ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ
೩೧೭

ಮೇಲೆ ಸಹ ಮಹತ್ಪರಿಣಾಮ ಮಾಡಿತ್ತು. ಈ ಸ್ವಾತಂತ್ರದ ಹೋರಾಟದಲ್ಲಿ ಅನೇಕ ಮುಸ್ಲಿಮರು ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಹಿಂದೂಗಳೇ ಪ್ರಬಲ ರಾಗಿದ್ದರು. ಮತ್ತು ಅದಕ್ಕೆ ಹಿಂದೂ ದೃಷ್ಟಿಯು ಇತ್ತು. ಆದ್ದರಿಂದ ಮುಸ್ಲಿಮರ ಮನಸ್ಸಿನಲ್ಲಿ ಒಂದು ತಳಮಳವೆದ್ದಿತು. ಅನೇಕರು ಈ ರಾಷ್ಟ್ರೀಯ ಭಾವನೆಯನ್ನೇ ಒಪ್ಪಿ ತಮಗೆ ಸಾಧ್ಯವಾದಂತ ಅದರ ಮೇಲೆ ಪ್ರಭಾವ ಬೀರಲು ಯತ್ನ ಮಾಡಿದರು. ಅನೇಕರು ಯಾವ ನಿರ್ಧಾರಕ್ಕೂ ಬರದೆ ಸಹಾನುಭೂತಿ ತೋರಿ ದೂರ ಸರಿದು ನಿಂತರು ; ಇನ್ನೂ ಕೆಲವರು ಇಕ್ಷಲನ ಕಾವ್ಯ ಮತ್ತು ದರ್ಶನದೃಷ್ಟಿಯ ಮಾರ್ಗ ಹಿಡಿದು ಪ್ರತ್ಯೇಕ ದಾರಿಯಲ್ಲಿ ನಡೆಯಹೊರಟು ದೂರವಾದರು.

ಈಚೆಗೆ ಭಾರತ ವಿಭಜನೆಯಾಗಬೇಕೆಂದು ಹೂಡಿರುವ ಕೂಗಿಗೆ ಬೀಜ ಇಲ್ಲಿದೆ. ಅದಕ್ಕೆ ಅನೇಕ ಕಾರಣಗಳು ದೊರೆತವು. ಅನೇಕ ಸಹಾಯಕ ಕಾರಣ ಸಿಕ್ಕವು, ಎಲ್ಲ ಕಡೆಯೂ ತಪ್ಪು ಕಂಡವು. ಮುಖ್ಯ ವಾಗಿ ಬ್ರಿಟಿಷ್ ಸರ್ಕಾರದ ಉದ್ದೇಶಪೂರ್ವಕ ಭೇದ ನೀತಿಯು ಅದಕ್ಕೆ ಪ್ರೋತ್ಸಾಹಕೊಟ್ಟಿತು. ಆದರೆ ಈ ಎಲ್ಲ ಕಾರಣಗಳ ಹಿಂದೆ ಕೆಲವು ಐತಿಹಾಸಿಕ ಕಾರಣಗಳೂ ಮತ್ತು ಭಾರತದ ಮುಸ್ಲಿಮ್ ಮಧ್ಯಮ ವರ್ಗದ ಸಾವಕಾಶದ ಬೆಳೆವಣಿಗೆಯಿಂದ ಹುಟ್ಟಿದ ಮಾನಸಿಕ ಹಿನ್ನೆಲೆಯೂ, ಮುಖ್ಯ ಕಾರಣವಾದವು. ವಿದೇಶೀಯರ ಪ್ರಾಬಲ್ಯದ ವಿರುದ್ಧ ಹುಟ್ಟಿದ ರಾಷ್ಟ್ರೀಯ ಚಳವಳಿಯಲ್ಲದೆ ಭಾರತದ ಇನ್ನೊಂದು ಒಳ ಘರ್ಷಣೆ ಎಂದರೆ ಕಳೆದುಳಿದ ಶ್ರೀಮಂತವರ್ಗಕ್ಕೂ ಮತ್ತು ಆಧುನಿಕ ಭಾವನೆ ಮತ್ತು ಸಂಸ್ಥೆಗಳಿಗೂ ಹುಟ್ಟಿದ ಹೋರಾಟ, ಈ ಹೋರಾಟವು ಇಡೀ ರಾಷ್ಟ್ರದ ಮಟ್ಟದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ದೊಡ್ಡ ಪಂಗಡದಲ್ಲಿ ಹಿಂದೂಗಳಲ್ಲಿ, ಮುಸ್ಲಿಮರಲ್ಲಿ ಮತ್ತು ಇತರ ವರ್ಗಗಳಲ್ಲಿ ಸಹ-ನಡೆಯುತ್ತಿದೆ. ರಾಷ್ಟ್ರೀಯ ಮಹಾಸಭೆಯ ಚಳುವಳಿಯು ಮುಖ್ಯವಾಗಿ ಈ ಹೊಸ ಭಾವನೆಗಳ ಮತ್ತು ಸಂಸ್ಥೆಗಳ ಐತಿಹಾಸಿಕ ಬೆಳ ವಣಿಗೆಯ ರೀತಿಯನ್ನು ಪ್ರತಿಬಿಂಬಿಸುತ್ತದೆ. ಇವುಗಳಲ್ಲಿ ಕೆಲವನ್ನು ಹಳೆಯ ತಳಪಾಯದ ಮೇಲೆ ಕಟ್ಟಲು ಪ್ರಯತ್ನ ಪಟ್ಟಿದೆ. ಇದರಿಂದ ಪರಸ್ಪರ ವಿಶೇಷ ಅಂತರವಿದ್ದರೂ ಅನೇಕ ಬಗೆಯ ಜನರು ಅದರೊಳಗೆ ಬಂದು ಸೇರಿದಾರೆ. ಹಿಂದೂಗಳ ಕಠಿನ ನಿಯಮವ, ಪ್ರತ್ಯೇಕ ಭಾವನೆಯ, ಸಾಮಾಜಿಕ ವ್ಯವಸ್ಥೆಯಿಂದ ಪ್ರಗತಿಯ ಕೊಲೆಯಾಗಿದೆ. ಇದರಿಂದ ಇತರರು ಭಯಗ್ರಸ್ತರಾಗಿದ್ದಾರೆ. ಆದರೆ ಈ ಸಮಾಜ ವ್ಯವಸ್ಥೆಯ ಮೂಲಕ್ಕೆ ಈಗ ಏಟು ತಗುಲಿದೆ. ಅದರ ಕಾಣ್ಯ ಬೇಗ ಬೇಗ ಕಡಮೆಯಾಗು ತಿದೆ. ಏನೆ ಆಗಲಿ ವಿಶಾಲ ಮನೋಭಾವನೆಯ ರಾಜಕೀಯ ಮತ್ತು ಸಮಾಜ ಪ್ರಗತಿಯ ರಾಷ್ಟ್ರೀಯ ಚಳುವಳಿಯ ಬೆಳವಣಿಗೆಗೆ ಅಡ್ಡ ನಿಲ್ಲುವಷ್ಟು ಶಕ್ತಿ ಅದಕ್ಕಿಲ್ಲ ; ಆ ಚಳುವಳಿಗೆ ತೊಂದರೆಗಳೇನೇ ಇರಲಿ ಎದುರಿಸಿ ಮುಂದುವರಿಯುವಷ್ಟು ಬಲವಿದೆ. ಮುಸ್ಲಿಮರಲ್ಲಿ ಹಳೆಯ ನವಾಬಗಿರಿಯ ಪ್ರಾಬಲ್ಯ ಇನ್ನೂ ಬಲವಾಗಿದ್ದು ಮುಸ್ಲಿಂ ಜನತೆ ಅವರ ನಾಯಕತ್ವದ ಹಿಡಿತದಲ್ಲಿಯೇ ಇದೆ. ಹಿಂದೂ ಮತ್ತು ಮುಸ್ಲಿಂ ಮಧ್ಯಮವರ್ಗದ ಬೆಳೆವಣಿಗೆಗಳಲ್ಲಿ ಒಂದು ತಲೆಮಾರು ಅಥವ ಇನ್ನೂ ಹೆಚ್ಚಿನ ಅಂತರವಿದೆ. ಈ ವ್ಯತ್ಯಾಸ ವನ್ನು ರಾಜಕೀಯ, ಆರ್ಥಿಕ ಮತ್ತು ಇತರ ಸಮಸ್ಯೆಗಳಲ್ಲೆಲ್ಲ ಕಾಣಬಹುದು. ಮುಸ್ಲಿಮರ ಭಯಗ್ರಸ್ ಮನೋಭಾವನೆಗೆ ಈ ಅಂತರವೇ ಮುಖ್ಯ ಕಾರಣ.

ಭಾರತವನ್ನು ಇಬ್ಬಾಗಮಾಡುವ ಪಾಕಿಸ್ಥಾನದ ಸಲಹೆ ಕೆಲವು ಭಾವನಾತಿರೇಕವನ್ನು ತೃಪ್ತಿಗೊಳಿಸ ಬಹುದಾದರೂ ಅದರಿಂದ ಈ ಪ್ರಗತಿಯ ಕೊರತೆ ನಿವಾರಣೆಯಾಗುವುದಿಲ್ಲ. ಅದರಿಂದ ನವಾಬಶಾಹೀ ಜನರ ಹಿಡಿತ ಇನ್ನೂ ಬಿಗಿಯಾಗಬಹುದು ಮತ್ತು ಮುಸ್ಲಿಮರ ಆರ್ಥಿಕ ಉನ್ನತಿ ಹಿಂದೆ ಬೀಳಬಹುದು. ಪಾಕಿಸ್ಥಾನದ ಪರ ವಾದಿಸಿದವರಲ್ಲಿ ಇಕ್ರಲ್ ಒಬ್ಬ ಮೊದಲಿಗನಾದರೂ ಅದರ ಅಪಾಯ ಮತ್ತು ಅವಿವೇಕ ಈಚೆಗೆ ಆತನಿಗೆ ಮನವರಿಕೆಯಾದಂತೆ ಇದೆ. ಮುಸ್ಲಿಂ ಲೀಗ್ ಅಧ್ಯಕ್ಷನಾದುದರಿಂದ ಪಾಕಿಸ್ಥಾನದ ಪರ ವಾದಿಸಬೇಕಾಯಿತೆಂದೂ, ಆದರೆ ಇಡೀ ಭಾರತಕ್ಕೆ ಮುಖ್ಯವಾಗಿ ಮುಸ್ಲಿಮರಿಗೆ ಅದು ಬಹಳ ಹಾನಿಕರ ವೆಂದೂ ಒಂದು ಸಂಭಾಷಣೆಯಲ್ಲಿ ತಿಳಿಸಿದಂತೆ ಎಡ್ವರ್ಡ್ ಥಾಮ್ಪನ್ ಬರೆಯುತ್ತಾನೆ. ಪ್ರಾಯಶಃ ಇಕ್ಸಲ್ ತನ್ನ ಅಭಿಪ್ರಾಯ ಬದಲಾಯಿಸಿರಬಹುದು ಅಥವ ಆ ಪ್ರಶ್ನೆಗೆ ಆಗ ಹೆಚ್ಚು ಪ್ರಾಮುಖ್ಯತೆ ಇರ ಲಿಲ್ಲವಾದ್ದರಿಂದ ಸರಿಯಾಗಿ ವಿಚಾರಮಾಡದೆ ಬೆಂಬಲಕೊಟ್ಟು ಇರಬಹುದು. ಭಾರತ ವಿಭಜನೆಯ ಸಲಹೆ,