ಪುಟ:ಭಾರತ ದರ್ಶನ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಉನ್ನತ ಗುಣಗಳು ಯಾವ ಒಂದು ಜನಾಂಗ ಅಥವಾ ರಾಷ್ಟ್ರದ ಮೀಸಲು ಅಲ್ಲ, ಅವುಗಳ ವೈಶಾ ಲ್ಯತೆಗೆ ಮಿತಿಯೂ ಇಲ್ಲ, ಮತ್ತು ನೆಲದೊಳಗೆ ಹೂತಿಟ್ಟ ನಿಧಿಯನ್ನು ನೋಡುವ ಜಿಪುಣನಂತೆ ಅದನ್ನು ನೋಡಬೇಕಾದ್ದೂ ಇಲ್ಲ. ಹಿಂದೆ ನಮ್ಮ ಮನಸ್ಸಿಗೊಂದು ಚೈತನ್ಯ ಕೊಟ್ಟು ಇಂಗ್ಲಿಷ್ ಸಾಹಿತ್ಯ ಇಂದಿಗೂ ನಮ್ಮ ಹೃದಯಾಂತರಾಳದಲ್ಲಿ ಧ್ವನಿಗೈಯುತ್ತಿರುವುದಕ್ಕೆ ಅದೇ ಮುಖ್ಯ ಕಾರಣ ಎಂದು ಹೇಳಿದ್ದಾರೆ. ನಮ್ಮ ಜನತೆಯ ಸಂಪ್ರದಾಯಕ್ಕನುಗುಣವಾಗಿ ನಮ್ಮ ನಡತೆಯ ಆದರ್ಶ ಏನಿತ್ತೆಂಬುದಕ್ಕೆ ಅವರ ಅಭಿಪ್ರಾಯ ಈ ರೀತಿ ಇದೆ “ಸಂಕೋಚ ಸ್ವಭಾವವಿದ್ದರೂ ಪರಂಪರಾನುಗತವಾಗಿ ಬಂದ ಈ ಸಮಾಜ ಸಂಪ್ರದಾಯಗಳು ಸರಸ್ವತಿ ಮತ್ತು ದೃಶದ್ವತಿ ನದಿಗಳ ಮಧ್ಯೆ ಇದ್ದ ಬ್ರಹ್ಮಾವರ್ತ ಎಂಬ ಸಣ್ಣ ಪ್ರದೇಶದಲ್ಲಿ ಮೊದಲು ಹುಟ್ಟಿದವು ಮತ್ತು ಆ ಸಣ್ಣ ಪರಿಮಿತಿಯ ಭೂಪ್ರದೇಶಕ್ಕೆ ಅನುಕೂಲವಾಗಿಯೂ ಇದ್ದುವು. ಬ್ರಹ್ಮಾವರ್ತದಲ್ಲಿ ಮನುವು ಕಂಡ ಧರ್ಮಾಚರಣೆಯ ಭಾವನೆಯು ಕ್ರಮೇಣ ಸಮಾಜಕಂಟಕವಾಯಿತು, ಅಂಧಾನುಕರಣೆಯು ಕ್ರಮೇಣ ಭಾವನಾ ಸ್ವಾತಂತ್ರವನ್ನೇ ತುಳಿದುಬಿಟ್ಟಿತು”. ನನ್ನ ಬಾಲ್ಯಾವಸ್ಥೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದ ಸುಸಂಸ್ಕೃತ ವಿದ್ಯಾವಂತರು ಸಮಾ ಜದ ಈ ಕಟು ನಿಯಮಗಳ ಮೇಲೆ ದಂಗೆ ಎದ್ದರು ಅಂಧಾಚರಣೆಗೆ ಪ್ರತಿಯಾಗಿ ಇಂಗ್ಲಿಷ್ ಭಾಷೆಯ “ನಾಗರಿಕತೆ ” ಯ ಆದರ್ಶವನ್ನು ಒಪ್ಪಿದೆವು. - ನ್ಯಾಯಸಮ್ಮತವೂ, ನೀತಿಯುತವೂ ಆದ ಈ ಹೊಸ ಭಾವನೆಗೆ ನಮ್ಮ ಮನೆಯಲ್ಲೇ ಪೂರ್ಣ ಸ್ವಾಗತ ದೊರೆಯಿತು. ನಮ್ಮ ಜೀವನದ ಎಲ್ಲ ಅಂಗಗಳಲ್ಲಿ ಅದು ತನ್ನ ಪ್ರಭಾವ ಬೀರಿತು. ಈ ವಾತಾವರಣದಲ್ಲಿ ಹುಟ್ಟಿದವನಾಗಿ ವ್ಯಕ್ತಿಶಃ ಸಾಹಿತ್ಯದ ಮೇಲೆ ಮಮತೆ ಇದ್ದುದರಿಂದ ಇಂಗ್ಲಿಷ್ ಭಾಷೆಗೆ ನನ್ನ ಹೃದಯಲ್ಲಿ ಪಟ್ಟಗಟ್ಟಿದೆನು. ನನ್ನ ಜೀವನದ ಮೊದಲ ಅಧ್ಯಾಯಗಳು ಕಳೆದದ್ದು ಈ ರೀತಿಯಲ್ಲಿ. ಆದರೆ ರಾಷ್ಟ್ರದ ಸ್ವಾರ್ಥ ಪ್ರಶ್ನೆಗಳು ಎದುರು ನಿಂತಾಗ ನಾಗರಿಕ ಜೀವನದ ಉನ್ನತ ಸತ್ಯಗಳನ್ನು ಒಪ್ಪಿದವರೇ ಅವುಗಳಿಗೆ ತಿಲಾಂಜಲಿ ಕೊಡಲು ಹಿಂಜರಿಯುವುದಿಲ್ಲವೆಂದು ಹೆಚ್ಚು ಹೆಚ್ಚಾಗಿ ನನಗೆ ಮನದಟ್ಟಾದಂತೆ ನನ್ನ ನಂಬಿಕೆಗಳೆಲ್ಲ ಭ್ರಮೆ ಎಂದು ಬಹು ವ್ಯಸನದಿಂದ ಅರಿತುಕೊಂಡೆ ಹಿಂದೆಯೇ ಜೀವನದ ದಾರಿಯೂ ಬೇರೆಯಾಯಿತು, ೭: ೧೮೫೭ರ ಮಹಾಕ್ರಾಂತಿ-ಜನಾಂಗ ವೈರ. - ಒಂದು ಶತಮಾನ ಕಾಲ ಬ್ರಿಟಿಷ್ ಆಡಳಿತಕ್ಕೆ ಒಳಗಾಗಿ ಬಂಗಾಲವು ಅದಕ್ಕೆ ಹೊಂದಿ ಕೊಂಡಿತ್ತು. ಕ್ಷಾಮ ಡಾಮರಗಳಿಗೆ ತುತ್ತಾಗಿ ಹೊಸ ತೆರಿಗೆಗಳ ಹೊರೆಯಿಂದ ಕುಗ್ಗಿ ಕೃಷಿಕವರ್ಗ ಕುಸಿದು ಬಿದ್ದಿತ್ತು. ವಿದ್ಯಾವಂತರೆಲ್ಲ ಪಾಶ್ಚಿಮಾತ್ಯದ ಕಡೆಗೆ ನೋಡುತ್ತ ಇಂಗ್ಲಿಷರ ಉದಾರ ನೀತಿ ಯಿಂದಲೇ ಪ್ರಗತಿ ಎಂದು ನಂಬಿದ್ದರು. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಮದರಾಸ್ ಮತ್ತು ಮುಂಬೈಗಳಲ್ಲಿ ಇದೇ ಭಾವನೆ ಮೂಡಿತ್ತು. ಆದರೆ ಉತ್ತರ ಭಾರತದ ಪ್ರಾಂತ್ಯಗಳಲ್ಲಿ ಈ ದಾಸ್ಯ ಮನೋಭಾವನೆಯಾಗಲಿ, ಬ್ರಿಟಷ್ರ ಅಧಿಕಾರ ಒಪ್ಪುವ ಮನೋವೃತ್ತಿಯಾಗಲಿ ಇರಲಿಲ್ಲ. ಮುಖ್ಯ ವಾಗಿ ಪಾಳೆಯಗಾರರು ಮತ್ತು ಅವರ ಅನುಯಾಯಿಗಳಲ್ಲಿ ದಂಗೆಯ ಮನೋಭಾವ ಬೆಳೆಯುತ್ತಿತ್ತು. ಜನಸಾಮಾನ್ಯರಲ್ಲಿ ಸಹ ಅಸಮಾಧಾನವೂ, ಬ್ರಿಟಿಷರ ಮೇಲೆ ವಿರೋಧಭಾವನೆಯ ವಿಶೇಷ ಹರಡಿತ್ತು. ವಿದೇಶೀಯರ ಅಹಂಕಾರ ಮತ್ತು ತಿರಸ್ಕಾರ ದೃಷ್ಟಿಯಿಂದ ಉತ್ತಮವರ್ಗದ ಜನರು ತುಂಬ ಅಸಮಾಧಾನಗೊಂಡಿದ್ದರು. ಜನರ ಅಭಿಲಾಷೆಗೆ ಯಾವ ಮನ್ನಣೆಯನ್ನೂ ಕೊಡದೆ ಪರಂಪರಾನುಗತವಾಗಿ ಬಂದ ಜನರ ಶಿಷ್ಟಾಚಾರಗಳನ್ನು ಕಡೆಗಣ್ಣಿನಿಂದ ನೋಡುತ್ತಿದ್ದ ಈಸ್ಟ್ ಇಂಡಿಯ ಕಂಪನಿಯ ಅಧಿಕಾರ ವರ್ಗದ ತಿಳಿಗೇಡಿತನ ಮತ್ತು ದುರಾಸೆಯಿಂದ ಜನರು ಬಹಳ