ಪುಟ:ಭಾರತ ದರ್ಶನ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೂನಯ ಅge ೨೯ ಪ್ರಗತಿ ಮತ್ತು ಕ್ರಾಂತಿಯ ಮುಂದಾಳುಗಳೂ ಪ್ರತಿನಿಧಿಗಳೂ ಆದರು. ಆದರೂ ತಮ್ಮ ಬುಡ ಭದ್ರ ಮಾಡಿಕೊಳ್ಳುವ ಮಟ್ಟಿಗೆ, ದೇಶವನ್ನೂ ಜನರನ್ನೂ ಸುಲಿಗೆಮಾಡಲು ಸಹಾಯವಾಗುವ ಮಟ್ಟಿಗೆ ಮಾತ್ರ ಬಿಟ್ಟು ಭಾರತದಲ್ಲಿ ಉಳಿದ ಎಲ್ಲ ಪ್ರಗತಿಯನ್ನೂ ಉದ್ದೇಶಪೂರ್ವಕ ವಿರೋಧಿಸಿದರು. ಅವರ ದೃಷ್ಟಿ ಮತ್ತು ನೀತಿ ಎಲ್ಲವೂ ಪ್ರತಿಗಾಮಿಯಾಗಿತ್ತು. ಇಲ್ಲಿನ ಇಂಗ್ಲಿಷ್ ಆಡಳಿತಗಾರರ ಸಾಮಾಜಿಕ ಅಂತಸ್ತಿನ ಹಿನ್ನೆಲೆಯೂ ಒಂದು ಕಾರಣವಾಗಿತ್ತು. ಆದರೆ ಭಾರತೀಯರು ಪ್ರಗತಿ ಮಾರ್ಗದಲ್ಲಿ ಮುಂದುವರಿದರೆ ಎಲ್ಲಿ ಬಲಗೊಂಡು ಭಾರತದ ಮೇಲಣ ಬ್ರಿಟಿಷರ ಹಿಡಿತವನ್ನೆ ಸಡಿಲಿ ಸುತ್ತಾರೋ ಎಂಬ ಭಯವು ಇನ್ನೂ ಪ್ರಬಲಕಾರಣವಾಗಿತ್ತು. ಅವರ ಎಲ್ಲ ಭಾವನೆಯಲ್ಲಿ ಮತ್ತು ನೀತಿಯಲ್ಲಿ ಭಾರತ ಜನತೆ ಎಂದರೆ ಭಯ. ಏಕೆಂದರೆ ಅವರೊಡನೆ ಸೇರಲು ಇಷ್ಟ ಪಡಲಿಲ್ಲ; ಸೇರಲು ಸಾಧ್ಯವೂ ಇರಲಿಲ್ಲ, ಸಾಮಾನ್ಯ ಜನತೆಯಿಂದ ತೀರ ಭಿನ್ನ ರಾಗಿ, ದೂರವಾಗಿ ಅವರ ಮಧ್ಯೆ ಒಂದು ವಿರೋಧ ಪರಕೀಯ ಆಡಳಿತಗಾರ ಪಂಗಡವಾಗಿಯೇ ಉಳಿಯಬೇಕಾಯಿತು. ಬದಲಾವಣೆ ಗಳಾದವು; ಕೆಲವು ಪ್ರಗತಿಪರ ಬದಲಾವಣೆಗಳೂ ಆದವು. ಅದು ಬ್ರಿಟಿಷರ ಆಡಳಿತ ನೀತಿ ಯಿಂದಲ್ಲ; ಆದರೆ ಬ್ರಿಟಿಷರ ಮೂಲಕ ನವಚೈತನ್ಯದ ಪಾಶ್ಚಿಮಾತ್ಯದೊಡನೆ ದೊರೆತ ಸಂಪರ್ಕವೇ ಆ ಪ್ರಗತಿಗೆ ಕಾರಣ. ಆಂಗ್ಲರಲ್ಲಿ ಕೆಲವು ಮಹಾನುಭಾವರು, ಶಿಕ್ಷಣ ಶಾಸ್ತ್ರಜ್ಞರು, ಪೌರಾತ್ಯ ಜ್ಞಾನಾಸಕ್ತರು, ಪತ್ರಿಕೋದ್ಯಮಿಗಳು, ಮತಪ್ರಚಾರಕರು ಮತ್ತು ಇತರರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಭಾರತಕ್ಕೆ ತರುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ಆ ಪ್ರಯತ್ನದಲ್ಲಿ ತಮ್ಮ ಅಧಿಕಾರಿಗಳನ್ನೇ ಅವರು ಎದುರಿಸಬೇಕಾಯಿತು. ಆಧುನಿಕ ವಿದ್ಯಾಭ್ಯಾಸ ಪದ್ದತಿಯನ್ನು ದೇಶದಲ್ಲಿ ಹರಡಲು ಹೆದರಿ ಆದಷ್ಟು ಅಡ್ಡಿ ಮಾಡಿದರು. ಆದರೂ ಕೆಲವು ದಕ್ಷರೂ ಪ್ರಾಮಾಣಿಕರೂ ಆದ ಆಂಗ್ಲ ಯರು ಮುಂದೆಬಂದು, ಉತ್ಸಾಹಶಾಲಿಗಳಾದ ಭಾರತೀಯ ವಿದ್ಯಾರ್ಥಿಗಳನ್ನು ಸುತ್ತ ಸೇರಿಸಿಕೊಂಡು ಆಂಗ್ಲ ಸಾಹಿತ್ಯ, ಭಾವನೆ ಮತ್ತು ರಾಜಕೀಯ ಸಂಪ್ರದಾಯವನ್ನು ಭಾರತಕ್ಕೆ ಪರಿಚಯಮಾಡಿ ಕೊಟ್ಟರು. ಆಂಗ್ಲರೆಂದರೆ ಗ್ರೇಟಬ್ರಿಟನ್ನಿನ ಎಲ್ಲರನ್ನೂ, ಐರಿಷ್ ಜನರನ್ನೂ ಅದರಲ್ಲಿ ಸೇರಿಸು ತೇನೆ. ಅದು ತಪ್ಪಾದರೂ ಬ್ರಿಟಿಷ್ ಎಂಬ ಪದ ನನಗೆ ಸರಿಬೀಳುವುದಿಲ್ಲ ಮತ್ತು ಪ್ರಾಯಶಃ ಅದರಲ್ಲಿ ಐರಿಷ್ ಜನರು ಸೇರುವುದೂ ಇಲ್ಲ. ಅದಕ್ಕಾಗಿ ಐರಿಷ್, ವೆಲ್ಸ್ ಮತ್ತು ಸ್ಕಾಟ್ಲೆಂಡ್ ಜನರ ಕ್ಷಮೆ ಬೇಡುತ್ತೇನೆ. ಭಾರತದಲ್ಲಿ ಅವರೆಲ್ಲರೂ ಯಾವ ವ್ಯತ್ಯಾಸವೂ ಇಲ್ಲದೆ ಒಂದು ಅವಿಭಕ್ತ ಪಂಗಡದಂತೆ ನಡೆದುಕೊಂಡಿದ್ದಾರೆ. ಬ್ರಿಟಿಷ್ ಸರಕಾರವು ಸಹ ವಿದ್ಯಾಭ್ಯಾಸದ ಪ್ರಗತಿಗೆ ಎಷ್ಟೇ ವಿರುದ್ದವಿದ್ದರೂ ದೊಡ್ಡದಾಗಿ ಬೆಳೆಯುತ್ತಿದ್ದ ತಮ್ಮ ಕಛೇರಿಗೆ ಗುಮಾಸ್ತರುಗಳನ್ನು ತಯಾರು ಮಾಡಲು ಶಿಕ್ಷಣ ಕೊಡಬೇಕಾದ್ದು ಅನಿವಾರವಾಯಿತು. ಈ ಸಣ್ಣ ನೌಕರರನ್ನು ದೊಡ್ಡ ಸಂಖ್ಯೆ ಯಲ್ಲಿ ಇಂಗ್ಲೆಂಡಿನಿಂದ ತರುವುದು ಅಸಾಧ್ಯವಾಗಿತ್ತು, ಆದ್ದರಿಂದ ನಿಧಾನವಾಗಿ ವಿದ್ಯಾಭ್ಯಾಸವು ಮುಂದುವರಿಯಿತು. ಅದು ಎಷ್ಟೇ ಸಂಕುಚಿತವೂ, ಅಯೋಗ್ಯವೂ ಆಗಿದ್ದಾಗ್ಯೂ ಭಾರತೀಯ ಮನಸ್ಸಿನ ಕಿಟಕಿ ಬಾಗಿಲುಗಳನ್ನು ತೆರೆದು ನೂತನ ಯೋಚನೆಗಳಿಗೆ, ಪ್ರಗತಿಪರ ಭಾವನೆಗಳಿಗೆ ದಾರಿ ಮಾಡಿಕೊಟ್ಟಿತು. ಮುದ್ರಣಮಂದಿರ ಮತ್ತು ಯಂತ್ರೋಪಕರಣಗಳ ಪರಿಚಯವಾದರೆ ಭಾರತೀಯ ಮನಸ್ಸಿನ ಮೇಲೆ ಕ್ರಾಂತಿಕಾರಕವೂ, ಭಯಂಕರವೂ ಆದ ಪರಿಣಾಮ ಮಾಡಬಹುದೆಂದೂ, ಆದ್ದರಿಂದ ರಾಜ ದ್ರೋಹ ಬೆಳೆಯದಂತೆ ಮತ್ತು ಕೈಗಾರಿಕಾ ಪ್ರಗತಿಯಾಗದಂತೆ ಯಾವ ಪ್ರೋತ್ಸಾಹವನ್ನೂ ಕೊಡ ಬಾರದೆಂದೂ ತೀರ್ಮಾನಿಸಿದರು. ಒಂದು ಬಾರಿ ನೈಜಾಮನು ಯೂರೋಪಿನ ಯಂತ್ರೋಪಕರಣ ಗಳನ್ನು ನೋಡಬೇಕೆಂದು ಅಪೇಕ್ಷೆಪಟ್ಟನಂತೆ. ಅಲ್ಲಿನ ಬ್ರಿಟಿಷ್ ರೆಸಿಡೆಂಟ್ ಒಂದು ಗಾಳಿಯ ಸಂಪನ್ನೂ ಒಂದು ಮುದ್ರಣ ಯಂತ್ರವನ್ನೂ ತಂದು ತೋರಿಸಿದನಂತೆ. ನೈಜಾಮನ ಮಾನಸಿಕ