ಪುಟ:ಭಾರತ ದರ್ಶನ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೬ - ಭಾರತ ದರ್ಶನ ನಲವತ್ತು ಸಂಸ್ಥಾನಗಳಲ್ಲಿ ಸಂಸ್ಥಾನ ಪ್ರಜೆಗಳ ಮುಕ್ಕಾಲುಪಾಲು ಪ್ರಜಾಸಂಖ್ಯೆ ಇದೆ; ಆರು' ಸಂಸ್ಥಾನಗಳಲ್ಲಿ ಮೂರನೇ ಎರಡರಷ್ಟು ಜನರಿದಾರೆ.* . ೧೯೩೫ನೆ ಭಾರತ ಸರಕಾರ ಶಾಸನದಲ್ಲಿ ದೇಶೀಯ ಸಂಸ್ಥಾನಗಳಿಗೂ, ಉಳಿದ ಭಾರತಕ್ಕೂ ಬ್ರಿಟಿಷ್ ಪಾರ್ಲಿಮೆಂಟಿನೊಂದಿಗೆ ಇರಬೇಕಾದ ವ್ಯವಹಾರದಲ್ಲಿ ಮೊಟ್ಟ ಮೊದಲನೆಯ ಬಾರಿ ವ್ಯತ್ಯಾಸಮಾಡಲಾಗಿದೆ. ಭಾರತ ಸರಕಾರದ ಮೇಲ್ವಿಚಾರಣಾಧಿಕಾರದಿಂದ ಸಂಸ್ಥಾನಗಳನ್ನು ಬೇರೆಮಾಡಿ ಬ್ರಿಟಿಷ್ ದೊರೆಯ ಪ್ರತಿನಿಧಿ ಎಂದು ವೈಸರಾಯ್ ಅಧಿಕಾರಕ್ಕೆ ಒಳಪಡಿಸಲಾಯಿತು. ಅದೇ ವೈಸ್ರಾಯ್ ಭಾರತ ಸರಕಾರದ ಮುಖ್ಯ ಅಧಿಕಾರಿಯೂ ಆಗಿ ಉಳಿದನು, ಸಂಸ್ಥಾನಗ ಳೊಂದಿಗೆ ವ್ಯವಹಾರ ನಡೆಸುತ್ತಿದ್ದ ರಾಜಕೀಯ ಶಾಖೆಯು ವೈಸರಾಯನ ಮಂತ್ರಾಲೋಚನಾ ಸಭೆಯ ಆಡಳಿತದೊಳಗೆ ಬಾರದೆ ನೇರವಾಗಿ ವೈಸರಾಯನ ಆಡಳಿತದೊಳಗೆ ಬಂದಿತು. ಈ ಸಂಸ್ಥಾನಗಳು ಹುಟ್ಟಿದ ಬಗೆ ಹೇಗೆ ? ಕೆಲವು ಬ್ರಿಟಿಷರೇ ನಿರ್ಮಾಣಮಾಡಿದ ತೀರ ಹೊಸ ಸಂಸ್ಥಾನಗಳು, ಮೊಗಲರ ಪ್ರತಿನಿಧಿಗಳಾಗಿ ಬಂದವರಿಂದ ಆರಂಭವಾಗಿ ಬ್ರಿಟಿಷರಮನ್ನಣೆ ಪಡೆದವು ಕೆಲವು. ಮರಾಠ ಮುಖಂಡರನ್ನು ಸೋಲಿಸಿ ಅಧೀನಮಾಡಿಕೊಂಡ ರಾಜರುಗಳ ಸಂಸ್ಥಾನಗಳು ಕೆಲವು. ಇವೆಲ್ಲ ಬ್ರಿಟಿಷರ ಆಳ್ವಿಕೆಯ ಆರಂಭದಲ್ಲಿ ಹುಟ್ಟಿದವು. ಅದಕ್ಕೂ ಮೊದ ಲಿನ ಇತಿಹಾಸ ಯಾವುದಕ್ಕೂ ಇಲ್ಲ. ಯಾವುದೂ ಸ್ವತಂತ್ರ ಇರಲಿಲ್ಲ ; ಅಥವ ಕೆಲವು ವರ್ಷ ಸ್ವತಂತ್ರವಿದ್ದರೂ ಅದು ಯುದ್ಧದಲ್ಲಿ ಸೋತು, ಅಥವ ಯುದ್ದ ಭಯದಿಂದ ಕಳೆದುಕೊಂಡ ಅಲ್ಪಾ ಯುಸ್ಸಿನ ಸ್ವಾತಂತ್ರ, ಮೊಗಲರ ಕಾಲಕ್ಕಿಂತ ಹಿಂದಿನವೆಂದರೆ ರಾಜಪುತಾನದ ಕೆಲವು ಸಂಸ್ಥಾನ ಗಳು ಮಾತ್ರ. ತಿರುವಾಂಕೂರಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಕೆಲವು ರಾಜಪುತ್ರ ಮನೆತನದವರು ತಮ್ಮ ವಂಶಪರಂಪರೆಯನ್ನು ಪುರಾಣಕಾಲಗಳಿಂದ ಎಣಿಸುತ್ತಾರೆ. ಉದಯ ಪುರದ ಮಹಾರಾಣ ಸೂರ ವಂಶದವರಂತೆ. ಅವರ ವಂಶವೃಕ್ಷವು ಜಪಾನಿನ ಮಿಕಡೋ ವಂಶವೃಕ್ಷ ವನ್ನು ಹೋಲುತ್ತದೆ, ಆದರೆ ಈ ರಾಜಪುತ್ರ ಮನೆತನದವರು ಮೊಗಲರ ಅಧೀನರಾಗಿ, ಅನಂತರ ಮರಾಠರ ಅಧೀನರಾಗಿ, ಕೊನೆಗೆ ಬ್ರಿಟಿಷರ ಅಧೀನರಾದರು, ಎಡ್ವರ್ಡ್ ಥಾಮ್ಪನ್ “ಈಸ್ಟ್ ಇಂಡಿಯಾ ಕಂಪೆನಿಯ ಪ್ರತಿನಿಧಿಗಳು ದಿವಾಳಿತನದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ರಾಜರು ಗಳನ್ನು ಮೇಲಕ್ಕೆ ಎತ್ತಿ ಅವರವರ ಸ್ಥಾನದಲ್ಲಿ ಇರಿಸಿದರು. ಈ ರೀತಿ ದಡಕ್ಕೆ ಸೇರಿಸಿ ಜೀವದಾನ ಮಾಡಿದಾಗ ಪ್ರಪಂಚದ ಆರಂಭದಿಂದ ಕಂಡುಬರುವ ಎಲ್ಲ ದಿವಾಳಿ ರಾಜರುಗಳಂತೆ ಇವರುಗಳಿಗೂ ಉಸಿರಾಡಲು ಸಹ ಶಕ್ತಿ ಇರಲಿಲ್ಲ. ಬ್ರಿಟಿಷರು ಅವರನ್ನು ಉಳಿಸದಿದ್ದರೆ ರಾಜಪುತ್ರ ಸಂಸ್ಥಾನ ಗಳಿಗೂ ಮರಾಠ ರಾಜ್ಯಗಳಿಗೂ ಇದ್ದ ದಾರಿ ಎಂದರೆ ದಿವಾಳಿಯೊಂದೇ. ಅಯೋಧ್ಯೆ ಮತ್ತು ನಿಜಾಮನ ರಾಜ್ಯಗಳಿಗೆ ಅಸ್ತಿತ್ವವೇ ಇರಲಿಲ್ಲ. ಕುಟುಕು ಜೀವಮಾತ್ರ ಇತ್ತು. ಬ್ರಿಟಿಷರ ಊದಿದ ಜೀವದುಸಿರಿನಿಂದ ಬದುಕಿಕೊಂಡೆವು”-ಎಂದಿದ್ದಾನೆ. ಈಗ ಅತ್ಯಂತ ದೊಡ್ಡ ಸಂಸ್ಥಾನವಾದ ಹೈದರಾಬಾದ್ ಆರಂಭದಲ್ಲಿ ಬಹಳ ಸಣ್ಣದು ಬ್ರಿಟಿಷರು ಟಿಪ್ಪುವನ್ನು ಸೋಲಿಸಿದಾಗ ಮತ್ತು ಮರಾಠ ಯುದ್ದಗಳಾದಾಗ ಎರಡು ಬಾರಿ ಅದು ವಿಸ್ತಾರವಾಯಿತು. ನೈಜಾಮನು ತಮ್ಮ ಅಧೀನ ಇರಬೇಕೆಂಬ ಷರತ್ತಿನಿಂದ ಈ ವಿಸ್ತರಣೆ ಮಾಡಿದ ವರೂ ಬ್ರಿಟಿಷರೇ, ಟಿಪ್ಪು ಸೋತನಂತರ ಆ ರಾಜ್ಯವನ್ನು ಮೊದಲು ಒಪ್ಪಿಸಿದ್ದು ಪೇಷ್ಟೆಗೆ; ಆದರೆ ಪೇಷ್ಟೆಯು ಅಧೀನ ರಾಜನಾಗಿರಲು ಒಪ್ಪದ ಕಾರಣ ಅದು ನೈಜಾಮನಿಗೆ ಸೇರಿತು. ಹೈದರಾಬಾದಿನಲ್ಲಿ ೧೨೦-೧೩೦ ಲಕ್ಷ; ಮೈಸೂರಿನಲ್ಲಿ ೭೫ ಲಕ್ಷ, ತಿರುವಾಂಕೂರಿನಲ್ಲಿ ೬೨,೫ ಲಕ್ಷ ಬಡೋದೆ ೪೦ ಲಕ್ಷ ಕಾಶ್ಮೀರ 40 ಲಕ್ಷ ಗ್ಯಾಲೇರದಲ್ಲಿ ೩೦ ಲಕ್ಷ, ಒಟ್ಟು ೩೬೦ ಲಕ್ಷ ಒಟ್ಟು ಸಂಸ್ಥಾನಗಳ ಪ್ರಜಾ ಸಂಖ್ಯೆ ೯೦೦ ಲಕ್ಷ.