________________
ಭಾರತ ದರ್ಶನ ಯೂರೋಪಿನಲ್ಲಾದ ಯಂತ್ರೀಕರಣದ ಹೊರೆಯನ್ನೆಲ್ಲ ಹೊತ್ತು ಬಲಿಯಾದವರು ಯುರೋಪಿಯ ರಾಷ್ಟ್ರಗಳ ಆಡಳಿತ ದಾಸ್ಯದಲ್ಲಿ ಸಿಕ್ಕಿ ಬಿದ್ದಿದ್ದ ಭಾರತ, ಚೀನ ಮತ್ತು ಇತರ ಪಾಶ್ಚಾತ್ಯ ದೇಶಗಳವರು,
- ಇಷ್ಟೆಲ್ಲ ಭಾರತದ ಹಣವನ್ನು ನೂರಾರು ವರ್ಷಗಳ ಕಾಲ ದೋಚಿ ಊಟಮಾಡಿದರೂ, ಭಾರತದ ಕೈಗಾರಿಕೋನ್ನತಿಗೆ ಜನಬಲ, ಧನಬಲ, ಕಾರ್ಯಕೌಶಲ ಮತ್ತು ದಕ್ಷರಾದ ಆಡಳಿತವರ್ಗ ಬೇಕಾದ ಇವುಗಳ ಆವಶ್ಯಕತೆ ಇನ್ನೂ ಬೇಕಾದಷ್ಟು ಇದೆ. ೧೮೪೦ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನ ಒಂದು ವಿಚಾರಣಾಸಮಿತಿಯ ಮುಂದೆ ಸಾಕ್ಷ ಕೊಡುತ್ತ ಮಾಂಟೊ ಮರಿ ಮಾರ್ಟಿನ್ ಎಂಬ ಇತಿಹಾಸ ಕಾರನು “ಇಂಡಿಯದಲ್ಲಿ ವ್ಯವಸಾಯವು ಎಷ್ಟು ಪ್ರಗತಿ ಪಡೆದಿದೆಯೋ ಕೈಗಾರಿಕೆಯೂ ಅಷ್ಟೇ ಪ್ರಗತಿ ಪಡೆದಿದೆ. ಅದನ್ನು ಕೇವಲ ವ್ಯವಸಾಯಾವಲಂಬಿಯಾಗಿ ಮಾಡಹೋದವನು ಅದರ ನಾಗರಿಕತೆಯ ಮಟ್ಟವನ್ನು ಕೆಳಗಿಳಿಸುತ್ತಾನೆ” ಎಂದಿದಾನೆ. ಬ್ರಿಟಿಷರು ಭಾರತದಲ್ಲಿ ನಿರಂತರ ಮನಃಪೂರ್ವಕ ವಾಗಿ ಮಾಡಿದ ಕೆಲಸವೆಂದರೆ ಇದೇನೆ. ಒಂದೂವರೆ ಶತಮಾನಗಳ ಕಾಲ ಭಾರತವನ್ನು ಆಳಿ ಪಡೆದ ಆನೀತಿಯ ಸಾರ್ಥಕತೆಯ ಫಲವೆಂದರೆ ಇಂದಿನ ಭಾರತದ ದುರ್ದೆಶೆ, ಭಾರತದಲ್ಲಿ ಆಧುನಿಕ ಕೈಗಾರಿಕಾಭಿವೃದ್ಧಿ ಆಗಬೇಕೆಂಬ ಕೂಗು ಎದ್ದಾಗ (ಈ ಕೂಗು ಕೊನೆಯ ಪಕ್ಷ ಒಂದುನೂರು ವರ್ಷ ನಾದರೂ ಹಿಂದಿನದು ಭಾರತದ ಮುಖ್ಯ ಕಸಬು ವ್ಯವಸಾಯ, ವ್ಯವಸಾಯವನ್ನು ನಂಬಿಕೊಳು ವುದೇ ಕ್ಷೇಮ, ಕೈಗಾರಿಕೆಯು ಅಭಿವೃದ್ದಿ ಯಾದರೆ ವ್ಯವಸಾಯ ಹಾಳಾಗುತ್ತದೆ ಎಂದು ವಾದಿಸು ತ್ತಾರೆ. ಬ್ರಿಟಿಷ್ ಕೈಗಾರಿಕೋದ್ಯಮಿಗಳು, ಅರ್ಥಶಾಸ್ತ್ರ ನೀತಿಜ್ಞರು ಭಾರತದ ರೈತನ ಮೇಲೆ ತೋರಿಸುವ ಈ ದಯೆ ನೋಡಿ ಆಶ್ಚರ್ಯವೆನಿಸುತ್ತದೆ. ಈ ದಯಾದೃಷ್ಟಿ ಮತ್ತು ಭಾರತದಲ್ಲಿನ ಬ್ರಿಟಿಷ್ ಸರಕಾರವು ರೈತನ ಹಿತಕ್ಕೆಂದು ತೋರುವ ಕರುಣೆಯನ್ನು ನೋಡಿದರೆ ಯಾವುದೋ : ಒಂದು ಪ್ರಬಲ ಕ್ರೂರವಿಧಿ ಅವರ ಈ ನೀತಿಗೆ ಪ್ರತಿಕೂಲವಿದ್ದು ಭಾರತದ ರೈತನನ್ನು ಪ್ರಪಂಚದ ರೈತರಲ್ಲಿ ಕಡುಬಡವನನ್ನಾಗಿಮಾಡಿ ಅಧೋಗತಿಗೆ ತಳ್ಳಿರಬೇಕು ಎನಿಸುತ್ತದೆ. * ಈಗ ಭಾರತದಲ್ಲಿ ಕೈಗಾರಿಕಾ ಪ್ರಗತಿಯನ್ನು ವಿರೋಧಿಸುವವರು ಯಾರೂ ಇಲ್ಲ. ಕೈಗಾರಿ ಕೆಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಯೋಜನೆಯೊಂದನ್ನು ಸಿದ್ಧಗೊಳಿಸಿರುವಾಗ ಈಗಲೂ ನಮ್ಮ ಬ್ರಿಟಿಷ್ ಸ್ನೇಹಿತರು- ವ್ಯವಸಾಯ ಅಲಕ್ಷ್ಯಮಾಡಿದರೆ ಕೇಡು, ಪ್ರಥಮ ಸ್ಥಾನ ವ್ಯವಸಾಯಕ್ಕೆ ಕೊಡಬೇಕು ಎಂದು ಬುದ್ದಿ ಹೇಳುತ್ತಿದ್ದಾರೆ. ಸ್ವಲ್ಪ ಬುದ್ಧಿ ಇರುವ ಯಾವ ಭಾರತೀಯನೂ ವ್ಯವಸಾಯವನ್ನಾ ಗಲಿ ಅದನ್ನೇ ನಂಬಿರುವ ಭಾರತದ ರೈತನನ್ನಾ ಗಲಿ ಮರೆಯುವಂತೆ ಇಲ್ಲ, ಅಲಕ್ಷ ಮಾಡುವಂತೆ ಇಲ್ಲ. ಎಲ್ಲರಿಗಿಂತ ಹೆಚ್ಚಾಗಿ ಭಾರತವೆಂದರೆ ಭಾರತದ ರೈತ, ಆತನ ಪ್ರಗತಿ ಮತ್ತು ಉನ್ನತಿಯೇ ಭಾರತದ ಪ್ರಗತಿ. ಆದರೆ ವ್ಯವಸಾಯದಲ್ಲಿನ ನಮ್ಮ ಬಹುಕಷ್ಟ ತಮ ತೊಂದರೆಗಳಿಗೆಲ್ಲ ಕೈಗಾರಿಕೆಯಲ್ಲಿನ ನಮ್ಮ ಅವನತಿಯೇ ಕಾರಣ. ಎರಡನ್ನೂ ಬೇರೆಮಾಡಿ ಪರಿಹಾ ರೋಪಾಯ ಹುಡುಕಲು ಸಾಧ್ಯವಿಲ್ಲ. ಎರಡರ ಮಧ್ಯೆ ಇರುವ ಅಂತರವು ಕಡಮೆಯಾಗಬೇಕು,
ಕೈಗಾರಿಕಾ ಪ್ರಗತಿಸಾಧನೆಗೆ ಅವಕಾಶ ದೊರೆತಾಗಲೆಲ್ಲ ಭಾರತವು ಯಶಸ್ವಿಯಾಗಿ ಆಧುನಿಕ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಿ ತನ್ನ ಸಾಮರ್ಥ್ಯ ತೋರಿಸಿದೆ. ಭಾರತದ ಬ್ರಿಟಿಷ್ ಸರಕಾ ರವೂ, ಬ್ರಿಟನ್ನಿನ ಬಂಡವಾಳಗಾರರೂ ಈ ಪ್ರಗತಿಯನ್ನು ಎಷ್ಟೇ ವಿರೋಧಿಸಿದರೂ ಅದನ್ನೆಲ್ಲ ಎದುರಿಸಿ ಪ್ರಗತಿಯನ್ನು ಸಾಧಿಸಿದೆ. ಭಾರತಕ್ಕೆ ಮೊದಲು ಅವಕಾಶ ದೊರೆತದ್ದು ೧೯೧೪-೧೮ರ ಮೊದಲನೆಯ ಪ್ರಪಂಚ ಯುದ್ದದಲ್ಲಿ ಬ್ರಿಟಿಷ್ ಸಾಮಾನುಗಳು ಭಾರತಕ್ಕೆ ಬರಲು ದಾರಿ ಇಲ್ಲದಾಗ ಬ್ರಿಟಿಷರ ಕಾರ್ಯನೀತಿಯು ಬಹಳ ಸಹಾಯಕವಿಲ್ಲದಿದ್ದರೂ ಸ್ವಲ್ಪ ಲಾಭ ದೊರೆಯಿತು. ಅಲ್ಲಿಂದ ಈಚೆಗೆ ಕೈಗಾರಿಕೋದ್ಯಮದ ಪ್ರಗತಿಗೆ ವಿರೋಧವಿರುವ ಎಲ್ಲ ಅಡಚಣೆಗಳನ್ನೂ ತೆಗೆದುಹಾಕ ಬೇಕೆಂದೂ, ಪರದೇಶಗಳವರಿಗೆ ಕೊಟ್ಟಿರುವ ವಿಶೇಷ ಸೌಲಭ್ಯಗಳನ್ನು ನಿಲ್ಲಿಸಬೇಕೆಂದೂ ಸರಕಾರದ ಮೇಲೆ ಒತ್ತಾಯ ಮಾಡಲಾಗುತ್ತಿದೆ. ಸರಕಾರವು ಈ ತತ್ವವನ್ನು ಒಪ್ಪಿಕೊಂಡರೂ ಎಲ್ಲ ನಿಜವಾದ ಪ್ರಗತಿಗೆ ಅದರಲ್ಲೂ ಮೂಲ ಕೈಗಾರಿಕೆಗಳ ಪ್ರಗತಿಗೆ ಅಡ್ಡ ಬಂದಿದೆ. ೧೯೩೫ನೇ ರಾಜ್ಯಾಂಗ