ಪುಟ:ಭಾರತ ದರ್ಶನ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೩೧೩

ಅಬುಲ್ ಕಲಾಮ ಅಜಾದ್-ತುರ್ಕಿಯ ಯುವಜನ ಚಳುವಳಿಯನ್ನೂ ಅವರ ರಾಜಕೀಯ ಮತ್ತು ಸಾಮಾಜಿಕ ಸುಧಾರಣೆಯ ಧೋರಣೆಯನ್ನೂ ಸ್ವಾಗತಿಸಿದರು. ೧೯೧೧ ನೆಯ ಟ್ರಿಪೋಲಿ ಯುದ್ಧದಲ್ಲಿ ಇಟಲಿಯು ಏಕಾ ಏಕಿ ತುರ್ಕಿಯನ್ನು ಮುತ್ತಿಗೆ ಹಾಕಿದಾಗಲೂ, ಪುನಃ ೧೯೧೨ ಮತ್ತು ೧೯೧೩ ನೆಯ ಬಾಲ್ಕನ್ ಯುದ್ದದಲ್ಲಿ ತುರ್ಕಿಯ ಮೇಲೆ ಧಾಳಿ ಮಾಡಿದಾಗಲೂ ಭಾರತೀಯ ಮುಸ್ಲಿಮರು ತುರ್ಕಿಯ ಮೇಲೆ ಅಸಾಧಾರಣ ಸಹಾನುಭೂತಿ ತೋರಿಸಿದರು. ಈ ಸಹಾನುಭೂತಿ ಮತ್ತು ಕುತೂಹಲ ಎಲ್ಲ ಭಾರತೀಯರಲ್ಲೂ ಇತ್ತು. ಆದರೆ ಮುಸ್ಲಿಮರಲ್ಲಿ ಇದು ತೀಕ. ವೈಯಕ್ತಿಕ ಪ್ರಶ್ನೆಯಾಯಿತು. ಯೂರೋಪಿನಲ್ಲಿ ಉಳಿದ ಒಂದೇ ಮುಸ್ಲಿಂ ರಾಜ್ಯಕ್ಕೆ ವಿಪತ್ತು ಒದಗಿತ್ತು. ಮುಸ್ಲಿಮರ ಧರ್ಮದ ಮೂಲ ಸ್ಥಾನಕ್ಕೇ ಕೊಡಲಿಯ ಪೆಟ್ಟು ಬಿದ್ದಿತ್ತು. ಡಾಕ್ಟರ್ ಎಮ್. ಎ. ಅನ್ಸಾರಿ ತುರ್ಕಿಗೆ ಒಂದು ವೈದ್ಯ ಸಹಾಯ ಪಡೆಯನ್ನೊ ಯ್ದ ರು. ಕಡುಬಡವರೂ ಹಣ ಕೊಟ್ಟರು. ಭಾರತೀಯ ಮುಸ್ಲಿಮರ ಉದ್ಧಾರಕ್ಕೆ ಎಂದು ಕೇಳಿದ್ದರೆ ಬರುವುದಕ್ಕಿಂತ ಹೆಚ್ಚು ಹಣ ಸಂಗ್ರಹವಾಯಿತು. ಮೊದಲನೆಯ ಪ್ರಪಂಚ ಯುದ್ಧ ದಲ್ಲಿ ತುರ್ಕಿಯ ಎದುರು ಪಕ್ಷದ ಕಡೆ ಸೇರಿದ್ದರಿಂದ ಮುಸ್ಲಿಮರಿಗೆ ಬಹಳ ಸಂದಿಗ್ಧ ಒದಗಿತು. ನಿಸ್ಸಹಾಯಕ ರಾಗಿ ಅವರು ಏನು ಮಾಡುವುದಕ್ಕೂ ಸಾಧ್ಯವಾಗಲಿಲ್ಲ. ಯುದ್ಧಾನಂತರ ಅವರ ಹುದುಗಿದ್ದ ಕೋಪವೆಲ್ಲ ಖಿಲಾಫತ್ ಚಳವಳಿಯಲ್ಲಿ ಪಠ್ಯವಸಾನಗೊಂಡಿತು.

೧೯೧೨ರಲ್ಲಿ ಭಾರತದಲ್ಲಿ ಉರ್ದುಭಾಷೆಯಲ್ಲಿ ಆಲ್‌ ಹಿಲಾಲ್ ಮತ್ತು ಇಂಗ್ಲಿಷಿನಲ್ಲಿ 'ಕಾಮರೇಡ್' ಎಂಬ ಎರಡು ವಾರ ಪತ್ರಿಕೆಗಳು ಜನ್ಮತಾಳಿದ್ದರಿಂದ ಮುಸ್ಲಿಂ ಮನೋಭಾವನೆಯು ರೂಪಗೊಳ್ಳಲು ಹೊಸ ಅವಕಾಶ ಉಂಟಾಯಿತು. ಅಬುಲ್ ಕಲಾಮ ಅಜಾದ್ ಆಲ್-ಹಿಲಾಲ್ ಪತ್ರಿಕೆಯನ್ನು ಸ್ಥಾಪಿ ಸಿದರು. ಆಗ ಅವರಿಗೆ ೨೪ ವರ್ಷ ಮಾತ್ರ ವಯಸ್ಸು. ಕೈರೋ ನಗರದ ಅಲ್ ಅಜಹರ್ ವಿಶ್ವವಿದ್ಯಾ ನಿಲಯದ ಪದವಿಯನ್ನು ಪಡೆದು ಇಪ್ಪತ್ತು ವರ್ಷಕ್ಕೆ ಮುಂಚೆಯೇ ಅರಬ್ಬಿ ಮತ್ತು ಪಾರಸಿ ಭಾಷೆಗಳಲ್ಲಿ ಪೂರ್ಣ ಪಾಂಡಿತ್ಯ ಪಡೆದಿದ್ದರು. ಇದರ ಜೊತೆಗೆ ಭಾರತದ ಆಚೆಯ ಇಸ್ಲಾಂ ಪ್ರಪಂಚದ ಮತ್ತು ಅಲ್ಲಿನ ಸುಧಾರಣಾ ಚಳವಳಿಗಳ ಜ್ಞಾನವನ್ನೂ ಯೂರೋಪಿನ ಚಳವಳಿಗಳ ಜ್ಞಾನವನ್ನೂ ಪಡೆದಿದ್ದರು. ತರ್ಕ ಪೂರ್ಣ ದೃಷ್ಟಿ ಇತ್ತು. ಇಸ್ಲಾಂ ಧರ್ಮದ ಕಥೆ ಮತ್ತು ಇತಿಹಾಸದ ಆಳವಾದ ಪಾಂಡಿತ್ಯವಿತ್ತು. ಆದ್ದರಿಂದ ಇಸ್ಲಾಂ ಧರ್ಮಕ್ಕೆ ತರ್ಕಪೂರ್ಣ ಅರ್ಥವಿವರಣೆ ಕೊಟ್ಟರು. ಇಸ್ಲಾಂ ಸಂಸ್ಕೃತಿಯು ಅವರಿಗೆ ಕರತಲಾಮಲಕ . ವಾಗಿದ್ದುದರಿಂದಲೂ, ಈಜಿಪ್ಟ್, ತುರ್ಕಿ, ಸಿರಿಯ, ಪಾಲಸ್ಟೆನ್, ಇರಾಕ್, ಇರಾಣಗಳಲ್ಲಿನ ಪ್ರಮುಖ ಮುಸ್ಲಿಂ ನಾಯಕರ ಮತ್ತು ಸುಧಾರಕರ ವ್ಯಕ್ತಿಶಃ ಪರಿಚಯವಿದ್ದುದರಿಂದಲೂ ಅಲ್ಲಿನ ರಾಜಕೀಯ ಮತ್ತು ಸಾಂಸ್ಕೃತಿಕ ಚಳವಳಿಗಳು ಅವರ ಮೇಲೆ ಅಗಾಧ ಪರಿಣಾಮ ಮಾಡಿದುವು. ಅವರ ಬರೆವಣಿಗೆಗಳಿಂದ ಬೇರಾವ ಭಾರತೀಯ ಮುಸಲ್ಮಾನನಿಗೂ ದೊರೆಯದ ಪರಿಚಯ ಇವರಿಗೆ ಇಸ್ಲಾಂ ಪ್ರಪಂಚದಲ್ಲಿ ಸಿಕ್ಕಿತು. ತುರ್ಕಿಯ ಯುದ್ಧಗಳಿಂದ ಅವರ ಕುತೂಹಲ ಮತ್ತು ಸಹಾನುಭೂತಿ ಇಮ್ಮಡಿಯಾಯಿತು. ಆದರೂ ಅವರ ನಿಲುವು ಇತರ ಮುಸಲ್ಮಾನ ಮುಖಂಡರ ಹಳೆಯ ನಿಲುವಿಗಿಂತ ನವೀನವಾದುದು. ಅವರ ದೃಷ್ಟಿ ವಿಶಾಲವೂ ಕಾರಣಬದ್ಧವೂ ಆಗಿದ್ದು ದರಿಂದ ಹಳೆಯ ಮುಸ್ಲಿಂ ಮುಖಂಡರ ನವಾಬಗಿರಿಯ ಸಂಕುಚಿತ ಮತೀಯ ಮತ್ತು ಪ್ರತ್ಯೇಕ ಮನೋ ಭಾವದ ದೃಷ್ಟಿಯಿಂದ ದೂರವಾಗಿ ಅವರು ಭಾರತದ ರಾಷ್ಟ್ರೀಯ ಮನೋಭಾವಕ್ಕೆ ಹೊಂದಿ ಕೊಂಡರು. ತುರ್ಕಿಯಲ್ಲಿ ಮತ್ತು ಇತರ ಇಸ್ಲಾಂ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಚಳವಳಿ ರೂಪುಗೊಂಡಿದ್ದನ್ನು ಕಣ್ಣಾರಕಂಡಿದ್ದರು. ಆ ಜ್ಞಾನವನ್ನು ಭಾರತಕ್ಕೆ ಧಾರೆ ಎರೆದರು. ಭಾರತದರಾಷ್ಟ್ರೀಯ ಚಳವಳಿಯಲ್ಲಿ ಅದೇ ಪುನರುಕ್ತಿ ಕಂಡರು. ಭಾರತದ ಇತರ ಮುಸ್ಲಿಮರು ಯಾರಿಗೂ ಹೊರಗಿನ ಈ ಚಳುವಳಿಗಳ ಪರಿಚಯ ಇರಲಿಲ್ಲ. ನವಾಬಗಿರಿಯ ಪ್ರಪಂಚದಲ್ಲಿಯೇ ಇರುತ್ತೆ ಅಲ್ಲಿಯ ಪರಿವರ್ತನೆಗೆ ಕುರುಡರಾಗಿದ್ದರು. ಅವರಿಗೆ ಇದ್ದುದು ಧರ್ಮಾಂಧತೆ ಒಂದೇ, ಆ ಧರ್ಮದ ಕಟ್ಟಿಗೆ ಬಿದ್ದು ತುರ್ಕಿಯ ಮೇಲೆ ಸಹಾನುಭೂತಿ ತೋರಿದರು. ಆದರೆ ತುರ್ಕಿಯ ರಾಷ್ಟ್ರೀಯ ಅಥವ ಮತಾತೀತ ಚಳವಳಿ ಅವರಿಗೆ ಸರಿಬೀಳಲಿಲ್ಲ.

ಅವರ ವಾರಪತ್ರಿಕೆಯಾದ ಅಲ್-ಹಿಲಾಲ್ ನಲ್ಲಿ ಅಬುಲ್ ಕಲಾಮ ಅಜಾದ್‌ರ ಭಾಷೆಯೇ ನವೀನವಿತ್ತು. ಭಾವನೆ ಮತ್ತು ನಿಲುವಿನಲ್ಲಿ ಮಾತ್ರವಲ್ಲದೆ ಪದ ಜೋಡಣೆಯಲ್ಲಿ ಸಹ ನವೀನತೆ ಇತ್ತು.

22