ಪುಟ:ಭಾರತ ದರ್ಶನ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೩೦೧

ಭಾರತದಲ್ಲಿ ಕೈಗಾರಿಕೆಯ ಬೆಳವಣಿಗೆಯು ನಿದಾನವಾಗಿ ತೆವಳಿ ಮುಂದುವರಿದರೂ ಕೈಗಾರಿ ಕೋದ್ಯಮವು ಪ್ರಗತಿಪರವೆಂಬ ಭಾವನೆಕೊಟ್ಟುದರಿಂದ ಕೆಲವರ ದೃಷ್ಟಿ ಸೆಳೆಯಿತು. ಆದರೂ ಭೂಮಿಯ ಮೇಲಿನ ಒತ್ತಡವನ್ನಾಗಲಿ ಭಾರತದ ಪ್ರಜಾಕೋಟಿಯ ದಾರಿದ್ರವನ್ನಾಗಲಿ ದೂರ ಮಾಡಲು ಸಾಧ್ಯವಾಗಲಿಲ್ಲ, ಕೋಟ್ಯನುಕೋಟ ನಿರುದ್ಯೋಗಿಗಳಲ್ಲಿ, ಅಥವ ಅರ್ಧಮರ್ಧ ಉದ್ಯೋಗವಿದ್ದವರಲ್ಲಿ ಕೆಲವು ಸಹಸ್ರ ಜನರಿಗೆ ಮಾತ್ರ ಕೈಗಾರಿಕೆಯಲ್ಲಿ ಉದ್ಯೋಗ ದೊರೆಯಿತು, ಈ ಅಲ್ಪ ವ್ಯತ್ಯಾಸದಿಂದ ದೇಶದ ಹಳ್ಳಿಗಾಡಿನ ಜೀವನದಲ್ಲಿ ಯಾವ ವ್ಯತ್ಯಾಸವೂ ಆಗಲಿಲ್ಲ. ದೇಶಾ ದ್ಯಂತ ಹರಡಿದ್ದ ನಿರುದ್ಯೋಗ ಮತ್ತು ಭೂಮಿಯ ಮೇಲಿನ ಒತ್ತಡವನ್ನು ಸಹಿಸಲಾರದೆ ಅನೇಕ ಶ್ರಮಜೀವಿಗಳು ಅವಮಾನಕರವಾದ ನಿಯಮಗಳಿಗೆ ಒಪ್ಪಿ ಬಹು ದೊಡ್ಡ ಪ್ರಮಾಣದಲ್ಲಿ ದೂರ ದೇಶಗಳಿಗೆ ವಲಸೆ ಹೋದರು. ದಕ್ಷಿಣ ಆಫ್ರಿಕ, ಫಿಜಿ, ಟ್ರಿನಿಡಾದ್, ಜಮೈಕಾ, ಗಯಾನ, ಮಾರಿಷಸ್, ಸಿಂಹಳ, ಮಲಯ ಮತ್ತು ಬರ್ಮದೇಶಗಳಿಗೆ ವಲಸೆಹೋದರು, ವಿದೇಶೀಯರ ಆಡಳಿತ ದಲ್ಲಿ ತಮ್ಮ ಅಭಿವೃದ್ಧಿ ಮತ್ತು ಉನ್ನತಿಗೆ ಅವಕಾಶ ಪಡೆದ ಸಣ್ಣ ಪಂಗಡಗಳೂ, ವ್ಯಕ್ತಿಗಳೂ ದಿನ ದಿನಕ್ಕೂ ಕ್ಷೀಣಿಸುತ್ತಿದ್ದ ಜನಕೋಟಿಯಿಂದ ದೂರವಾದರು. ಆ ಪಂಗಡಗಳ ಕೈಯಲ್ಲಿ ಸ್ವಲ್ಪ ಬಂಡವಾಳ ಬೆಳೆದು ಅದನ್ನು ಇನ್ನೂ ಅಭಿವೃದ್ಧಿಗೊಳಿಸಲು ಅವರು ಮಾರ್ಗಕಲ್ಪಿಸಿಕೊಂಡರು. ಆದರೆ ದೇಶದ ಬಡತನ ಮತ್ತು ನಿರುದ್ಯೋಗದ ಮೂಲಪ್ರಶ್ನೆಯು ಮಾತ್ರ ಹಾಗೇ ಉಳಿಯಿತು.

೧೦. ಹಿಂದೂ ಮುಸ್ಲಿಮರಲ್ಲಿ ಸುಧಾರಣೆ ಮತ್ತು ಇತರ ಚಳವಳಿಗಳು.

ನಿಜವಾದ ಪಾಶ್ಚಾತ್ಯದ ಪ್ರಭಾವ ಭಾರತದಮೇಲೆ ಆದುದು ಹತ್ತೊಂಭತ್ತನೆಯ ಶತಮಾ ನದಲ್ಲಿ ಆದ ಔದ್ಯೋಗಿಕ ಪರಿವರ್ತನೆಗಳು ಮತ್ತು ಅವುಗಳ ಪ್ರಗತಿಪರ ಪರಿಣಾಮಗಳಿಂದ, ಬಹು ಕಾಲದಿಂದ ಸಂಕುಚಿತ ಆವರಣದ ಬಂಧನದಲ್ಲಿದ್ದ ಭಾವನಾದೃಷ್ಟಿಯು ವಿಶಾಲಗೊಂಡು ಭಾವನಾ ಪ್ರಪಂಚದಲ್ಲಿಯೂ ನವಚೈತನ್ಯ ತಲೆದೋರಿ ವ್ಯತ್ಯಾಸಗಳಾದವು. ಈ ಪರಿವರ್ತನೆ ಆರಂಭದಲ್ಲಿ ಸಣ್ಣ ಇಂಗ್ಲಿಷ್ ವಿದ್ಯಾವಂತರ ಗುಂಪಿನಲ್ಲಿ ಮಾತ್ರ ಕಾಣಿಸಿಕೊಂಡಿತು. ಪಾಶ್ಚಾತ್ಯವಾದುದೆಲ್ಲ ಗೌರವಾರ್ಹವೂ, ಸ್ವೀಕೃತಾರ್ಹವೂ ಆಯಿತು. ಸಾಮಾಜಿಕ ಸಂಪ್ರದಾಯ ಮತ್ತು ಪದ್ದತಿಗಳ ಮೇಲೆ ತಿರಸ್ಕಾರ ಭಾವನೆ ಹುಟ್ಟಿ ಅನೇಕ ಹಿಂದೂಗಳು ಕ್ರೈಸ್ತಧರ್ಮದಿಂದ ಆಕರ್ಷಿತರಾದರು, ಆದ್ದರಿಂದ ರಾಜಾರಾಮ ಮೋಹನರಾಯನು ಹಿಂದೂ ಧರ್ಮವನ್ನು ಈ ನೂತನ ಸನ್ನಿವೇಶಕ್ಕೆ ಅಳ ವಡಿಸಲು ಪ್ರಯತ್ನ ಮಾಡಿದನು. ಸಮಾಜಸುಧಾರಣಾದೃಷ್ಟಿಯಿಂದ ಆ ಧರ್ಮ ಅರ್ಥಪೂರ್ಣವಿರು ವಂತ ಬ್ರಹ್ಮಸಮಾಜವನ್ನು ಸ್ಥಾಪಿಸಿದನು, ಆತನ ತರುವಾಯ ಕೇಶವಚಂದ್ರಸೇನ್ ಅದಕ್ಕೆ ಇನ್ನೂ ಹೆಚ್ಚು ಕ್ರೈಸ್ತಧರ್ಮದ ದೃಷ್ಟಿ ಕೊಟ್ಟನು. ಮಧ್ಯಮವರ್ಗದ ಬಂಗಾಲಿಗಳ ಮೇಲೆ ಬ್ರಹ್ಮ ಸಮಾಜವು ಮಹತ್ಪರಿಣಾಮ ಮಾಡಿತು. ಆದರೆ ಅದನ್ನು ಅವಲಂಬಿಸಿದವರು ಬಹಳ ಸ್ವಲ್ಪ ಜನ ಆದರೂ ಅವರಲ್ಲಿ ಕೆಲವರು ಪ್ರಸಿದ್ದ ವ್ಯಕ್ತಿಗಳೂ, ವಂಶೀಕರೂ ಇದ್ದರು. ಈ ಮನೆತನಗಳವರು ಧರ್ಮ ಮತ್ತು ಸಮಾಜ ಸುಧಾರಣೆಗಳಲ್ಲಿ ತೀವ್ರ ಆಸಕ್ತರಾಗಿದ್ದರೂ ಪ್ರಾಚೀನ ಭಾರತದ ವೇದಾಂತ ದರ್ಶನದ ಆದರ್ಶಗಳಿಗೇ ಹಿಂದಿರುಗಲು ಪ್ರಯತ್ನಿಸಿದರು.

ಭಾರತದ ಇತರ ಕಡೆಗಳಲ್ಲಿ ಸಹ ಇದೇ ದೃಷ್ಟಿ ತಲೆದೋರಿ ಆಚರಣೆಯಲ್ಲಿದ್ದ ಹಿಂದೂ ಧರ್ಮದ ಸಮಾಜ ನಿರ್ಬಂಧಗಳು ಮತ್ತು ಕುರುಡು ಪದ್ಧತಿಗಳನ್ನು ಕಿತ್ತೊಗೆಯಲು ಪ್ರಯತ್ನ ನಡೆಯಿತು. ಹತ್ತೊಂಭತ್ತನೆಯ ಶತಮಾನದ ಕೊನೆಯಲ್ಲಿ ಗುಜರಾತಿನ ದಯಾನಂದ ಸರಸ್ವತಿಯು ಹಿಂದೂ ಗಳಲ್ಲಿ ಒಂದು ದೊಡ್ಡ ಸಮಾಜ ಸುಧಾರಣಾ ಚಳವಳಿಯನ್ನು ಆರಂಭಿಸಿದನು. ಆದರೆ ಅದು ಬಲ ಗೊಂಡುದು ಪಂಜಾಬಿನ ಹಿಂದೂಗಳಲ್ಲಿ, ಇದೇ ಆರಸಮಾಜದ ಮೂಲ, “ವೇದಗಳಿಗೆ ಹಿಂದಿರುಗಿ ಎಂಬುದೇ ಅದರ ಸಂದೇಶ. ಆರಥರ್ಮದಲ್ಲಿ ವೇದಕಾಲದ ನಂತರ ಈಚೆಗೆ ಆಗಿರುವ ಪರಿವರ್ತನೆ ಗಳಲ್ಲಿ ತ್ಯಾಜ್ಯವೆಂದು ಅವರ ಮತ. ಆದ್ದರಿಂದ ಅನಂತರದ ವೇದಾಂತ ದರ್ಶನ, ಏಕತ್ವವಾದ,