ಪುಟ:ಭಾರತ ದರ್ಶನ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ಬಂದುದು ಹಿಂದೂಸ್ತಾನಿಯಿಂದ. ಇದು ಬಂಗಾಳಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಬ್ರಿಟಿಷ್ ಭಾರತದ ಪೂರ್ವ ತಿಹಾಸವನ್ನು ಜ್ಞಾಪಿಸಿಕೊಂಡರೆ ಈ ರೀತಿಯ ಸುಲಿಗೆಯನ್ನು ಪ್ರಪಂಚದಲ್ಲಿ ಇನ್ನೆಲ್ಲೂ ಕಾಣಲಾರೆವು” ಎಂದು ಎಚ್ಚರ್ ಥಾಮೃನ್ ಹೇಳುತ್ತಾನೆ. ಇದರ ಮೊದಲ ಪರಿಣಾಮವೆಂದರೆ ೧೭೭೦ರಲ್ಲಿ ಕ್ಷಾಮ, ಬಂಗಾಳ ಮತ್ತು ಬಿಹಾರದಲ್ಲಿ ಮೂರರಲ್ಲಿ ಒಂದು ಭಾಗ ಜನ ಹಸಿವಿನಿಂದ ಮಡಿದರು ಆದರೆ ಇವೆಲ್ಲ ಪ್ರಗತಿಗಾಗಿ ! ಇಂಗ್ಲೆಂಡಿನ ಔದ್ಯೋಗಿಕ ಕ್ರಾಂತಿಗೆ ತಾನೇ ಕಾರಣವೆಂದು ಬಂಗಾಳ ಹೆಮ್ಮೆ ಪಡಬಹುದು “ ಭಾರತದಿಂದ ಬಂದ ಐಶ್ವರ್ಯವು ರಾಷ್ಟ್ರದ ನಗದು ಹಣವನ್ನು ಹೆಚ್ಚಿಸಿ ಅದರ ಶಕ್ತಿಯನ್ನು ವೃದ್ಧಿಗೊಳಿಸಿದುದು ಮಾತ್ರ ವಲ್ಲ ; ಹಣದ ಚಲಾವಣೆಯ ವೇಗವನ್ನೂ, ಸೌಲಭ್ಯವನ್ನೂ ಹೆಚ್ಚಿಸಿತು. ಪ್ಲಾಸಿ ಕದನವಾದ ಸ್ವಲ್ಪ ದಿನಗಳಲ್ಲಿಯೇ ಬಂಗಾಳದ ಊಟ ಲಂಡನ್ಗೆ ಬರಲಾರಂಭಿಸಿತು. ೧೭೭೦ ರಿಂದ ಔದ್ಯೋಗಿಕ ಕ್ರಾಂತಿಯು ಆರಂಭವಾಯಿತೆಂದು ಎಲ್ಲರೂ ಒಪ್ಪುವುದರಿಂದ, ತತ್‌ಕ್ಷಣವೇ ಅದರಿಂದ ಮಹತ್ವದ ಪರಿಣಾಮವಾಯಿತು. ಪ್ಲಾಸಿ ಯುದ್ಧವಾದುದು ೧೭೫೭ ರಲ್ಲಿ. ಅದರ ಪರಿಣಾಮದಂತೆ ಬೇರೆಲ್ಲಿಯೂ ಅಷ್ಟು ಬೇಗ ಪರಿಣಾಮವಾಗಿಲ್ಲ. ೧೭೬೦ ರಲ್ಲಿ - ಹಾರುವಲಾಳಿ' (Flying Shuttle) ಯನ್ನು ಕಂಡು ಹಿಡಿದರು. ಲೋಹವನ್ನು ಕರಗಿಸಲು ಕಟ್ಟಿಗೆಯ ಬದಲು ಕಲ್ಲಿದ್ದಲು ಉಪಯೋಗಕ್ಕೆ ಬಂದಿತು. ೧೭೬೪ ರಲ್ಲಿ ಹಾರ್‌ಗ್ರೀನ್ಸ್ “ ಸ್ಪಿನ್ನಿಂಗ್ ಜನ್ನಿ ” ಯನ್ನು , ೧೭೭೬ ರಲ್ಲಿ ಕ್ಯಾಪ್ಟನ್ * ಮೂಲ್ ” ಎಂಬ ಯಂತ್ರವನ್ನೂ, ೧೭೮೫ ರಲ್ಲಿ ಕಾರ್‌ರೈಟ್ “ ಪವರ್ ಲೂಮ್ ನ್ಯೂ ಮತ್ತು ೧೭೬೮ ರಲ್ಲಿ ವ್ಯಾಟ್ ಆವಿಯ ಯಂತ್ರವನ್ನೂ ಕಂಡು ಹಿಡಿದರು. ಈ ಯಂತ್ರಗಳೆಲ್ಲ ಕಾಲವನ ಧಾನವನ್ನು ತಡೆಗಟ್ಟಲು ಸಹಾಯಕವಾದರೂ ನಿಜವಾಗಿ ವೇಗ ಇನ್ನೂ ಬಂದಿರಲಿಲ್ಲ. ಸಂಶೋಧನೆಗಳು ಸ್ವತಃ ಚಲನಾತ್ಮಕವಲ್ಲ. ಬೇರೊಂದು ಕೇಂದ್ರೀಕೃತ ಶಕ್ತಿಯು ಅದನ್ನು ಕಾವ್ಯ ಶಕ ಮಾಡಬೇಕು, ಈ ಶಕ್ತಿ ಇರುವುದು ಹಣಕ್ಕೆ ಮಾತ್ರ. ಭೂಗತವಾದ ನಿಧಿಯಲ್ಲಿ ಅಲ್ಲ ಆದರೆ ಚಲನಪೂರ್ಣ ಹಣದಲ್ಲಿ ಭಾರತದ ಐಶ್ವರ್ಯವು ಬಂದು, ಇಂಗ್ಲೆಂಡಿನ ಬಂಡವಾಳವನ್ನು ಹೆಚ್ಚಿ ಸುವವರೆಗೆ ಯಂತ್ರೋಪಕರಣಗಳನ್ನು ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಇಂಗ್ಲೆಂಡ್ ನಲ್ಲಿ ಇರ ಲಿಲ್ಲ. ಭಾರತದ ಲೂಟಿಯ ಹಣದಿಂದ ಬಂದಷ್ಟು ಲಾಭವು ಪ್ರಪಂಚದಲ್ಲಿ ಬೇರೆಲ್ಲ ಯಾವ ಬಂಡವಾಳಕ್ಕೂ ಬಂದಿಲ್ಲ. ಏಕೆಂದರೆ ಐವತ್ತು ವರ್ಷಗಳವರೆಗೆ ಇಂಗ್ಲೆಂಡಿನ ಜೊತೆಗೆ ಪೈಪೋಟಿ ನಡೆಸುವವರೇ ಇರಲಿಲ್ಲ” ಎಂದು ಅಮೆರಿಕೆಯ ಲೇಖಕ ಬ್ರುಕ್ ಆಡಮ್ಸ್ ಹೇಳುತ್ತಾನೆ. ೩. ಭಾರತದ ಕೈಗಾರಿಕೆಯ ನಾಶ ಮತ್ತು ವ್ಯವಸಾಯದ ಕ್ಷೀಣದಶೆ ಭಾರತದ ಕೈಗಾರಿಕಾ ವಸ್ತುಗಳು, ಬಟ್ಟೆ, ಸಾಂಬಾರ ಮುಂತಾದ ಪದಾರ್ಥಗಳಿಗೆ ಯೂರೋಪಿ ನಲ್ಲಿ ಒಳ್ಳೆಯ ಗಿರಾಕಿ ಇದ್ದುದರಿಂದ ಪೂರ್ವ ದೇಶಗಳಿಂದ ಪಶ್ಚಿಮ ಯೂರೋಪಿಗೆ ಅವುಗಳನ್ನು ತರ ಲೆಂದೇ ಈಸ್ಟ್ ಇಂಡಿಯಾ ಕಂಪೆನಿ ಆರಂಭವಾದದ್ದು ; ಮತ್ತು ಅದರ ಮುಖ್ಯ ವ್ಯಾಪಾರವೂ ಅದೇ ಆಗಿತ್ತು. ಇಂಗ್ಲೆಂಡಿನಲ್ಲಿ ಕೈಗಾರಿಕಾ ಕುಶಲತೆಯಲ್ಲಿ ನೂತನ ಪರಿವರ್ತನೆಗಳಾದೊಡನೆ ಹೊಸಬಗೆಯ ಕೈಗಾರಿಕಾ ಬಂಡವಾಳಗಾರರು ಹುಟ್ಟಿ ಈ ವ್ಯಾಪಾರ ನೀತಿಯನ್ನು ಬದಲಾಯಿಸಿದರು. ಬ್ರಿಟಿಷ್ ಪೇಟೆಗಳಲ್ಲಿ ಭಾರತದ ವಸ್ತುಗಳಿಗೆ ಕವಾಟಬಂಧನವಾಯಿತು. ಬ್ರಿಟಿಷ್ ಕೈಗಾರಿಕಾ ವಸ್ತುಗಳನ್ನು ಭಾರತದ ಪೇಟೆಗಳೊಳಗೆ ತುಂಬಲು ಉದ್ಯುಕ್ತರಾದರು. ಈ ಬಂಡವಾಳಗಾರರ ಪ್ರಾಬಲ್ಯದಿಂದ ಬ್ರಿಟಿಷ್ ಪಾರ್ಲಿಮೆಂಟ್ ಸಭೆಯು ಭಾರತದ ವಿಷಯದಲ್ಲ, ಈಸ್ಟ್ ಇಂಡಿಯ ಕಂಪನಿಯ ವಿಷಯದಲ್ಲೂ ಹೆಚ್ಚು ಆಸಕ್ತಿ ವಹಿಸಲಾರಂಭಿಸಿತು. ಆರಂಭದಲ್ಲಿ ಶಾಸನ ಬಲದಿಂದ ಭಾರತದ ಮಾಲುಗಳು ಬ್ರಿಟನ್ನಿ ನೊಳಗೆ ಬರದಂತೆ ತಡೆದರು. ಭಾರತದ ರಫ್ತು ವ್ಯಾಪಾರವೆಲ್ಲ ಈಸ್ಟ್