ಪುಟ:ಭಾರತ ದರ್ಶನ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ Je ವಿದ್ಯಾವಂತರು ಇಂಗ್ಲೆಂಡಿನ ಮೇಲೆ ಮಮತೆ ತೋರುತ್ತ ಇಂಗ್ಲೆಂಡಿನ ಸಹಾಯ ಮತ್ತು ಸಹಕಾರ ದಿಂದ ಪ್ರಗತಿ ಪಡೆಯಲು ಆಶಿಸಿದ್ದರು. ಹತ್ತೊಂಭತ್ತನೆಯ ಶತಮಾನದಲ್ಲೆಲ್ಲ ಇದೇ ಭಾವನೆ ಇತ್ತು. ದೊಡ್ಡ ಸಾಂಸ್ಕೃತಿಕ ಪ್ರಗತಿಯಾಗಿ ಬಂಗಾಳಿ ಸಾಹಿತ್ಯವು ಬಹುಮುಖ ಬೆಳೆಯಿತು. ಬಂಗಾಳದ ನಾಯಕರು ಭಾರತದ ರಾಜಕೀಯ ಮುಂದಾಳುಗಳಾದರು. ೧೯೪೧ನೆಯ ಮೇ ತಿಂಗಳಲ್ಲಿ ಸಾಯುವ ಕೆಲವು ದಿನಗಳ ಮುಂಚೆ ತಮ್ಮ ೮೦ನೆಯ ಹುಟ್ಟು. ಹಬ್ಬದ ದಿನ ರವೀಂದ್ರನಾಥ ಠಾಕೂರರು ಕೊಟ್ಟ ಸಂದೇಶದಲ್ಲಿ, ಆಗಿನ ಬಂಗಾಳಿಗಳ ಮನಸ್ಸಿನಲ್ಲಿ ಇಂಗ್ಲೆಂಡಿನ ಮೇಲೆ ಇದ್ದ ವಿಶ್ವಾಸ ಮತ್ತು ಸಮಾಜದ ಮೂಢ ಸಂಪ್ರದಾಯಗಳ ಮೇಲೆ ಇದ್ದ ತಿರಸ್ಕಾರ ಇವುಗಳ ಕಿರುನೋಟವನ್ನು ಕಾಣಬಹುದು. “ನನ್ನ ಬಾಲ್ಯಾವಸ್ಥೆ ಮತ್ತು ನನ್ನ ಜೀವನದ ಅನೇಕ ವರ್ಷಗಳ ಇತಿಹಾಸವನ್ನು ನ್ಯಾಯ ದೃಷ್ಟಿಯಿಂದ ನೋಡಿದರೆ ನನ್ನ ಭಾವನೆಗಳಲ್ಲಿ ಆಗಿರುವ ವ್ಯತ್ಯಾಸ, ನನ್ನ ದೇಶಭಾಂದವರ ಮಾನಸಿಕ ಪರಿವರ್ತನೆಗಳನ್ನು ನೋಡಿದರೆ ನನಗೇ ಅತ್ಯಾಶ್ಚರ್ಯ ಆಗುತ್ತದೆ. ಆ ಪರಿವರ್ತನೆಯಲ್ಲಿ ಒಂದು ಮಹಾದುರಂತ ನಾಟಕವು ಅಡಗಿದೆ. ವಿಶಾಲ ಪ್ರಪಂಚದ ಮಹಾವ್ಯಕ್ತಿಗಳ ನಮ್ಮ ಪರಿಚಯವೆಲ್ಲ ನಮ್ಮ ಜೀವನಾರಂಭದ ದಿನ ಗಳಲ್ಲಿ ನಮಗೆ ಪರಿಚಯವಾದ ಇಂಗ್ಲಿಷ್ ಜನರ ಸಮಕಾಲೀನ ಇತಿಹಾಸದೊಂದಿಗೆ ಬೆರೆತು ಹೋಗಿದೆ. ಭಾರತದ ಕರಾವಳಿಯಲ್ಲಿ ಬಂದು ಕಾಲಿಟ್ಟ ವಿದೇಶೀಯರ ಮೇಲಿನ ನಮ್ಮ ಭಾವನೆ ಗಳಿಗೆ ಮುಖ್ಯವಾಗಿ ಅವರ ಶ್ರೇಷ್ಠ ಸಾಹಿತ್ಯ ಪರಿಚಯವೇ ಕಾರಣ. ಅಂದಿನ ನಮ್ಮ ವಿದ್ಯಾಭ್ಯಾಸ ಪದ್ದತಿಯಲ್ಲಿ ವಿಷಯ ಬಾಹುಳ್ಯವಾಗಲಿ, ವೈವಿಧ್ಯತೆಯಾಗಲಿ ಇರಲಿಲ್ಲ; ವಿಜ್ಞಾನ ದೃಷ್ಟಿಯ ಸುಳಿ ವಂತೂ ಇರಲೇ ಇಲ್ಲ. ಆದ್ದರಿಂದ ವಿದ್ಯಾವಂತರ ಗಮನವೆಲ್ಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಕಡೆಗೆ ತಿರುಗಿತು. ಬರ್ಕ್ನ ಅಲಂಕಾರಪೂರಿತ ಭಾಷಣ ವೈಖರಿ, ಮೆಕಾಲೆಯ ಉದ್ದುದ್ದನೆಯ ವಾಕ್ಯಸರಣಿ, ಷೇಕ್ಸ್ಪಿಯರನ ನಾಟಕಗಳು, ಬೈ ರನ್ನ ಕಾವ್ಯ, ಎಲ್ಲಕ್ಕೂ ಮಿಗಿಲಾಗಿ ಹತ್ತೊಂಭತ್ತ ನೆಯ ಶತಮಾನದ ಇಂಗ್ಲಿಷ್ ಲಿಬರಲ್ ಪಕ್ಷದ ಉದಾರ ರಾಜಕೀಯ ನೀತಿಯ ಚರ್ಚೆಯಲ್ಲಿ ಹಗಲು ರಾತ್ರಿ ಎನ್ನದೆ ಅವರು ಕಾಲಕಳೆಯುತ್ತಿದ್ದರು. ನಮ್ಮ ರಾಜಕೀಯ ಸ್ವಾತಂತ್ರವನ್ನು ಪುನಃ ಪಡೆಯಲು ತಾತ್ಕಾಲಿಕ ಪ್ರಯತ್ನಗಳು ನಡೆ ಯುತ್ತಿದ್ದರೂ ಇಂಗ್ಲಿಷ್ ಜನರ ಔದಾರದಲ್ಲಿ ಇನ್ನೂ ನಂಬಿಕೆ ಹೋಗಿರಲಿಲ್ಲ. ರಾಜ್ಯವನ್ನು ಗೆದ್ದ ಇಂಗ್ಲಿಷರೇ ನಮ್ಮ ಸ್ವಾತಂತ್ರ ಸಾಧನೆಗೆ ಮಾರ್ಗಾನುಕೂಲ ಮಾಡಿಕೊಡುತ್ತಾರೆಂಬ ದೃಢವಿಶ್ವಾಸ ನಮ್ಮ ನಾಯಕರಲ್ಲಿ ನೆಲೆಸಿತ್ತು. ರಾಜಕೀಯ ಕಾರಣಗಳಿಗಾಗಿ ಗಡೀಪಾರಾದ ನಿರಾಶ್ರಿತರಿಗೆಲ್ಲ ಇಂಗ್ಲೆಂಡಿನಲ್ಲಿ ಆಶ್ರಯ ದೊರೆಯುತ್ತಿದ್ದುದು ಈ ನಂಬಿಕೆಗೆ ಒಂದು ಮುಖ್ಯ ಕಾರಣವಾಯಿತು. ತಮ್ಮ ಜನರ ಪ್ರತಿಷ್ಠೆಗಾಗಿ ನೊಂದ ರಾಜಕೀಯ ಬಂದಿಗಳಿಗೆಲ್ಲ ಇಂಗ್ಲೆಂಡಿನಲ್ಲಿ ಸ್ವಾಗತ ದೊರೆಯಿತು. ಇಂಗ್ಲಿಷ್ ಜನರ ಈ ಉದಾರ ಮಾನವೀಯ ನೀತಿಯು ನನ್ನ ಮನಸ್ಸಿನ ಮೇಲೆ ಮಹತ್ಪರಿಣಾಮ ಮಾಡಿತು; ಅವರ ಮೇಲೆ ನನಗೆ ಅತ್ಯಂತ ಗೌರವವುಂಟಾಯಿತು. ಈ ಉದಾರ ರಾಷ್ಟ್ರ ನೀತಿಯು ಸಾಮ್ರಾಜ್ಯ ಮದದಿಂದ ಇನ್ನೂ ಮಾಸಿ ಇರಲಿಲ್ಲ. ಅದೇ ಸಮಯದಲ್ಲಿ ನಾನು ಹುಡುಗನಾಗಿದ್ದಾಗ ಪಾರ್ಲಿಮೆಂಟನಲ್ಲ ಮತ್ತು ಹೊರಗೂ ಜಾನ್ ಬ್ರೆಟನ ಭಾಷಣಗಳನ್ನು ಕೇಳುವ ಸದವಕಾಶ ನನಗೆ ದೊರಕಿತು, ಆ ಭಾಷಣಗಳಲ್ಲಿ ಕಂಡುಬಂದ ಹೃದಯ ವೈಶಾಲ್ಯ ಸಂಕುಚಿತ ರಾಷ್ಟ್ರೀಯ ದೃಷ್ಟಿ ಇಲ್ಲದ ಉನ್ನತ ಭಾವನೆಗಳು ನನ್ನ ಮನಸ್ಸಿನ ಮೇಲೆ ದೀರ್ಘ ಪರಿಣಾಮ ಮಾಡಿದವು; ಇಂದಿನ ನಿರಾಶೆಯ ನಗ್ನತೆಯಲ್ಲಿ ಸಹ ಅದರ ಮಸಕು ಚಿತ್ರ ಇನ್ನೂ ಪೂರ್ಣ ಅಳಿಸಿಲ್ಲ. ಆಳರಸರ ಔದಾರವನ್ನೇ ನಂಬಿದ್ದ ಆ ಕೀಳು ಅವಲಂಬನೆಯ ಮನೋಭಾವ ನಿಜವಾಗಿಯೂ ಹೆಮ್ಮೆಯ ವಿಷಯವಲ್ಲ. ಈ ಉನ್ನತ ಮಾನವೀಯತೆ ಕಂಡುಬಂದುದು ಪರಕೀಯನಲ್ಲಿ ; ಆದರೂ ಅದರಲ್ಲಿ ಪೂರ್ಣ ವಿಶ್ವಾಸವಿಟ್ಟು ಅದಕ್ಕೆ ಮನ್ನಣೆ ಕೊಟ್ಟುದೇ ಒಂದು ಆಶ್ಚರ್ಯ, ಮಾನವೀಯತೆ