________________
ಭಾರತ ದರ್ಶನ ಅಪಾರ ಅಂತರ-ಸಂಸ್ಕೃತಿ, ದೃಷ್ಟಿ, ಆದಾಯ, ಜೀವನ ರೀತಿ ಎಲ್ಲದರಲ್ಲೂ ಅಜಗಜಾಂತರ.' ಇಂಗ್ಲೆಂಡಿನಿಂದ ಆರಂಭದಲ್ಲಿ ಭಾರತಕ್ಕೆ ಬಂದ ಬ್ರಿಟಿಷರು ಇಂಗ್ಲೆಂಡಿನ ಸಂಪರ್ಕ ಬಿಟ್ಟು ಭಾರತದ ಜೀವನ ರೀತಿಯನ್ನೇ ಅವಲಂಬಿಸಿದರು. ಆದರೆ ಇದು ಕೇವಲ ತಾತ್ಕಾಲಿಕ. ಇಂಗ್ಲೆಂಡಿಗೂ, ಭಾರತಕ್ಕೂ ವಾಹನ ಸೌಕರ ಅನುಕೂಲವಾದಂತೆ ಉದ್ದೇಶಪಟ್ಟು, ಆ ಸಂಪರ್ಕ ವನ್ನೂ ನಾಶಮಾಡಿದರು. ಭಾರತೀಯರಿಂದ ಪ್ರತ್ಯೇಕವಾಗಿ ತನ್ನ ದೇ ಒಂದು ಉತ್ತಮ ಪ್ರಪಂಚದಲ್ಲಿ ಪ್ರತ್ಯೇಕವಿದ್ದು ಬ್ರಿಟಿಷ್ ಆಳರಸರ ಗೌರವ ಮತ್ತು ಪ್ರತಿಷ್ಠೆ ಯನ್ನು ಕಾಪಾಡಿ ಕೊಳ್ಳುವುದು ಅವಶ್ಯವೆಂದು ಪರಿಗಣಿಸಿದರು, ಎರಡು ಪ್ರಪಂಚಗಳಾದವು ಬ್ರಿಟಿಷ್ ಅಧಿಕಾರಿ ವರ್ಗದ ಪ್ರಪಂಚ, ಮತ್ತು ಭಾರತ ಜನಕೋಟಿಯ ಪ್ರಪಂಚ ; ಪರಸ್ಪರ ತಾತ್ಸಾರ ಒಂದರ ವಿನಾ ಈ ಎರಡು ಪ್ರಪಂಚಕ್ಕೂ ಸಾಮಾನ್ಯವಾದುದು. ಏನೂ ಇರಲಿಲ್ಲ, ಪೂರ್ವದಲ್ಲಿ ವಿವಿಧ ಜನಾಂಗಗಳ ರಕ್ತ ಸಂಬಂಧ ಬೆಳೆದಿತ್ತು; ಒಂದೇ ಸ್ವತಂತ್ರ ರಾಷ್ಟ್ರಜೀವನದ ಚೌಕಟ್ಟಿನ ಒಳಗೆ ಅಡಕವಾಗಿದ್ದರು. ಈಗ ಜನಾಂಗಭೇದವು ಒಂದು ನೀತಿಯಾಯಿತು. ಬಲಿಷ್ಠ ಜನಾಂಗದ ಕೈ ಯೊಳಗಿನ ನಿರಂಕುಶ ರಾಜಕೀಯ ಮತ್ತು ಆರ್ಥಿಕ ಶಕ್ತಿಯಿಂದ ಈ ಜನಾಂಗ ವೈರ ಇನ್ನೂ ಹೆಚ್ಚಾಯಿತು. ನೂತನ ಬಂಡವಾಳಶಾಹಿ ಪದ್ಧತಿಗೆ ಇಡೀ ಪ್ರಪಂಚವೇ ಮಾರು ಕಟ್ಟೆ ಯಾದ್ದರಿಂದ ಹೇಗೂ ಭಾರತದ ಆರ್ಥಿಕ ರಚನೆಯ ಮೇಲೆ ಅದರ ಪರಿಣಾಮ ಆಗಬೇಕಾಗಿತ್ತು. ಕಸಬಿನ ವಿಂಗಡ ಪದ್ದತಿಯಮೇಲೆ ರಚಿತವಾಗಿದ್ದ ಸ್ವಯಂಪೂರ್ಣ ಗ್ರಾಮ ಜೀವನವು ಇದ್ದಂತೆಯೇ ಮುಂದುವರಿ ಯಲು ಸಾಧ್ಯವಿರಲಿಲ್ಲ. ಆದರೆ ಈ ಬದಲಾವಣೆಯು ಕ್ರಮಾನುಗತವಾಗಿ ಬರಲಿಲ್ಲ. ಏಕಾ ಏಕಿ ಒದಗಿ ಭಾರತೀಯ ಸಾಮಾಜಿಕ ಜೀವನದ ಆರ್ಥಿಕ ರಚನೆಯ ಮೂಲವನ್ನೇ ನಾಶಮಾಡಿತು. ಸಮಾಜದ ಅನುಮತಿ ಮತ್ತು ಆಡಳಿತಕ್ಕೆ ಒಳಪಟ್ಟು, ಜನತೆಯ ಸಾಂಸ್ಕೃತಿಕ ಸಂಪತ್ತಾಗಿ ಬಾಳಿ ಬಂದ ಆರ್ಥಿಕ ರಚನೆಯ ಮೇಲೆ ಎಲ್ಲಿಂದಲೋ ಬಂದ ಪರಾಡಳಿತದ ಬೇರೊಂದು ಪದ್ಧತಿಯು ಅತಿಕ್ರಮಣ ಮಾಡಿತು, ಪ್ರಪಂಚದ ಮೂರು ಕಟ್ಟೆಯಲ್ಲಿ ಭಾರತವು ಒಂದು ಭಾಗವಾಗಲಿಲ್ಲ; ಆದರೆ ಬ್ರಿಟಿಷ್ ಅರ್ಥಿಕ ನೀತಿಗೆ ಅಧೀನವಾದ ಒಂದು ಕೃಷಿಕ ದೇಶವಾಯಿತು. ಭಾರತದ ಆರ್ಥಿಕ ನೀತಿಯ ತಳಹದಿಯಾದ ಗ್ರಾಮ ಜೀವನವು ನಾಶವಾಗಿ ಅದರ ಆರ್ಥಿಕ ಮತ್ತು ಆಡಳಿತ ಅಧಿಕಾರಕ್ಕೆ ಚ್ಯುತಿ ಬಂದಿತು. ಬ್ರಿಟಿಷ್ ಅಧಿಕಾರವರ್ಗದಲ್ಲಿ ಅತಿ ಶ್ರೇಷ್ಠನಾದ ಸರ್ ಚಾಲ್ಸ್ಸ್ ಮೆಟಾಫ್ ೧೮೩೦ ರಲ್ಲಿ ಈ ಗ್ರಾಮಾಡಳಿತ ಕ್ರಮವನ್ನು ವಿವರಿಸುತ್ತ “ ಗ್ರಾಮಾ ಡಳಿತವು ಸ್ವಯಂಪೂರ್ಣ ಪ್ರಜಾಸತ್ತಾತ್ಮಕವಿದೆ. ತನಗೆ ಬೇಕಾದುದನ್ನೆಲ್ಲ ತಾನೇ ಒದಗಿಸಿ ಕೊಳ್ಳುತ್ತದೆ. ವಿದೇಶಾಂಗ ವ್ಯವಹಾರ ಅದಕ್ಕೆ ಸಂಬಂಧವಿಲ್ಲ. ಉಳಿದುದೆಲ್ಲ ನಶ್ವರವಿದ್ದರೂ ಇವು ಮಾತ್ರ ಶಾಶ್ವತ ಇವೆ, ಈ ಗ್ರಾಮ ಪಂಚಾಯತಿಗಳ ಸಮೂಹ ಒಂದೊಂದೂ ಒಂದೊಂದು ಪ್ರತ್ಯೇಕ ರಾಜ್ಯದಂತೆ ಇದ್ದು ಉತ್ತಮ ರೀತಿಯಲ್ಲಿ ಜನರ ಹಿತರಕ್ಷಣೆ ಮಾಡುತ್ತಿವೆ. ಜನರಿಗೆ ಬಹುಮಟ್ಟಿನ ವ್ಯಕ್ತಿ ಸ್ವಾತಂತ್ರವೂ, ಆಡಳಿತ ಸ್ವಾತಂತ್ರವೂ ಇದೆ.” ಎಂದು ಹೇಳಿದ್ದಾನೆ. ಗ್ರಾಮ ಕೈಗಾರಿಕೆಗಳ ನಾಶದಿಂದ ಈ ಗ್ರಾಮಾಡಳಿತ ಸಂಸ್ಥೆಗಳಿಗೆ ತುಂಬ ಪೆಟ್ಟು ಬಿತ್ತು, ವ್ಯವಸಾಯಕ್ಕೂ ಕೈಗಾರಿಕೆಗೂ ಇದ್ದ ಸಮತೂಕ ನಾಶವಾಯಿತು. ಕುಶಲ ಕರ್ಮಗಳ ವ್ಯವಸ್ಥೆಯ ಕುಸಿದುಬಿತ್ತು ; ನಿರುದ್ಯೋಗಿಗಳಾದ ಅಸಂಖ್ಯಾತ ಜನರಿಗೆ ಜೀವನ ಮಾರ್ಗವನ್ನು ಕಲ್ಪಿಸುವುದು ಅಸಾಧ್ಯವಾಯಿತು. ಜಾನುವಾರಿ ಪದ್ದತಿಯನ್ನು ಆಚರಣೆಗೆ ತಂದುದರಿಂದ ಭೂಮಿಯ ಒಡೆತನದ ಕಲ್ಪನೆಯೇ ಬೇರೆಯಾಗಿ ಆರ್ಥಿಕ ವ್ಯವಸ್ಥೆಗೆ ಇನ್ನೊಂದು ಬಲವಾದ ಪೆಟ್ಟು ಬಿತ್ತು. ಗ್ರಾಮದ ಭೂಮಿ ಎಲ್ಲವೂ ಗ್ರಾಮದ್ದಾಗಿತ್ತು, ಬೆಳೆದ ಬೆಳೆ ಮಾತ್ರ ರೈತನದಾಗಿತ್ತು. ಪ್ರಾಯಶಃ ಪೂರ್ಣ ಅರ್ಥವನ್ನು ಗ್ರಹಿಸದೆಯೊ, ಅಥವ ಬೇರೆ ಉದ್ದೇಶದಿಂದಲೋ ಇಂಗ್ಲಿಷ್ ಜಮೀನುದಾರ