ಪುಟ:ಭಾರತ ದರ್ಶನ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೂನಯ ಅಂಕ ಕಂಗೆಟ್ಟಿದ್ದರು. ಭಾರತದ ಅಸಂಖ್ಯಾತ ಜನರ ಮೇಲೆ ಅವರಿಗೆ ದೊರೆತ ಅಧಿಕಾರದಿಂದ ಅವರು ಉನ್ಮತ್ತರಾಗಿದ್ದರು. ಅವರ ನಿರಂಕುಶ ಪ್ರವರ್ತನೆಗೆ ಯಾವ ಅಡ್ಡಿ ಆತಂಕವೂ ಇರಲಿಲ್ಲ. ಹೊಸ ದಾಗಿ ಏರ್ಪಡಿಸಿದ ಅವರ ನ್ಯಾಯಪದ್ದತಿಯು ಸಹ ಜನರಲ್ಲಿ ಭಯೋತ್ಪಾದನೆಯನ್ನುಂಟು ಮಾಡಿತು. ಅದರ ಜಟಿಲ ವಿಧಿ ನಿಯಮಗಳೂ, ದೇಶಭಾಷೆ ಮತ್ತು ಸಂಪ್ರದಾಯಗಳಲ್ಲಿನ ನ್ಯಾಯಾಧೀಶರ ಅಜ್ಞಾನವೂ ಆ ಭಯೋತ್ಪಾದನೆಗೆ ಮುಖ್ಯ ಕಾರಣಗಳಾದವು. ೧೮೧೭ರಲ್ಲಿ ಸರ್ ಥಾಮಸ್ ಮನೊ ಬ್ರಿಟಿಷ್ ಆಡಳಿತದ ಪ್ರಯೋಜನಗಳನ್ನು ಗವನ್ನರ್ ಜನರಲ್ ಲಾರ್ಡ್ ಹೇಸ್ಟಿಂಗ್ಸ್‌ನಿಗೆ ತಿಳಿಸುತ್ತ “ಆದರೆ ಈ ಪ್ರಯೋಜನ ಸುಲಭ ಬೆಲೆಯಿಂದ ದೊರೆತಿಲ್ಲ. ಜನರ ಸ್ವಾತಂತ್ರ್ಯ, ರಾಷ್ಟ ನೀತಿ ಮತ್ತು ಜನಾಂಗದ ಗೌರವ ಪ್ರತಿಷ್ಠೆಗಳಿಗೆ ಉಗಮ ಸ್ಥಾನವಾದ ಸದ್ದು ಣಗಳ ನಾಶದಿಂದ ದೊರೆತಿದೆ. ಆದ್ದರಿಂದ ಬ್ರಿಟಿಷರ ಬಂದೂಕುಗಳ ದಿಗ್ವಿಜಯ ದಿಂದ ಭಾರತದ ಜನತೆಯು ಉನ್ನತಿ ಪಡೆಯುವ ಬದಲು ಅವನತಿಗಿಳಿಯುತ್ತದೆ. ದೇಶದ ಆಡಳಿತ ದಲ್ಲಿ ಲೇಶಮಾತ್ರವೂ ದೇಶದ ಜನರಿಗೆ ಅವಕಾಶ ದೊರೆಯದಂತೆ ಬ್ರಿಟಿಷರ ಆಳ್ವಿಕೆಯಲ್ಲಿ ಆದಂತೆ ಬೇರೆ ಯಾವ ಆಡಳಿತದಲ್ಲೂ ಆಗಿರಲಿಲ್ಲ” ಎಂದು ಬರೆದಿರುತ್ತಾನೆ. ಭಾರತೀಯರನ್ನು ಆಡಳಿತವರ್ಗದಲ್ಲಿ ಸೇರಿಸಿರೆಂದು ಮನೆ ಒತ್ತಾಯ ಮಾಡುತ್ತಲೇ ಇದ್ದನು. ಒಂದು ವರ್ಷದನಂತರ “ವಿದೇಶೀಯರು ಹಿಂದೆ ಭಾರತೀಯರನ್ನು ಹಿಂಸೆಮಾಡಿದ್ದಾರೆ, ಬಹಳ ದೌರ್ಜನ್ಯದಿಂದ ಪೀಡಿಸಿದ್ದಾರೆ, ಆದರೂ ಯಾರೂ ನಮ್ಮಂತೆ ಅವರನ್ನು ನಿಕೃಷ್ಟರನ್ನಾಗಿ ಕಂಡಿಲ್ಲ. ಇಡೀ ಜನಾಂಗವನ್ನೇ ನಂಬಿಕೆಗೆ ಅನರ್ಹರು, ಅಪ್ರಮಾಣಿಕರು ಎಂದು ನಮ್ಮಂತೆ ಯಾರೂ ಇದುವರೆಗೆ ಹಳಿದಿಲ್ಲ. ಸಹಾಯ ಅನಿವಾರ್ಯವಾದಾಗ ಮಾತ್ರ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳ ಬೇಕೆಂದು ನಮ್ಮಂತೆ ಯಾರೂ ಭಾವಿಸಿರಲಿಲ್ಲ. ನಮ್ಮ ಆಡಳಿತದಲ್ಲಿ ಸಿಕ್ಕಿ ಬಿದ್ದಿರುವ ಜನರ ಶೀಲ ವನ್ನು ಈ ರೀತಿ ಅವಹೇಳನಮಾಡುವುದು ಔದಾಗ್ಯಶೂನ್ಯ ಮಾತ್ರವಲ್ಲದೆ ರಾಜಕೀಯ ನೈಪುಣ್ಯ ಶೂನ್ಯವೂ ಆದ ನೀತಿ ” ಎಂದು ಹೇಳಿದ್ದಾನೆ. ಸೀಖರ ಮೇಲೆ ಎರಡು ಯುದ್ಧಗಳಾಗಿ ೧೮೫೦ರ ಹೊತ್ತಿಗೆ ಬ್ರಿಟಿಷರ ಅಧಿಕಾರ ಪಂಜಾಬಿಗೂ ವ್ಯಾಪಿಸಿತು, ಪಂಜಾಬಿನಲ್ಲಿ ಸೀಖರ ರಾಜ್ಯ ಸ್ಥಾಪನೆ ಮಾಡಿ ವಿಸ್ತರಿಸಿದ್ದ ರಣಜಿತಸಿಂಗ್ ೧೮೩೯ರಲ್ಲಿ ದೈವಾಧೀನನಾಗಿದ್ದನು, ೧೮೫೬ರಲ್ಲಿ ಅಯೋಧ್ಯೆಯು ಬ್ರಿಟಿಷರ ವಶವಾಯಿತು. ಅಯೋಧ್ಯೆಯು ಐವತ್ತು ವರ್ಷಗಳ ಮುಂಚೆಯೇ ಬ್ರಿಟಿಷರ ಆಡಳಿತ ಪ್ರಭಾವಕ್ಕೆ ಸಿಕ್ಕಿ ಬಿದ್ದಿತ್ತು. ರಾಜನು ದುರ್ಬಲನೂ, ಅಶಕ್ತನೂ ಆಗಿ ಬ್ರಿಟಿಷ್ ರೆಸಿಡೆಂಟಿನ ಕೈ ಗೊಂಬೆಯಾಗಿದ್ದನು. ಆಶ್ರಿತ ಸಂಸ್ಥಾನಗಳಿಗೆ ಸ್ವಾಭಾವಿಕವಾದ ಎಲ್ಲ ಸಂಕಟಗಳಿಗೂ ತುತ್ತಾಗಿ ಅಧೋಗತಿಗಿಳಿದಿತ್ತು. - ೧೮೫೭ನೆ ಮೇ ತಿಂಗಳು ಮೀರತ್ತಿನಲ್ಲಿ ಭಾರತೀಯ ಸಿಪಾಯಿ ದಂಗೆ ಆರಂಭವಾಯಿತು. ಬಹಳ ಮುನ್ನೆಚ್ಚರದಿಂದ, ದಕ್ಷತೆಯಿಂದ ದಂಗೆಯ ಸಿದ್ಧತೆಯಾಗಿತ್ತು, ಆದರೆ ನಿಯತ ಕಾಲಕ್ಕೆ ಮುಂಚೆಯೇ ದಂಗೆಯು ಆರಂಭವಾಗಿ ದಂಗೆಯ ನಾಯಕರ ಯೋಜನೆಗಳೆಲ್ಲ ತಲೆಕೆಳಗಾದವು. ಅದು ಕೇವಲ ಸಿಪಾಯಿ ದಂಗೆಯಾಗಿರಲಿಲ್ಲ. ಬಹುಬೇಗ ಜನತಾಕ್ರಾಂತಿಯಾಗಿ ಜನಸಾಮಾನ್ಯ ರಲ್ಲಿ ಹರಡಿ ಭಾರತದ ಸ್ವಾತಂತ್ರ ಸಮರವಾಯಿತು. ಈ ರೀತಿ ಜನರು ದಂಗೆ ಎದ್ದು ದು ದೆಹಲಿ, ಈಗಿನ ಸಂಯುಕ್ತ ಪ್ರಾಂತ, ಮಧ್ಯ ಭಾರತ ಮತ್ತು ಬಿಹಾರದಲ್ಲಿ ಮಾತ್ರ. ಮುಖ್ಯ ಅದು ಪಾಳೆಯ ಗಾರರ ದಂಗೆಯಾಗಿ ಪಾಳೆಯಗಾರರೂ ಅವರ ಅನುಯಾಯಿಗಳೂ ಅದರ ನಾಯಕತ್ವ ವಹಿಸಿದರು. ದೇಶಾದ್ಯಂತ ಹರಡಿದ್ದ ವಿದೇಶೀಯರ ಮೇಲಿನ ದ್ವೇಷ ಈ ದಂಗೆಗೆ ಸಹಾಯಕವಾಯಿತು. ದೆಹಲಿಯ ಅರಮನೆಯಲ್ಲಿ ಕುಳಿತಿದ್ದ ಅಶಕ್ತ ಜೀರ್ಣ ದುರ್ಬಲ ಮೊಗಲ ಸಂತತಿಯ ಕಡೆಗೆ ಅದರ ದೃಷ್ಟಿ ಹೊರಳಿತು. ಈ ದಂಗೆಯಲ್ಲಿ ಹಿಂದುಗಳೂ ಮುಸ್ಲಿಮರೂ ಪೂರ್ಣ ಭಾಗವಹಿಸಿದರು, * ಈ ದಂಗೆಯಿಂದ ಬ್ರಿಟಿಷರ ಅಧಿಕಾರ ತತ್ತರಿಸಿತು ; ಕೊನೆಗೆ ಭಾರತೀಯರ ಸಹಾಯ ದಿಂದಲೇ ದಂಗೆಯು ಅಡಗಿತು. ವಿದೇಶೀಯರನ್ನು ದೇಶದಿಂದ ಓಡಿಸಲು ಹಳೆಯ ಆಡಳಿತವರ್ಗವು 20