ಪುಟ:ಭಾರತ ದರ್ಶನ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಕಾರ್ಯವನ್ನು ಸಾಧಿಸಬೇಕು ಮತ್ತು ಯಾವ ಸರಕಾರವನ್ನು ರಕ್ಷಿಸಲು ಹೋಗಿದೆಯೋ ಆ ಸರಕಾರ ವನ್ನು ನಾಶಮಾಡಬೇಕು.” ಎಂದು ಹೇಳಿದ್ದಾನೆ. ಇಷ್ಟೆಲ್ಲ ವಿರೋಧವಿದ್ದರೂ ಆಶ್ರಿತ ಸಂಸ್ಥಾನಗಳ ಪದ್ದತಿಯು ಬೆಳೆಯಿತು, ಮತ್ತು ಲಂಚ ಗುಳಿತನ ಮತ್ತು ಕ್ರೂರ ದಬ್ಬಾಳಿಕೆಯೂ ಅನಿವಾರವಾಯಿತು. ಈ ಸಂಸ್ಥಾನಗಳ ಸರಕಾರಗಳು ಬಹಳ ಕಟ್ಟಿದ್ದವು, ಎಲ್ಲವೂ ಸತ್ವಶೂನ್ಯವಿದ್ದವು. ಈ ಸಂಸ್ಥಾನಗಳ ರೆಸಿಡೆಂಟರಲ್ಲಿ ಮೆಟ್ರಾಫನಂತಹ ಕೆಲವರು ಪ್ರಾಮಾಣಿಕರೂ, ಆತ್ಮಸಾಕ್ಷಿಯಿಂದ ಕೆಲಸಮಾಡುವವರೂ ಇದ್ದರು. ಆದರೆ ಅನೇಕರಲ್ಲಿ ಎರಡು ಗುಣಗಳೂ ಇರಲಿಲ್ಲ. ಯಾವ ಜವಾಬ್ದಾರಿಯೂ ಇಲ್ಲದೆ ಅಧಿಕಾರ ಮಾತ್ರ ನಡೆಸುವ ಸೂಳೆಯರಂತೆ ದರ್ಪದಿಂದ ಮೆರೆಯುತ್ತಿದ್ದರು. ಬಿಳಿಯರೆಂಬ ಭಾವನೆಯಿಂದ ಮತ್ತು ಅಧಿಕಾರ ವರ್ಗದ ಬೆಂಬಲ ತಮಗೆ ಇದೆ ಎಂದು ಖಾಸಗಿ ಇಂಗ್ಲಿಷ್ ಸಾಹಸಿಗಳು ಸಂಸ್ಥಾನಗಳ ಬೊಕ್ಕಸ ವನ್ನು ಸೂರೆ ಹೊಡೆಯುತ್ತಿದ್ದರು. ೧೯ನೆಯ ಶತಮಾನದ ಆರಂಭಕಾಲದಲ್ಲಿ ಅಯೋಧ್ಯೆ ಮತ್ತು ಹೈದರಾಬಾದಿನಲ್ಲಿ ಆದ ಅನಾಹುತಗಳನ್ನು ನಂಬಲು ಸಹ ಆಗುವುದಿಲ್ಲ. ೧೮೫೭ರ ದಂಗೆಗೆ ಕೆಲವು ದಿನಗಳ ಮುಂಚೆ ಅಯೋಧ್ಯೆಯನ್ನು ಬ್ರಿಟಿಷ್ ಭಾರತಕ್ಕೆ ಸೇರಿಸಿಕೊಳ್ಳಲಾಯಿತು. ಸಂಸ್ಥಾನಗಳನ್ನು ಸೇರಿಸಿಕೊಂಡು ರಾಜ್ಯವನ್ನು ವಿಸ್ತರಿಸುವುದೇ ಆಗಿನ ಬ್ರಿಟಿಷ್ ನೀತಿ ಯಾಗಿತ್ತು. ಸ್ವಲ್ಪ ಅವಕಾಶ ದೊರೆತರೆ ಬ್ರಿಟಿಷ್ ಅಧಿಕಾರಕ್ಕೆ ಸಂಸ್ಥಾನ ಆಹುತಿಯಾಗುತ್ತಿತ್ತು. ಆದರೆ ದಂಗೆಯಿಂದ, ೧೮೫೭ರ ಕ್ರಾಂತಿಯಿಂದ, ಆಶ್ರಿತ ಸಂಸ್ಥಾನಗಳ ಉಪಯುಕ್ತತೆಯು ಬ್ರಿಟಿಷರಿಗೆ ಸ್ಪಷ್ಟವಾಯಿತು; ಅತ್ಯಲ್ಪ ಜನರ ವಿನಾ ದೇಶೀಯ ರಾಜರುಗಳು ಯಾರೂ ದಂಗೆಯಲ್ಲಿ ಯಾವ ಪಾತ್ರವನ್ನೂ ವಹಿಸಲಿಲ್ಲ. ಅಷ್ಟೇ ಅಲ್ಲದೆ ಕೆಲವರು ದಂಗೆಯನ್ನು ಅಡಗಿಸಲು ಬ್ರಿಟಿಷರಿಗೆ ಪ್ರತ್ಯಕ್ಷ ಸಹಾಯಮಾಡಿದರು. ಇದರಿಂದ ಬ್ರಿಟಿಷರ ನೀತಿಯಮೇಲೆ ಮಹತ್ಪರಿಣಾಮವಾಗಿ, ರಾಜರುಗಳು ಉಳಿಯಬೇಕೆಂದೂ, ಅವರನ್ನು ಇನ್ನೂ ಬಲಗೊಳಿಸಬೇಕೆಂದೂ ತಿರ್ಮಾನಿಸಿದರು. ಬ್ರಿಟಿಷರ ಪರಮಾಧಿಕಾರದ ಘೋಷಣೆಯಾಯಿತು. ದೇಶೀಯ ಸಂಸ್ಥಾನಗಳ ಮೇಲೆ ರಾಜ ಕೀಯ ಇಲಾಖೆಯ ಮತ್ತು ಭಾರತ ಸರಕಾರದ ಅಧಿಕಾರವು ಕಾರ್ಯತಃ ಪೂರ್ಣ ಇದೆ ಮತ್ತು ಸದಾ ಕಾಲವೂ ಇದೆ. ರಾಜರುಗಳ ಪದಚ್ಯುತಿಯೂ ಆಗಿದೆ, ಅಧಿಕಾರಯ್ಯುತಿಯೂ ಆಗಿದೆ ; ಬ್ರಿಟಿಷ್ ಅಧಿಕಾರಿಗಳನ್ನು ದೇಶೀಯ ಸಂಸ್ಥಾನಗಳ ಮಂತ್ರಿಗಳನ್ನಾಗಿ ಬಲಾತ್ಕಾರದಿಂದ ನೇಮಿಸ ಲಾಗಿದೆ. ಈಗ ಸಂಸ್ಥಾನಗಳಲ್ಲಿ ಅಂತಹ ಮಂತ್ರಿಗಳು ಅನೇಕರಿದ್ದಾರೆ. ಅವರೆಲ್ಲರೂ ಹೆಚ್ಚಾಗಿ ಬ್ರಿಟಿಷ್ ಅಧಿಕಾರಿವರ್ಗಕ್ಕೆ ಜವಾಬ್ದಾರರು * ರಾಜರುಗಳಲ್ಲಿ ಉತ್ತಮರೂ ಇದಾರೆ, ದುಷ್ಟರೂ ಇದಾರೆ. ಅವಕಾಶ ದೊರೆತಾಗಲೆಲ್ಲ ಉತ್ತಮರಿಗೂ ಕಿರುಕುಳ ತಪ್ಪಿಲ್ಲ. ಒಟ್ಟಿನಲ್ಲಿ ಅವರೆಲ್ಲ ಪ್ರತಿಗಾಮಿ ಮನೋಭಾವದವರು, ಪಾಳೆಯ ಗಾರಿಕೆಯ ದೃಷ್ಟಿ ಯವರು, ನಿರಂಕುಶ ನೀತಿಯವರು. ಬ್ರಿಟಿಷರೊಂದಿನ ವ್ಯವಹಾರದಲ್ಲಿ ಮಾತ್ರ ಅತಿ ವಿನಯವನ್ನು ತೋರಿಸುತ್ತಾರೆ, ಷೆಲ್ಯಾಂಕರ್ ದೇಶೀಯ ಸಂಸ್ಥಾನಗಳನ್ನು ಭಾರತದಲ್ಲಿನ ಬ್ರಿಟಿಷರ ಪಂಚಮದಳ ಎಂದು ಕರೆದಿರುವುದು ಅಕ್ಷರಶಃ ನಿಜ, ೬, ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರೋಧಾಭಾಸಗಳು: ರಾಜಾ ರಾಮ ಮೋಹನರಾಯ್: ವೃತ್ತಪತ್ರಿಕೆ: ಸರ್ ವಿಲಿಯಮ್ ಜೋನ್ಸ್: ವಂಗದೇಶದಲ್ಲಿ ಇಂಗ್ಲಿಷ್ ವಿದ್ಯೆ. ಭಾರತದ ಬ್ರಿಟಿಷ್ ಆಳ್ವಿಕ ಚರ್ಚಿಸುವಾಗ ಹೆಜ್ಜೆ ಹೆಜ್ಜೆಗೂ ವಿರೋಧಾಭಾಸಗಳು ಎದು ತೋರುತ್ತವೆ, ಬ್ರಿಟಿಷರು ದೊಡ್ಡ ಯಂತ್ರೋದ್ಯಮದ ಹರಿಕಾರರಾದ್ದರಿಂದ ಭಾರತದಲ್ಲಿ ಅಜೇಯ ರಾಗಿ ಪ್ರಪಂಚದ ಒಂದು ಪ್ರಬಲ ಶಕ್ತಿಯಾದರು. ಪ್ರಪಂಚದಲ್ಲಿಯೇ ಒಂದು ಕ್ರಾಂತಿಯನ್ನ ಬೈ ಸುವ ಒಂದು ಹೊಸ ಐತಿಹಾಸಿಕಶಕ್ತಿಯ ಪ್ರತಿನಿಧಿಗಳಾದರು. ಈ ರೀತಿ ತಾನೇ ಅರಿಯದಂತೆ