________________
ಭಾರತ ದರ್ಶನ ಎರಡೂ ಕಡೆಯ ನಾಯಕರನ್ನು ಹೋಲಿಸಿ ನೋಡಿದರೆ ವ್ಯತ್ಯಾಸವು ಎದ್ದು ಕಾಣುತ್ತದೆ; ಭಾರತೀ ಯರು ಎಷ್ಟೇ ಶಕ್ತರಿದ್ದರೂ ಅವರ ಭಾವನೆಯ ಮತ್ತು ಕಾರ್ಯಗಳ ಪ್ರಪಂಚವು ಸಂಕುಚಿತವಿತ್ತು; ಪ್ರಪಂಚದ ಇತರ ಭಾಗಗಳಲ್ಲಿ ಆಗುತ್ತಿರುವ ಪ್ರಗತಿಯ ಪರಿಜ್ಞಾನವಿರಲಿಲ್ಲ; ಮತ್ತು ಆ ವ್ಯತ್ಯಸ್ಥ ಸನ್ನಿ ವೇಶಗಳಿಗೆ ತಾವು ಹೊಂದಿಕೊಳ್ಳಲಿಲ್ಲಕೆಲವು ವ್ಯಕ್ತಿಗಳಲ್ಲಿ ಆ ಮನೋಕೌತುಕ ಉಂಟಾದರೂ ತಮ್ಮನ್ನು ಬಂಧಿಸಿದ್ದ ಕರಟ ಬಂಧನವನ್ನು ಒಡೆದು ಹೊರಬಿದ್ದ ಪ್ರಗತಿಯನ್ನು ಸಾಧಿಸಲು ಶಕ್ತರಿರ ಲಿಲ್ಲ. ಇಂಗ್ಲಿಷರಿಗೆ ಪ್ರಪಂಚದ ಅನುಭವಜ್ಞಾನ ತುಂಬ ಇತ್ತು; ತಮ್ಮ ದೇಶದಲ್ಲಿ ಅಲ್ಲದೆ ಪ್ರಾನ್ಸ್ ಮತ್ತು ಅಮೆರಿಕೆಗಳಲ್ಲಿ ಆದ ಘಟನೆಗಳು ಅವರನ್ನು ಬುಡಮೇಲುಮಾಡಿ ಯೋಚಿಸುವಂತೆಯೂ ಮಾಡಿದ್ದವು. ಎರಡು ಮಹಾ ವಿಪ್ಲವಗಳಾಗಿದ್ದವು. ಫ್ರಾನ್ಸಿನ ಕ್ರಾಂತಿಕಾರರ ಪಡೆಗಳ ಮತ್ತು ನೆಪೊಲಿಯನ್ ಸೈನ್ಯಗಳ ದಂಡಯಾತ್ರಗಳಿಂದ ಯುದ್ಧ ವಿಜ್ಞಾನವು ಪೂರ್ಣ ವ್ಯತ್ಯಾ ಸವಾಗಿತ್ತು. ಭಾರತಕ್ಕೆ ಬರುವ ಹೊತ್ತಿಗೆ ಎಷ್ಟೇ ಶುಂಠನಾದರೂ ಇಂಗ್ಲಿಷ್ನವನು ಪ್ರಯಾಣ ಮಾರ್ಗದಲ್ಲಿ ಪ್ರಪಂಚದ ನಾನಾ ಭಾಗಗಳ ಪರಿಚಯ ಪಡೆಯುತ್ತಿದ್ದನು. ಇಂಗ್ಲೆಂಡ್ ನಲ್ಲಿ ಕ್ರಾಂತಿಕಾರಕ ಸಂಶೋಧನೆಗಳಾಗಿ ಔದ್ಯೋಗಿಕ ವಿಪ್ತ ವವು ಆರಂಭವಾಗಿತ್ತು. ಪ್ರಾಯಶಃ ಅದರಿಂದ ಮುಂದೆ ಆಗತಕ್ಕ ಪರಿಣಾಮವನ್ನು ಊಹಿಸಿದವರು ಬಹಳ ವಿರಳರಿರಬೇಕು. ಆದರೂ ಪರಿವರ್ತನೆಯ ಪ್ರಭಾವವು ಪ್ರಬಲವಾದ ಪರಿಣಾಮವಾಡುತ್ತ ಜನಜೀವನವನ್ನು ಮಾರ್ಪಡಿಸು ತಿತ್ತು. ಇದೆಲ್ಲದರ ಹಿಂದೆ ದೂರದ ತೀರಗಳಿಗೆ ಬ್ರಿಟಿಷರನ್ನು ಕಳುಹಿಸಿದ ಅವರ ಉಕ್ಕಿ ಹರಿಯುವ ಅದ್ಭುತ ಕಾರ್ಯಶಕ್ತಿ ಇತ್ತು.
- ಭಾರತದ ಇತಿಹಾಸವನ್ನು ಬರೆದವರೆಲ್ಲ ಆಗಿನ ಯುದ್ಧಗಳು, ವಿಪ್ತವಗಳು, ರಾಜಕೀಯ ಮತ್ತು ಯುದ್ಧರಂಗದ ನಾಯಕರುಗಳ ವಿಷಯ ಬರೆದಿದ್ದಾರೆಯೇ ವಿನಾ ಭಾರತದ ಮನಸ್ಸಿನ ಆಗಿನ ಕಾಲದ ಭಾವನೆಗಳೇನು ? ಆಗ ಯಾವ ಸಾಮಾಜಿಕ ಆರ್ಥಿಕ ಶಕ್ತಿಗಳು ಜನರ ಮನಸ್ಸನ್ನು ಆಕರ್ಷಿಸಿದ್ದವು ಎಂದು ಯಾರೂ ಹೇಳುವುದಿಲ್ಲ. ಈ ಬೇಸರದ ಚರಿತ್ರೆಯಲ್ಲಿ ಎಲ್ಲೋ ಅಪ್ಪಿ ತಪ್ಪಿ ಅಲ್ಲೊಂದು ಇಲ್ಲೊಂದು ಒಳನೋಟ ದೊರೆಯುತ್ತದೆ. ಈ ಭೀಕರ ಕಾಲದಲ್ಲಿ ಜನರು ನಿಕ್ಷೇತನರಾಗಿ ಭೂಗತರಾದಂತೆ ತೋರುತ್ತದೆ. ಭ್ರಮೆಗೊಂಡು, ಯಾವ ಉತ್ಸಾಹವೂ ಇಲ್ಲದೆ ವಿಧಿ ಇಟ್ಟು ದಾಗಲೆಂದು ಬಂದುದನ್ನೆಲ್ಲ ಅನುಭವಿಸಿದಂತೆ ತೋರುತ್ತದೆ. ಉತ್ಸುಕರಾದವರೂ ಅನೇಕ ವ್ಯಕ್ತಿಗಳು ಇದ್ದಿರಬೇಕು. ತಮ್ಮೆದುರು ತಾಂಡವವಾಡುವ ಹೊಸ ಶಕ್ತಿಗಳನ್ನು ಅರಿಯಲು ಪ್ರಯತ್ನ ಪಟ್ಟರಬೇಕು. ಆದರೆ ಕಾಲವಿದ್ಯಮಾನ ಗಳ ಮೇಲೆ ಪ್ರಭಾವ ಬೀರಲು ಅವರು ಅಸಮರ್ಥರಾಗಿ ತಾವೇ ಅವುಗಳಿಗೆ ಬಲಿಯಾದರು.
ಅಂತಹ ಉತ್ಸಾಹಪೂರ್ಣ ವ್ಯಕ್ತಿಗಳಲ್ಲಿ ಮಹಾರಾಜ ರಣಜಿತ್‌ಸಿಂಗ್ ಒಬ್ಬನು. ಜಾತ್ ಸಿಕ್ಕನಾಗಿ, ಪಂಜಾಬಿನಲ್ಲಿ ರಾಜ್ಯವನ್ನು ಕಟ್ಟಿ ಕಾಶ್ಮೀರ ಮತ್ತು ವಾಯವ್ಯ ಪ್ರಾಂತದವರೆಗೆ ಪಸರಿಸಿ ದನು. ಆತನಲ್ಲಿ ಕೆಲವು ದೌರ್ಬಲ್ಯ ದುರ್ಗುಣಗಳಿದ್ದರೂ ಆತನೊಬ್ಬ ಮಹಾವ್ಯಕ್ತಿ. ಫ್ರಾನ್ಸಿನ ಜಾಕವ್ವ ಆತನನ್ನು “ಮಹಾವೀರ, ನಾನು ನೋಡಿರುವ ಭಾರತೀಯರಲ್ಲಿ ಕುತೂಹಲ ಮನೋಭಾವ ವುಳ್ಳವರಲ್ಲಿ ಈತನೇ ಮೊದಲಿಗನು. ಆದರೆ ಇಡೀ ರಾಷ್ಟ್ರವೇ ಉತ್ಸಾಹ ಶೂನ್ಯವಿರುವಾಗ ಈತನ ಕುತೂಹಲದಿಂದೇನು ಪ್ರಯೋಜನ ? ಆತನೊಡನೆ ಸಂಭಾಷಣೆ ಒಂದು ಮಹಾ ಒಗಟು ” ಎಂದಿ ದ್ದಾನೆ. ಸಾಮಾನ್ಯವಾಗಿ ಭಾರತೀಯರು ಸಂಕೋಚ ಸ್ವಭಾವದವರು ; ಅವರಲ್ಲಿ ವಿದ್ಯಾವಂತರಂತೂ ಇನ್ನೂ ಸಂಕೋಚ ಸ್ವಭಾವದವರು. ಬ್ರಿಟಿಷರ ಕಾರನೀತಿಯನ್ನು ಕಂಡು ಭಯಭ್ರಾಂತರಾಗಿದ್ದ ಇವರಲ್ಲನೇಕರು ಭಾರತದಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಗಳೊಂದಿಗೆ ದುಷ್ಟ ಸಾಹಸಿಗರೊಂದಿಗೆ ಸಂಪರ್ಕ ಬೆಳೆಸಲು - ಯಾರೂ ಒಪ್ಪುತ್ತ ಇರಲಿಲ್ಲ. ಆದ್ದರಿಂದ ಈ ವಿದ್ಯಾವಂತರು ಪರದೇಶೀ ಜನರಿಂದ ಆದಷ್ಟು ದೂರವಿದ್ದು ತಮ್ಮ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟರು. ನಿರ್ವಾಹವಿಲ್ಲದೆ ಇದ್ದಾಗ ನೆಪಮಾತ್ರಕ್ಕೆ ಅವರ ಭೇಟಿಮಾಡುತ್ತಿದ್ದರು. ಇಂಗ್ಲಿಷರ ಮತ್ತು ಇತರ ವಿದೇಶೀಯರ ಬಳಿ ಹೋಗುತ್ತಿದ್ದ ಭಾರತೀಯರೆಲ್ಲರೂ ಲಾಭದ ದುರಾಸೆಗೋ ಅಥವ ಕೆಲಸಕ್ಕಾಗಿ ಅವರನ್ನು