ಪುಟ:ಭಾರತ ದರ್ಶನ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನಯ ಅಂಕ ಎರಡನೆಯದಾದ ಕಾಶ್ಮೀರವನ್ನು ಸೀಖ ಕದನಗಳ ನಂತರ ಬ್ರಿಟಿಷರು ಇಂದಿನ ಮಹಾರಾಜನ ಅಜ್ಜನಿಗೆ ಮಾರಿದರು, ಆಡಳಿತ ಸರಿಯಾಗಿ ನಡೆಸಲಿಲ್ಲವೆಂದು ಅನಂತರ ಬ್ರಿಟಿಷರು ಅದನ್ನು ತಾವೇ ವಹಿಸಿಕೊಂಡರು. ಪುನಃ ಅದನ್ನು ರಾಜನಿಗೆ ಕೊಟ್ಟರು. ಇಂದಿನ ಮೈಸೂರು ನಿರ್ಮಾಣವಾದದ್ದೂ ಟಿನ ಯುದ್ಧಗಳ ನಂತರ ಬ್ರಿಟಿಷರಿಂದ; ಅದು ಸಹ ಬಹುಕಾಲ ಬ್ರಿಟಿಷರ ಆಡಳಿತದಲ್ಲಿತ್ತು, ಭಾರತದಲ್ಲಿ ನಿಜವಾದ ಸ್ವತಂತ್ರ ರಾಜ್ಯವೆಂದರೆ ಈಶಾನ್ಯ ಮೂಲೆಯಲ್ಲಿ ಇರುವ ನೇಪಾಳ. ಸ್ವಲ್ಪ ಒಂಟಿಯಾಗಿದ್ದರೂ ಆಫ್ಘಾನಿಸ್ಥಾನವನ್ನು ಹೋಲುತ್ತದೆ. ಇನ್ನುಳಿದ ರಾಜ್ಯಗಳೆಲ್ಲ ಬ್ರಿಟಿಷ್ ರೆಸಿಡೆಂಟ್ ಅಥವ ಪ್ರತಿನಿಧಿಯ ಮೂಲಕ ಬ್ರಿಟಿಷ್ ಸರಕಾರದ ಅಧೀನಕ್ಕೆ ಒಳಗಾಗಿ ಆಶ್ರಿತ ಸಂಸ್ಥಾನಗಳಾದವು. ಅನೇಕ ವೇಳೆ ರಾಜನ ಮಂತ್ರಿಗಳ ಸ್ಥಾನಕ್ಕೆ ಸಹ ಬ್ರಿಟಿಷ್ ಅಧಿಕಾರಿಗಳನ್ನು ಒತ್ತಾಯದಿಂದ ನೇಮಿಸುತ್ತಿದ್ದರು. ಆದರೆ ಆಡಳಿತ ಜವಾಬ್ದಾರಿ ಎಲ್ಲವೂ ರಾಜನದು, ಎಷ್ಟೇ ಒಳ್ಳೆಯ ಭಾವನೆ ಇದ್ದರೂ-ಅನೇಕ ವೇಳೆ ಆ ಭಾವನೆಗೂ ಮತ್ತು ದಕ್ಷತೆಗೂ ಅಭಾವವೇ ಹೆಚ್ಚು-ಆ ವಾತಾ ವರಣದಲ್ಲಿ ಏನು ಮಾಡುವುದಕ್ಕೂ ಸಾಧ್ಯವಿರುತ್ತಿರಲಿಲ್ಲ. ಹೆನ್ರಿ ಲಾರೆನ್ಸ್ “ ದೇಶೀಯ ರಾಜನೂ, ಆತನ ಮಂತ್ರಿಯೂ ವಿದೇಶೀ ಸೈನ್ಯ ಸಹಾಯವನ್ನು ನಂಬಿಕೊಂಡು ಬ್ರಿಟಿಷ್ ರೆಸಿಡೆಂಟ್ ಹೇಳಿ ದಂತ ಕುಣಿದರೆ ಅರಾಜಕತೆ ಎಷ್ಟು ದಿನವಾದರೂ ನಡೆಯಬಹುದು. ಇವರೆಲ್ಲರೂ ದಕ್ಷರೂ, ಪ್ರಾಮಾಣಿಕರೂ, ದಯಾಪರರೂ ಆದರೂ ಸರಕಾರದ ಚಕ್ರಗಳು ಸುಲಭವಾಗಿ ನಡೆಯುವುದು ಬಹು ಕಷ್ಟ. ಯುರೊಪಿಯನ್ ಆಗಲಿ, ಭಾರತೀಯನಾಗಲಿ ನ್ಯಾಯ ನಿಷ್ಠನಾದ ಅಧಿಕಾರಿ ಒಬ್ಬ ದೊರೆಯುವುದೇ ಕಷ್ಟವಿರುವಾಗ ಮೂರು ಜನರನ್ನು ಹುಡುಕುವುದಾದರೂ ಹೇಗೆ ಮತ್ತು ಅವರು ಒಮ್ಮತದಿಂದ ಕೆಲಸ ಮಾಡುವುದಾದರೂ ಹೇಗೆ ? ಮೂರು ಜನರೂ ಸೇರಿ ಅಪಾರಹಾನಿ ಮಾಡ ಬಹುದು. ಆದರೆ ಉಳಿದವರು ವಿರೋಧಿಸುವಾಗ ಒಳ್ಳೆಯದನ್ನು ಮಾಡಲು ಯಾರಿಂದಲೂ ಸಾಧ್ಯ ವಿಲ್ಲ” ಎಂದು ೧೮೪೬ರಲ್ಲಿ ದೇಶೀಯ ಸಂಸ್ಥಾನಗಳ ವಿಷಯ ಬರೆದಿದ್ದಾನೆ. ಅದಕ್ಕೂ ಮೊದಲು ೧೮೧೭ ರಲ್ಲಿ ಸರ್ ಥಾಮಸ್ ಮನೆ ಗೌರರ್ ಜನರಲ್ಗೆ ಬರೆಯುತ್ತ “ಎರವಲು ಸೈನ್ಯವನ್ನು ನೇಮಿಸಬಾರದು ಎನ್ನಲು ಬಲವತ್ತರ ಕಾರಣಗಳಿವೆ ಯಾವ ಸರ ಕಾರವು ಆ ಸೈನ್ಯ ಸಹಾಯವನ್ನು ಪಡೆಯುತ್ತದೆಯೋ ಆ ದೇಶವು ದುರ್ಬಲಗೊಳ್ಳುತ್ತದೆ ; ದೇಶ ದಲ್ಲಿ ದಬ್ಬಾಳಿಕೆ ಹೆಚ್ಚುತ್ತದೆ, ಸಮಾಜದ ಉನ್ನತವರ್ಗದ ಜನರಲ್ಲಿನ ಸದ್ದು ಣಗಳೆಲ್ಲ ನಾಶವಾಗು ಇವೆ; ಮತ್ತು ಇಡೀ ಜನತೆಯೇ ಅಧೋಗತಿಗೆ ಇಳಿದು ಬಡತನದಲ್ಲಿ ಮುಳುಗಬೇಕಾಗುತ್ತದೆ. ಅರಾಜಕತೆಯನ್ನು ತಪ್ಪಿಸಲು ಭಾರತದಲ್ಲಿ ಇರುವ ಮಾರ್ಗಗಳೆಂದರೆ ಒಳಗೆ ಅರಮನೆಗಳಲ್ಲಿ ಶಾಂತಿ ಯುತ ಕ್ರಾಂತಿ, ಹೊರಗೆ ಘೋರ ವಿಷ್ಣವ ಅಥವ ಪರಧಾಳಿ, ಆದರೆ ಬ್ರಿಟಿಷ್ ಸೈನ್ಯವು ಈ ಮೂರು ಮಾರ್ಗಗಳಿಗೂ ಅಡ್ಡ ಬಂದು ಒಳಗಿನ ಮತ್ತು ಹೊರಗಿನ ವಿರೋಧಿಗಳಿಂದ ರಕ್ಷಣೆ ಕೊಟ್ಟು ರಾಜ ಸಿಂಹಾಸನಗಳನ್ನು ಕಾಪಾಡಲು ಬೆಂಬಲ ನಿಂತಿದೆ. ತನ್ನ ರಕ್ಷಣೆಗೆ ಬೇರೊಬ್ಬನಿರುವನೆಂದು ರಾಜನು ಸೋಮಾರಿಯಾಗುತ್ತಾನೆ: ಪ್ರಜೆಗಳ ವಿರೋಧ ತನಗೆ ಏನೂ ಮಾಡಲಾರದೆಂದು ಕ್ರೂರಿಯೂ, ದುರಾಶೆಯುಳ್ಳವನೂ ಆಗುತ್ತಾನೆ. ಆಳುವ ರಾಜನು ದಕ್ಷನಿಲ್ಲದೆ ಹೋದರೆ ಈ ಸಹಾಯಕ ಸೈನ್ಯವಿರುವ ಕಡೆಯಲ್ಲೆಲ್ಲ ಗ್ರಾಮ ಜೀವನವು ಹಾಳಾಗಿ ಜನ ಸಂಖ್ಯೆಯು ಕಡಮೆ ಯಾಗುತ್ತ ಬರುತ್ತದೆ. ರಾಜನು ಬ್ರಿಟಿಷರ ಸ್ನೇಹವನ್ನು ಕಾಪಾಡಿಕೊಂಡು ಬರಬೇಕಂಬ ಇಚ್ಛೆ ಯುಳ್ಳವನಾಗಿದ್ದರೂ, ಅದನ್ನು ಮುರಿಯಬೇಕೆಂದು ಅವನ ಮುಖ್ಯ ಅಧಿಕಾರಿಗಳಲ್ಲಿ ಯಾರಾದರೂ ಪ್ರೇರೇಪಿಸುತ್ತಲೇ ಇರುತ್ತಾರೆ. ಪರದಾಸ್ಯದಿಂದ ಪಾರಾಗಬೇಕೆಂಬ ಉನ್ನತ ಸ್ವಾತಂತ್ರಾಭಿಲಾಷೆ ದೇಶದಲ್ಲಿ ಇರುವವರೆಗೂ ಅಂತಹ ಮಂತ್ರಾಲೋಚಕರು ಇದ್ದೇ ಇರುತ್ತಾರೆ. ಭಾರತೀಯರ ಈ ಸ್ವಾತಂತ್ರಾಭಿಲಾಷೆಯನ್ನು ಎಂದಿಗೂ ಪೂರ್ಣ ನಾಶಮಾಡಲಾಗುವುದಿಲ್ಲ. ಭಾರತೀಯರ ವಿಷಯ ದಲ್ಲಿ ನನಗೆ ತುಂಬ ಗೌರವವಿದೆ. ಆದ್ದರಿಂದ ಈ ಸಹಾಯಕ ಸೈನ್ಯ ಎಲ್ಲ ಕಡೆಯಲ್ಲೂ ತನ್ನ