ಪುಟ:ಭಾರತ ದರ್ಶನ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೪ ಭಾರತ ದರ್ಶನ ಇಂಡಿಯಾ ಕಂಪನಿಯು ಬ್ರಿಟಿಷರ ರಾಜಕೀಯ ಶಕ್ತಿ, ಬಂಡವಾಳಗಾರಿಕೆ ಮತ್ತು ಆರ್ಥಿಕ ಶಕ್ತಿಯ ಪ್ರತಿನಿಧಿಯಾಗಿತ್ತು. ಅದರ ಅಧಿಕಾರಕ್ಕೆ ಮಿತಿಯೇ ಇರಲಿಲ್ಲ ; ವರ್ತಕರ ಸಂಸ್ಥೆಯಾದ್ದರಿಂದ ಲಾಭ ಸಂಪಾದನೆಯೇ ಅದರ ಮುಖ್ಯ ಗುರಿಯಾಗಿತ್ತು. ಅತಿಶೀಘ್ರವಾಗಿ ಅಪಾರ ಹಣವನ್ನು ಸಂಪಾದನೆ ಮಾಡುತ್ತಿದ್ದಾಗ ೧೭೭೯ ರಲ್ಲಿ “ ರಾಷ್ಟ್ರಗಳ ಸಂಪತ್ತು” (The Wealth of Nations) ಎಂಬ ಗ್ರಂಥದಲ್ಲಿ ಆಡಮ್ ಸ್ಮಿತ್‌ನು “ ವರ್ತಕ ಸಂಘವೊಂದು ರಾಜ್ಯಾಡಳಿತವನ್ನೂ ನಡೆಸುವುದು ಯಾವ ದೇಶಕ್ಕಾದರೂ ಅಪಾಯಕರ” ಎಂದು ಹೇಳಿದ್ದಾನೆ. ಭಾರತೀಯ ವರ್ತಕರು, ಕೈಗಾರಿಕೋದ್ಯಮಿಗಳು ತುಂಬ ಐಶ್ವರ್ಯವಂತರಾಗಿ ದೇಶಾದ್ಯಂತ ಹರಡಿ ದೇಶದ ಆರ್ಥಿಕ ರಚನೆಯನ್ನು ತಮ್ಮ ಹತೋಟಿಯಲ್ಲಿ ಇಟ್ಟು ಕೊಂಡಿದ್ದರೂ ಅವರಿಗೆ ಯಾವ ರಾಜಕೀಯ ಅಧಿಕಾರವೂ ಇರಲಿಲ್ಲ. ಸರಕಾರವು ಪಾಳೆಯಗಾರಿಕೆಯ ಪದ್ಧತಿಯದಾಗಿ ನಿರಂಕುಶಾ ಧಿಕಾರ ನಡೆಸುತ್ತಿತ್ತು, ಪ್ರಾಯಶಃ ಭಾರತೀಯ ಇತಿಹಾಸದಲ್ಲಿ ಹಿಂದೆ ಯಾವಾಗಲೂ ಇಲ್ಲದಷ್ಟು ಪಾಳೆಯಗಾರಿಕೆಯು ಈಗ ಇತ್ತು. ಪಾಶ್ಚಿಮಾತ್ಯ ದೇಶಗಳಲ್ಲಿದ್ದಂತೆ ತಮಗೂ ಅಧಿಕಾರಬೇಕೆಂದು ಯೋಚಿಸುವ ಪ್ರಬಲರಾದ ಮಧ್ಯಮವರ್ಗದ ಜನರೇ ಇರಲಿಲ್ಲ. ಸಾಮಾನ್ಯ ಜನರಲ್ಲಿ ತಾತ್ಸಾರ ಮತ್ತು ದಾಸ್ಯ ಮನೋಭಾವವು ಬೇರೂರಿತ್ತು. ಆದ್ದರಿಂದ ಯಾವ ಕ್ರಾಂತಿಕಾರಕ ವ್ಯತ್ಯಾಸವು ಆಗ ಬೇಕಾದರೂ ಮಧ್ಯದ ಅಂತರವು ಹೋಗಬೇಕಾಗಿತ್ತು. ಪ್ರಾಯಶಃ ಪರಿವರ್ತನೆಯಾಗುತ್ತಿರುವ ಪ್ರಪಂಚದಲ್ಲಿ ಪರಿವರ್ತನೆಗೊಳ್ಳಲು ನಿರಾಕರಿಸಿ ಸ್ತಂಭಿತವಾಗಿ ನಿಂತ ಭಾರತದ ಸಮಾಜರಚನೆಯ ಈ ಅಂತರಕ್ಕೆ ಕಾರಣವಾಗಿರಬಹುದು. ಪರಿವರ್ತನೆಯನ್ನು ಎದುರಿಸುವ ಎಲ್ಲ ನಾಗರಿಕತೆಯ ನಾಶ ನಾಗಲೇಬೇಕು. ಆ ಸಮಾಜ ವ್ಯವಸ್ಥೆಯಿಂದ ರಚನಾತ್ಮಕ ಪ್ರಗತಿ ಯಾವುದೂ ಸಾಧನೆಯಾಗುವಂತೆ ಇರಲಿಲ್ಲ. ಆ ಕಾಲದಲ್ಲಿ ಬ್ರಿಟಿಷರು ರಾಜಕೀಯದಲ್ಲಿ ಬಹಳ ಪ್ರಗತಿ ಹೊಂದಿದ್ದರು. ಬ್ರಿಟನ್ ನಲ್ಲಿ ರಾಜ ಕೀಯ ಕ್ರಾಂತಿಯನ್ನುಂಟುಮಾಡಿ ತಮ್ಮ ದೊರೆಯ ಮೇಲೆ ಪಾರ್ಲಿಮೆಂಟಿನ ಪರಮಾಧಿಕಾರವನ್ನು ಸ್ಥಾಪಿಸಿದರು, ಅಲ್ಲಿನ ಮಧ್ಯಮ ವರ್ಗದವರಿಗೆ ತಮ್ಮ ನೂತನ ಶಕ್ತಿಯ ಅರಿವು ಉಂಟಾಗಿ ಹಿಗ್ಗಿದ ಮನೋಭಾವದಲ್ಲಿದ್ದರು. ಬೆಳೆಯುತ್ತಿರುವ ಪ್ರಗತಿ ಪರ ಸಮಾಜದ ಸಾಕ್ಷೀಭೂತವಾಗಿ ಇಂಗ್ಲೆಂಡಿನ ಜನಜೀವನದಲ್ಲಿ ಕಾರ್ಯ ಪಟುತ್ವವನ್ನೂ ಕಾರ್ಯಶಕ್ತಿಯನ್ನೂ ಅನೇಕ ರೀತಿಯಲ್ಲಿ ನೋಡಬಹುದು. ಔದ್ಯೋಗಿಕ ಕ್ರಾಂತಿಯ ಕಾಲದ ಸಂಶೋಧನೆಗಳಲ್ಲಿ ಮತ್ತು ನೂತನ ಯಂತ್ರ ಸಾಧನೆಗಳಲ್ಲಿ ಮುಖ್ಯವಾಗಿ ಇವು ಎದ್ದು ಕಾಣುತ್ತವೆ. ಆದರೂ ಬ್ರಿಟಿಷರ ಆಡಳಿತಾಧಿಕಾರ ಯಾರ ಕೈಯಲ್ಲಿ ? ಅಮೆರಿಕಾ ದೇಶದ ಪ್ರಸಿದ್ಧ ಇತಿಹಾಸ ಕಾರರಾದ ಚಾರ್ ಸ್ ಮತ್ತು ಮೇರಿ ಬಿಯರ್ ರು ಅಮೆರಿಕೆಯ ಕ್ರಾಂತಿಯು ಯಶಸ್ವಿಯಾದೊಡನೆ ಅಮೆರಿಕದ ಸಾಮ್ರಾಜ್ಯದ ಪ್ರಾಂತ್ಯಗಳಿಂದ ಬ್ರಿಟಿಷ್ ಆಡಳಿತಗಾರರು ಏಕಾಏಕಿ ನಿರ್ನಾಮವಾದು ದನ್ನು ಬರೆಯುತ್ತ “ಕ್ರೂರ ದುಷ್ಕೃತ್ಯಗಳನ್ನು ಮಾಡುವವರು, ಸಹನೆಯಿಲ್ಲದ ಸಂಕುಚಿತ ವಿಶ್ವವಿದ್ಯಾ ನಿಲಯದ ಶಿಕ್ಷಣ ಪಡೆದವರು, ಸರಕಾರವೆಲ್ಲ ತಮ್ಮ ಅಧಿಕಾರ ಲಾಲಸೆ ಮತ್ತು ಸ್ವಪ್ರತಿಷ್ಠೆಗೆ ಎಂದು ಭಾವಿಸಿದವರು, ಹೊಲ ಗದ್ದೆಗಳ ಅಂಗಡಿ ಪೇಟೆಗಳ ದುಡಿಮೆಗಾರರನ್ನು ನಿಕೃಷ್ಟರೆಂದು ನೋಡು ವವರು, ಜನರನ್ನು ಅವಿದ್ಯೆಯಲ್ಲಿ ಮುಳುಗಿಸಿ ಅಧಿಕಾರ ನಡೆಸುವವರು, ಕ್ಯಾಥೋಲಿಕ್ಕರ ಮೇಲೂ, ಭಿನ್ನಾಭಿಪ್ರಾಯದ ಜನರ ಮೇಲೂ ತಮ್ಮ ಮತವನ್ನು ಹೇರುವವರು, ಒಳನಾಡಿನಲ್ಲಿ ಹಳ್ಳಿಗಳಲ್ಲಿ ಶ್ರೀಮಂತರಿಗೂ, ಮಠಾಧಿಪತಿಗಳಿಗೂ ಪ್ರಾಶಸ್ತ್ರ ಕೊಡುವವರು, ಸೈನ್ಯದಲ್ಲಿ ಮತ್ತು ನಾವೆಯಲ್ಲಿ ನಿಷ್ಕರುಣ ಪಾಶವೀವೃತ್ತಿಯವರು, ಜಮೀನುದಾರರನ್ನು ಪ್ರೋತ್ಸಾಹಿಸಲು ಹಿರಿಯ ಮಗನಿಗೇ ಆಸ್ತಿಯ ಒಡೆತನವನ್ನು ವವರು, ಅಧಿಕಾರಸ್ಥಾನಗಳಿಗೆ, ಬಿಟ್ಟಿ ಲಾಭ ಮತ್ತು ವಿರಾಮ ವೇತನ ಗಳಿಗಾಗಿ ಹೊಗಳು ಭಟ್ಟರಾಗಿ ರಾಜನಸುತ್ತಲೂ ಮುತ್ತಿರುವ ಹಸಿದ ಹೆಬ್ಬುಲಿಯಂತಿರುವ ಮನುಷ್ಯರು ಮತ್ತು ಈ ಪ್ರತಿಷ್ಠೆ ಮತ್ತು ಸುಲಿಗೆಯನ್ನೆಲ್ಲ ಬಡಜನರ ಮೇಲೆ ಹೇರಲು ಅನುಕೂಲವಾದ ರಾಜ್ಯ