ಪುಟ:ಭಾರತ ದರ್ಶನ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೮

ಭಾರತ ದರ್ಶನ

ಪಾಕಿಸ್ಥಾನ ವಿಷಯ ಮುಂದೆ ರೂಪುಗೊಂಡ ಬಗೆ ಎಲ್ಲವೂ ಇಕ್ಕಲನ ಜೀವನ ದೃಷ್ಟಿಗೆ ತೀರವಿರುದ್ಧ.

ತನ್ನ ಕೊನೆಯ ದಿನಗಳಲ್ಲಿ ಇಕ್ಕಲನ ದೃಷ್ಟಿಯು ಸಮಾಜವಾದದ ಕಡೆ ಒಲಿಯಿತು. ಸೋವಿಯಟ್ ರಷ್ಯದ ಮಹತ್ಸಾಧನೆಯು ಆತನ ಮನಸ್ಸನ್ನು ಆಕರ್ಷಿಸಿತು. ಆತನ ಕವಿತೆ ಧಾಟ ಸಹ ಪರಿವರ್ತನೆ ಹೊಂದಿತು. ಆತನು ಸಾಯುವ ಕೆಲವು ದಿನಗಳ ಮುಂಚೆ ತನ್ನ ಮರಣ ಶಯ್ಕೆಯ ಬಳಿ ಬರಲು ನನಗೆ ಹೇಳಿಕಳುಹಿಸಿದನು. ಸಂತೋಷದಿಂದ ಆ ಕರೆಗೆ ಓಗೊಟ್ಟೆ, ಆತನೊಂದಿಗೆ ಅನೇಕ ವಿಷಯ ಮಾತನಾಡಿ ದಾಗ, ವ್ಯತ್ಯಾಸಗಳೆಷ್ಟೇ ಇರಲಿ ನಮ್ಮಿಬ್ಬರಲ್ಲೂ ಸಾಮಾನ್ಯ ವಿಷಯ ಎಷ್ಟೋ ಇದೆ. ಇಬ್ಬರೂ ಸರಿದೂಗಿ ನಡೆಯಲು ಎಷ್ಟು ಸುಲಭ ಎಂದು ಭಾಸವಾಯಿತು. ಆಗ ಆತನ ಮನಸ್ಸು ಪುನರಾವರ್ತನ ಭಾವದಲ್ಲಿದ್ದು ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹಾರುತ್ತಲಿದ್ದ. ನಾನು ಹೆಚ್ಚು ಮಾತನಾಡದೆ ಸುಮ್ಮನೆ ಕುಳಿತು ಕೇಳಿದೆ. ಆತನ ಕವಿತೆಯನ್ನೂ ಆತನನ್ನೂ ಪ್ರಶಂಸೆಮಾಡಿದೆ. ಆತನಿಗೆ ನನ್ನ ಮೇಲೆ ಪ್ರೇಮ ವಿದ್ದಂತೆ ನನ್ನ ವಿಷಯ ಒಳ್ಳೆಯ ಅಭಿಪ್ರಾಯವಿದ್ದಂತೆ ಕಂಡು ಹರ್ಷವಾಯಿತು. ನಾನು ಹೊರಡುವ ಸ್ವಲ್ಪ ಮುಂಚೆ “ ನಿನಗೂ ಜಿನ್ನಾ ಗೂ ಸಾಮಾನ್ಯ ಏನಿದೆ ? ಆತ ರಾಜಕಾರಣಿ ನೀನು ದೇಶಭಕ್ತ " ಎಂದನು. ಆದರೂ ಜಿನ್ನಾ ಗೂ ನನಗೂ ಸಾಮಾನ್ಯವಾದುದು ಬಹಳ ಇದೆ. ದೇಶಭಕ್ತ ಎನಿಸಿಕೊಂಡು ಇಂದಿನ ಅದರ ಸಂಕುಚಿತ ಅರ್ಥದಲ್ಲಿ ಒಂದು ಪ್ರಶಂಸೆ ಎಂದು ಭಾವಿಸಬೇಕೋ ಬೇಡವೋ ನಾನರಿಯೆ. ಭಾರತದ ಮೇಲೆ ನನಗೆ ತುಂಬ ವಿಶ್ವಾಸವಿದ್ದರೂ ನಮ್ಮ ಸಮಸ್ಯೆಗಳ ಅರಿವು ಮತ್ತು ಪರಿಹಾರಗಳಿಗೆ ರಾಷ್ಟ್ರಭಕ್ತಿಯೊಂದೇ ಸಾಲದೆಂದು ಬಹುಕಾಲದಿಂದ ನಾನು ಮನಗಂಡಿದ್ದೇನೆ. ಪ್ರಪಂಚದ ಸಮಸ್ಯೆಗಳ ಪರಿಹಾರವಂತೂ ಅದರಿಂದ ಖಂಡಿತ ಆಗದು. ರಾಜಕೀಯದ ಸುಳಿಯಲ್ಲಿ ಸಿಕ್ಕು ನಾನು ಅದಕ್ಕೆ ಬಲಿ ಯಾಗಿದ್ದರೂ ನಾನು ರಾಜಕಾರಣಿಯಲ್ಲವೆಂದು ಇಕ್ಷಲ್ ಹೇಳಿದುದರಲ್ಲಿ ಸತ್ಯವಿದೆ.

೧೨. ದೊಡ್ಡ ಕೈಗಾರಿಕೆಗಳ ಬೆಳವಣಿಗೆ : ತಿಲಕ್ ಮತ್ತು ಗೋಖಲೆ:
ಪ್ರತ್ಯೇಕ ಚುನಾವಣೆಗಳು

ಹಿಂದೂ ಮುಸ್ಲಿಂ ಸಮಸ್ಯೆಯ ಹಿನ್ನೆಲೆ ಪತ್ತೆ ಹಚ್ಚುವದರಲ್ಲಿ ಮತ್ತು ಪಾಕಿಸ್ತಾನದ ಬೇಡಿಕೆ ಮತ್ತು ಭಾರತದ ವಿಭಜನೆಯ ಹಿಂದೆ ಯಾವ ಮನೋಭಾವ ಇತ್ತೆಂದು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ನಾನು ಅರ್ಧಶತಮಾನ ಹಾರಿ ಬಿಟ್ಟಿದ್ದೇನೆ. ಈ ಕಾಲದಲ್ಲಿ ಸರಕಾರದ ಆಡಳಿತ ಯಂತ್ರದ ಬಾಹ್ಯರೂಪ ದಲ್ಲಿ ಅಲ್ಲದಿದ್ದರೂ, ಜನರ ಮನೋಭಾವನೆಯಲ್ಲಿ ಮಹತ್ವದ ವ್ಯತ್ಯಾಸಗಳಾದವು. ಅಲ್ಲಿ ಸ್ವಲ್ಪ ರಾಜಕೀಯ ಸುಧಾರಣೆಗಳಾದವು. ಇವುಗಳನ್ನೇ ಬಹಳ ದೊಡ್ಡದು ಮಾಡಿ ಹೊಗಳಿದ್ದರೂ ಬ್ರಿಟಿಷರ ಅಧಿಕಾರ ಮತ್ತು ವ್ಯಾಪ್ತಿಗೆ ಸ್ವಲ್ಪವೂ ಕುಂದು ಬರಲಿಲ್ಲ. ದೇಶದ ಬಡತನ ಮತ್ತು ನಿರುದ್ಯೋಗದ ಪ್ರಶ್ನೆ ಬಗೆಹರಿಯ ಲಿಲ್ಲ. ೧೯೧೧ ರಲ್ಲಿ ಜಮಷಡ್ಜ ತಾತಾ ಜಮಷೆಡ್‌ಪುರದಲ್ಲಿ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆ ಸ್ಥಾಪಿಸಿ ದೊಡ್ಡ ಕೈಗಾರಿಕೆಗೆ ತಳಹದಿ ಹಾಕಿದನು. ಇದನ್ನು ಮತ್ತು ಇತರ ಕೈಗಾರಿಕಾ ಪ್ರಯತ್ನ ಗಳನ್ನೂ ಸರಕಾರವು ವಿರೋಧ ಭಾವನೆಯಿಂದ ನೋಡಿ ಯಾವ ಪ್ರೋತ್ಸಾಹವನ್ನೂ ಕೊಡಲಿಲ್ಲ. ಉಕ್ಕಿನ ಕೈಗಾರಿಕೆ ಆರಂಭವಾದದ್ದು ಮುಖ್ಯವಾಗಿ ಅಮೆರಿಕನ್ ತಜ್ಞರ ಸಹಾಯದಿಂದ, ಶೈಶವಾ ವಸ್ಥೆಯಲ್ಲಿ ಅನೇಕ ಸಂಕಟಕ್ಕೀಡಾದರೂ ೧೯೧೪-೧೮ ರ ಯುದ್ಧದಿಂದ ಚೇತರಿಸಿಕೊಂಡಿತು. ಪುನಃ ಕಷ್ಟಕ್ಕೆ ಸಿಕ್ಕು ಬ್ರಿಟಿಷ್ ಬಂಡವಾಳಗಾರರ ಕೈಗೆ ಬೀಳುವುದರಲ್ಲಿತ್ತು.ಆದರೆ ರಾಷ್ಟ್ರೀಯ ಭಾವನೆಯ ಪ್ರೋತ್ಸಾಹದಿಂದ ಬದುಕಿತು.

ಭಾರತದಲ್ಲಿ ಕೈಗಾರಿಕಾ ಶ್ರಮಜೀವಿಗಳು ಹೆಚ್ಚುತ್ತಿದ್ದರು. ಸಂಘಟನೆ ಇಲ್ಲದೆ ಅವರು ನಿಸ್ಸಹಾಯ ಕರಾಗಿದ್ದರು. ಕಡುಬಡತನದಲ್ಲಿದ್ದ ರೈತಾಪಿ ಜನರು ಬಂದು ಕೆಲಸಕ್ಕೆ ಸೇರಿಕೊಳ್ಳುತ್ತಲಿದ್ದ ಕಾರಣ ಕೂಲಿದರ ಹೆಚ್ಚಿ, ಉತ್ತಮಗೊಳ್ಳಲು ಅವಕಾಶವಾಗಲಿಲ್ಲ. ಲಕ್ಷಗಟ್ಟಲೆ ನಿರುದ್ಯೋಗಿಗಳಿದ್ದುದರಿಂದ ಅಶಿಕ್ಷಿತ ಕೂಲಿಗಾರರು ಎಷ್ಟು ಜನರಾದರೂ ಬರುತ್ತಿದ್ದರು. ಆದ್ದರಿಂದ ಆ ಪರಿಸ್ಥಿತಿಯಲ್ಲಿ ಯಾವ ಮುಷ್ಕರವೂ ಯಶಸ್ವಿಯಾಗುವಂತೆ ಇರಲಿಲ್ಲ. ಮೊದಲನೆಯ ಟ್ರೇಡ್‌ಯೂನಿರ್ಯ ಕಾಂಗ್ರೆಸ್ ಸೇರಿದ್ದು