ಪುಟ:ಭಾರತ ದರ್ಶನ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೩೧೫

ಅವರಿಗಾಯಿತು. ಅಂದಿನಿಂದ ಇಂದಿನವರೆಗೂ ಅವಿಚ್ಛಿನ್ನವಾಗಿ ಕಾಂಗ್ರೆಸ್ ಕಾರ್ಯ ಸಮಿತಿಯಲ್ಲಿ ಉನ್ನತ ಸ್ಥಾನಪಡೆದು ದುಡಿದಿದ್ದಾರೆ. ವಯಸ್ಸು ಕಡಿಮೆ ಇದ್ದರೂ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿ ದ್ದಾರೆ. ರಾಷ್ಟ್ರೀಯ ಮತ್ತು ರಾಜಕೀಯ ವಿಚಾರಗಳಲ್ಲಿ, ಮತೀಯ ಮತ್ತು ಅಲ್ಪ ಸಂಖ್ಯಾತರ ಸಮಸ್ಯೆ ಗಳಲ್ಲಿ ಅವರ ಸಲಹೆಗೆ ತುಂಬ ಬೆಲೆ ಇದೆ. ಎರಡುಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಅನೇಕ ವರ್ಷಗಳಕಾಲ ಸೆರೆಮನೆವಾಸ ಅನುಭವಿಸಿದ್ದಾರೆ.

೧೯೧೨ರಲ್ಲಿ ಅಲ್-ಹಿಲಾಲ್ ಗಿಂತ ಕೆಲವು ತಿಂಗಳ ಮುಂಚೆ ಆರಂಭವಾದ ಇನ್ನೊಂದು ವಾರಪತ್ರಿಕೆ ಎಂದರೆ “ದಿ ಕಾಮ್ರೇಡ್.” ಇಂಗ್ಲಿಷ್ ಪತ್ರಿಕೆಯಾದ್ದರಿಂದ ಮುಖ್ಯವಾಗಿ ಇಂಗ್ಲಿಷ್ ವಿದ್ಯಾವಂತ ಮುಸ್ಲಿಮರ ಮೇಲೆ ತುಂಬ ಪರಿಣಾಮಕಾರಿಯಾಯಿತು. ಅದರ ಸಂಪಾದಕ ಮೌಲಾನಾ ಮಹಮ್ಮದ್ ಆಲಿಯಲ್ಲಿ ಇಸ್ಲಾಂ ಸಂಪ್ರದಾಯ ಮತ್ತು ಆಕ್ಸ್ಫರ್ ಶಿಕ್ಷಣ ಪದ್ಧತಿ ಎರಡೂ ಸಮನ್ವಯಗೊಂಡು ಇದ್ದವು. ಅಲಿಘಡ ಸಂಪ್ರದಾಯದ ಆರಾಧಕನಾಗಿ ಆರಂಭಿಸಿ, ರಾಜಕೀಯ ಪ್ರಗತಿಯನ್ನು ವಿರೋಧಿಸಿ ದನು. ಆದರೆ ಆತನ ಕಾರ್ಯಶಕ್ತಿ ಮತ್ತು ಚಟುವಟಿಕೆಯು ಆತನನ್ನು ಆ ಸಂಕುಚಿತ ನಿಕ್ಷೇತನ ಚೌಕಟ್ಟಿ ನೊಳಗೆ ಕೊಳೆಯಲು ಬಿಡಲಿಲ್ಲ. ಆತನ ಭಾಷೆ ಸದಾ ಉಜ್ವಲವೂ, ಪ್ರಚೋದಕವೂ ಇತ್ತು. ೧೯೧೧ರಲ್ಲಿ ಬಂಗಾಲದ ಇಬಾಗ ಕೊನೆಗಾಣಿಸಿದ ರಿಂದ ಬ್ರಿಟಿಷ್ ಸರಕಾರದ ಮೇಲಿನ ಆತನ ವಿಶ್ವಾಸ ಕಡಮೆಯಾ ಯಿತು. ಬಾಲ್ಕನ್ ಯುದ್ದಗಳು ಆತನ ಮನಸ್ಸನ್ನು ಕಲಕಿದವು. ತುರ್ಕಿ ಮತ್ತು ಮುಸ್ಲಿಂ ಸಂಪ್ರ ದಾಯದ ಪರಇದ್ದ ತನ್ನ ಅಭಿಪ್ರಾಯಗಳನ್ನು ನಿರ್ಭಯವಾಗಿ ತನ್ನ ಪತ್ರಿಕೆಯಲ್ಲಿ ಬರೆದನು. ದಿನ ದಿನಕ್ಕೂ ಆತನಿಗೆ ಬ್ರಿಟಿಷರ ಮೇಲೆ ವಿರೋಧ ಬೆಳೆಯುತ್ತ ಬಂದಿತು. ತುರ್ಕಿ ಮೊದಲನೆಯ ಪ್ರಪಂಚ ಯುದ್ದದಲ್ಲಿ ಎದುರು ಪಕ್ಷ ಸೇರಿದೊಡನೆ ಈ ವಿರೋಧ ಭಾವನೆ ಇಮ್ಮಡಿಸಿತು. “ ತುರ್ಕಿ ಜನರ ನಿರ್ಧಾರ” ಎಂಬ ಆತನ ಒಂದು ದೀರ್ಘವಾದ ಪ್ರಸಿದ್ಧ ಲೇಖನದಿಂದ 'ದಿ ಕಾಮರೇಡ್' ಪತ್ರಿಕೆಯ ಸರ್ಕಾರದ ಆಗ್ರಹಕ್ಕೆ ಬಲಿಯಾಗಿ ಮುಕ್ತಾಯವಾಯಿತು. ಒಡನೆ ಆತನನ್ನೂ ಆತನ ಸಹೋದರ ನೌಕತ್ ಆಲಿಯನ್ನೂ ಬ್ರಿಟಿಷ್ ಸರ್ಕಾರ ಬಂಧಿಸಿ ಯುದ್ಧ ಮುಗಿದ ನಂತರ ಒಂದುವರ್ಷದವರೆಗೆ ಸೆರೆ ಮನೆಯಲ್ಲಿಟ್ಟಿತು. ೧೯೧೯ನೆಯ ಅಂತ್ಯದಲ್ಲಿ ಅವರ ಬಿಡುಗಡೆಯಾದೊಡನೆ ಇಬ್ಬರೂ ರಾಷ್ಟ್ರೀಯ ಮಹಾ ಸಭೆ ಸೇರಿದರು. ಖಿಲಾಫತ್ ಪ್ರಶ್ನೆಯಲ್ಲಿ ಮತ್ತು ಕಾಂಗ್ರೆಸ್ ರಾಜಕೀಯದಲ್ಲಿ ೧೯೨೦ರಿಂದ ೩೦ರವರೆಗೆ ಆಲಿಸೋದರರು ಬಹಳ ಪ್ರಮುಖ ಪಾತ್ರವಹಿಸಿ, ಸೆರೆಮನೆ ಸಹ ಸೇರಿದರು. ಮಹಮ್ಮದ್ ಆಲಿ ಕಾಂಗ್ರೆಸ್ ವಾರ್ಷಿಕಾಧಿವೇಶನದ ಅಧ್ಯಕ್ಷನಾದುದಲ್ಲದೆ ಅನೇಕ ವರ್ಷ ಕಾರ್ಯಸಮಿತಿಯಲ್ಲೂ ಇದ್ದನು. ಆತನು ೧೯೩೦ರಲ್ಲಿ ಮರಣ ಹೊಂದಿದನು.

ಮಹಮದ್ ಆಲಿಯ ಪರಿವರ್ತನೆಯು ಭಾರತೀಯ ಮುಸ್ಲಿಮರ ಮನೋಭಾವನೆಯ ಪರಿವರ್ತನೆ ಯನ್ನು ಸೂಚಿಸುತ್ತಿತ್ತು. ಮುಸ್ಲಿಮರನ್ನು ಪ್ರತ್ಯೇಕಿಸಿ, ರಾಷ್ಟ್ರೀಯ ಚಳವಳಿಯಿಂದ ದೂರವಿದ್ದು, ಸಂಪೂರ್ಣ ಪ್ರತಿಗಾಮಿ ಮನೋಭಾವದ ನವಾಬರ ಶ್ರೀಮಂತರ ಕೈಗೊಂಬೆಯಾಗಿದ್ದ ಮುಸ್ಲಿಂಲೀಗ್ ಸಹ ಯುವಕರ ಒತ್ತಾಯಕ್ಕೆ ಬಾಗಬೇಕಾಯಿತು. ಸ್ವಲ್ಪವೂ ಇಷ್ಟವಿಲ್ಲದಿದ್ದರೂ ರಾಷ್ಟ್ರೀಯ ಅಂದೋಲನದ ಪ್ರವಾಹದ ಸುಳಿಗೆ ಸಿಕ್ಕಿ ಕಾಂಗ್ರೆಸ್ ಕಡೆ ತಿರುಗಿತ್ತು. ೧೯೧೩ರಲ್ಲಿ ಸರ್ಕಾರದ ರಾಜಭಕ್ತಿ ಬಿಟ್ಟ ಭಾರತದ ಪ್ರಜಾ ಪ್ರಭುತ್ವವೇ ತನ್ನ ಧೈಯವೆಂದು ಸಾರಿತು. ಮೌಲಾನ ಅಬುಲ್ ಕಲಾಂ ಅಜಾದ್ ತಮ್ಮ ಅಲ್-ಹಿಲಾಲ್ ಪತ್ರಿಕೆಯಲ್ಲಿ ಉಜ್ವಲ ಲೇಖನ ಬರೆದು ಈ ಬದಲಾವಣೆ ಸೂಚಿಸಿದ್ದರು.

೧೧ ಕೆಮಲ್ ಪಾಷಾ - ಏಷ್ಯದ ರಾಷ್ಟ್ರೀಯ ಭಾವನೆ- ಇಕ್ಬಲ್

ಕೆಮಾಲ್ ಪಾಷಾ ಸ್ವಾಭಾವಿಕವಾಗಿ ಭಾರತದ ಹಿಂದೂ ಮುಸ್ಲಿಮರು ಇಬ್ಬರಿಗೂ ವಿಶ್ವಸನೀಯ ನಾದನು. ತುರ್ಕಿಯನ್ನು ಪರರ ಪ್ರಾಬಲ್ಯದಿಂದ ಬಿಡಿಸಿ, ತುಂಡಾಗುವುದನ್ನು ತಪ್ಪಿಸಿದ್ದು ಮಾತ್ರವಲ್ಲದೆ ಯುರೋಪಿಯನ್ ಸಾಮ್ರಾಜ್ಯ ಶಕ್ತಿಗಳ-ಮುಖ್ಯವಾಗಿ ಇಂಗ್ಲೆಂಡಿನ ಕುತಂತ್ರದಿಂದ ಅದನ್ನು ಪಾರು ದ್ದನು. ಆದರೆ ಅತತುರ್ಕ ಕೆಮಾಲ್ ಪಾಷಾನ ಆಡಳಿತ ನೀತಿ ರೂಪಗೊಂಡಂತೆ ಆತನ ಧರ್ಮಾತೀತ