ಪುಟ:ಭಾರತ ದರ್ಶನ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ೨೬೧ ಪಂಗಡದ ಪ್ರತಿನಿಧಿಗಳಾದ ಬ್ರಿಟಿಷ್ ಗವರ ರುಗಳು ಇಂಗ್ಲೆಂಡಿನ ಜಮೀನುದಾರಿಯಂತೆ ಇಲ್ಲಿಯೂ ಅದೇ ಬಗೆಯ ಹಿಡುವಳಿ ಪದ್ದತಿಯನ್ನು ಜಾರಿಗೆ ತಂದರು. ಮೊದಲು ಮೊದಲು ಕೆಲವು ವರ್ಷ ಕಂದಾಯ ವಸೂಲುಮಾಡಿ ಜವಾಬ್ದಾರಿ ಮಾತ್ರ ಇದ್ದ ಜಖಾನುದಾರರನ್ನು ನೇಮಕಮಾಡಿದರು. ಇದರಿಂದ ಗ್ರಾಮಸ್ಥರಿಗೆ ಭೂಮಿಯ ಮೇಲೆ ಮತ್ತು ಅದರಿಂದ ಬಂದ ಬೆಳೆಯ ಮೇಲೆ ಇದ್ದ ಅಧಿಕಾರವು ತಪ್ಪಿತು. ಗ್ರಾಮ ಜೀವನದ ಮುಖ್ಯ ಕೆಲಸ ಮತ್ತು ಆಸಕ್ತಿಯಾಗಿದ್ದ ಭೂವ್ಯವಸ್ಥೆಯು ಹೊಸದಾಗಿ ನೇಮಕವಾದ ಜಮೀನುದಾರನ ಸ್ವಂತ ಆಸ್ತಿಯಾಯಿತು. ಇದರಿಂದ ಗ್ರಾಮಜೀವನ ದಲ್ಲಿದ್ದ ಒಗ್ಗಟ್ಟು, ಸಮಷ್ಟಿ ಜೀವನ, ಗ್ರಾಮೋದ್ಯೋಗಗಳಲ್ಲಿ, ಗ್ರಾಮಸೇವೆಯಲ್ಲಿ ಇದ್ದ ಸಹಕಾರ ಎಲ್ಲಕ್ಕೂ ಸಂಚಕಾರ ಬಂದಿತು, ಈ ಹೊಸಬಗೆಯ ಭೂಮಿಯ ಸ್ವಾಮ್ಯದ ಭಾವನೆಯಿಂದ ಒಂದು ದೊಡ್ಡ ಆರ್ಥಿಕ ವಿಪ್ಲವವೇ ಆಯಿತು; ಸಮಾಜದಲ್ಲಿದ್ದ ಸಹಕಾರ ಮತ್ತು ಸಮಷ್ಟಿ ಜೀವನದ ಭಾರತೀಯ ಕಲ್ಪನೆಯ ಬುಡಕ್ಕೆ ಬಲವಾದ ಪೆಟ್ಟು ಬಿತ್ತು ಬ್ರಿಟಿಷರಿಂದ ನಿರ್ಮಿತವಾಗಿ ಬಹಳ ಮಟ್ಟಿಗೆ ಬ್ರಿಟಿಷರ ಕೈ ಗೊಂಬೆಗಳಾದ ಜಮೀನುದಾರರ ಒಂದು ಹೊಸ ಜಾತಿಯು ಸೃಷ್ಟಿಯಾಯಿತು. ಹಳೆಯ ವ್ಯವಸ್ಥೆಯ ನಾಶದಿಂದ ಹೊಸ ಸಮಸ್ಯೆಗಳು ಎದ್ದವು. ಪ್ರಾಯಶಃ ಹಿಂದೂ ಮುಸಲ್ಮಾನರ ಹೊಸ ಸಮಸ್ಯೆ ಇಲ್ಲಿಂದ ಆರಂಭವಾಗುತ್ತದೆ. ಕಾಯಂ ಹಿಡುವಳಿ ಎಂಬ ಹೆಸರಿನಿಂದ ಬೀಹಾರ ಮತ್ತು ಬಂಗಾಳ ದಲ್ಲಿ ದೊಡ್ಡ ದೊಡ್ಡ ಜಮೀನುದಾರರುಗಳನ್ನು ಸೃಷ್ಟಿ ಮಾಡಿ ಜಮೀನುದಾರಿ ಪದ್ಧತಿಯನ್ನು ಆಚರಣೆಗೆ ತಂದರು. ಈ ಪದ್ದತಿಯಲ್ಲಿ ಭೂಕಂದಾಯ ಮೊದಲೇ ನಿಗದಿಯಾದ್ದರಿಂದ ಹೆಚ್ಚಿಸಲು ಅವಕಾಶವಿಲ್ಲದೆ ಸರಕಾರಕ್ಕೆ ಇದು ಉಪಯುಕ್ತವಲ್ಲವೆಂದು ಕಂಡಿತು. ಆದ್ದರಿಂದ ಭಾರತದ ಇತರ ಕಡೆಗಳಲ್ಲಿ ಹಿಡುವಳಿಗಳನ್ನು ತಾತ್ಕಾಲಿಕವಾಗಿ ಮಾತ್ರ ಕೊಟ್ಟು ಮೇಲಿಂದ ಮೇಲೆ ಕಂದಾಯ ಏರಿ ಸುತ್ತ ಬಂದರು. ಕೆಲವು ಕಡೆಗಳಲ್ಲಿ ವ್ಯವಸಾಯಗಾರನೇ ಭೂಮಿಯ ಒಡೆಯನೂ ಆದನು. ಈ ಕಂದಾಯ ವಸೂಲಿಯ ಕಠಿಣತೆಯಿಂದ ಬಂಗಾಲದ ಭೂಮಿಯ ಮೂಲ ಮಾಲಿಕರೆಲ್ಲರೂ ಭಿಕಾರಿ ಗಳಾದರು; ಅವರ ಸ್ಥಾನದಲ್ಲಿ ಹಣವಂತರ ಹೊಸ ಪಂಗಡ ಒಂದು ನಿರ್ಮಾಣವಾಯಿತು. ಬಂಗಾ ಲದ ಜಮೀನುದಾರರಲ್ಲಿ ಬಹು ಸಂಖ್ಯಾತರು ಹಿಂದೂಗಳಾದರು ; ರೈತರಲ್ಲಿ ಹಿಂದೂಗಳೂ ಇದ್ದರೂ ಮುಸ್ಲಿಮರೇ ಹೆಚ್ಚಾದರು. ಬಹು ಸಂಖ್ಯೆಯ ರೈತರನ್ನು ಆಳುವುದಕ್ಕಿಂತ ಕೆಲವೇ ಜಮೀನುದಾರರನ್ನು ಆಳುವುಮ ಸುಲಭವಾದ್ದರಿಂದ ತಮ್ಮ ದೇಶದ ಪದ್ಧತಿಯಂತೆ ಇಲ್ಲಿಯೂ ಜಮೀನುದಾರರನ್ನು ಸೃಷ್ಟಿಸಿದರು. ಆದಷ್ಟು ಬೇಗ ಆದಷ್ಟು ಹೆಚ್ಚು ತೆರಿಗೆಯನ್ನು ವಸೂಲು ಮಾಡುವುದೇ ಮುಖ್ಯ ಉದ್ದೇಶ. ಯಾವ ಜಮೀನುದಾರನಾಗಲಿ ಕಾಲಕ್ಕೆ ಸರಿಯಾಗಿ ತೆರಿಗೆ ಕೊಡದಿದ್ದರೆ ಅವನನ್ನು ತಳ್ಳಿ ಹಾಕಿ ಅವನ ಸ್ಥಾನ ದಲ್ಲಿ ಮತ್ತೊಬ್ಬನನ್ನು ಸೃಷ್ಟಿಸುತ್ತಿದ್ದರು. ಬ್ರಿಟಿಷರ ಹಿತರಕ್ಷಣೆಗೆ ಸಹಾಯಕವಾದ ಒಂದು ಪಂಗಡವನ್ನು ಕಟ್ಟಬೇಕಾಗಿತ್ತು. ತಮ್ಮ ಮೇಲೆ ಜನರು ಎಲ್ಲಿ ದಂಗೆ ಏಳುತ್ತಾರೋ ಎಂಬ ಭಯವು ಭಾರತದಲ್ಲಿನ ಬ್ರಿಟಿಷ್ ಅಧಿಕಾರಿಗಳಿಗೆ ಬಹಳವಿತ್ತು. ತಮ್ಮ ಕಾಗದ ಪತ್ರಗಳಲ್ಲಿ ಪದೇ ಪದೇ ಆ ವಿಷಯ ಬರೆದಿದ್ದಾರೆ. “ ಜನರು ದಂಗೆ ಏಳದಂತೆ ಬಲವಾದ ರಕ್ಷಣೆ ಇಲ್ಲದಿದ್ದರೂ ಜಮೀನುದಾರಿ ಪದ್ಧತಿಯಿಂದ ಬ್ರಿಟಿಷ್ ಆಳ್ವಿಕೆಯು ಶಾಶ್ವತವಿರಲೆಂದು ಆಸಕ್ತಿಯುಳ್ಳ ಜಮೀನುದಾರರ ಪಂಗಡವು ನಿರ್ಮಾಣವಾಗಿದೆ ; ಜನರು ಸಂಪೂರ್ಣವಾಗಿ ಅವರ ಹಿಡಿತದಲ್ಲಿದ್ದಾರೆ.” ಎಂದು ಗವನ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆಂಟಿಂಕ್ ೧೮೨೯ ರಲ್ಲಿ ಹೇಳಿದ್ದಾನೆ. ಈ ರೀತಿ ಬ್ರಿಟಿಷ್ ಅಧಿಕಾರದೊಂದಿಗೆ ನಿಕಟ ಬಾಂಧವ್ಯವನ್ನಿಟ್ಟುಕೊಂಡು ಬ್ರಿಟಷರ ಅಧಿಕಾರ ವನ್ನೇ ಅವಲಂಬಿಸಿ ಹಕ್ಕು ದಾರಿ ಪಡೆದ ಒಂದು ಹೊಸ ಪಂಗಡವನ್ನು ಸೃಷ್ಟಿಸಿಕೊಂಡು ಬ್ರಿಟಿಷರು ತಮ್ಮ ಆಳ್ವಿಕೆಯನ್ನು ಭದ್ರಪಡಿಸಿಕೊಂಡರು, ಗ್ರಾಮದ ಪಟೇಲ ಶಾನುಭೋಗರಿಂದ ಮೊದಲು ಗೊಂಡು ಜಮೀನುದಾರರು ಮತ್ತು ರಾಜರುಗಳವರೆಗೆ ಒಂದು ಅಧಿಕಾರವರ್ಗವನ್ನೇ ಕಟ್ಟಿದರು.