ಇಂಡಿಯಾ ದೇಶದ ನಾನಾ ಭಾಗಗಳಲ್ಲಿ ಕಂಡುಬರುವ ಈ ಬಗೆಯ ಮತ್ತು ಇತರ ವಿಧದ ವ್ಯತ್ಯಾಸಗಳನ್ನು ಗಮನಿಸುವುದರಲ್ಲಿ ಸ್ವಾರಸ್ಯವಿದೆ. ಈ ಬಗೆಯ ವ್ಯತ್ಯಾಸಗಳು ಇಂದಿಗೂ ಉಳಿದು ಬರುತ್ತಿವೆಯಾದರೂ ಈಗೀಗ ಕಡಮೆಯಾಗುತ್ತಿವೆ. ಮದರಾಸು ವಿಶೇಷ ಜ್ಞಾನವಂತರಿಗೆ ಹೆಸರಾದದ್ದು. ಹಿಂದಿನಂತೆ ಈಗಲೂ ಹೆಸರಾಂತ ತತ್ತ್ವಜ್ಞಾನಿಗಳೂ, ಗಣಿತಶಾಸ್ತ್ರಜ್ಞರೂ ವಿಜ್ಞಾನಿ ಗಳೂ ಅಲ್ಲಿ ಉದ್ಭವಿಸುತ್ತಿದ್ದಾರೆ. ಬೊಂಬಾಯಿ ಈಗ ಮುಖ್ಯವಾಗಿ ವ್ಯಾಪಾರದಲ್ಲಿ ತೊಡಗಿದೆ. ವ್ಯಾಪಾರೋದ್ಯಮದಿಂದ ಹುಟ್ಟುವ ಅನುಕೂಲ ಅನನುಕೂಲಗಳು ಈ ಪ್ರಾಂತಕ್ಕೆ ಸ್ವಾಭಾವಿಕ. ಬಂಗಾಳ, ವ್ಯಾಪಾರ ಕೈಗಾರಿಕೋದ್ಯಮಗಳಲ್ಲಿ ಸ್ವಲ್ಪ ಮಟ್ಟಿಗೆ ಹಿಂದುಳಿದ್ದರೂ, ಕೆಲವು ಮಂದಿ ಉತ್ತಮ ವಿಜ್ಞಾನಿಗಳಿಗೆ ಜನ್ಮಕೊಟ್ಟ ದೆಯಲ್ಲದೆ, ಸಾಹಿತ್ಯ ಕಲೆಗಳಲ್ಲಿ ವಿಶೇಷವಾಗಿ ಹೆಸರು ಹೊಂದಿದೆ. ಪಂಜಾಬು ಪ್ರಮುಖವ್ಯಕ್ತಿಗಳ ಹುಟ್ಟು ಭೂಮಿಯಲ್ಲದಿದ್ದರೂ ಅನೇಕ ಕ್ಷೇತ್ರಗಳಲ್ಲಿ ಮುನ್ನುಗ್ಗು ತಿರುವ ಪ್ರಾಂತವಾಗಿದೆ. ಅಲ್ಲಿನ ಜನರು ಕಾರಪರರು, ಯಂತ್ರಕರ್ಮದಲ್ಲಿ ಆಸಕ್ತಿಯುಳ್ಳವರು; ಸಣ್ಣ ಪುಟ್ಟ ವ್ಯಾಪಾರ ಕೈಗಾರಿಕೋದ್ಯಮಗಳಲ್ಲಿ ಜಯಶೀಲರು, ಸಂಯುಕ್ತ ಪ್ರಾಂತವು (ದೆಹಲಿಯ ಸೇರಿ) ಒಂದು ವಿಚಿತ್ರವಾದ ಕಲಸು; ಹಲವು ಬಗೆಯಲ್ಲಿ ಇಂಡಿಯದ ಒಂದು ಪ್ರತಿಬಿಂಬ, ಈ ಪ್ರಾಂತಗಳು ಪುರಾತನ ಹಿಂದೂ ಸಂಸ್ಕೃತಿಯ, ಹಾಗೆಯೆ ಆಕ್ಷನ್ ಮತ್ತು ಮೊಗಲ ಕಾಲಗಳಲ್ಲಿ ಈ ದೇಶಕ್ಕೆ ಬಂದ ಪಾರಸೀ ಸಂಸ್ಕೃತಿಯ ಪೀಠ, ಆದ್ದರಿಂದ ಈ ಎರಡು ಸಂಸ್ಕೃತಿಗಳ ಮಿಲನ ಇತ್ತೀಚಿನ ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕವೂ ಸಹ-ಇಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ಇಂಡಿ ಯದ ಇತರ ಭಾಗಗಳಲ್ಲಿ ಕಂಡು ಬರುವಷ್ಟು ಪ್ರಾದೇಶಿಕ ಮನೋಭಾವ ಈ ಪ್ರಾಂತಗಳಲ್ಲಿ ಇಲ್ಲ. ಬಹುಕಾಲದಿಂದ ಅಲ್ಲಿನ ಜನ ತಾವು ಭಾರತದ ನಿಜವಾದ ಪ್ರತಿನಿಧಿಗಳೆಂಬಂತೆ ತಿಳಿದುಕೊಂಡಿದ್ದಾರೆ. ಇತರರೂ ಸಹ ಅವರನ್ನು ಹಾಗೆಯೇ ಪರಿಗಣಿಸಿದ್ದಾರೆ. ವಾಸ್ತವವಾಗಿ ಈ ಪ್ರಾಂತಗಳು ಜನಬಳಕೆ ಯಲ್ಲಿ ಹಿಂದುಸ್ಥಾನವೆಂದು ಹೆಸರಾಗಿವೆ.
ಈ ವ್ಯಾತ್ಯಾಸಗಳು ಕೇವಲ ಭೌಗೋಲಿಕ. ಇವಕ್ಕೆ ಮತದ ಸಂಬಂಧವಿಲ್ಲ. ಬಂಗಾಳದ ಮುಸ್ಲಿಮನಿಗೂ ಬಂಗಾಳದ ಹಿಂದುವಿಗೂ ಇರುವ ಸ್ವಾಭಾವಿಕವಾದ ಹತ್ತಿರದ ಸಂಬಂಧ ಆತನಿಗೂ ಪಂಜಾಬಿ ಮುಸ್ಲಿಮನಿಗೂ ಇಲ್ಲ. ಇಂಡಿಯದ ಇತರ ಪ್ರಾಂತಗಳ ಜನರ ವಿಷಯವೂ ಇದೇ ರೀತಿ ಯಾದದ್ದು, ಹಲವು ಮಂದಿ ಬಂಗಾಳೀ ಹಿಂದು ಮತ್ತು ಮುಸ್ಲಿಮಜನರು ಎಲ್ಲಿಯಾದರೂ ಒಂದೆಡೆ ಇಂಡಿಯದಲ್ಲಾಗಲಿ ಬೇರೆಯೆಡೆಯಲ್ಲಾಗಲಿ-ಸಂಧಿಸಿದರೆ, ಅವರು ಒಡನೆ ಒಟ್ಟು ಸೇರಿ ಒಬ್ಬರ ಲೊಬ್ಬರು ನಿಸ್ಸಂಕೋಚವಾಗಿ ನಡೆದುಕೊಳ್ಳುತ್ತಾರೆ. ಎಲ್ಲಾದರೂ ಸೇರಿದರೆ ಒಡನೆ ಒಟ್ಟುಗೂಡಿ ಒಂದು ಮನೆಯವರಂತೆ ನಡೆದುಕೊಳ್ಳುತ್ತಾರೆ. ಮುಸ್ಲಿಂ ಇರಲಿ, ಸೀಖ ಇರಲಿ, ಹಿಂದೂ ಇರಲಿ ಪಂಜಾಬಿಗಳು ಸಹ ಅದೇ ರೀತಿ ನಡೆದುಕೊಳ್ಳುತ್ತಾರೆ. ಮುಂಬೈ ಪ್ರಾಂತ್ಯದ ಮುಸ್ಲಿಮರಲ್ಲಿ (ಖೋಜಾಗಳು, ಮಮನರು, ಬೋರಾಗಳು) ಅನೇಕ ಹಿಂದೂಪದ್ದತಿಗಳು ಆಚರಣೆಯಲ್ಲಿ ಇವೆ. ಉತ್ತರ ಹಿಂದುಸ್ಥಾನದ ಮುಸ್ಲಿಮರು ಆಗಾ ಖಾನನ ಅನುಯಾಯಿಗಳಾದ ಖೋಜಾ ಮತ್ತು ಬೋರಾ ಜನರನ್ನು ಜಾತೀಯ ಮುಸ್ಲಿಮರೆಂದು ಭಾವಿಸುವುದಿಲ್ಲ.
ಬಂಗಾಲ ಮತ್ತು ಉತ್ತರದೇಶದ ಮುಸ್ಲಿಮರೆಲ್ಲರೂ ಅನೇಕ ವರ್ಷ ಇಂಗ್ಲಿಷ್ ವಿದ್ಯಾಭ್ಯಾಸ ದಿಂದ ದೂರವಿದ್ದರು. ಕೈಗಾರಿಕೆಯ ಪ್ರಗತಿಯಲ್ಲಿ ಯಾವ ಪಾತ್ರವನ್ನೂ ವಹಿಸಲಿಲ್ಲ. ಅದಕ್ಕೆ ಶ್ರೀಮಂತಿಕೆಯ ಭಾವನೆ ಒಂದು ಕಾರಣ. ರೋಮನ್ ಕ್ಯಾಥೋಲಿಕ್ಕರಂತೆ ಸಾಲಗಾರರಿಂದ ಬಡ್ಡಿ ತೆಗೆದುಕೊಳ್ಳಬಾರದು ಮತ್ತು ಹಣದ ಆಸೆ ಇರಬಾರದೆಂಬ ಭಾವನೆ ಇನ್ನೊಂದು ಕಾರಣ. ಆದರೆ ಲೇವಾದೇವಿ ನಡೆಸುವವರಲ್ಲಿ ಮುಸ್ಲಿಮರೇ ಆದ ವಾಯವ್ಯ ಪ್ರಾಂತ್ಯದ ಪಠಾನರು ತುಂಬ ಕಠಿನ ಹೃದಯರಿರುವುದು ಆಶ್ಚರ್ಯ, ಈ ರೀತಿ ಮುಸಲ್ಮಾನರು ಹತ್ತೊಂಭತ್ತನೆಯ ಶತಮಾನದ ಅಂತ್ಯದವರೆಗೆ ಇಂಗ್ಲಿಷ್ ವಿದ್ಯಾಭ್ಯಾಸದ ಪಾಶ್ಚಾತ್ಯ ಸಂಪರ್ಕಗಳಲ್ಲಿ, ಆದ್ದರಿಂದ ಸರ್ಕಾರಿ ಉದ್ಯೋಗ ಮತ್ತು ಕೈಗಾರಿಕೋದ್ಯಮಗಳಲ್ಲಿ ಹಿಂದುಳಿದರು,