ಪುಟ:ಭಾರತ ದರ್ಶನ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಭಾರತ ದರ್ಶನ ದೇಶದ ಜನಸಂಖ್ಯೆಯಲ್ಲಿ ಬಹು ಭಾಗದ ಜನರು ವಾಸಮಾಡುತ್ತಿದ್ದ ಗ್ರಾಮಾಂತರಗಳಲ್ಲಿ ಜೀವನದಲ್ಲಿ ಹೆಚ್ಚು ಸೌಹಾರ್ದವೂ, ಸಹಕಾರವೂ ಇತ್ತು. ಹಿಂದೂ ಮುಸ್ಲಿಮರಲ್ಲಿ ಪರಸ್ಪರ ಸ್ನೇಹ ಭಾವವಿತ್ತು, ಜಾತಿ ಪದ್ಧತಿಯು ಅಡ್ಡ ಬಾರದೆ ಮುಸ್ಲಿಮರದೂ ಒಂದು ಜಾತಿಯಾಗಿ ಹೋಯಿತು. ಅನೇಕ ಮುಸ್ಲಿಮರು ಮತಾಂತರ ಹೊಂದಿದವರಾದ್ದರಿಂದ ಹಳೆಯ ಸಂಪ್ರದಾಯಗಳು ಇನ್ನೂ ಅವರಲ್ಲಿ ಆಚರಣೆಯಲ್ಲಿದ್ದವು. ಹಿಂದೂಗಳ ಮನೋಭಾವದ ಹಿನ್ನೆಲೆ, ಪುರಾಣಗಳು, ಪುರಾಣ ಕಥೆಗಳು ಅವರಿಗೆ ಪರಿಚಿತವಿದ್ದವು. ಒಂದೇ ಕೆಲಸವನ್ನು ಮಾಡಿ, ಒಂದೇ ಬಗೆಯ ಜೀವನ ನಡೆಸುತ್ತ, ಒಂದೇ ಬಗೆಯ ಉಡುಪು ಧರಿಸಿ, ಒಂದೇ ಭಾಷೆಯನ್ನು ಮಾತನಾಡುತ್ತಿದ್ದರು. ಪರಸ್ಪರ ಹಬ್ಬ ಗಳನ್ನು ಆಚರಿಸುತ್ತಿದ್ದರು. ಕೆಲವು ಹಬ್ಬಗಳು ಇಬ್ಬರಿಗೂ ಒಂದೇ ಇರುತ್ತಿದ್ದವು. ಅವರ ನಾಡ ಹಾಡುಗಳೂ ಒಂದೇ ಇದ್ದವು. ಇವರೆಲ್ಲರೂ ಸಾಮಾನ್ಯವಾಗಿ ಹಳ್ಳಿಯ ರೈತರು, ಗ್ರಾಮೋದ್ಯೋಗಿ ಗಳು, ಕುಶಲಕರ್ಮಿಗಳು, ಶ್ರೀಮಂತರಿಗೂ, ಹಳ್ಳಿಯ ರೈತರಿಗೂ ಮಧ್ಯೆ ವರ್ತಕರು ಮತ್ತು ವ್ಯಾಪಾರಿಗಳ ಒಂದು ದೊಡ್ಡ ಪಂಗಡವಿತ್ತು. ಇವರೆಲ್ಲ ಹಿಂದೂಗಳಾಗಿದ್ದರು. ರಾಜಕೀಯ ಅಧಿಕಾರ ಅವರ ಕೈಯಲ್ಲಿ ಯಾವುದೂ ಇಲ್ಲದಿದ್ದರೂ ದೇಶದ ಆರ್ಥಿಕ ರಚನೆ ಆವರ ಅಧೀನವಿತ್ತು. ಮುಸ್ಲಿ೦ರೊಂದಿಗೆ ಇವರ ಸಂಬಂಧವು ಶ್ರೀಮಂತರ ಮತ್ತು ರೈತರ ಸಂಬಂಧಕ್ಕಿಂತಲೂ ಕಡಮೆ ಇತ್ತು. ಹೊರಗಿನಿಂದ ಬಂದ ಮುಸಲ್ಮಾನರಲ್ಲಿ ಶ್ರೀಮಂತಿಕೆಯ ಲಕ್ಷಣ ಹೆಚ್ಚು ಇದ್ದ ಕಾರಣ ವರ್ತಕರೆಂದರೆ ಅವರಿಗೆ ತಾತ್ಸಾರವಿತ್ತು. ಬಡ್ಡಿಯನ್ನು ತೆಗೆದುಕೊಳ್ಳಬಾರದೆಂಬ ಇಸ್ಲಾಂ ಧರ್ಮದ ನಿಯಮವೂ ವ್ಯಾಪಾರಾಭಿವೃದ್ಧಿಗೆ ತಡೆಯಾ ಯಿತು. ತಾವು ಆಡಳಿತಗಾರರು, ಶ್ರೀಮಂತರು, ಸರಕಾರ ನಡೆಸುವ ಅಧಿಕಾರಿಗಳು, ಜಮೀನು ದಾರರು, ಸೈನ್ಯಾಧಿಕಾರಿಗಳು ಎಂಬ ಅಹಂಕಾರವಿತ್ತು. ರಾಜ ಸಭೆಗಳಲ್ಲಿ ಧರ್ಮಶಾಸ್ತ್ರದಲ್ಲಿ ಮತ್ತು ಇತರ ವಿದ್ಯೆಗಳಲ್ಲಿ ನಿಷ್ಣಾತರಾದ ಪಂಡಿತರಿದ್ದರು. ಮೊಗಲರ ಕಾಲದಲ್ಲಿ ಅನೇಕ ಹಿಂದುಗಳು ರಾಜಭಾಷೆಯಾದ ಪಾರಸಿ ಭಾಷೆಯಲ್ಲಿ ಅನೇಕ ಗ್ರಂಥಗಳನ್ನು ಬರೆದರು. ಇವುಗಳಲ್ಲಿ ಕೆಲವು ಮಹಾ ಕಾವ್ಯಗಳಾಗಿವೆ. ಅದೇ ರೀತಿಯಾಗಿ ಮುಸ್ಲಿಂ ವಿದ್ವಾಂಸರು ಸಂಸ್ಕೃತ ಗ್ರಂಥಗಳನ್ನು ಪಾರಸಿಭಾಷೆಗೆ ಅನುವಾದ ಮಾಡಿದರು ಮತ್ತು ಹಿಂದಿಯಲ್ಲಿ ಗ್ರಂಥಗಳನ್ನು ರಚಿಸಿದರು. ಆ ರೀತಿ ಪ್ರಖ್ಯಾತರಾದ ಹಿಂದಿ ಕವಿಗಳೆಂದರೆ “ ಪದ್ಮಾವತ” ಗ್ರಂಥವನ್ನು ಬರೆದ ಮಾಲಿಕ ಮಹಮ್ಮದ್ ಜೈಸಿ ಮತ್ತು ಅಕ್ಷರನ ಆಸ್ಥಾನದ ಪ್ರಮುಖ ಸರದಾರನೂ, ಅಕೃರನ ಪೋಷಕನ ಮಗನೂ ಆದ ಅಬ್ದುಲ್ ರಹೀಂ ಖಾನ್ ಖಾನಾ ಖಾನ್ ಖಾನಾ ಅರಬ್ಬಿ, ಪಾರಸಿ, ಸಂಸ್ಕೃತ ಭಾಷೆಗಳಲ್ಲಿ ಉದ್ದಾಮ ಪಂಡಿತನಾಗಿದ್ದನಲ್ಲದೆ ಆತನ ಹಿಂದಿಕಾವ್ಯವು ಶ್ರೇಷ್ಠ ಶೈಲಿಯಲ್ಲಿದೆ. ಕೆಲವು ಕಾಲ ಆತನು ಸಾಮ್ರಾಜ್ಯಸೇನೆಯ ಅಧಿಪತಿಯಾಗಿದ್ದನು. ಆದರೂ ಅಕ್ಷರನೊಂದಿಗೆ ಸದಾ ಯುದ್ದ ಮಾಡುತ್ತ ಶರಣಾಗತನಾಗದ ಮೇವಾಡದ ಅಧಿಪತಿ ರಾಣಾ ಪ್ರತಾಪ ನನ್ನು ಹೊಗಳಿ ಕೊಂಡಾಡಿದ್ದಾನೆ. ಯುದ್ಧರಂಗದಲ್ಲಿ ತನ್ನ ಶತ್ರುವು ತೋರಿಸಿದ ಧೈರ್ಯ, ಉನ್ನತ ಮನೋಭಾವ, ದೇಶಾಭಿಮಾನಗಳನ್ನು ಖಾನ್ ಖಾನಾ ಮುಕ್ತ ಕಂಠದಿಂದ ಹೊಗಳಿದ್ದಾನೆ.

  • ಅಕ್ಟರನು ತನ್ನ ರಾಜನೀತಿಯನ್ನು ರೂಪುಗೊಳಿಸಿದ್ದು ಈ ಉದಾರ ದೃಷ್ಟಿ ಮತ್ತು ಸ್ನೇಹ ಭಾವದಿಂದ. ಅದನ್ನೇ ಆತನ ಸರದಾರರೂ ಮಂತ್ರಿಗಳೂ ಅನುಕರಣಮಾಡಿದರು, ತನಗೂ ರಾಜ ಪುತ್ರರಿಗೂ ಸಮಾನವಾಗಿದ್ದ ಹುಚ್ಚು ಧೈರ್ಯ, ಗೌರವಯುತವೂ ಉದಾರವೂ ಆದ ನೀತಿ, ಕೊಟ್ಟ ಮಾತನ್ನು ತಪ್ಪದಿರುವುದು-ಈ ಗುಣಗಳನ್ನು ಮೆಚ್ಚಿ ರಾಜಪುತ್ರರೆಂದರೆ ಅಕ್ಷರನಿಗೆ ತುಂಬ ಪ್ರಾಣ. ಈ ಎಲ್ಲ ಗುಣಗಳಿದ್ದರೂ ರಾಜಪುತ್ರ ಸಮಾಜದ ಕಂದಾಚಾರದ ಪದ್ಧತಿಗಳು ಹೊಸ ಶಕ್ತಿ ಗಳ, ಸನ್ನಿವೇಶಗಳಿಗೆ ಹೊಂದಿಕೊಳ್ಳಲಿಲ್ಲ. ಅಕ್ಷರನೇ ತನ್ನ ಸಾಮಾಜಿಕ ಪರಂಪರೆಯ ಬಂದಿಯಾಗಿ ದ್ದುದರಿಂದ ಈ ಹೊಸ ಶಕ್ತಿಗಳ ಅರಿವೂ ಅವನಿಗೆ ಆಗಲಿಲ್ಲ.

ಉತ್ತರ ಮಧ್ಯ ಭಾರತದಲ್ಲಿ ಅನೈಕ್ಯತೆಯಲ್ಲಿ ಐಕ್ಯತೆಯನ್ನು ಸಾಧಿಸಿದ ಅಕ್ಷರನ ಸಾಹಸವು