ಪುಟ:ಭಾರತ ದರ್ಶನ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ೨೩೬ ರವು ವಿಪರೀತವಾಯಿತು. ಇತರ ಕೈಗಾರಿಕೆಗಳೂ, ಸಂಪದಭಿವೃದ್ಧಿ ಕಾಠ್ಯಗಳೂ ಜನರಿಗೆ ದೊರೆ ಯದ ವ್ಯವಸಾಯವೇ ದೇಶದ ಮುಖ್ಯ ಕಸಬು ಆಯಿತು. ಭಾರತವು ಹಳ್ಳಿಗಳ ನಾಡಾಯಿತು. ಕಳೆದ ಶತಮಾನದಲ್ಲಿ ಪ್ರತಿಯೊಂದು ಪ್ರಗತಿಪರ ದೇಶ ದಲ್ಲ ಜನರು ವ್ಯವಸಾಯ ಬಿಟ್ಟು ಕೈಗಾರಿಕೆಯನ್ನು ಅವಲಂಬಿಸಿದಾರೆ; ಹಳ್ಳಿಗಳಿಂದ ಪಟ್ಟಣಕ್ಕೆ ಹೋಗಿದ್ದಾರೆ. ಬ್ರಿಟಿಷರ ಕಾರನೀತಿಯಿಂದ ಭಾರತದಲ್ಲಿ ತಿರುಗುಮುರುಗು ವ್ಯಾಪಾರವಾಯಿತು. ಅಂಕಿಅಂಶಗಳು ಕೈಗನ್ನಡಿಯಂತಿವೆ. ೧೯ನೆಯ ಶತಮಾನದ ಮಧ್ಯಭಾಗದಲ್ಲಿ ಶೇಕಡ ಐವತ್ತೈದ ರಷ್ಟು ಜನರು ವ್ಯವಸಾಯವನ್ನು ಅವಲಂಬಿಸಿದ್ದರು. ಈಚೆಗೆ ಯುದ್ದಕ್ಕೆ ಮುಂಚೆ ಇದು ಶೇಕಡ ಎಪ್ಪತ್ತನಾಲ್ಕರಷ್ಟು ಇತ್ತು. ಯುದ್ಧ ಕಾಲದಲ್ಲಿ ಕೈಗಾರಿಕೆಗಳು ಹೆಚ್ಚಿದ್ದರೂ, ಜನಸಂಖ್ಯೆಯೂ ಹೆಚ್ಚಿರುವುದರಿ೦ದ ೧೯೪೧ರ ಜನಗಣತಿಯಂತೆ ವ್ಯವಸಾಯಗಾರರ ಸಂಖ್ಯೆ ಹೆಚ್ಚಿದೆ. ಸಣ್ಣ ಪಟ್ಟಣ ಗಳು ಕ್ಷೀಣಿಸಿ ಕೆಲವು ದೊಡ್ಡ ನಗರಗಳು ಬೆಳೆದಿವೆ. ಆದ್ದರಿಂದ ಭಾರತದ ಆರ್ಥಿಕ ಸ್ಥಿತಿ ಉತ್ತಮ ಗೊಂಡಿದೆ ಎಂದು ಯಾರೂ ಮೋಸ ಹೋಗಬಾರದು. ಭಾರತದ ಜನಕೋಟಿಯ ಅವರ್ಣನೀಯ ಕಡುಬಡತನಕ್ಕೆ ಇದೇ ನಿಜವಾದ ಕಾರಣ, ಮುಖ್ಯ ಕಾರಣ ; ಮತ್ತು ಅದು ಇತ್ತೀಚಿನದು, ರೋಗ, ನಿರಕ್ಷರತೆ ಮುಂತಾದ ಇತರ ಕಾರಣಗಳು ಈ ಬಡತನ, ಊಟಕ್ಕಿಲ್ಲದ ಉಪವಾಸ ಮತ್ತು ಅನಾರೋಗ್ಯದ ಪರಿಣಾಮಗಳು, ನಮ್ಮ ಜನ ಸಂಖ್ಯೆ ಮಿತಿ ಮೀರಿ ಏರುತ್ತಿರುವುದು ಒಂದು ದೌರ್ಭಾಗ್ಯ, ಸಾಧ್ಯವಾದೆಡೆಗಳಲ್ಲೆಲ್ಲ ಅದನ್ನು ತಡೆ ಗಟ್ಟಬೇಕು, ಆದರೂ ಇತರ ಅನೇಕ ಕೈಗಾರಿಕೋದ್ಯಮಿ ರಾಷ್ಟ್ರಗಳಿಗಿಂತ ಹೆಚ್ಚೇನೂ ಇಲ್ಲ. ವ್ಯವ ಸಾಯವೇ ಮುಖ್ಯ ಕಸಬಾಗಿ ಉಳ್ಳ ರಾಷ್ಟ್ರಕ್ಕೆ ಮಾತ್ರ ಹೆಚ್ಚು, ಸರಿಯಾದ ಆರ್ಥಿಕ ನೀತಿಯನ್ನು ಮುಂದಿಟ್ಟುಕೊಂಡು ದೇಶದ ಜನತೆ ದುಡಿದರೆ ದೇಶದ ಉತ್ಪತ್ತಿಯ ಸಂಪತ್ತೂ ಹೆಚ್ಚುವಂತೆ ಮಾಡಬಹುದು. ಈ ರೀತಿ ಜನಸಂಖ್ಯೆಯ ಒತ್ತಡವಿರುವುದು ಬಂಗಾಳಾ ಮತ್ತು ಗಂಗಾನದಿಯ ಮೈದಾನಗಳಲ್ಲಿ ಮಾತ್ರ; ಇತರ ಕಡೆ ಜನ ನಿಬಿಡವಾಗಿದೆ. ಭಾರತಕ್ಕಿಂತ ಬ್ರಿಟನ್‌ನಲ್ಲಿ ಜನ ಸಂಖ್ಯೆಯಒತ್ತಡವು ಎರಡರಷ್ಟು ಇದೆ. ಕೈಗಾರಿಕೆಗೆ ಬಂದ ವಿಪತ್ತು ಕ್ರಮೇಣ ಭೂಮಿಯ ಹಿಡುವಳಿಗೂ ಆವರಿಸಿ ವ್ಯವಸಾಯಕ್ಕೂ ಶಾಶ್ವತ ಹಾನಿಯಾಯಿತು. ಹಿಡುವಳಿಗಳು ವಿಭಾಗವಾಗಿ ಆಗಿ ಊಹಿಸಲಾರದಷ್ಟು ಸಣ್ಣದಾಗುತ್ತ ಬಂದವು. ವ್ಯವಸಾಯಗಾರನ ಸಾಲವು ಹೆಚ್ಚಿ ಭೂಮಿಯೆಲ್ಲ ಸಾಲಗಾರನ ಪಾಲಾಯಿತು. ಭೂಮಿ ಇಲ್ಲದ ಕೂಲಿಗಳ ಸಂಖ್ಯೆಯು ಕೋಟಿಗಟ್ಟಲೆಗೇರಿತು. ಭಾರತದ ರಾಜ್ಯಭಾರವು ಕೈಗಾರಿಕೋದ್ಯಮಿ ಬಂಡವಾಳಗಾರರ ಕೈಯಲ್ಲಿ, ಅದರ ಆರ್ಥಿಕ ನೀತಿ ಬಂಡವಾಳ ಶಾಹಿಗಳ ಹಳೆಯ ನೀತಿ; ಅದು ಸಂಪದಭಿವೃದ್ಧಿಗೆ ಅನುಕೂಲವಿಲ್ಲದ ಉದ್ಯೋಗರಹಿತ ಹಳೆಯ ನೀತಿ. ಈ ರೀತಿ ಭಾರತವು ಆಧ ನಿಕ ಕೈಗಾರಿಕೋದ್ಯಮಿ ಬಂಡವಾಳ ಶಾಹಿಯ ಕೈಗೊಂಬೆಯಾಯಿತು ; ಆ ಬಂಡವಾಳ ಶಾಹಿ ಪದ್ದತಿಯ ಅನುಕೂಲಗಳು ಯಾವುದೂ ಇಲ್ಲದೆ ಪ್ರತಿಕೂಲಗಳೆಲ್ಲಕ್ಕೂ ತುತ್ತಾಗಬೇಕಾಯಿತು. ಕೈಗಾರಿಕಾ ಕ್ರಾಂತಿ ಪೂರ್ವದ ಆರ್ಥಿಕ ನೀತಿಯಿಂದ ಕೈಗಾರಿಕೋದ್ಯಮಿ ಬಂಡವಾಳ ಶಾಹಿ ಆರ್ಥಿಕ ನೀತಿಗೆ ಹೊಂದಿಕೊಳ್ಳಬೇಕಾದಾಗ ಜನತೆಯು ಹೆಚ್ಚು ಪ್ರಮಾಣದಲ್ಲಿ ಸಾವು ನೋವಿನ ಸಂಕಟಕ್ಕೀಡಾಗುತ್ತದೆ. ಈ ಬದಲಾವಣೆಯಿಂದ ಒದಗುವ ದುಷ್ಪರಿಣಾಮಗಳನ್ನು ಕಡಮೆ ಮಾಡಲು ಯಾವ ಪ್ರಯತ್ನವೂ ಯೋಜನೆಯೂ ಇಲ್ಲದೆ ಎಲ್ಲ ವೈಯಕ್ತಿಕ ಇಚ್ಛೆಯಿಂದ ನಡೆಯುವ ಆರಂಭದ ದಿನಗಳಲ್ಲಿ ಈ ಕಷ್ಟನಷ್ಟಗಳು ಇನ್ನೂ ಹೆಚ್ಚು, ಇಂಗ್ಲೆಂಡಿನಲ್ಲೂ ಈ ಕಷ್ಟ ಒದಗಿತು. ಆದರೆ ಪರಿವರ್ತನೆಯ ಕಾಲಾಂತರವು ಅತ್ಯಲ್ಪ ವಿದ್ದುದರಿಂದ ನಿರುದ್ಯೋಗಿಗಳಿಗೆ ಬೇಗ ಹೊಸ ಕೈಗಾರಿಕೆಗಳಲ್ಲಿ ಕೆಲಸ ದೊರೆಯಿತು. ಆದರೆ ಜನತೆಯ ಗೋಳು ಮತ್ತು ಸಂಕಟ ಕಡಮೆಯಾಯಿ ತೆಂದಲ್ಲ. ಅದಕ್ಕೆ ಪೂರ್ಣಾಹುತಿಯಾದವರೇ ಬೇರೆ. ಮುಖ್ಯವಾಗಿ ಭಾರತದ ಜನರು ಕ್ಷಾಮ ಡಾಮರ, ಸಾವುನೋವುಗಳಿಗೆ ಬಲಿಯಾಗಿ ಉಳಿದವರು ನಿರುದ್ಯೋಗಿಗಳಾದರು. ಪಶ್ಚಿಮ