ಪುಟ:ಭಾರತ ದರ್ಶನ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಡ ಅಂಕ ನಿಯ ಉದ್ದೇಶವಾಗಿತ್ತು. ಅಲ್ಲಿನ ಡೈರೆಕ್ಟರುಗಳೂ ಪದೇ ಪದೇ ಅದೇ ಒತ್ತಾಯ ಮಾಡುತ್ತಿದ್ದರು. ವಿದ್ಯಾಸಂಸ್ಥೆಗಳ ಈ ಮಾಫಿ ಭೂಮಿಯನ್ನೆಲ್ಲ ತಮ್ಮ ವಶಪಡಿಸಿಕೊಂಡು ಎತ್ತಿಹಾಕುವ ಮಾರ್ಗ ಹಿಡಿದರು. ಮೂಲದಾನಪತ್ರ ತೋರಿಸಿ ರುಜು ಸಾಕ್ಷ್ಯಕೊಡಬೇಕೆಂದರು. ದಾನಪತ್ರಗಳು ಗೆದ್ದಲು ತಿಂದೋ, ಕಳೆದೇ ಹೋಗಿದ್ದವು. ಈ ರೀತಿ ಮಾಫಿ ಭೂಮಿಯನ್ನೆಲ್ಲ ದೋಚಿಕೊಂಡು, ಮಾಲಿಕರ ನೆಲ್ಲ ಓಡಿಸಿ, ಕಾಲೇಜುಗಳಿಗಿದ್ದ ಉತ್ಪತ್ತಿ ಎಲ್ಲವೂ ನಾಶವಾಯಿತು, ಅಪಾರ ಭೂ-ಆಸ್ತಿಯನ್ನು ಕಳೆದು ಕೊಂಡು ಅನೇಕ ಸಂಸಾರಗಳು ಹಾಳಾದವು. ಈ ಆಸ್ತಿಯ ಉತ್ಪತ್ತಿಯಿಂದಲೇ ನಡೆಯುತ್ತಿದ್ದ ಅನೇಕ ವಿದ್ಯಾಶಾಲೆಗಳು ಮುಚ್ಚಿ ಹೋಗಿ ಸಹಸ್ರಾರು ಜನ ಉಪಾಧ್ಯಾಯರೂ ಇತರರೂ ನಿರುದ್ಯೋಗಿಗಳಾದರು. ಈ ನೀತಿಯಿಂದ ಬಂಗಾಳದ ಹಿಂದೂ ಮತ್ತು ಮುಸ್ಲಿಂ ಶ್ರೀಮಂತವರ್ಗವೂ ಅವರ ಅವಲಂಬಿ ಗಳೂ ನಿರ್ಗತಿಕರಾದರು, ಮಾಫಿ ಜಮೀನುಗಳು ಮುಸ್ಲಿಮರದೇ ಹೆಚ್ಚು ಇದ್ದು ಮುಸ್ಲಿಂ ಶ್ರೀಮಂತರೇ ಹೆಚ್ಚು ಜನರಿದ್ದ ಕಾರಣ ಮುಸ್ಲಿಮರಿಗೆ ಇದರಿಂದ ಹೆಚ್ಚು ಪೆಟ್ಟು ಬಿತ್ತು. ಹಿಂದೂ ಗಳಲ್ಲಿ ಅನೇಕರು ವ್ಯಾಪಾರ, ಸಾರಿಗೆ ಮತ್ತು ಇತರ ಕಸಬುಗಳನ್ನು ಅವಲಂಬಿಸಿದ ಮಧ್ಯಮವರ್ಗದ ಜನರೇ ಹೆಚ್ಚು ಇದ್ದರು. ಜೀವನ ಮಾರ್ಗವನ್ನು ಬದಲಾಯಿಸಿ ಇಂಗ್ಲಿಷ್ ಅಭ್ಯಾಸ ಮಾಡುವುದು ಇವರಿಗೆ ಸುಲಭವಾಯಿತು. ಕೆಳದರ್ಜೆಯ ನೌಕರಿಗಳಲ್ಲಿ ಬ್ರಿಟಿಷರಿಗೆ ಉಪಯೋಗವಾದರು. ಮುಸ್ಲಿಮರು ಇಂಗ್ಲಿಷ್ ವಿದ್ಯಾಭ್ಯಾಸವನ್ನು ಬಹಿಷ್ಕರಿಸಿದ್ದರು. ಹಿಂದಿನ ಆಳರಸರ ಪಂಗಡದವ ರಾದ್ದರಿಂದ ತೊಂದರೆಕೊಟ್ಟಾರೆಂದು ಹೆದರಿ ಬ್ರಿಟಿಷರು ಬಂಗಾಲದ ಮುಸ್ಲಿಮರನ್ನು ಸಂಶಯದಿಂದ ಕಂಡರು. ಈ ರೀತಿ ಸರ್ಕಾರದ ಕೆಳದರ್ಜೆಯ ನೌಕರಿಗಳಲ್ಲಿ ಆರಂಭದಲ್ಲಿ ಬಂಗಾಳಿ ಹಿಂದೂಗಳಿಗೆ ವಿಶೇಷ ಪ್ರಾಶಸ್ಯ ದೊರೆತು, ಅವರು ಉತ್ತರ ಹಿಂದೂಸ್ಥಾನದ ಇತರ ಪ್ರಾಂತ್ಯಗಳಿಗೂ ಹೋದರು. ಕೊನೆಕೊನೆಗೆ ಪುರಾತನ ಮನೆತನಗಳ ಕೆಲವು ಮುಸ್ಲಿಮರಿಗೂ ನೌಕರಿ ದೊರೆಯಿತು. - ಇಂಗ್ಲಿಷ್ ವಿದ್ಯಾಭ್ಯಾಸದಿಂದ ಭಾರತೀಯರ ದೃಷ್ಟಿ ವಿಶಾಲಗೊಂಡಿತು. ಇಂಗ್ಲಿಷ್ ಸಾಹಿತ್ಯ ಮತ್ತು ಸಂಸ್ಥೆಗಳ ಮೇಲೆ ಗೌರವ ಹೆಚ್ಚಿತು. ಭಾರತೀಯ ಜೀವನದ ಕೆಲವು ಆಚಾರ ವ್ಯವಹಾರ ಗಳ ಮೇಲೆ ಜುಗುಪ್ಪೆ ಹುಟ್ಟಿತು ಮತ್ತು ರಾಜಕೀಯ ಸುಧಾರಣೆಯ ಬೇಡಿಕೆಯ ಒತ್ತಡವು ಹೆಚ್ಚಿತು, ಹೊಸ ವಿದ್ಯಾವಂತರ ಪಂಗಡವು ಈ ರಾಜಕೀಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು ; ಸರ್ಕಾರಕ್ಕೆ ಆರಿಕೆಗಳನ್ನು ಕಳುಹಿಸುವುದೇ ಆ ಚಳವಳಿಯ ಮುಖ್ಯ ನೀತಿಯಾಯಿತು. ಇಂಗ್ಲಿಷ್ ವಿದ್ಯಾವಂತ ಕಸಬುದಾರರು ಮತ್ತು ಸರ್ಕಾರಿನೌಕರರು ಇವರುಗಳದೇ ಒಂದು ಪಂಗಡವು ಭಾರತಾದ್ಯಂತ ಹರಡಿತು, ಪಾಶ್ಚಿಮಾತ್ಯರ ನಡೆನುಡಿಗಳ ಅನುಕರಣ ಮತ್ತು ಭಾವನೆಗಳಿಂದ ಪ್ರೇರಿತರಾಗಿ ಜನತೆಯಿಂದ ದೂರವಾದರು. ೧೮೫೨ರಲ್ಲಿ ಕಲ್ಕತ್ತದಲ್ಲಿ ಬ್ರಿಟಿಷ್ ಇಂಡಿಯನ್ ಅಸೋಸಿಯೇರ್ಷ ಆರಂಭವಾಯಿತು. ಅಖಿಲಭಾರತ ಕಾಂಗ್ರೆಸ್ಸಿನ ಮೂಲ ಇವರಲ್ಲ ; ಆದರೆ ೧೮೮೫ರಲ್ಲಿ ಕಾಂಗ್ರೆಸ್ ಹುಟ್ಟಲು ಒಂದು ತಲೆಮಾರು ಕಳೆಯ ಬೇಕಾಯಿತು. ಈ ಅಂತರದಲ್ಲಿ ೧೮೫೭-೫೮ ರ ದಂಗೆ, ಅದರ ಉಪಶಮನ ಮತ್ತು ಪರಿಣಾಮಗಳಾದವು. ಈ ಶತಮಾನದ ಮಧ್ಯ ಕಾಲದಲ್ಲಿ ಬಂಗಾಳಕ್ಕೂ, ಉತ್ತರ ಮತ್ತು ಮಧ್ಯ ಭಾರತದ ಪ್ರದೇಶಗಳಿಗೂ ಎದ್ದು ಕಾಣುವ ಮುಖ್ಯ ವ್ಯತ್ಯಾಸವೆಂದರೆ ಇಂಗ್ಲಿಷ್ ಸಾಹಿತ್ಯ ಮತ್ತು ಭಾವನೆಗಳ ಪ್ರಭಾವಕ್ಕೆ ಒಳಗಾದ ಬಂಗಾ ಲದ ಹಿಂದೂ ವಿದ್ಯಾವಂತರು ರಾಜಕೀಯ ಸುಧಾರಣೆಗಳಿಗೆ ಇಂಗ್ಲೆಂಡ್ ಕಡೆ ನೋಡುತ್ತಿದ್ದರು ; ಆದರೆ ಇತರ ಭಾಗಗಳಲ್ಲಿ ದಂಗೆಯ ಮನೋಭಾವ ಉಕ್ಕಿಬಂದಿತ್ತು. ಇತರ ಎಲ್ಲ ಕಡೆಗಳಿಗಿಂತ ಹೆಚ್ಚಾಗಿ ಬಂಗಾಳದಲ್ಲಿ ಬ್ರಿಟಿಷ್ ಆಳ್ವಿಕೆಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚು ಸ್ಪಷ್ಟ ಕಾಣುತ್ತದೆ. ಜಮೀನುದಾರಿ ಪದ್ಧತಿಯು ಒಡೆದು ಹೋಗಿ