿದರು. ಇರಾಣದ ಪ್ರಸಿದ್ದ ಕಲಾಪೂರ್ಣ ಜೀವನವು ಆಚರಣೆಗೆ ಬಂದು ರಾಜಸಭಾ ಮರ್ಯಾದೆಯು ತುಂಬ ಕೃತಕವೂ, ನಿಯಮಬದ್ಧವೂ ಆಗಿ ಶ್ರೀಮಂತರ ಜೀವನದಲ್ಲಿ ಅಸಾಧ್ಯ ಬದಲಾವಣೆಗಳಾದವು. ದಕ್ಷಿಣ ಭಾರತದ ಬಹಮನಿ ರಾಜ್ಯಕ್ಕೂ ಇರಾಣಕ್ಕೂ ಕಲ್ಲಿಕೋಟೆಯ ಮೂಲಕ ನೇರ ಸಂಬಂಧವಿತ್ತು. ಈ ಹೊಸ ಭಾವನೆಗಳಿಂದ ಭಾರತದಲ್ಲಿ ಕಲೆ ಮತ್ತು ವಾಸ್ತುಶಿಲ್ಪಕ್ಕೆ ನವ್ಯತೆಯೂ ಹೊಸ ಜೀವ ಕಳೆಯೂ ಬಂದವು ; ಸಂಸ್ಕೃತಿಯ ಬೇರೆ ರೂಪಗಳೂ ಬಂದವು. ಈ ಬದಲಾವಣೆಯಲ್ಲಿ ಎರಡು ಸನಾತನ ಸಂಸ್ಕೃತಿಗಳ ಸಂಪರ್ಕದಿಂದ ಉದ್ಭವಿಸಿದವು. ಆದರೆ ಈ ಎರಡು ಸಂಸ್ಕೃತಿಗಳೂ ತಮ್ಮ ಆರಂಭದ ಕಾರ್ಯಪಟುತ್ವವನ್ನೂ ಸೃಷ್ಟಿ ಶಕ್ತಿಯನ್ನೂ ಕಳೆದುಕೊಂಡು ಸಂಕುಚಿತ ಚೌಕಟ್ಟಿನೊಳಗೆ ಅಡಗಿದ್ದವು. ಭಾರತೀಯ ಸಂಸ್ಕೃತಿಯು ತೀರ ಹಳೆಯದಾಗಿ ಆಯಾಸಗೊಂಡಿತ್ತು ; ಅರಬ್ಬಿ -ಪಾರಸಿ