ಪುಟ:ಭಾರತ ದರ್ಶನ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ 'ಶಾಸನದಲ್ಲಿ ಸಹ ಭಾರತದಲ್ಲಿನ ಬ್ರಿಟಿಷ್ ಕೈಗಾರಿಕೆಗಳಿಗೆ ಇರುವ ಹಕ್ಕು ಬಾಧ್ಯತೆಗಳಿಗೆ ಭಾರತದ ಶಾಸನ ಸಭೆಗಳು ಅಡ್ಡಿ ಬರಲಾಗದೆಂದು ವಿಧಿಸಲಾಗಿದೆ. ಯುದ್ದ ಪೂರ್ವದ ವರ್ಷಗಳಲ್ಲಿ ಮೂಲ ದೊಡ್ಡ ಕೈಗಾರಿಕೆಗಳನ್ನು ಆರಂಭಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸರಕಾರದ ನೀತಿಯೂ ಅದಕ್ಕೆ ಅಡ್ಡ ಬಂದಿತು. ಆದರೆ ಯುದ್ದದ ಆವಶ್ಯಕತೆಯಿಂದ ವಸ್ತು ನಿರ್ಮಾಣಕಾರವು ಅತ್ಯಗತ್ಯ ವಾದರೂ ಈ ಯುದ್ಧ ಕಾಲದಲ್ಲಿ ಸಹ ಸರಕಾರವು ಕೈಗಾರಿಕಾ ಪ್ರಗತಿಗೆ ಪುನಃ ಅಡ್ಡಿ ಬಂದುದು ಅತ್ಯಾ ಶ್ವರ್ಯ, ಭಾರತದ ಕೈಗಾರಿಕಾಭಿವೃದ್ಧಿಯಲ್ಲಿ ಬ್ರಿಟಿಷರಿಗೆ ಇರುವ ವಿರೋಧವನ್ನು ಯುದ್ಧದ ಆವಶ್ಯಕತೆಯೂ ತಡೆಗಟ್ಟಲಾಗಲಿಲ್ಲ. ಕೈಗಾರಿಕೆಯು ಭಾರತದಲ್ಲಿ ಏನಾದರೂ ಸ್ವಲ್ಪ ಪ್ರಗತಿ ಹೊಂದಿದ್ದರೆ ಅದು ಕಾಲಸ್ಥಿತಿಯ ಆವಶ್ಯಕತೆಯಿಂದ. ಆದರೆ ಎಷ್ಟು ಆಗಬಹುದಾಗಿತ್ತೋ ಆ ದೃಷ್ಟಿ ಯಿಂದಲೂ, ಮತ್ತು ಇತರ ದೇಶಗಳಲ್ಲಿ ಆಗಿರುವ ಪ್ರಗತಿಯ ದೃಷ್ಟಿಯಿಂದಲೂ ನೋಡಿದರೆ ಇದು ಅತ್ಯಲ್ಪ, ಬ್ರಿಟಿಷರ ಅನುಕೂಲತೆಗೆ ನೇರವಾಗಿ ಕೊಡುವ ಪೊಗದಿಗೆ ಪ್ರತಿಯಾಗಿ ಆಮದು ರಫಿನ ಮೇಲೆ ತೆರಿಗೆ, ಕೈಗಾರಿಕೋತ್ಪತ್ತಿಯ ಮೇಲೆ ಒಳ ತೆರಿಗೆ, ಹಣಕಾಸಿನ ಮತ್ತು ನಾಣ್ಯ ಚಲಾವಣೆಯ ನೀತಿ ಗಳು ಇರುವಂತೆ ಭಾರತದ ಕೈಗಾರಿಕಾ ಪ್ರಗತಿಗೆ ಆರಂಭದಲ್ಲಿನ ನೇರವಾದ ವಿರೋಧದ ಬದಲು ಇತ್ತೀಚಿನ ಅಪ್ರತ್ಯಕ್ಷ ವಿರೋಧವೂ ಬ್ರಿಟನ್ನಿಗೆ ಅಷ್ಟೇ ಫಲಕಾರಿಯಾಗಿವೆ. ದೀರ್ಘಕಾಲದ ದಾಸ್ಯ ಮತ್ತು ಸ್ವಾತಂತ್ರದ ಅಭಾವದಿಂದ ರಾಷ್ಟ್ರಕ್ಕೆ ಹಾನಿಯಾಗುತ್ತದೆ. ಅದರಲ್ಲಿ ತೀರ ಅನಿಷ್ಟ ಪರಿಣಾಮವೆಂದರೆ ನೈತಿಕ ಪತನ-ಜನತೆಯಲ್ಲಿ ಬೇರೂರುವ ಅನೀತಿ ಮತ್ತು ನಿರಾಶಾಭಾವನೆ ಎದ್ದು ಕಂಡರೂ ಅದನ್ನು ಅಳೆಯುವುದು ಬಹು ಕಷ್ಟ, ಒಂದು ರಾಷ್ಟ್ರದ ಆರ್ಥಿಕ ಅವನತಿಯನ್ನು ಅಳೆಯುವುದು ಸುಲಭ. ಭಾರತದಲ್ಲಿನ ಬ್ರಿಟಿಷರ ಆರ್ಥಿಕ ನೀತಿಯನ್ನು ಗಮನಿಸಿದರೆ ಭಾರತದ ಇಂದಿನ ಬಡತನವು ಆ ನೀತಿಯ ಪರಿಣಾಮ ಎಂದು ಹೇಳಲು ಅನುಮಾನ ವಿಲ್ಲ, ಈ ಬಡತನ ಬಂದುದು ಯಾವ ಶಾಪದಿಂದಲೂ ಅಲ್ಲ. ಅದರ ಕಾರಣಗಳು ಸ್ಪಷ್ಟ ಇವೆ; ಇಂದಿನ ಅವನತಿ ಹೇಗೆ ಒದಗಿತೆಂಬುದೂ ಸ್ಪಷ್ಟವಿದೆ. ೪. ಪರರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ನೀತಿಗೆ ಭಾರತದ ಪ್ರಥಮ ದಾಸ್ಯ ಭಾರತದಲ್ಲಿ ಬ್ರಿಟಿಷರ ಆಡಳಿತ ಸ್ಥಾಪನೆಯಿಂದ ಒಂದು ಸಂಪೂರ್ಣ ನೂತನ ಅನುಭವವಾಯಿತು. ಹಿಂದಿನ ಯಾವ ದಂಡೆಯಾತ್ರೆ ರಾಜಕೀಯ ಅರ್ಥಿಕ ವಿಪ್ಲವಗಳಿಗೂ ಇದನ್ನು ಹೋಲಿಸುವಂತೆ ಇಲ್ಲ. “ಭಾರತವನ್ನು ಹಿಂದೆ ಎಷ್ಟೋ ಜನರು ಜಯಿಸಿದ್ದರು. ಆದರೆ ದಂಡೆಯಾತ್ರೆ ಬಂದವರೆಲ್ಲ ಭಾರತದ ಗಡಿಯೊಳಗೇ ನೆಲಸಿ ಅದರ ಜನಜೀವನದ ಚೌಕಟ್ಟಿನಲ್ಲಿ ಹೊಂದಿಕೊಂಡರು (ಇಂಗ್ಲೆಂಡಿನಲ್ಲಿ ನಾರ ನರಂತೆ ಅಥವ ಚೀನಾದಲ್ಲಿ ಮಂಚೂಗಳಂತೆ) ದೇಶದ ಸ್ವಾತಂತ್ರವು ನಾಶವಾಗಲಿಲ್ಲ. ದೇಶದಾಸ್ಯ ವನ್ನು ಎಂದೂ ಅನುಭವಿಸಲಿಲ್ಲ. ಅಂದರೆ ಭಾರತದಿಂದಾಚೆ ಕೇಂದ್ರೀಕೃತವಾದ ಯಾವ ಆರ್ಥಿಕ ರಾಜಕೀಯ ಪದ್ಧತಿಯ ಬಂಧನಕ್ಕೂ ಸಿಕ್ಕಿರಲಿಲ್ಲ. ಮೂಲತಃ ಪರಕೀಯವಾದರೂ, ನಡತೆಯಲ್ಲ ಶಾಶ್ವತ ಪರಕೀಯವಾದ ಯಾವ ಆಡಳಿತ ವರ್ಗವೂ ಅಧಿಕಾರ ಮಾಡಿರಲಿಲ್ಲ.” * ಹೊರಗಿನಿಂದ ಬಂದವರೂ ಇಲ್ಲಿಯವರೂ ಎಲ್ಲರೂ ಭಾರತದ ಸಾಮಾಜಿಕ ಮತ್ತು ಆರ್ಥಿಕ ಜೀವನದ ಐಕ್ಯತೆಯನ್ನು ಒಪ್ಪಿ ಚೌಕಟ್ಟಿನಲ್ಲಿ ತಾವೇ ಹೊಂದಿಕೊಳ್ಳಲು ಪ್ರಯತ್ನ ಪಟ್ಟರು. ಭಾರತದ ಭೂಗುಣಕ್ಕೆ ಪೂರ್ಣ ಹೊಂದಿಕೊಂಡು ಬೇರು ಬಿಟ್ಟು, ತಾವೇ ಭಾರತೀಯರಾದರು. ಹೊಸ ಆಳರಸರ ಪರಿಯೇ ಬೇರೆ ಇತ್ತು. ಅವರ ನೆಲೆ ಬೇರೊಂದೆಡೆ. ಸಾಮಾನ್ಯ ಭಾರತೀಯರಿಗೂ ಅವರಿಗೂ ಕೂಡಿಸಲಾಗದ

  • ಕೆ.ಎಸ್, ಜಿಂಕರ್, “ಇಂಡಿಯದ ಸಮಸ್ಯೆಗಳು” (ಪೆಂಗ್ವಿನ್ ಸ್ಪೆಷಲ್, ೧೯೪4.)