ಪುಟ:ಭಾರತ ದರ್ಶನ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಸರ್ವಪ್ರಯತ್ನ ಮಾಡಿದರೂ ಅದರ ಅಂತರ್ಗತ ನ್ಯೂನತೆಗಳೆಲ್ಲ ಮೇಲೆ ಬಂದವು. ಭಾರತದ ಬಹು ಭಾಗದ ಜನತೆಯ ಸಹಾನುಭೂತಿಯು ಈ ಪಾಳೆಯಗಾರರಿಗೆ ದೊರಕಿತು. ಆದರೆ ಇವರು ಅಸಮರ್ಥರೂ ಅಸಂಘಟಿತರೂ ಇದ್ದರು ; ಮತ್ತು ಅವರಲ್ಲಿ ಯಾವ ರಚನಾತ್ಮಕ ಆದರ್ಶವಾಗಲಿ, ಒಮ್ಮತಧೈಯವಾಗಲಿ ಇರಲಿಲ್ಲ. ಇತಿಹಾಸದಲ್ಲಿ ಅವರ ಪಾತ್ರ ಮುಗಿದಿತ್ತು ಅಲ್ಲದೆ ಭವಿಷ್ಯದಲ್ಲಿ ಅವರಿಗೆ ಯಾವ ಸ್ಥಾನವೂ ಇರಲಿಲ್ಲ, ಅವರಲ್ಲಿ ಅನೇಕರಿಗೆ ದಂಗೆಕಾರರ ಮೇಲೆ ಸಹಾನುಭೂತಿ ಯಿದ್ದರೂ, ಹುಚ್ಚು ಧೈರ್ಯಕ್ಕಿಂತ ವಿವೇಕ ಒಳ್ಳೆಯದೆಂದು ಜಯಲಕ್ಷ್ಮಿ ಯಾವ ಕಡೆ ಒಲಿಯು ವಳೋ ನೋಡೋಣವೆಂದು ತಟಸ್ಥರಾಗಿ ಕಾದು ಕುಳಿತರು. ಅನೇಕರು ದ್ರೋಹ ಮಾಡಿದರು. ದೇಶೀಯ ರಾಜರೆಲ್ಲರೂ ತಟಸ್ಥರಾದರು ಅಥವ ಇರುವುದನ್ನು ಕಳೆದುಕೊಳ್ಳದೆ ಹೇಗಾದರೂ ಉಳಿಸಿ ಕೂಳ್ಳಲೆಂದು ಬ್ರಿಟಿಷರಿಗೆ ಸಹಾಯ ಮಾಡಿದರು. ನಾಯಕರಲ್ಲಿ ಉನ್ನ ತರಾಷ್ಟ್ರೀಯ ಭಾವನೆಯಾಗಲಿ ಒಗ್ಗಟ್ಟನ ಮನೋಭಾವನೆಯಾಗಲಿ ಇರಲಿಲ್ಲ; ಅದಕ್ಕೆ ಪ್ರತಿಯಾಗಿ ವಿದೇಶೀಯರ ಮೇಲಿನ ದ್ವೇಷ ಮತ್ತು ತಮ್ಮ ಪಾಳೆಯಗಾರಿಕೆಯ ರಕ್ಷಣೆ ಮಾತ್ರ ಅವರ ಧೈಯಗಳಾದವು. ಅವು ಹೆಚ್ಚು ಉಪಯೋಗವಾಗಲಿಲ್ಲ. ಬ್ರಿಟಿಷರಿಗೆ ಗೂರ್ಖರ ಬೆಂಬಲದೊರೆಯಿತು. ಇನ್ನೂ ಹೆಚ್ಚಿನ ಆಶ್ಚರ್ಯವೆಂದರೆ ಕೆಲವೇ ವರ್ಷಗಳ ಕೆಳಗೆ ಬ್ರಿಟಿಷರ ಕೈಲಿ ಸೋಲುತಿಂದ ಸೀಖರೂ ಅವರ ಸಹಾಯಕರಾದರು. ಈ ರೀತಿ ಸೀಖರ ಸಹಾಯ ದೊರೆಯುವಂತೆ ಅವರನ್ನು ಒಲಿಸಿಕೊಂಡುದು ಬ್ರಿಟಿಷರ ರಾಜನೈಪುಣ್ಯತೆಯನ್ನು ತೋರಿಸುತ್ತದೆ. ಈ ರೀತಿ ಸೀಖರು ಬ್ರಿಟಿಷರ ಸಹಾಯಕ್ಕೆ ನಿಂತುದು ಸರಿಯೇ ತಪ್ಪೇ ಎಂಬುದು ಅವರವರ ದೃಷ್ಟಿಕೋಣವನ್ನು ಅವಲಂಬಿಸಿದೆ, ಆದರೆ ಭಾರತೀಯರಲ್ಲಿ ಐಕಮತ್ಯವನ್ನುಂಟುಮಾಡುವ ರಾಷ್ಟ್ರೀಯ ಭಾವನೆ ಇರಲಿಲ್ಲವೆಂಬುದು ಇದರಿಂದ ಸ್ಪಷ್ಟ, ಇಂದಿನ ರಾಷ್ಟ್ರೀಯ ಭಾವನೆ ಆಗ ಇನ್ನೂ ಮೂಡಿರಲಿಲ್ಲ. ನಿಜವಾದ ಸ್ವಾತಂತ್ರದ ಪಾಠಕಲಿಯಲು ಭಾರತ ಇನ್ನೂ ಅನೇಕ ದುಃಖ ಮತ್ತು ಸಂಕಟ ಅನುಭವಿಸುವುದಿತ್ತು. ನಿರ್ಜಿವ ಪಾಳೆಯಗಾರಿಕೆಗಾಗಿ ಹೋರಾಡಿ ಸ್ವಾತಂತ್ರ ಪಡೆಯು ವಂತಿರಲಿಲ್ಲ. ಈ ಕ್ರಾಂತಿಯಲ್ಲಿ ತೆರೆಮರೆಯ ಅನೇಕ ಯೋಧರು ಕೀರ್ತಿಗೆ ಬಂದರು. ದೆಹಲಿಯ ಬಹದ್ದೂರ್ ಷಾನ ಸಂಬಂಧಿ ಫಿರೋಜ್ ಷಾ ಅವರಲ್ಲಿ ಒಬ್ಬ. ಆದರೆ ಸೋಲು ಸನ್ನಿ ಹಿತವೆಂದು ಕಂಡಾಗ ಸಹ ಅನೇಕ ತಿಂಗಳು ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ ಧೀರನೆಂದರೆ ತಾತ್ಯಾಟೋಪಿ. ತನಗೆ ಸಹಾಯ ಮತ್ತು ಸ್ವಾಗತ ದೊರೆಯುತ್ತದೆಂದು ತಿಳಿದು ನರ್ಮದಾ ನದಿಯನ್ನು ದಾಟ ಮರಾಠ ದೇಶದಲ್ಲಿ ಕೊನೆಯಲ್ಲಿ ಕಾಲಿಟ್ಟ ಒಡನೆ ಸ್ವಾಗತಕ್ಕೆ ಬದಲು ದ್ರೋಹಕ್ಕೆ ಬಲಿಯಾದನು. ಕಾದಾಡು ತಲೇ ಮರಣವನ್ನಪ್ಪಿದ ಇಪ್ಪತ್ತು ವರ್ಷದ ವೀರಯುವತಿ ಝನ್ಸಿ ರಾಣಿ ಲಕ್ಷ್ಮೀಬಾಯಿ ಅವರೆಲ್ಲರಿಗೂ ಉನ್ನತವ್ಯಕ್ತಿ. ಆಕೆಯ ಹೆಸರು ಜನಜನಿತವಾಗಿದೆ. ಆಕೆಯೊಂದಿಗೆ ಯುದ್ದ ಮಾಡಿದ ಇಂಗ್ಲಿಷ್ ಸೇನಾನಿ “ ದಂಗೆಕಾರರಲ್ಲಿ ಅತ್ಯುತ್ತಮಳು ಮತ್ತು ಅತಿ ಧೈರ್ಯಶಾಲಿ ” ಎಂದಿದ್ದಾನೆ. - ಕಾನ್ಸುರ ಮತ್ತು ಇತರ ಕಡೆಗಳಲ್ಲಿ ದಂಗೆಯಲ್ಲಿ ಮಡಿದ ಬ್ರಿಟಿಷರಿಗೆ ಅನೇಕ ಸ್ಮಾರಕಗಳಿವೆ. ಆದರೆ ಆ ದಂಗೆಯಲ್ಲಿ ಪ್ರಾಣಾರ್ಪಣಮಾಡಿದ ಭಾರತೀಯರಿಗೆ ಯಾವ ಸ್ಮಾರಕವೂ ಇಲ್ಲ, ಭಾರ ತೀಯ ದಂಗೆಕಾರರು ಅನೇಕ ಕ್ರೂರ ದುಷ್ಕೃತ್ಯಗಳನ್ನು ಮಾಡಿದರು. ಅವರಲ್ಲಿ ಒಗ್ಗಟ್ಟಿರಲಿಲ್ಲ ; ಬ್ರಿಟಿಷರಿಂದ ಆಗ್ರಹಕ್ಕೆ ಬಲಿಯಾದರು ; ಬ್ರಿಟಿಷರ ದೌರ್ಜನ್ಯಗಳನ್ನು ಕೇಳಿ ರೊಚ್ಚಿಗೆದ್ದರು. ಆದರೆ ಭಾರತದ ಜನಮನದ ಮೇಲೆ ಮಹತ್ಪರಿಣಾಮಮಾಡಿದ ಈ ಚಿತ್ರದ ಇನ್ನೊಂದು ಮುಖವಿದೆ. ನನ್ನ ಪ್ರಾಂತ್ಯದ ಪ್ರತಿ ಹಳ್ಳಿಯಲ್ಲಿ ನಗರದಲ್ಲಿ ಅದರ ನೆನಪು ಇನ್ನೂ ಮಾಸಿಲ್ಲ. ನಾಜಿ ತತ್ವದ ಇಂದಿನ ಆಧುನಿಕ ಯುದ್ಧದ ಪಾಶವೀ ವೃತ್ತಿಯ ಅಳತೆಗೋಲಿನಿಂದ ನೋಡಿದರೆ ಸಹ ಮನಸ್ಸಿಗೆ ಜುಗುಪ್ಪ ಹುಟ್ಟಿಸುವ, ಮಾನವನ ಅಧಃಪತನ ತೋರಿಸುವ ಆ ಘೋರ ಅಸಹ್ಯಚಿತ್ರವನ್ನು ಮರೆಯೋಣ ಎಂದು ಒಮ್ಮೊಮ್ಮೆ ಅನಿಸುತ್ತದೆ. ಆದರೆ ಇಂದಿನ ಜೀವನಕ್ಕೆ ಯಾವ ಸಂಬಂಧ ಇಲ್ಲದ, ನಿಜವಾಗಿ