ಪುಟ:ಭಾರತ ದರ್ಶನ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ಯಿಂದ ಭಾರತವು ಬಂಧನದಲ್ಲಿ ಸಿಲುಕಿ ಯಾವ ರೂಪ ವ್ಯತ್ಯಾಸಕ್ಕೂ ಅವಕಾಶವಾಗಲಿಲ್ಲ. ನೂರ ನಲವತ್ತು ವರ್ಷಗಳ ಕೆಳಗೆ ಯುದ್ಧ ಭೂಮಿಯಲ್ಲೇ ಅಥವಾ ಯುದ್ಧಾನಂತರದ ಕೆಲವು ದಿನಗಳಲ್ಲೂ ಇಬ್ಬರು ಸೇನಾನಿಗಳ ಮಧ್ಯೆ ಆದ ಒಪ್ಪಂದವನ್ನು ಶಾಶ್ವತವಾಗಿ ಪಾಲಿಸ ಬೇಕೆಂದು ಹೇಳುವುದು ಮೂರ್ಖತನ. ಆ ಒಪ್ಪಂದದಲ್ಲಿ ಸಂಸ್ಥಾನದ ಪ್ರಜೆಗಳಂತೂ ಯಾವ ಭಾಗವನ್ನೂ ವಹಿಸಿರಲಿಲ್ಲ; ಇನ್ನೊಂದು ಪಕ್ಷವಂತು ಲಾಭದ ಆಸೆಗಾಗಿ ಬಂದಿದ ವ್ಯಾಪಾರ ಸಂಸ್ಥೆ. ವ್ಯಾಪಾರ ಸಂಸ್ಥೆಯಾದ ಈ ಈಸ್ಟ್ ಇಂಡಿಯ ಕಂಪನಿಯು ಬ್ರಿಟಿಷ್ ಪಾರ್ಲಿಮೆಂಟಿನ ಅಥವ ಬ್ರಿಟಿಷ್ ರಾಜನ ಪ್ರತಿನಿಧಿಯಾಗಿ ಇಲ್ಲಿ ನಡೆದುಕೊಳ್ಳಲಿಲ್ಲ; ದೆಹಲಿಯ ಸಾಮ್ರಾಟನಿಗೆ ಯಾವ ಅಧಿಕಾರವಿಲ್ಲದಿದ್ದರೂ, ಎಲ್ಲ ಅಧಿಕಾರ ಮತ್ತು ಶಕ್ತಿಯನ್ನು ಪಡೆದದ್ದು ಅವನಿಂದ. ಅವನ ಪ್ರತಿನಿಧಿಗಳಾಗಿ ಕೆಲಸ ಮಾಡಿದರು. ಬ್ರಿಟಿಷ್ ಸರ್ಕಾರಕ್ಕೆ ಬ್ರಿಟಿಷ್ ಪಾರ್ಲಿಮೆಂಟಗೆ ಈ ಒಪ್ಪಂದಗಳಿಗೆ ಯಾವ ಸಂಬಂಧವೂ ಇರಲಿಲ್ಲ, ಈಸ್ಟ್ ಇಂಡಿಯ ಕಂಪನಿಗೆ ಕೊಟ್ಟಿದ್ದ ರಾಜಾಜ್ಞೆಯು ಪಾರ್ಲಿಮೆಂಟಿನಲ್ಲಿ ಆಗಿಂದಾಗ ಚರ್ಚೆಗೆ ಬಂದಾಗ ಮಾತ್ರ ಪಾರ್ಲಿ ಮೆಂಟ್ ಭಾರತದ ವಿಷಯಗಳನ್ನು ಚರ್ಚಿಸುತ್ತ ಇತ್ತು. ಮೊಗಲ್ ಚಕ್ರವರ್ತಿಯ ಅನುಜ್ಞೆ ಯಿಂದ ಈಸ್ಟ್ ಇಂಡಿಯ ಕಂಪೆನಿಯು ಭಾರತದಲ್ಲಿ ವ್ಯವಹಾರ ನಡೆಸುತ್ತಲಿದ್ದುದರಿಂದ ಬ್ರಿಟಿಷ್ ದೊರೆಯ ಅಥವ ಪಾರ್ಲಿಮೆಂಟಿನ ಅಧಿಕಾರದಿಂದ ಸ್ವತಂತ್ರವಿತ್ತು. ರಾಜಾಜ್ಞೆಯ ಅವಧಿಯು ಚರ್ಚೆಗೆ ಬಂದಾಗ ಅದನ್ನು ರದ್ದುಮಾಡಲು ಅಥವ ಹೊಸ ಷರತ್ತುಗಳನ್ನು ಹಾಕಲು ಪಾರ್ಲಿಮೆಂಟಿಗೆ ಪರೋಕ್ಷ ಅಧಿಕಾರ ಮಾತ್ರವಿತ್ತು. ಇಂಗ್ಲಿಷ್ ದೊರೆಯಾಗಲಿ, ಬ್ರಿಟಿಷ್ ಪಾರ್ಲಿಮೆಂಟ್ ಆಗಲಿ ದೆಹಲಿ ಚಕ್ರವರ್ತಿಯ ಪ್ರತಿನಿಧಿಯಾಗಲಿ ಕೆಲಸ ಮಾಡಬೇಕೆನ್ನುವುದು ಬ್ರಿಟಿಷರಿಗೆ ಸರಿಬೀಳದ ಕಾರಣ ಅವರು ಈಸ್ಟ್ ಇಂಡಿಯ ಕಂಪೆನಿಯ ವ್ಯವಹಾರದಿಂದ ದೂರವೇ ಇದ್ದರು. ಭಾರತದಲ್ಲಿನ ಯುದ್ಧಗಳಿಗೆ ವ್ಯಯಮಾಡಿದ ಹಣವೆಲ್ಲ ಈಸ್ಟ್ ಇಂಡಿಯ ಕಂಪೆನಿಯು ಭಾರತದಲ್ಲೇ ಸಂಗ್ರಹಿಸಿ ತಮಗೆ ಮನಬಂದಂತೆ ವೆಚ್ಚ ಮಾಡಿದ ಭಾರತದ ಹಣ. ಕ್ರಮೇಣ ಈಸ್ಟ್ ಇಂಡಿಯ ಕಂಪನಿಯು ರಾಜ್ಯವನ್ನು ವಿಸ್ತಾರಗೊಳಿಸಿ ತಮ್ಮ ಆಡಳಿತವನ್ನು ಭದ್ರಪಡಿಸಿಕೊಂಡಮೇಲೆ, ಭಾರತದ ವಿಷಯದಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಹೆಚ್ಚು ಆಸಕ್ತಿಯನು ವಹಿಸತೊಡಗಿತು. ೧೮೫೮ರ ದಂಗೆಯ ನಂತರ ಈಸ್ಟ್ ಇಂಡಿಯ ಕಂಪನಿಯು ಭಾರತದ ಬೊಕ್ಕಸ ದಿಂದಲೇ ವಿಕ್ರಯದ ಪ್ರತಿಫಲ ಪಡೆದು ಭಾರತವನ್ನು ಬ್ರಿಟಿಷ್ ರಾಜರಿಗೆ ವಿಕ್ರಯಿಸಿತು. ಈ ವಿಕ್ರಯದಲ್ಲಿ ಉಳಿದ ಭಾರತವನ್ನು ಬಿಟ್ಟು ಸಂಸ್ಥಾನಗಳಿಗೆ ಒಂದು ಪ್ರತ್ಯೇಕ ವ್ಯವಹಾರ ನಡೆಯ ಲಿಲ್ಲ. ಇಡೀ ಭಾರತವೇ ಒಂದು ರಾಜ್ಯವಾಗಿ ಭಾರತ ಸರ್ಕಾರದ ಮೂಲಕ ಬ್ರಿಟಿಷ್ ಪಾರ್ಲಿ ಮೆಂಟ್ ತನ್ನ ಅಧಿಕಾರ ನಡೆಸಲು ಆರಂಭಿಸಿತು. ಈ ಅಧಿಕಾರವ್ಯಾಪ್ತಿಗೆ ದೇಶೀಯ ಸಂಸ್ಥಾನ ಗಳೂ ಒಳಪಟ್ಟವು. ಬ್ರಿಟಿಷ್ ದೊರೆಯೊಂದಿಗೆ ಆಗಲಿ, ಪಾರ್ಲಿಮೆಂಟ್ ಜೊತೆಗೆ ಆಗಲಿ ಈ ಸಂಸ್ಥಾನಗಳ ಪ್ರತ್ಯೇಕ ವ್ಯವಹಾರ ಯಾವುದೂ ಇರಲಿಲ್ಲ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾರತ ಸರಕಾರವು ಪ್ರತಿನಿಧಿಸಿದ ಸರಕಾರ ಪದ್ದತಿಯ ಒಂದು ಅಂಗವಾದವು. ಈ ಸರಕಾರವು ಕ್ರಮೇಣ ಹಳೆಯ ಕರಾರುಗಳನ್ನು ತಮಗೆ ಮನಬಂದಾಗ, ಮನಬಂದಂತ ಬದಿಗೊತ್ತಿ ಸಂಸ್ಥಾನಗಳ ಮೇಲೆ ಬಲವಾದ ತಮ್ಮ ಪರಮಾಧಿಕಾರವನ್ನು ಸ್ಥಾಪಿಸಿತು. ಈ ರೀತಿ ದೇಶೀಯ ಸಂಸ್ಥಾನಗಳ ವಿಷಯದಲ್ಲಿ ಬ್ರಿಟಿಷ್ ದೊರೆಗೆ ಯಾವ ಸ್ಥಾನವೂ ಇರ ಲಿಲ್ಲ. ಈಚೆಗೆ ಈ ಸಂಸ್ಥಾನಗಳಿಗೂ ಸ್ವಲ್ಪ ಸ್ವಾತಂತ್ರ ಇದೆ ಎಂದೂ, ಇಂಡಿಯಾ ಸರಕಾರವಲ್ಲದೆ ಬ್ರಿಟಿಷ್ ದೊರೆಯೊಂದಿಗೆ ವಿಶೇಷ ಸಂಪರ್ಕವಿದೆ ಎಂದೂ ಸಂಸ್ಥಾನಾಧೀಶರುಗಳ ಪರವಾಗಿ ಒಂದು ಹೊಸ ಕೂಗು ಎದ್ದಿದೆ. ಈ ಕೌಲು ಕರಾರುಗಳಿರುವುದೂ ಕೆಲವು ಸಂಸ್ಥಾನಗಳೊಂದಿಗೆ ಮಾತ್ರ, ನಲವತ್ತು ಸಂಸ್ಥಾನಗಳಿಗೆ ಮಾತ್ರ ಕೌಲುಗಳಿವೆ. ಉಳಿದುವೆಲ್ಲ ಸನ್ನದಿನ ಸಂಸ್ಥಾನಗಳು, ಈ