ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ಇದಕ್ಕೆ ಮುಂಚೆಯೇ ಮೊಗಲ್ ಚಕ್ರಾಧಿಪತ್ಯವು ಒಡೆದು ಹೋಗಿದ್ದರೂ ಭಾರತದ ಬಹು ಭಾಗದಲ್ಲಿ ಅನಾಯಕತ್ವವು ಇರಲಿಲ್ಲ. ಬಂಗಾಲದಲ್ಲಿ ಮೊಗಲ್ ರಾಜಪ್ರತಿನಿಧಿಯಿಂದ ಅಲ್ಲಾ ವರ್ದಿಯು ಕಾಲದಲ್ಲಿ ಶಾಂತಿ ಇತ್ತು, ಕ್ರಮವಾದ ಆಡಳಿತ ಪದ್ದತಿ ಇತ್ತು, ವ್ಯಾಪಾರೋದ್ಯಮಗಳು ಅಭಿವೃದ್ಧಿ ಯಾಗಿ ದೇಶದ ಸಂಪತ್ತು ಹೆಚ್ಚಿತ್ತು. ಅಲ್ಲಾ ವರ್ದಿಯ ಮರಣದ ನಂತರ ಸ್ವಲ್ಪ ದಿನಗಳಲ್ಲೇ ಪ್ಲಾಸಿ ಕದನವು ನಡೆಯಿತು. ತಮಗೆ ಇಷ್ಟ ಬಂದಂತೆ ನಡೆಯಲು ಪೂರ್ಣಸ್ವತಂತ್ರರಿದ್ದರೂ ಬ್ರಿಟಿಷರು ದೆಹಲಿಯ ಚಕ್ರವರ್ತಿಯ ಪ್ರತಿನಿಧಿಗಳಾದರು. ಅನಂತರ ಕಂಪನಿಯ ಅದರ ಅಧಿಕಾರಿಗಳೂ, ಗಡಂಗುಗಳ ಅಧಿಕಾರಿಗಳೂ ಬಂಗಾಳವನ್ನು ಕೊಳ್ಳೆ ಹೊಡೆಯಲು ಆರಂಭಿಸಿದರು. ಪ್ಲಾಸಿ ಕದನವಾದ ಸ್ವಲ್ಪ ವರ್ಷಗ ಳಲ್ಲಿ ಮಧ್ಯ ಭಾರತದಲ್ಲಿ ಇಂದೂರಿನ ಅಹಲ್ಯಾಬಾಯಿಯ ರಾಜ್ಯಭಾರವು ಉಪಕ್ರಮವಾಗಿ ೧೭೬೫ ರಿಂದ ೧೭೯೫ರವರೆಗೆ ಮೂವತ್ತು ವರ್ಷಗಳು ನಡೆಯಿತು. ಆ ಕಾಲದಲ್ಲಿ ಸಂಪೂರ್ಣ ನೆಮ್ಮದಿಯಿಂದ ಸುವ್ಯವಸ್ಥಿತ ರಾಜ್ಯಾಡಳಿತ ಪದ್ಧತಿಯಲ್ಲಿ ಜನರು ಸುಖದಿಂದ ಮುಂದುವರಿದುದು ಒಂದು ಐತಿಹಾಸಿಕ ಘಟನೆಯೇಸರಿ, ಆಕೆಯ ದಕ್ಷತೆ ಮತ್ತು ಸಂಘಟನ ಶಕ್ತಿಗಳು ಅದ್ಭುತವಾಗಿದ್ದವು. ಜನರು ಆಕೆಯನ್ನು ಗೌರವದಿಂದ ಕಾಣುತ್ತಿದ್ದರು; ಸತ್ತ ನಂತರವೂ ಜನರು ಕೃತಜ್ಞತೆಯಿಂದ ದೇವಾಂಶ ಸಂಭೂತನೆಂದು ಪೂಜಿಸಿದರು. ಈ ರೀತಿ ಈಸ್ಟ್ ಇಂಡಿಯ ಕಂಪನಿಯ ಆಡಳಿತದಲ್ಲಿ ಬಂಗಾಲ ಬಿಹಾರದಲ್ಲಿ ಪರಿ ಸ್ಥಿತಿಯು ಹದಗೆಟ್ಟು, ವ್ಯವಸ್ಥಿತ ದರೋಡೆಗಳಿಂದ ರಾಜಕೀಯ ಆರ್ಥಿಕ ಅನಾಯಕತ್ವವೂ, ಭಯಂ ಕರ ಕ್ಷಾಮವೂ ಒದಗಿದ್ದಾಗ ಮಧ್ಯ ಭಾರತ ಮತ್ತು ದೇಶದ ಇನ್ನೂ ಅನೇಕ ಭಾಗಗಳು ಅಭಿವೃದ್ಧಿ ಸ್ಥಿತಿಯಲ್ಲಿದ್ದವು. * ಬ್ರಿಟಿಷರಿಗೆ ಶಕ್ತಿಯೂ ಇತ್ತು, ಐಶ್ವರವೂ ಇತ್ತು. ಆದರೆ ಒಳ್ಳೆಯ ಆಡಳಿತ ಅಥವಾ ಯಾವ ಆಡಳಿತದ ಜವಾಬ್ದಾರಿಯನ್ನೂ ಅವರು ವಹಿಸಿಕೊಳ್ಳಲಿಲ್ಲ. ಈಸ್ಟ್ ಇಂಡಿಯ ಕಂಪೆನಿಯ ವರ್ತಕರ ದೃಷ್ಟಿ ಎಲ್ಲ ಲಾಭ ಮತ್ತು ಐಶ್ವರ್ಯದ ಮೇಲಿತ್ತು: ತಮ್ಮ ಅಧೀನದಲ್ಲಿದ್ದ ಜನರ ಸೌಖ್ಯದ ಕಡೆ ಇರ ಲಿಲ್ಲ. ಮುಖ್ಯವಾಗಿ ಅಧೀನ ಪ್ರಾಂತ್ಯಗಳಲ್ಲಿ ರಾಜ್ಯದ ಅಧಿಕಾರಕ್ಕೂ ಜವಾಬ್ದಾರಿಗೂ ಇದ್ದ ಸಂಬಂ ಧವು ಪೂರ್ಣ ಕಡಿದು ಹೋಗಿತ್ತು, ಬ್ರಿಟಿಷರು ಮರಾಠರನ್ನು ಸೋಲಿಸಿ ಪೂರ್ಣ ಜಯವನ್ನು ಗಳಿಸಿದ ಮೇಲೆ ರಾಜ್ಯಾಡಳಿತದ ಕಡೆ ಗಮನಕೊಟ್ಟು ಒಂದು ಬಗೆಯ ವ್ಯವಸ್ಥೆಯನ್ನು ತಂದರು. ಅಧೀನ ಸಂಸ್ಥಾನಗಳಲ್ಲಿ ರಾಜನಿಗೂ, ರಾಜ್ಯದ ಆಡಳಿತ ಜವಾಬ್ದಾರಿಗೂ ಯಾವ ಸಂಬಂಧವೂ ಇಲ್ಲದ್ದರಿಂದ ಅಲ್ಲಿನ ವ್ಯವಸ್ಥೆ ಯು ರೂಪು ಗೊಳ್ಳಲು ಬಹುಕಾಲ ಬೇಕಾಯಿತು. ನಾವೆಲ್ಲಾ ದರೂ ಮರೆತೇವೆಂದು ಬ್ರಿಟಿಷರು ಭಾರತವನ್ನು ಕೋಭೆಯಿಂದ ಅನಾಯಕತ್ವದಿಂದ ತಾವು ರಕ್ಷಿಸಿದೆವೆಂದು ಪದೇ ಪದೇ ಹೇಳುತ್ತಿದಾರೆ. ಈ ಕಾಲದ ನಂತರ ವ್ಯವಸ್ಥಿತ ರಾಜ್ಯಾಡಳಿತ ಪದ್ದತಿಯನ್ನು ಏರ್ಪಡಿಸಿದರು, ನಿಜ. ಆದರೆ ಮರಾಠರು ಈ ಕಾಲವನ್ನು “ ರಕ್ತಪಾತದ ಕಾಲ ” ಎಂದು ಕರೆದಿದ್ದಾರೆ. ಈಸ್ಟ್ ಇಂಡಿಯ ಕಂಪನಿ ಮತ್ತು ಭಾರತದಲ್ಲಿ ಅದರ ಪ್ರತಿನಿಧಿಗಳ ನೀತಿಯೇ ಈ ಕ್ಷೇಭೆ ಮತ್ತು ಅನಾಯಕತ್ವಕ್ಕೆ ಮುಖ್ಯ ಕಾರಣವಾಯಿತು, ಸಹಾಯ ಮಾಡುತ್ತೇವೆಂದು ಮುಂದೆ ಬಂದು ದ್ರೋಹ ಮಾಡದಿದ್ದರೆ ಪ್ರಾಯಶಃ ಪರಮಾಧಿಕಾರಕ್ಕಾಗಿ ನಡೆದ ಹೋರಾಟಗಳು ನಿಂತಮೇಲೆ ಶಾಂತಿಯೂ, ಆಡಳಿತ ವ್ಯವಸ್ಥೆ ಯ ತಾನಾಗಿಯೇ ನೆಲೆಗೊಳ್ಳುತಿತ್ತು. ಭಾರತದ ಐದು ಸಾವಿರ ವರ್ಷಗಳ ಇತಿಹಾಸದಲ್ಲಿ ಇತರ ದೇಶಗಳಲ್ಲಿ ಕಂಡುಬರುವಂತೆ ಅಂತಹ ಸನ್ನಿವೇಶಗಳು ಎಷ್ಟೋ ಇವೆ. - ೧೫, ರಣಜಿತಸಿಂಗ್ ಮತ್ತು ಜಯಸಿಂಗ್, ತನ್ನ ಜನರ ದೌರ್ಬಲ್ಯದಿಂದ ಮತ್ತು ಬ್ರಿಟಷರು ಉತ್ತಮವೂ, ಪ್ರಗತಿ ಪರವೂ ಆದ ಒಂದು ಸಮಾಜರಚನೆಯ ಪ್ರತಿನಿಧಿಗಳಾದ್ದರಿಂದ ಭಾರತವು ಪರಾಧೀನಕ್ಕೆ ಬಲಿಯಾಯಿತೆಂಬುದು ನಿರ್ವಿವಾದ.