ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಹಮದ್ ನಗರದ ಕೋಟೆ
೧೧

ಬೇಕೆ ? ಮಾನವಸ್ವಭಾವ ಮೂಲತಃ ಅಷ್ಟು ಕೆಟ್ಟುದೆ ? ಈ ಮಧ್ಯೆ ಈಗಾಗಲಿ, ಮುಂದೆ ಸವಿಾಪದ ಲ್ಲಾ ಗಲಿ ಆ ಸ್ವಭಾವವು ಪೂರ್ಣ ಪರಿವರ್ತನಗೊಳ್ಳಲೆಂದು ಮಾಡಿದ ಪ್ರಯತ್ನ ವೆಲ್ಲ ನಿಷ್ಪಲವಾಗಬೇಕೆ?

ಗುರಿ ಮತ್ತು ಮಾರ್ಗ : ಒಂದಕ್ಕೊಂದರ ಮೇಲಿನ ಕ್ರಿಯೆ ಪ್ರತಿಕ್ರಿಯೆಯಿಂದ, ತಪ್ಪು ಮಾರ್ಗವು ನಮ್ಮೆದುರಿನ ಗುರಿಯನ್ನೆ ವಿಕೃತಿಗೊಳಿಸಿ ಕೆಲವು ವೇಳೆ ಅದನ್ನು ನಾಶಗೊಳಿಸುವಷ್ಟು ಸಹ ಒ೦ದ ಕ್ಕೊಂದು ಅಭೇದ್ಯವಾಗಿ ಹೆಣೆದುಕೊಂಡಿವೆಯೆ? ಆದರೆ ನ್ಯಾಯ ಮಾರ್ಗವು ಅಶಕ್ತರಿಗೆ, ಸ್ವಾರ್ಥ ಪರರಿಗೆ ಅಶಕ್ಯವಾಗಿರಬಹುದು. ಹಾಗಾದರೆ ಮಾಡುವುದೇನು? ಕ್ರಿಯಾಭ್ರಷ್ಟನಾಗುವುದು ಸೋಲನ್ನು ಒಪ್ಪಿದಂತೆ, ಕೆಟ್ಟುದಕ್ಕೆ ಮನಸೋತಂತೆ ; ಕಾರ್ಯತತ್ಪರನಾಗುವುದೆಂದರೆ ಆ ಕೆಟ್ಟುದರೊಂದಿಗೆ ಯಾವುದೆ ರೀತಿಯಲ್ಲಿ, ಆ ಪ್ರಕರಣದಿಂದ ಉದ್ಭವಿಸುವ ಅನಿಷ್ಟ ಪರಿಣಾಮಗಳೊಂದಿಗೆ ಒಂದು ರಾಜಿಗೆ ಬಂದಂತೆ.

ಮೊದಲಿನಿಂದಲೂ ಜೀವನ ಸಮಸ್ಯೆಗಳನ್ನು ನಾನು ವೈಜ್ಞಾನಿಕ ದೃಷ್ಟಿಯಿಂದ ನೋಡಿದವನು; ಹತ್ತೊಂಭತ್ತನೆ ಶತಮಾನದ ಮತ್ತು ಈ ಇಪ್ಪತ್ತನೆ ಶತಮಾನದ ಆದಿಭಾಗದ ವಿಜ್ಞಾನದ ಸುಲಭ ಆಶಾವಾದಿತ್ವದ ವೈಜ್ಞಾನಿಕ ದೃಷ್ಟಿಯಿಂದ, ನಿರಾತಂಕ ಸಂತೃಪ್ತ ಜೀವನ, ನನ್ನ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಈ ಆಶಾವಾದಿತ್ವವನ್ನು ಇನ್ನೂ ಬಲಪಡಿಸಿದವು. ಯಾವುದೇ ಬಗೆಯ ಮಾನುಷ್ಯ ದರ್ಶನ ನನಗೆ ಪ್ರಿಯವಾಗಿತ್ತು.

ವಿಚಾರಪರರು ಒಪ್ಪಿ ಆಚರಿಸುತ್ತಿದ್ದ ಹಿಂದೂ, ಇಸ್ಲಾಂ, ಬೌದ್ಧ ಧರ್ಮ ಅಥವ ಕ್ರಿಸ್ತ ಧರ್ಮ ಯಾವುದೂ ನನ್ನ ಮನಸ್ಸಿಗೆ ಹಿಡಿಯಲಿಲ್ಲ. ಅವೆಲ್ಲ ಮೂಢ ಸಂಪ್ರದಾಯಗಳ ವಿಚಾರ ಶೂನ್ಯ ನಂಬಿಕೆಗಳ ಮೇಲೆ ನಿಂತಂತೆ ತೋರಿದವು. ಅವೆಲ್ಲದರ ಹಿಂದೆ ಜೀವನದ ಸಮಸ್ಯೆಗಳನ್ನು ಪ್ರವೇಶಿಸುವ ರೀತಿ ಖಂಡಿತವಾಗಿಯೂ ವೈಜ್ಞಾನಿಕವಾಗಿರಲಿಲ್ಲ. ಏನೋ ಸ್ವಲ್ಪ ಇಂದ್ರಜಾಲ, ವಿಮರ್ಶಾರಹಿತ ಅಂಧಶ್ರದ್ಧೆ, ಪಾರಲೌಕಿಕ ನಂಬಿಕೆ ಇತ್ತು.

ಆದರೂ ಧರ್ಮವು ಮನುಷ್ಯ ಸ್ವಭಾವದ ಯಾವುದೋ ಆಳವಾದ ಅನುಭವದ ಒಳಗಿನ ಅವಶ್ಯಕತೆಯೊಂದನ್ನು ಒದಗಿಸಿದೆ ಎಂಬುದು ಸರ್ವವೇದ್ಯ. ಪ್ರಪಂಚದ ಜನರಲ್ಲಿ ಬಹುಮಂದಿ ಯಾವು ದಾದರೂ ಒಂದು ಧಾರ್ಮಿಕ ನಂಬಿಕೆಯಿಲ್ಲದೆ ಇರಲು ಸಾಧ್ಯವಿಲ್ಲ. ಮತ ಆದರ್ಶಮಾದರಿಯ ಸ್ತ್ರೀಪುರುಷರನ್ನು ಒದಗಿಸಿಕೊಟ್ಟಿರುವಂತೆ ಮತಾಂಧರೂ, ಸಂಕುಚಿತ ಮನೋಭಾವದವರೂ ' ನಿಷ್ಕರುಣಿಗಳೂ ಆದ ಕ್ರೂರಿಗಳಿಗೂ ಎಡೆಕೊಟ್ಟಿದೆ. ಮಾನವ ಜೀವನಕ್ಕೆ ಒಂದು ಬೆಲೆಕೊಟ್ಟಿದೆ. ಆ ಮೂಲ್ಯಗಳು ಇಂದು ಆಚರಣೆಗೆ ಅನುಚಿತ ಅಥವ ಅನರ್ಥಕಾರಕ ಎನ್ನಬಹುದಾದರೂ ಅವು ಈಗಲೂ ಧರ್ಮಾಚರಣೆಯ ನೀತಿಶಾಸ್ತ್ರದ ತಳಹದಿಯಾಗಿವೆ.

ಧರ್ಮವು ಮನುಷ್ಯನ ಅನುಭವಗಳ ಅಸ್ಪಷ್ಟ ಪ್ರಪಂಚದ ವಿಷಯವನ್ನೆ ಕುರಿತು ವಿಚಾರ ಮಾಡಿತು. ಅಸ್ಪಷ್ಟವೆಂದರೆ ಇಂದಿನ ವೈಜ್ಞಾನಿಕ ವಾಸ್ತವಿಕ ಜ್ಞಾನ ರೀತಿಯಲ್ಲಿ, ಧರ್ಮ ಮತ್ತು ವಿಜ್ಞಾನದ ಮಾರ್ಗ ರೀತಿಯಲ್ಲಿ ಒಂದಕ್ಕೊಂದಕ್ಕೆ ಸಾಮ್ಯವಿಲ್ಲದಿದ್ದರೂ, ಬಹಳ ಮಟ್ಟಿಗೆ ಅವುಗಳ ಸಾಧನಗಳೇ ಬೇರೆಬೇರೆಯಾದರೂ ಅದು ಗೋಚರ ಪ್ರಪಂಚದ ಒಂದು ವಿಸ್ತರಣ ಎಂದು ಭಾವಿಸಬಹುದು. ನಮ್ಮ ಸುತ್ತಲೂ ವಿಶಾಲವಾದ ಅಗೋಚರ ಜಗತ್ತು ಇರುವುದು ಸ್ವತಃಸಿದ್ದ. ಮಹತ್ಸಾಧನೆ ಯನ್ನು ಮಾಡಿದ್ದ ವಿಜ್ಞಾನವು ಆಗಾಗ್ಗೆ ಆ ಕಡೆ ತಾತ್ಕಾಲಿಕ ಪ್ರವೇಶ ಮಾಡುತ್ತಿದ್ದರೂ ವಿಜ್ಞಾನಕ್ಕೆ ತಿಳಿದುದು ಅತ್ಯಲ್ಪ. ಪ್ರಾಯಶಃ ಗೋಚರ ಪ್ರಪಂಚದೊಂದಿಗೆ ಜೀವನಗತಿ ವಿಧಾನದೊಂದಿಗೆ ವ್ಯವಹಾರಿಯಾದ ವಿಜ್ಞಾನದ ಸಾಮಾನ್ಯ ಮಾರ್ಗಗಳು, ಅಗೋಚರ ಪ್ರಪಂಚದ ಭೌತಾತೀತ, ಕಲಾಪೂರ್ಣ, ಪಾರಮಾರ್ಥಿಕ ವಿಷಯಗಳಿಗೆ ಪೂರ್ತಿಯಾಗಿ ಅನ್ವಯಿಸಲಿಲ್ಲವೋ ? ನಾವು ಕಂಡು, ಕೇಳಿ, ಅನುಭವಿಸುವ, ದಿಕ್ಕಾಲಗಳಲ್ಲಿ ನಿತ್ಯವೂ ವ್ಯತ್ಯಾಸವಾಗುತ್ತಿರುವ ಗೋಚರ ಪ್ರಪಂಚ ಮಾತ್ರ ಪೂರ್ಣ ಜೀವನವಲ್ಲ, ಜೀವನವು ನಿರಂತರವಾಗಿ ಅಗೋಚರ ಪ್ರಪಂಚವನ್ನು ಮುಟ್ಟುತ್ತಿದೆ. ಪ್ರಾಯಶಃ ಅದೇ ಹೆಚ್ಚು ಸ್ಥಿರವಿರಬಹುದು, ಅಥವ ಅಷ್ಟೇ ಅಸ್ಥಿರವಸ್ತುಗಳಿಂದ ತುಂಬಿರಬಹುದು, ಆದರೂ ಯಾವ ವಿಚಾರಪರ ಮನುಷ್ಯನೂ ಈ ಅಗೋಚರ ಪ್ರಪಂಚವನ್ನು ಅಲಕ್ಷ್ಯಮಾಡುವಂತಿಲ್ಲ.