ಪುಟ:ಭಾರತ ದರ್ಶನ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ಅತ್ಯದ್ಭುತವಾದುದು, ಪರದೇಶೀಯರಾದ ಆಡಳಿತವರ್ಗದವರ ತೊಂದರೆ ಇತ್ತು ; ಜಾತಿ ಮತಗಳ ತೊಂದರೆ ಇತ್ತು ; ಒಂದು ಮತಾಂತರವನ್ನು ಒಪ್ಪಿ ಮತಾಂತರ ಮಾಡುತ್ತಿದ್ದ ಧರ್ಮ, ಇನ್ನೊಂದು ಮತಾಂತರವನ್ನು ಒಪ್ಪದ ಕಟ್ಟುನಿಟ್ಟಾದ ಧರ್ಮ, ಈ ಅಡಚಣೆಗಳ್ಯಾವುವೂ ಹೋಗದೆ ಇದ್ದರೂ ಒಂದು ಏಕೀಭಾವನೆಯು ಉತ್ಪನ್ನ ವಾಯಿತು. ಅದು ಕೇವಲ ಆತನ ವ್ಯಕ್ತಿ ಪ್ರೇಮದಿಂದ ಹುಟ್ಟಿದುದಲ್ಲ; ಆತನು ನಿರ್ಮಾಣಮಾಡಿದ ಸುಂದರ ಭಾವನಾ ಸೌಧದ ಮೇಲಿನ ವಿಶ್ವಾಸದಿಂದ, ಆತನ ಮಗ, ಮೊಮ್ಮಗ, ಜಹಾಂಗೀರ್ ಮತ್ತು ಷಹಜಹಾನ್ ಇಬ್ಬರೂ ಆ ಸೌಧವನ್ನು ಒಪ್ಪಿ ಅದರ ಚೌಕಟ್ಟಿನ ಒಳಗೇ ಕೆಲಸಮಾಡಿದರು. ಅವರಲ್ಲಿ ವಿಶೇಷಗುಣಗಳೇನೂ ಇಲ್ಲದಿದ್ದರೂ ಅಕೃರನು ಹಾಕಿದ ದಾರಿ ಯಲ್ಲೇ ನಡೆದದ್ದರಿಂದ ಅವರ ರಾಜ್ಯಭಾರವೂ ಯಶಸ್ವಿಯಾಯಿತು. ಮುಂದೆ ಬಂದ ಅವರಂಗ ಜೇಬ್ ಬಹಳ ಗಟ್ಟಿಗನಾದರೂ ಬೇರೆ ಭಾವನೆಯಿಂದ ಅಕ್ಷರನ ಮಾರ್ಗದಿಂದ ಹೊರಬಿದ್ದು ಅಕ್ಷರು ಕಟ್ಟಿದ ಸೌಧವನ್ನು ಒಡೆದುಹಾಕಿದನು. ಆದರೂ ಪೂರ್ತಿಯಾಗಿ ನಾಶವಾಗಲಿಲ್ಲ. ಅವರಂಗಜೇ ಬನೂ ಮತ್ತು ಅವನ ನಂತರ ದುರ್ಬಲ ಮಾಗಲ್ ಚಕ್ರವರ್ತಿಗಳೂ ಬಂದರೂ ಅಕ್ಷರನ ಮೇಲಿನ ಗೌರವವು ನಾಶವಾಗಲಿಲ್ಲ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಮಾತ್ರ ಈ ಗೌರವವಿತ್ತು. ದಕ್ಷಿಣ ಮತ್ತು ಪಶ್ಚಿಮ ಭಾರತಕ್ಕೆ ಅದು ಹರಡಲಿಲ್ಲ, ವಿರೋಧ ಚಳವಳಿಯ ಪಶ್ಚಿಮ ಭಾರತದಿಂದಲೇ ಬಂದಿತು. ೧೨. ಅವರಂಗಜೇಬನ ಪ್ರತಿಗಾಮಿ ಮನೋಭಾವ : ಹಿಂದೂ ರಾಷ್ಟ್ರೀಯ ಭಾವನೆಯ ಬೆಳೆವಣಿಗೆ : ಶಿವಾಜಿ ಷಹಜಹಾನನೂ, ಫ್ರಾನ್ಸಿನ 'ಮಹಾಪ್ರಭು' ಎಂದು ವಿಖ್ಯಾತನಾಗಿದ್ದ ೧೪ ನೆಯ ಲೂಯಿಯೂ ಸಮಕಾಲೀನರು. ಆಗ ಮಧ್ಯ ಯೂರೋಪಿನಲ್ಲಿ ಮೂವತ್ತು ವರ್ಷಗಳ ಯುದ್ಧ' ನಡೆಯುತ್ತ ಇತ್ತು. ವರ್ಸೆಲ್ಫ್ ನಗರವು ರೂಪುಗೊಂಡಂತೆ ಆಗ್ರ ನಗರದ ತಾಜಮಹಲ್ ಮೋತಿ ಮಸೀದಿ, ದೆಹಲಿಯ ಜುಮ್ಮಾ ಮಸೀದಿ, ಸಾಮ್ರಾಟನ ಅರಮನೆಯ “ ದಿವಾನಿ ಆಮ್ ” ಮತ್ತು “ ದಿವಾನಿ-ಖಾಸ್ " ರೂಪುಗೊಳ್ಳುತ್ತಿದ್ದವು. ಈ ಸುಂದರ ಸೌಧಗಳು ತಮ್ಮ ತಮ್ಮ ಸ್ವರ್ಗಿಯ ಸೌಂದರ್ಯದಿಂದ ಮೊಗಲ ವೈಭವದ ಉನ್ನತಿಯ ಪ್ರತಿನಿಧಿಗಳಂತಿವೆ. ಮಯೂರ ಸಿಂಹಾಸನದಿಂದ ಅಲಂಕೃತವಾದ ದೆಹಲಿಯ ರಾಜ ಸಭೆಯು ವರೈಲ್ಸ್ ರಾಜಸಭೆಗಿಂತ ವೈಭವಯುಕ್ತವೂ, ಜಾಜ್ವಲ್ಯವೂ ಇತ್ತು ; ಆದರೆ ವರೇಲ್‌ನಂತೆ ಇದೂ ಬಡವರ ರಕ್ತವನ್ನು ಹೀರಿ ಬೆಳದದ್ದು, ಗುಜರಾತ್ ಮತ್ತು ದಕ್ಷಿಣ ಭಾರತ ದಲ್ಲಿ ಭಯಂಕರ ಕ್ಷಾಮ ಒದಗಿತ್ತು. ಈ ಮಧ್ಯೆ ಇಂಗ್ಲೆಂಡಿನ ನಾವಿಕಾಬಲವು ಬಲಗೊಂಡು ವಿಶಾಲಗೊಳ್ಳುತ್ತಲಿತ್ತು. ಅಕ್ಷರ್‌ನಿಗೆ ಪೋರ್ತುಗೀಸರ ಪರಿಚಯ ಮಾತ್ರ ತಿಳಿದಿತ್ತು. ಜಹಾಂಗೀರನ ಕಾಲದಲ್ಲಿ ಬ್ರಿಟಿಷ್ ನಾವಿಕಾಬಲವು ಹಿಂದೂ ಸಾಗರದಲ್ಲಿ ಪೋರ್ತುಗೀಸರನ್ನು ಸೋಲಿಸಿತು. ಇಂಗ್ಲೆಂಡಿನ ರಾಜನಾದ ಮೊದಲನೆಯ ಜೇನ್ನನ ರಾಯಭಾರಿಯಾಗಿ ಸರ್ ಥಾಮಸ್ ರೋ ೧೬೧೫ ರಲ್ಲಿ ಜಹಾಂಗೀರನ ಆಸ್ಥಾನಕ್ಕೆ ಬಂದನು. ವ್ಯಾಪಾರದ ಗಡಂಗುಗಳನ್ನು ಆರಂಭಿಸಲು ಅಪ್ಪಣೆ ಪಡೆಯುವದರಲ್ಲಿ ಕೃತಕೃತ್ಯನಾದನು. ಸೂರತ್ ನಲ್ಲಿ ಗಡಂಗು ಆಯಿತು. ಮದರಾಸಿನಲ್ಲಿ ೧೬೩೯ರಲ್ಲಿ ಆರಂಭವಾಯಿತು. ಸುಮಾರು ಒಂದು ನೂರು ವರ್ಷಗಳವರೆಗೆ ಭಾರತದಲ್ಲಿ ಬ್ರಿಟಿಷರಿಗೆ ಯಾರೂ ಯಾವ ಪ್ರಾಮುಖ್ಯತೆಯನ್ನೂ ಕೊಡಲಿಲ್ಲ. ಸಮುದ್ರ ಮಾರ್ಗಗಳೆಲ್ಲ ಬ್ರಿಟಿಷರ ಅಧೀನವಿದ್ದು ದೂ, ಬ್ರಿಟಿಷರು ಪೋರ್ತುಗೀಸರನ್ನು ಹೊಡೆದೋಡಿ ಸಿದುದೂ ಮೊಗಲ್ ಚಕ್ರವರ್ತಿಗಳ ಮೇಲಾಗಲಿ, ಅವರ ಮಂತ್ರಾಲೋಚಕರ ಮೇಲಾಗಲಿ ಯಾವ ಪರಿಣಾಮವನ್ನೂ ಮಾಡಲಿಲ್ಲ, ಅವರಂಗಜೇಬನಕಾಲದಲ್ಲಿ ಮೊಗಲ್ ಚಕ್ರಾಧಿಪತ್ಯವು ಸಡಿಲು ದ್ದಾಗ ಭಾರತದಲ್ಲಿ ಬ್ರಿಟಿಷರು ಯುದ್ದ ಮಾಡಿ ೧೬೮೫ ರಲ್ಲಿ ತಮ್ಮ ಸ್ವಾಸ್ಥೆಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಟ್ಟರು. ಅವರಂಗಜೇಬನು ಬಲಹೀನನಾಗಿದ್ದರೂ ಆತನಿಗೆ ಅನೇಕ ಶತ್ರುಗಳಿದ್ದರೂ ಬ್ರಿಟಿಷರನ್ನು ಸೋಲಿಸಿದನು. ಇದಕ್ಕೂ ಮುಂಚೆ ಫ್ರೆಂಚರು ಬಂದು ಕೆಲವು ಬೀಡುಗಳನ್ನು ಕಟ್ಟಿದ್ದರು