ಪುಟ:ಭಾರತ ದರ್ಶನ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Jeಳಿ ಭಾರತ ದರ್ಶನ `ಮುದ್ರಣ ಮಂದಿರಗಳ ಸ್ಥಾಪನೆ ಮತ್ತು ಉಪಯೋಗದಿಂದ ಜನಸಾಮಾನ್ಯರಲ್ಲಿ ಪ್ರಚಾರ ದಲ್ಲಿದ್ದ ಭಾರತೀಯ ಭಾಷೆಗಳ ಪ್ರಗತಿಗೆ ತುಂಬ ಪ್ರೋತ್ಸಾಹ ದೊರೆಯಿತು, ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ, ಉರ್ದು, ತಮಿಳು, ತೆಲುಗು ಭಾಷೆಗಳು ಬಹಳ ಕಾಲದಿಂದ ಬಳಕೆಯಲ್ಲಿದ್ದು ವಲ್ಲದೆ ಉತ್ತಮ ಸಾಹಿತ್ಯವನ್ನೂ ಪಡೆದಿದ್ದವು. ಆ ಭಾಷೆಗಳು ಗ್ರಂಥಗಳ ಮೂಲಕ ಜನಸಾಮಾನ್ಯ ರಲ್ಲಿ ಬಹಳ ಪ್ರಚಾರದಲ್ಲಿದ್ದವು. ಈ ಗ್ರಂಥಗಳೆಲ್ಲ ಬಾಯಿಪಾಠ ಮಾಡಲು ಅನುಕೂಲವಾಗುವಂತೆ ಪದ್ಯ ಅಥವ ಗೀತಗಳ ರೂಪದಲ್ಲಿನ ಪುರಾಣಗಳಾಗಿರುತ್ತಿದ್ದವು. ಆಗಿನ ಕಾಲದಲ್ಲಿ ಗದ್ಯ ಸಾಹಿತ್ಯವೇ ಇರಲಿಲ್ಲ. ಉತೃಷ್ಟ ಬರವಣಿಗೆ ಎಲ್ಲವೂ ಸಂಸ್ಕೃತ ಅಥವಾ ಪಾರಸಿ ಭಾಷೆಯಲ್ಲಿ ಮಾತ್ರ ಇದ್ದು ಸುಸಂಸ್ಕೃತರಿಗೆ ಮಾತ್ರ ತಿಳಿಯುತ್ತಿತ್ತು. ಈ ಎರಡು ಪ್ರಾಚೀನ ಭಾಷೆಗಳಿಗೆ ಮಾತ್ರ ಪ್ರಾಮುಖ್ಯತೆ ದೊರೆತು ಜನತೆಯಲ್ಲಿ ರೂಢಿಯಲ್ಲಿದ್ದ ಪ್ರಾಂತ್ಯ ಭಾಷೆಗಳು ಬೆಳೆಯಲು ಅವಕಾಶವಾಗಲಿಲ್ಲ. ಗ್ರಂಥ ಪ್ರಕಟನೆ ಮತ್ತು ವೃತ್ತಪತ್ರಿಕೆಗಳ ಪ್ರಚಾರದಿಂದ ಈ ಪ್ರಾಚೀನ ಭಾಷೆಗಳ ಪ್ರಾಬಲ್ಯ ಕಡಮೆಯಾಗಿ ಪ್ರಾಂತ್ಯಭಾಷೆಗಳು ಮುಂದುವರಿಯಲು ಸಹಾಯವಾಯಿತು. ಮೊದಲು ಬಂದ ಕ್ರೈಸ್ತ ಪಾದ್ರಿಗಳು ಮುಖ್ಯವಾಗಿ ಶ್ರೀರಾಮಪುರದ ಬ್ಯಾಪ್ಟಿಸ್ಟ್ ಮತಪ್ರಚಾರಕರು ಇದರಲ್ಲಿ ತುಂಬ ಸಹಾಯಕರಾದರು. ಖಾಸಗಿ ಮುದ್ರಣ ಮಂದಿರಗಳನ್ನು ಆರಂಭಿಸಿದವರೇ ಅವರು, ಪ್ರಾಂತ್ಯಭಾಷೆಗಳಲ್ಲಿ ಗದ್ಯದಲ್ಲಿ ಬೈಬಲನ್ನೂ ಅನುವಾದಮಾಡಬೇಕೆಂಬ ಅವರ ಪ್ರಯತ್ನವು ತಕ್ಕಮಟ್ಟಿಗೆ ಫಲಕಾರಿಯಾಯಿತು. - ತುಂಬ ಪರಿಚಿತವೂ, ಪ್ರಚುರವೂ ಇದ್ದ ಭಾಷೆಗಳ ವಿಷಯದಲ್ಲಿ ಯಾವ ಕಷ್ಟವೂ ಆಗಲಿಲ್ಲ ; ಆದರೆ ಈ ಮತಪ್ರಚಾರಕರು ಕೆಲವು ಅಪ್ರಬುದ್ಧ ಭಾಷೆಗಳನ್ನೂ ಕಲಿಯಲು ಪ್ರಯತ್ನ ಪಟ್ಟು ಅವು ಗಳಿಗೆ ಒಂದು ರೂಪು ಮತ್ತು ಆಕೃತಿಯನ್ನು ಕೊಟ್ಟು ಅವುಗಳ ವ್ಯಾಕರಣ ಮತ್ತು ಶಬ್ದಕೋಶ ಗಳನ್ನು ಬರೆದರು. ಕಾಡು ಮತ್ತು ಗುಡ್ಡ ಗಾಡಿನ ಜನರ ಭಾಷೆಗಳನ್ನು ಸಹ ಕಲಿತು ಅವುಗಳನ್ನು ಬರೆಹ ರೂಪದಲ್ಲಿ ತರಲು ಪ್ರಯತ್ನ ಪಟ್ಟರು. ಭಾರತದಲ್ಲಿ ಕ್ರೈಸ್ತ ಮತಪ್ರಚಾರಕರ ಕೆಲಸವೆಲ್ಲವೂ ಮೆಚ್ಚುವಂತೆಯೂ ಇಲ್ಲ, ಸ್ತುತ್ಯಾರ್ಹವೂ ಅಲ್ಲ, ಆದರೆ ಭಾಷೆಗಳಿಗಿತ್ತ ಈ ಪ್ರೋತ್ಸಾಹ ಮತ್ತು ಜನ ಪದ ಸಾಹಿತ್ಯವನ್ನು ಸಂಗ್ರಹಿಸುವುದರಲ್ಲಿ ಅವರು ಮಾಡಿರುವ ಅಪಾರ ಸೇವೆಯು ನಿಜವಾಗಿಯೂ ಚಿರಸ್ಮರಣೀಯವಾದುದು. ಭಾರತದಲ್ಲಿ ವಿದ್ಯಾ ಪ್ರಚಾರವಾಗಬಾರದೆಂಬ ಈಸ್ಟ್ ಇಂಡಿಯಾ ಕಂಪೆನಿಯ ಅಭಿಪ್ರಾಯಕ್ಕೆ ಕಾರಣವಿತ್ತು. ೧೮೨೦ ರಲ್ಲಿಯೇ ಕಲ್ಕತ್ತ ಹಿಂದೂ ಕಾಲೇಜಿನ ಕೆಲವು ವಿದ್ಯಾರ್ಥಿಗಳು-ಇಂಗ್ಲಿಷ್ ಗಂಧವಿಲ್ಲದೆ ಸಂಸ್ಕೃತ ಮಾತ್ರ ಕಲಿತವರು-ಕೆಲವು ಸುಧಾರಣೆಗಳನ್ನು ಕೇಳಿದ್ದರು. ಕಂಪೆನಿಯ ರಾಜಕೀಯ ಅಧಿಕಾರಕ್ಕೆ ಮಿತಿ ಇರಬೇಕೆಂದೂ ಶಿಕ್ಷಣ ನೀತಿಯಲ್ಲಿ ಶುಲ್ಕವಿಲ್ಲದೆ ಎಲ್ಲರಿಗೂ ಬಲಾ ತ್ಯಾರ ವಿದ್ಯಾಭ್ಯಾಸವಿರಬೇಕೆಂದೂ ಕೇಳಿದ್ದರು, ಅತಿ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿದ್ಯೆಗೆ ಸುಂಕವಿರಲಿಲ್ಲ. ಆ ವಿದ್ಯೆ ಸನಾತನ ಸಂಪ್ರದಾಯದ್ದು ; ಯಾವ ಲಾಭ ಅಥವ ಉಪ ಯೋಗವಿಲ್ಲದಿದ್ದರೂ ಗುರುವಿನ ಸೇವೆಯೊಂದರ ಹೊರತು ಯಾವ ಶುಲ್ಕವೂ ಇಲ್ಲದೆ ಕಡುಬಡವ ನಿಗೆ ಸಹ ಆ ವಿದ್ಯೆ ದೊರೆಯಲು ಅವಕಾಶವಿತ್ತು. ಈ ಒಂದು ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳು ಎರಡೂ ಒಂದೇ, ಬಂಗಾಳದಲ್ಲಿ ಹೊಸ ವಿದ್ಯೆಗೆ ಹರಡಲು ಅವಕಾಶ ದೊರೆಯಲಿಲ್ಲ. ಆದರೆ, ಹಳೆಯ ವಿದ್ಯಾ ಭ್ಯಾಸ ಪದ್ದತಿಯು ಪೂರ್ಣ ನಾಶವಾಯಿತು. ಬ್ರಿಟಿಷರು ಬಂಗಾಲದಲ್ಲಿ ಬೇರೂರಿದಾಗ ಹಿಂದಿನ ಆಡಳಿತ ವರ್ಗದವರು ವಿದ್ಯಾಸಂಸ್ಥೆಗಳಿಗಾಗಿ ಅನೇಕ ಭೂ-ಆಸ್ತಿಯನ್ನು ದಾನವಾಗಿ ಕೊಟ್ಟಿದ್ದರು. ಅವುಗಳ ಉತ್ಪನ್ನದಿಂದ ಅನೇಕ ಪ್ರಾಥಮಿಕ ವಿದ್ಯಾಸಂಸ್ಥೆಗಳೂ, ಕೆಲವು ಪ್ರೌಢ ಪಾರಸಿ ವಿದ್ಯಾ ಶಾಲೆಗಳೂ ಪ್ರಾಚೀನ ಪದ್ಧತಿಯಂತೆ ನಡೆಯುತ್ತಿದ್ದವು. ಇಂಗ್ಲೆಂಡಿನ ಷೇರು ಹೋಲ್ಲ ರುಗಳಿಗೆ ಬಡ್ಡಿಯನ್ನು ಹಂಚಲು ಆದಷ್ಟು ಬೇಗ ಹಣ ಸಂಪಾದಿಸಬೇಕೆಂಬುದೇ ಈಸ್ಟ್ ಇಂಡಿಯ ಕಂಪ