ಪುಟ:ಭಾರತ ದರ್ಶನ.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಭಾರತ ದರ್ಶನ

ಧೈರ್ಯದಿಂದ ಘನತೆಯಿಂದ ಕಾರ್ಯತತ್ಪರನಾಗುವುದು; ಜೀವನಕ್ಕೆ ಒಂದು ಅರ್ಥವನ್ನು ಕೊಟ್ಟಿರುವ ಆದರ್ಶಗಳನ್ನು ಬಿಡದೆ ಅನುಸರಿಸುವುದು. ಆದರೆ ಅದು ರಾಜಕಾರಣಿಯ ಮಾರ್ಗವಲ್ಲ.

ಸಾವು ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಆಜನ್ಮಸಿದ್ಧ ಹಕ್ಕು ಎಂದು ಯಾರೋ ಒಬ್ಬರು ಮೊನ್ನೆ ತಾನೆ ಹೇಳಿದರು. ಸ್ವಸಿದ್ದ ವಿಷಯವನ್ನು ಹೇಳಲು ಒಂದು ವಿಚಿತ್ರ ಮಾರ್ಗ, ಆಜನ್ಮಸಿದ್ಧ ಹಕ್ಕನ್ನು ಯಾರೂ ನಿರಾಕರಿಸಿಲ್ಲ; ನಿರಾಕರಿಸಲೂ ಸಾಧ್ಯವಿಲ್ಲ; ಮತ್ತು ನಾವೆಲ್ಲ ಆದಷ್ಟು ದಿನ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಅದನ್ನು ತಪ್ಪಿಸಿಕೊಳ್ಳಲು ಯತ್ನಿಸುತ್ತೇವೆ. ಆದರೂ ಆ ವಾಕ್ಯದಲ್ಲಿ ಒಂದು ವೈಶಿಷ್ಟ ವಿದೆ, ಅದು ಚಿತ್ತಾಕರ್ಷಕವಾಗಿದೆ. ಜೀವ ಕಹಿಯೆಂದು ದೂರುವವರಿಗೆ, ಇಷ್ಟ ಪಟ್ಟರೆ ಬಿಡುಗಡೆಯ ಮಾರ್ಗ ಸದಾಸಿದ್ದವಿದೆ. ಆ ಗುರಿ ಸದಾ ನಮ್ಮ ಶಕ್ತಿಗೆ ನಿಲುಕುವಂತಿದೆ. ಜೀವನವನ್ನು ಗೆಲ್ಲಲು ನಮಗೆ ಸಾಧ್ಯವಿಲ್ಲವಾದರೆ ಸಾವನ್ನಾದರೂ ಗೆಲ್ಲಬಹುದು. ನಾವು ಅಶಕ್ತರು ಎಂಬ ಭಾವನೆಯನ್ನು ಕಡಮೆಮಾಡಲು ಒಂದು ಒಳ್ಳೆಯ ಭಾವನೆ.


೬. ಜೀವನ ದರ್ಶನ


ಆರೇಳು ವರ್ಷಗಳ ಕೆಳಗೆ ಅಮೆರಿಕೆಯ ಪ್ರಕಟನಕಾರನೊಬ್ಬ ತಾನು ಪ್ರಕಟಿಸಬೇಕೆಂದಿದ್ದ ವಿಚಾರ ಮಾಲೆಯೊಂದಕ್ಕೆ ನನ್ನ ಜೀವನದರ್ಶನದ ಮೇಲೆ ಒಂದು ಪ್ರಬಂಧ ಬರೆಯಲು ಕೇಳಿದ. ಸೂಚನೆಯೇನೋ ನನ್ನ ಮನಸ್ಸನ್ನು ಸೆಳೆಯಿತು. ಆದರೆ ಹಿಂದೇಟು ಹಾಕಿದೆ ; ಯೋಚಿಸಿದಷ್ಟೂ, ಮನ ಒಪ್ಪದವನಾದೆ. ಕೊನೆಯಲ್ಲಿ ಆ ಪ್ರಬಂಧ ಬರೆಯಲೇ ಇಲ್ಲ.

ನನ್ನ ಜೀವನದರ್ಶನವೇನು? ನನಗೆ ತಿಳಿಯದು. ಕೆಲವು ವರ್ಷಗಳ ಮುಂಚೆ ಪ್ರಾಯಶಃ ನಾನು ಅಷ್ಟು ಅನಿಶ್ಚಿತವಾಗಿರುತ್ತಿರಲಿಲ್ಲ. ನನ್ನ ಯೋಚನೆ ಮತ್ತು ಧೈಯಗಳಲ್ಲಿ ಆಗ ಇದ್ದ ನಿರ್ದಿಷ್ಟತೆ ಈಚೆಗೆ ಮಾಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇಂಡಿಯ, ಚೀನ, ಯೂರೋಪ್ ಮತ್ತು ಪ್ರಪಂಚದ ಎಲ್ಲೆ ಡೆಯ ಘಟನೆಗಳು ಮನಸ್ಸನ್ನು ಕದಡಿ, ಬುಡಮೇಲು ಮಾಡಿ ಖೇದವನ್ನು೦ಟು ಮಾಡಿವೆ. ಭವಿಷ್ಯದ ರೂಪು ರೇಖೆ ಮೊದಲು ನನ್ನ ಮನಸ್ಸಿನಲ್ಲಿದ್ದಂತೆ ಸ್ಪಷ್ಟವಾಗಿಲ್ಲ; ಅಸ್ಪಷ್ಟತೆ ಮೂಡಿ ಕಪ್ಪಾಗಿದೆ.

ಮೂಲಧೈಯಗಳ ವಿಷಯದಲ್ಲಿನ ಈ ಸಂಶಯ ಮತ್ತು ಕಷ್ಟ ನನ್ನ ಕ್ರಿಯಾಸಕ್ತಿಯ ಮೊನ ಚನ್ನು ಸ್ವಲ್ಪ ಮೊಂಡುಮಾಡಿತೇ ಹೊರತು ನನ್ನ ತತ್‌ಕ್ಷಣದ ಕ್ರಿಯೆಗೆ ಅಡ್ಡಿ ಬರಲಿಲ್ಲ. ಆದರೆ ನಾನು ಆರಿಸಿಕೊಂಡ ಗುರಿಗೆ, ಗುರಿಯೊಂದರ ಹೊರತು ಉಳಿದೆಲ್ಲವನ್ನೂ ಮರೆತು ಸ್ವಯಂ ಪ್ರವರ್ತಿತವಾಗಿ ಮುನ್ನುಗ್ಗುವ ಬಾಣದಂತೆ ನನ್ನ ಯೌವನದಲ್ಲಿ ನಡೆಸಿದ ಜೀವನವನ್ನು ನಾನು ಪುನಃ ಈಗ ನಡೆಸಲು ಸಾಧ್ಯವಿಲ್ಲ. ಆದಾಗ್ಯೂ ನನ್ನ ಆದರ್ಶಗಳಿಗೂ ಕ್ರಿಯಾಸಕ್ತಿಗೂ ನೈಜವಾದೊ ಅಥವ ಕಲ್ಪಿತವೊ ಆದ ಒಂದು ಅನ್ನೋನ್ಯ ಸಂಬಂಧವೂ ಮತ್ತು ಕಾರ್ಯೋತ್ಸಾಹವೂ ಇದ್ದುದರಿಂದ ನಾನು ಜೀವನ ನಡೆಸಿದೆ. ಆದರೆ ಕ್ರಮೇಣ ನಾನು ಕಂಡ ರಾಜಕೀಯದಲ್ಲಿ ಒಂದು ಬೇಸರ ಬೆಳೆದು ನನ್ನನ್ನು ಆವರಿಸಿತು. ಕ್ರಮೇಣ ಜೀವನದಲ್ಲಿ ನನಗಿದ್ದ ಮನೋಭಾವನೆಯೇ ಪೂರ್ಣ ವ್ಯತ್ಯಾಸ ಹೊಂದಿತು.

ಹಿಂದಿನ ದೈಯ ಮತ್ತು ಗುರಿಯೇ ಇಂದಿಗೂ ಆದರ್ಶಗಳಾದವು. ಆದರೆ ಹತ್ತಿರ ಹತ್ತಿರ ಹೋದಂತೆ ಹೃದಯಕ್ಕೊಂದು ಕಾವು ಕೊಟ್ಟು ದೇಹಕ್ಕೆ ಜೀವಶಕ್ತಿಯನ್ನು ಕೊಟ್ಟ ಅವುಗಳ ಥಳಥಳಿಸುವ ಸೌಂದರ್ಯ ಮೆರುಗು ಬಹುಮಟ್ಟಿಗೆ ಕಡಿಮೆಯಾಯಿತು. ಅನೇಕವೇಳೆ ಅಸತ್ಯಕ್ಕೆ ಜಯವಾಗುತ್ತಿತ್ತು. ಎಲ್ಲಕ್ಕೂ ಅಸಹ್ಯವಾದುದೆಂದರೆ ಯಾವುದನ್ನು ಸತ್ಯವೆಂದು ನಂಬಿದ್ದೆವೊ ಅದನ್ನು ಅಶ್ಲೀಲಗೊಳಿಸಿ ವಿರೂಪಗೊಳಿಸುತ್ತಿದ್ದುದು. ಇಂದಿನ ದುರಾಶೆಯ ಹಿಂಸಾತ್ಮಕ ಮೋಸದ ಜೀವನದಿಂದ ಮಾನವನನ್ನು ಉದ್ಧರಿಸಿ ವಿವೇಕಯುತವಾಗಿ ನಡೆಯಲು ಪೂರ್ವಭಾವಿಯಾಗಿ ಮನುಷ್ಯ ಯುಗಯುಗಾಂತರಗಳಿಂದ ಕಷ್ಟದಲ್ಲಿ ಮುಳುಗಿ ಸಂಕಟವನ್ನನುಭವಿಸಿ ಶಿಕ್ಷಣ ಪಡೆಯ